ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶನಿವಾರಕ್ಕೊಂದು ಮಕ್ಕಳ ಹಾಡು…

ಕೃಷ್ಣಮೂರ್ತಿ ಬಿಳಿಗೆರೆ

ಬಾಳೆ ಎಲೆಯ ಕಂಡರೆ ಸಾಕು
ಬಾಳೆ ಎಲೆಯ ಕಂಡರೆ ಸಾಕು
ಊಟ ಮಾಡಂಗಾಗುತ್ತೆ
ಊಟ ಮಾಡಾನ ಅತ್ತೆ ಊಟ ಮಾಡಾನ
 
ಬಾಳೆ ಎಲೆ ಕಂಡರೆ ಸಾಕು
ಕಣ್ಣಿಗೆ ತಣ್ಣಗೆ ಆಗುತ್ತೆ
ಊಟ ಮಡಾನ ಮಾಮ ಊಟ ಮಾಡಾನ
 
ಬಾಳೆ ಎಲೆ ಕಂಡರೆ ಯಾಕೋ
ಪಾಯಸ ಉಣ್ಣಂಗಾಗುತ್ತೆ
ಊಟ ಮಾಡಾನ ಮಾಮ ಊಟ ಮಾಡಾನ
 
ಅತ್ತೆ ಅತ್ತೆ ತುಪ್ಪ ಹಾಕು
ಇನ್ನೊಂದಿಷ್ಟು ಪಾಯಸ ಹಾಕು
ಊಟ ಮಾಡಾನ ಅತ್ತೆ ಊಟ ಮಾಡಾನ
 
ನನ್ನದೇನು ತಪ್ಪೇ ಇಲ್ಲ
ಬಾಳೆ ಎಲೆಯದೆ ಎಲ್ಲ
ಊಟ ಮಾಡಾನ ಅತ್ತೆ ಊಟ ಮಾಡಾನ
 
ಬಾಳೆ ಎಲೆ ಕಂಡರೆ ಮಾಮ
ಉಂಡರು ಉಣ್ಣೋ ಮನಸಾಗುತ್ತೆ
ಬಾರೋ ಮಾಮ ಉಂಡೆ ಬಿಡೋಣ
 
 

‍ಲೇಖಕರು avadhi

17 August, 2013

4 Comments

  1. Prabhakar Nimbargi

    Good and easy lyric for the kids.

  2. keshavareddy handrala

    DODDAVARIGU ISTAVAGUVA KAVITHE

  3. Mahendra vi. sheela

    It is more a tributary pean, a canticle, a song of praise to the ‘aththe’ mother-in-law. A nice chain of thoughts put into a garland of rhyming words. My appreciation goes first to the nature’s gift to mankind, the wonderful ‘baaLe ele’!

    • -ಎಚ್. ಸುಂದರ ರಾವ್

      ಮದರ್ ಇನ್ ಲಾ ಎಂದರೆ ಹೆಂಡತಿಯ ತಾಯಿ ಎಂದಲ್ಲವೆ? ಇಲ್ಲಿನ “ಅತ್ತೆ”ಗೆ ಹೆಚ್ಚು ವ್ಯಾಪಕವಾದ ಅರ್ಥ ಇದ್ದಂತಿದೆ. ಆದರೆ ಅದು ಮದರ್ ಇನ್ ಲಾವನ್ನು ಒಳಗೊಳ್ಳುವುದು ಅನುಮಾನ.
      ಕವನ ಚೆನ್ನಾಗಿದೆ. ಆದರೆ ಕೊನೆಯ ಚರಣದ ಕೊನೆಯ ಸಾಲು ಬದಲಾಯಿಸಿದ್ದು ಯಾಕೋ ಅಷ್ಟು ಹಿತವಾಗಲಿಲ್ಲ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading