
ಶಿವನಂಜಯ್ಯ ಬಾಳೇಕಾಯಿ
ಈ ಮರ ನಮ್ಮ ಹಿರೀಕರ ಪ್ರತೀಕ. ಇದನ್ನು ಕಂಡಾಗ ಬಾಲ್ಯದ ಬೇರು ಜಿನುಗುತ್ತೆ. ಆರೇಳು ತಲೆಮಾರು ದಾಟಿ ಇನ್ನೂ ನಿಂತೇಇರೋ ಮರ. ಹೆಮ್ಮೆ ಅನಿಸುತ್ತೆ.
ನಾನು ಸಣ್ಣವನಿದ್ದಾಲೇ ದೈತ್ಯವಾಗಿ ಆಕಾಶದಲ್ಲಿ ಗರಿ ಕೆದರಿತ್ತು. ನೆಲ ತಾಗುವಂತೆ ಚಾಚಿದ್ದ ಆರೆಂಟು ಕೊಂಬೆ ರೆಂಬೆ. ಇವುಗಳ ಮೇಲೆ ಕೈಅಗಲಿಸಿ ಸರ್ಕಸ್ ಮಾಡುತ್ತಾ ನಡೆದದ್ದು, ಮರಕೋತಿ ಆಡಿದ್ದು, ಬೆಳ್ಳಂಬೆಳಗ್ಗೆ ಗಿಳಿಗಡುಕನಿಗಾಗಿ ಅವಳ ಬುಡದಡಿ ತಡಕಿದ್ದು ಎಲ್ಲಾ ನೆನಪಿದೆ.
ಪ್ರತಿ ವರ್ಷ ಜೇನಿಗೆ ಹೂ ಉಣಿಸಿ ಕಾಯಾಗಿ ಬಿರಿದು ಹಕ್ಕಿ ಪಕ್ಕಿಗೆ, ನಮಗೆ ಅದೆಷ್ಟು ಹಣ್ಣು ಹಂಚಿಹಳೋ ಲೆಕ್ಕ ಇಟ್ಟವರಾರು.
ಇದನ್ನು ಕಂಡಾಗ ಕಾಲನಲ್ಲಿ ಲೀನರಾದ ಗೆಳೆಯರ, ನಮ್ಮ ಹಿರೀಕರ ದಂಡು ಕಣ್ಣು ತುಂಬಿ ಹೃದಯ ಭಾರವಾಗುತ್ತೆ.
ಶತಮಾನದ ಗೆಳತಿಗೊಂದು ಸಲಾಮ್.






0 Comments