ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶನಿವಾರಕ್ಕೊಂದು ಮಕ್ಕಳ ಹಾಡು : ಹುಚ್ಚೆಳ್ ಚಟ್ಣಿ ಚಿಗಣಿ ತಮ್ಟ

ಕೃಷ್ಣಮೂರ್ತಿ ಬಿಳಿಗೆರೆ

ಹುಚ್ಚೆಳ್ ಚಟ್ಣಿ ಚಿಗಣಿ ತಮ್ಟ
ಯಾವುದು ಹೆಚ್ಚೆ ಹೊನ್ನಮ್ಮ
ರೊಟ್ಟಿಗೆ ಬೆಣ್ಣೆ ದೋಸೆಗೆ ತುಪ್ಪ
ಯಾವುದು ಚಂದ ಚೆನ್ನಮ್ಮ
 
ಕಾಯಿ ಮಿಠಾಯಿ ಹುರುಳಿ ಹಪ್ಪಳ
ಯಾವುದು ಮಜವೆ ಹೊನ್ನಮ್ಮ
ಸಿಹಿ ಸಿಹಿ ಗಿಣ್ಣ ಮಾವಿನ ಬಣ್ಣ
ಯಾವುದು ಬೇಕೆ ಚೆನ್ನಮ್ಮ

ಬಿಸಿ ಬಿಸಿ ಮುದ್ದೆ ಹುರುಳಿಸಾರು
ಯಾವುದು ಖುಷಿಯೇ ಹೊನ್ನಮ್ಮ
ಹಾರಕದಕ್ಕಿ ಕೆನೆ ಮೊಸರನ್ನ
ಯಾವುದು ಸೊಗಸು ಚೆನ್ನಮ್ಮ
 
ಗಸಗಸೆ ಪಾಯಸ ಈರುಳ್ಳಿ ಬೋಂಡ
ಯಾವುದು ಹೆಚ್ಚೆ ಹೊನ್ನಮ್ಮ
ಹಪ್ಪಳ ಸೊಂಡಿಗೆ ಉಪ್ಪಿನಕಾಯಿ
ಯಾವುದು ಚುರುಕು ಚೆನ್ನಮ್ಮ
 
ನಿಂಬೆ ಯಳ್ಳಿ ಮಾವಿನ ಪಾನಕ
ಯಾವುದು ರುಚಿಯೇ ಹೊನ್ನಮ್ಮ
ಮೆಣಸು ಜೀರಿಗೆ ಶುಂಠಿ ಕಷಾಯ
ಯಾವುದು ಹಿತವೆ ಚೆನ್ನಮ್ಮ
 
ತುಳಸಿ ಜೇನು ಅರವಿಯ ನೀರು
ಯಾವುದು ಸುಖವೆ ಹೊನ್ನಮ್ಮ
ಎಳೆಯ ನೀರು ಮಳೆಯ ನೀರು
ಯಾವುದು ಜೀವ ಚೆನ್ನಮ್ಮ
 
ಹತ್ತಿ ನೇರಳೆ ಅಂಜೂರ
ಯಾವುದು ಹೊನ್ನಮ್ಮ
ಹುಣಿಸೆ ಸೀಬೆ ಪರಂಗಿ ಹಣ್ಣು
ಯಾವುದು ಬೇಕೆ ಚೆನ್ನಮ್ಮ
 
ಕಬ್ಬಿನ ಹಾಲು ಕೆನ್ನಿಂಗೆಳ್ಳಿರ್
ಯಾವುದು ಮೇಲು ಹೊನ್ನಮ್ಮ
ಬಿಸಿಬಿಸಿ ಬೆಲ್ಲ ಸಿಹಿಸಿಹಿ ಕೊಬ್ಬರಿ
ಯಾವುದು ನೆನಪೆ ಚೆನ್ನಮ್ಮ
 
ಹಲಸು ಜೇನು ಮಾವಿನ ಹಣ್ಣು
ಯಾವುದು ಬೇಕೆ ಹೊನ್ನಮ್ಮ
ಬಾಳೆ ಕಿತ್ತಳೆ ಚಕ್ಕೊತ
ಯಾವುದು ಪ್ರೀತಿ ಚೆನ್ನಮ್ಮ
 
ಕಿಚಡಿ ಶ್ಯಾವಿಗೆ ಕಜ್ಜಾಯ
ಯಾವುದು ಸಿಹಿಯೆ ಹೊನ್ನಮ್ಮ
ತಟ್ಟೆ ಇಡ್ಲಿ ಮಸಾಲೆ ರೊಟ್ಟಿ
ಯಾವುದು ಹಿತವೆ ಚೆನ್ನಮ್ಮ
 
 

‍ಲೇಖಕರು G

5 October, 2013

1 Comment

  1. Gubbachchi Sathish

    Nimma Padyave chenda Krishnappa.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading