ಮಣ್ಣಿನ ಮೇಲೆ ಮಣ್ಣನು ಇಟ್ಟು
ಕೃಷ್ಣಮೂರ್ತಿ ಬಿಳಿಗೆರೆ
ಮಣ್ಣಿನ ಮೇಲೆ ಮಣ್ಣನು ಇಟ್ಟು
ಮಣ್ಣಿನ ಮನೆಯ ಕಟ್ಟೋದ್ ಬಿಟ್ಟು
ಮರಳಿನ ಬಾಗಿಲು ಇಕ್ಕೋದ್ ಬಿಟ್ಟು
ಮರಳಿ ಮನೆಗೆ ಹೋಗೋದ್ ಬಿಟ್ಟು
ಹೂವಿನ ಮೇಲೆ ಹೂವನ್ನಿಟ್ಟು
ಹೂವಿನ ಮನೆಯ ಕಟ್ಟೋದ್ ಬಿಟ್ಟು
ಜೇನಿನ ಬಾಗಿಲು ಇಕ್ಕೋದ್ ಬಿಟ್ಟು
ದುಂಬಿ ಕರಕೊಂಡ್ ಬರೋದ್ ಬಿಟ್ಟು

ನೀರಿನ ಮೇಲೆ ನೀರನ್ನಿಟ್ಟು
ನೀರಿನ ಮನೆಯ ಕಟ್ಟೋದ್ ಬಿಟ್ಟು
ಮೀನಿನ ಬಾಗಿಲು ಇಕ್ಕೋದ್ ಬಿಟ್ಟು
ತೆಪ್ಪದ ಮೇಲೆ ತೇಲೋದ್ ಬಿಟ್ಟು
ಮರದ ಮೇಲೆ ಮರವ ನೆಟ್ಟು
ಮರದ ಮನೆಯ ಕಟ್ಟೋದ್ ಬಿಟ್ಟು
ಹಕ್ಕಿ ಬಾಗಿಲು ಇಕ್ಕೋದ್ ಬಿಟ್ಟು
ಆಕಾಶಕ್ಕೆ ಹಾರೋದ್ ಬಿಟ್ಟು





Good idea. Wish all the best to this wonderful column!