ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಂಖ ಊದಿದ್ರು..

ವಿಜ್ಞಾನ ಸಮ್ಮೇಳನದಲ್ಲಿ ಅಜ್ಞಾನದ ಸವಿಮೇಳ !!!

na divakar

 

 

 

 

 

 

 

ನಾ ದಿವಾಕರ

ಮೈಸೂರು ವಿಶ್ವ ವಿದ್ಯಾಲಯ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದರೆ ಅದಕ್ಕೆ ಕಾರಣ ಈ ಗಂಗೋತ್ರಿಯಲ್ಲಿ ಒಂದು ಶತಮಾನದ ಕಾಲಾವಧಿಯಲ್ಲಿ ಹರಿದುಹೋಗಿರುವ ವೈಚಾರಿಕ ಪರಂಪರೆ ಮತ್ತು ವಿದ್ವತ್ತಿನ ಭಂಡಾರ. ಮಾನಸ ಗಂಗೋತ್ರಿ ಎಂದು ಕರೆಯಲ್ಪಡುವ ಈ ವಿಶ್ವವಿದ್ಯಾಲಯದಲ್ಲಿ ವೈಚಾರಿಕ ಮನಸ್ಥಿತಿಯ ಗಂಗೆ ಹರಿದಿರುವಷ್ಟೇ ಅವೈಚಾರಿಕ-ಅವೈಜ್ಞಾನಿಕ ಮನಸ್ಥಿತಿಗಳ ಮಲಿನವೂ ಹರಿದುಹೋಗಿದೆ.

01c3911b44e7e89b4fbe0eed946f4719ಇದು ಸ್ವಾಭಾವಿಕ. ಆದಾಗ್ಯೂ ಶತಮಾನ ಪೂರೈಸುತ್ತಿರುವ ಮೈಸೂರು ವಿಶ್ವವಿದ್ಯಾಲಯ 103ನೆಯ ರಾಷ್ಟ್ರೀಯ ವಿಜ್ಞಾನ ಸಮ್ಮೇಳನವನ್ನು ಆಯೋಜಿಸಿ ಯಶಸ್ವಿಯಾಗಿ ಪೂರೈಸಿರುವುದು ಹೆಮ್ಮೆಯ ವಿಚಾರ. ಈ ಸಮ್ಮೇಳನದ ವಿಶಿಷ್ಟವೇನೆಂದರೆ ಗಣೇಶ ಮತ್ತು ಪ್ಲಾಸ್ಟಿಕ್ ಸರ್ಜರಿ ತಂತ್ರಜ್ಞಾನದ ಸಮ್ಮಿಲನ ಇಲ್ಲಿ ಸಂಭವಿಸಲಿಲ್ಲ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಉದ್ಘಾಟನಾ ಭಾಷಣದಲ್ಲಿ ಕೇಳಿಬಂದಿದ್ದು , ದೇಶದ ಅಭಿವೃದ್ಧಿ ಮತ್ತು ತಂತ್ರಜ್ಞಾನದ ಪ್ರಗತಿಗೆ ಅಗತ್ಯವಾದ ಅವಿಷ್ಕಾರ, ಸಂಶೋಧನೆ ಮತ್ತು ನೂತನ ವಿಧಾನಗಳ ವೈಭವೀಕರಣವೇ ಹೊರತು, ವಿಜ್ಞಾನದ ಪ್ರಗತಿಗೆ ಮೂಲತಃ ಅಗತ್ಯವಾದ ವೈಜ್ಞಾನಿಕ ಮನೋಭಾವದ ವಿಶ್ಲೇಷಣೆಯಲ್ಲ.

ವಿಜ್ಞಾನ ಒಂದು ಅಧ್ಯಯನ ಕ್ಷೇತ್ರವಾಗಿ, ಶಿಸ್ತೀಯ ಕ್ಷೇತ್ರವಾಗಿ ತನ್ನದೇ ಆದ ಮಾರ್ಗದಲ್ಲಿ ಮುನ್ನಡೆಯುತ್ತಿರುತ್ತದೆ. ಇದು ದೇಶದ ಭೌತಿಕ ಪ್ರಗತಿಗೆ ಪೂರಕವಾಗಿ ಪರಿಣಮಿಸುತ್ತದೆ. ಆದರೆ ನಾಗರಿಕ ಸಮಾಜದ ಭೌದ್ಧಿಕ ಪ್ರಗತಿಗೆ ಸಂಶೋಧನೆ ಮತ್ತು ಅವಿಷ್ಕಾರಗಳಿಗಿಂತಲೂ ವೈಜ್ಞಾನಿಕ ಮನೋಭಾವ ಮುಖ್ಯವಾಗುತ್ತದೆ. ಚಂದ್ರಯಾನಕ್ಕೆ ತೆರಳುವ ಸಮಯ ನಿಗದಿಪಡಿಸಲು ರಾಹುಕಾಲ ನೋಡುವ ಸಮಾಜದಲ್ಲಿ ಇದು ಇನ್ನೂ ಪ್ರಧಾನ್ಯತೆ ಪಡೆಯುತ್ತದೆ. ಈ ಅಂಶಗಳು ಪ್ರಧಾನಿಗಳ ಭಾಷಣದಲ್ಲಿ ವ್ಯಕ್ತವಾಗಬೇಕಿತ್ತು. ಆಗಿಲ್ಲ. ಇದು ನಿರೀಕ್ಷಿತ.

ಭಾರತೀಯ ಸಮಾಜದಲ್ಲಿ ಇಂದು ಅಗತ್ಯವಾಗಿರುವುದು ವಿಜ್ಞಾನದ ಅವಿಷ್ಕಾರ ಅಥವಾ ಅನ್ವೇಷಣೆಯಲ್ಲ. ಬದಲಾಗಿ ವೈಜ್ಞಾನಿಕ ಮನೋಭಾವದ ಅವಿಷ್ಕಾರ ಮತ್ತು ಅನ್ವೇಷಣೆ. ದೇಶದಲ್ಲಿ ಸಾವಿರಾರು ಮಕ್ಕಳು, ಯುವಕ ಯುವತಿಯರು ನೂತನ ವೈಜ್ಞಾನಿಕ ಅವಿಷ್ಕಾರಗಳಲ್ಲಿ ತಮ್ಮ ಆಸಕ್ತಿ ಮತ್ತು ಉತ್ಸಾಹವನ್ನು ಪ್ರದಶರ್ಿಸಿದ್ದಾರೆ. ಈ ಯುವ ಜನಾಂಗಕ್ಕೆ ತಮ್ಮ ಅನ್ವೇಷಣೆ ಮತ್ತು ಜ್ಞಾನಾಭಿವೃದ್ಧಿಗೆ ಅಗತ್ಯವಾದ ಪರಿಕರಗಳನ್ನು ಒದಗಿಸಲಾಗುತ್ತಿದೆ. ಆದರೆ ವಿಜ್ಞಾನದ ಪ್ರಗತಿ ಸಾಧ್ಯವಾಗಲು ಸಾಂಸ್ಥಿಕ ವೇದಿಕೆಗಳು ಮಾತ್ರವೇ ಸಾಲದು. ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಒಂದು ಭೂಮಿಕೆಯೂ ಅಗತ್ಯ. ಇದು ಆಧುನಿಕ ತಂತ್ರಜ್ಞಾನ ಯುಗದಲ್ಲಿ ಅತ್ಯವಶ್ಯವೂ ಹೌದು.

ಆದರೆ ತಂತ್ರಜ್ಞಾನ ಕ್ಷೇತ್ರದಲ್ಲಿ ನಭೋಮಂಡಲದಲ್ಲಿ ವಿಹರಿಸುತ್ತಿರುವ ಭಾರತೀಯ ಸಮಾಜದಲ್ಲಿ ಈ ಭೂಮಿಕೆ ಸಿದ್ಧವಾಗುತ್ತಿದೆಯೇ ಎಂಬ ಪ್ರಶ್ನೆ ಎದುರಾದಾಗ ಮೌನ ಮನೆ ಮಾಡುತ್ತದೆ. ಶತಮಾನಗಳ ಹಿಂದೆಯೇ ಭಾರತದಲ್ಲಿ ವಿಮಾನ ತಂತ್ರಜ್ಞಾನ ಲಭ್ಯವಿತ್ತು, ಪ್ಲಾಸ್ಟಿಕ್ ಸರ್ಜರಿ ತಂತ್ರಜ್ಞಾನವಿತ್ತು, ಪ್ರಣಾಳ ಶಿಶು ಜನನವಾಗಿತ್ತು ಎಂದು ಪುಂಖಾನುಪುಂಖವಾಗಿ ಉಪನ್ಯಾಸ ಮಾಡುವ ಪ್ರಭೃತಿಗಳು ದೇಶದ ವಿಜ್ಞಾನ ಸಮ್ಮೇಳನಗಳಲ್ಲಿ ತಮ್ಮ ಪಾಂಡಿತ್ಯ (?) ಪ್ರದಶರ್ಿಸುತ್ತಿದ್ದಾರೆ. ವಿಪಯರ್ಾಸವೆಂದರೆ ವೈಚಾರಿಕತೆಯ ನೆಲೆಯಾದ ಮಾನಸ ಗಂಗೋತ್ರಿಯ ಆವರಣದಲ್ಲೂ ಇದೇ ಅಜ್ಞಾನದ ಶಂಖ ಮೊಳಗಿದೆ.

ಇಂತಹ ಅಜ್ಞಾನದ ಶಂಖಗಳು ಕೇವಲ ಮಾನಸ ಗಂಗೋತ್ರಿಯ ಆವರಣದಲ್ಲಿ ಮೊಳಗಿದೆ ಎಂದು ಭಾವಿಸಿದರೆ ತಪ್ಪಾಗುತ್ತದೆ. ಕಳೆದ ಎರಡು ದಶಕಗಳಲ್ಲಿ ಭಾರತ ತಂತ್ರಜ್ಞಾನ ಕ್ಷೇತ್ರದಲ್ಲಿ, ವಿಜ್ಞಾನ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದೆ ಎಂಬ ಹೆಗ್ಗಳಿಕೆಯ ನಡುವೆಯೇ ಇದೇ ಅವಧಿಯಲ್ಲಿ ಜನಮಾನಸದಲ್ಲಿ ಅವೈಜ್ಞಾನಿಕ ಚಿಂತನೆಗಳು, ಮೂಢನಂಬಿಕೆಗಳನ್ನು ವ್ಯವಸ್ಥಿತವಾಗಿ ಬಿತ್ತಲಾಗುತ್ತಿದೆ ಎಂಬ ಅಂಶವನ್ನೂ ಅಲ್ಲಗಳೆಯುವಂತಿಲ್ಲ. ಇದರ ಒಂದು ಛಾಯೆಯನ್ನು ವಿಜ್ಞಾನ ಸಮಾವೇಶದ ಶಂಖನಾದದಲ್ಲಿ ಕಾಣಬಹುದಷ್ಟೆ.

ವಿಜ್ಞಾನ ಕ್ಷೇತ್ರದಲ್ಲಿ ಚಂದ್ರಯಾನದತ್ತ ತೆರಳಿರುವ ಭಾರತ ವೈಚಾರಿಕತೆಯಲ್ಲಿ ಪಾತಾಳಕ್ಕಿಳಿಯುತ್ತಿರುವುದನ್ನು ವಿದ್ಯುನ್ಮಾಮ ಮಾಧ್ಯಮಗಳಲ್ಲಿ, ಮುದ್ರಣ ಮಾಧ್ಯಮಗಳಲ್ಲಿ ಸ್ಪಷ್ಟವಾಗಿ ಕಾಣಬಹುದು. ನಿಜ, ಮುದ್ರಣ ಮಾಧ್ಯಮಗಳಲ್ಲಿ ವಿಜ್ಞಾನ ಸಂಬಂಧಿತ ಅಂಕಣಗಳು ಪ್ರಕಟವಾಗುತ್ತಿವೆ. ವಿಜ್ಞಾನಿಗಳ ಅನ್ವೇಷಣೆಯ ವಿಶ್ಲೇಷಣೆಯಾಗುತ್ತಿದೆ. ವಿದ್ಯುನ್ಮಾನ ಮಾಧ್ಯಮಗಳಲ್ಲಿ ಹಲವು ಕಾರ್ಯಕ್ರಮಗಳು ಬಿತ್ತರವಾಗುತ್ತಿವೆ. ಆದರೆ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ನಿಟ್ಟಿನಲ್ಲಿ ಯಾವುದೇ ಸಪ್ರಯತ್ನಗಳಾಗುತ್ತಿಲ್ಲ ಎನ್ನುವುದನ್ನು ಒಪ್ಪಲೇಬೇಕಾಗುತ್ತದೆ. ಬದಲಾಗಿ ವಿದ್ಯುನ್ಮಾನ ಮಾಧ್ಯಮಗಳು ತಮ್ಮ ಟಿಆರ್ಪಿ ರೇಟಿಂಗ್ಗಳಿಗಾಗಿ ಜ್ಯೋತಿಷ್ಯ, ವಾಸ್ತು ಮುಂತಾದ ಮೂಢ ನಂಬಿಕೆಗಳನ್ನು ಜನರ ಮನದಾಳದಲ್ಲಿ ಬಿತ್ತುತ್ತಿವೆ.

mullick2ಶಾಲಾಕಾಲೇಜುಗಳಲ್ಲೂ ಸಹ ವಿಜ್ಞಾನ ಭೋಧಕರು ತಮ್ಮ ಪಠ್ಯಕ್ರಮಗಳಿಗಷ್ಟೇ ಸೀಮಿತವಾಗಿ ಪುಸ್ತಕದಲ್ಲಿರುವ ಪಾಠಗಳನ್ನು ವಿದ್ಯಾಥರ್ಿಗಳ ಮನದಲ್ಲಿ ಅಚ್ಚೊತ್ತುತ್ತಿದ್ದಾರೆ. ಆದರೆ ವಿಜ್ಞಾನದಲ್ಲಿ ಅತ್ಯುನ್ನತ ಅಂಕ ಪಡೆದ ಎಷ್ಟು ವಿದ್ಯಾಥರ್ಿಗಳು ಅಥವಾ ಅತ್ಯುತ್ತಮ ವಿಜ್ಞಾನ ಭೋಧಕರೆಂದು ಹೆಸರು ಮಾಡಿರುವ ಎಷ್ಟು ಅಧ್ಯಾಪಕರು ಸಂಪೂರ್ಣ ವೈಜ್ಞಾನಿಕ ಮನೋಭಾವ ಹೊಂದಿದವರಾಗಿದ್ದಾರೆ? ಈ ಪ್ರಶ್ನೆಗೆ ಸಕಾರಾತ್ಮಕ ಉತ್ತರ ದೊರೆಯುವುದು ಕಷ್ಟ.

ಇದು ಸಾರ್ವತ್ರಿಕ ಅಭಿಪ್ರಾಯವಲ್ಲ. ಕೆಲವು ಅಪಭ್ರಂಶಗಳಿರಬಹುದು. ಆದರೆ ಇಂದಿನ ಶಾಲಾ ಕಾಲೇಜುಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿದ್ಯಾಥರ್ಿ ಸಮುದಾಯದ ಚಟುವಟಿಕೆಗಳನ್ನು ನೋಡಿದರೆ ವೈಚಾರಿಕತೆ ನಿರ್ಲಕ್ಷ್ಯಕ್ಕೊಳಗಾಗುತ್ತಿರುವುದು ಸ್ಪಷ್ಟವಾಗುತ್ತದೆ. ಈ ಒಂದು ಪರಿಸ್ಥಿತಿ ಶೈಕ್ಷಣಿಕ ಕೇಂದ್ರಗಳನ್ನು ಆವರಿಸಿರುವುದರಿಂದಲೇ ಮೈಸೂರು ವಿಶ್ವವಿದ್ಯಾಲಯದ ವಿಜ್ಞಾನ ಸಮಾವೇಶದಲ್ಲಿ ಶಂಖನಾದ ಮೊಳಗಿದೆ ಇಲ್ಲಿ ಶಿವ ಪರಿಸರವಾದಿಯಾಗುತ್ತಾನೆ. ವಿಜ್ಞಾನ ಸಮಾವೇಶದ ಆಂಗಣದಲ್ಲಿ ಭಕ್ತಿವೇದಾಂತದ ಕೃತಿಗಳು ಮಾರಾಟವಾಗುತ್ತವೆ.

ನಮ್ಮ ದೇಶದ ಪುರಾಣ, ಸಂಸ್ಕೃತಿ ಮತ್ತು ಚಾರಿತ್ರಿಕ ಸತ್ಯಗಳನ್ನು ಮಕ್ಕಳಿಗೆ ತಿಳಿ ಹೇಳುವುದು ಅಗತ್ಯವೇ ಹೌದು. ಆದರೆ ಈ ವಿಚಾರಗಳನ್ನು ಮಂಡಿಸುವಾಗ ಸಮಕಾಲೀನ ನೆಲೆಯಲ್ಲಿ ಪ್ರಾಚೀನ ಯುಗದ ಕೆಲವು ಸಂಗತಿಗಳನ್ನು ಪುನರ್ವಿಮಶರ್ೆ ಮಾಡಬೇಕಾಗುತ್ತದೆ. ಮೈಸೂರು ಸಮಾವೇಶದಲ್ಲಿ ಐಎಎಸ್ ಅಧಿಕಾರಿ ರಾಜೀವ್ ಶರ್ಮ ಮಂಡಿಸಿದ ಶಂಖ ಊದುವುದರಿಂದ ಆರೋಗ್ಯ ವೃದ್ಧಿ- ಸದೃಢತೆಗೆ ಪಾರಂಪರಿಕ ಮಾರ್ಗ ಎಂಬ ಉಪನ್ಯಾಸದಲ್ಲಿ ಶಂಖ ಊದುವುದರಿಂದ ಶ್ವಾಸಕೋಶದ ಸ್ನಾಯುಗಳು ಗಟ್ಟಿಯಾಗುತ್ತವೆ, ಮನೋರೋಗಗಳು ವಾಸಿಯಾಗುತ್ತವೆ, ಬಿಳಿ ಕೂದಲು ಕಪ್ಪಾಗುತ್ತದೆ, ಮಲ ಮೂತ್ರ ವಿಸರ್ಜನೆಯ ಸಮಸ್ಯೆಗಳು ಬಗೆಹರಿಯುತ್ತವೆ, ಮೆದುಳಿನ ನರ ಮತ್ತು ತಲೆಯ ರಕ್ತ ಸಂಚಲನ ಹೆಚ್ಚಾಗುತ್ತದೆ ಎಂದು ಹೇಳಿರುವುದು ಹಾಸ್ಯಾಸ್ಪದವಾಗಿದೆ. ನಿಜ, ಶಂಖ ಊದಲು ಉಸಿರು ಬಿಗಿ ಹಿಡಿಯಬೇಕಾಗುತ್ತದೆ. ನಾಭಿಯಿಂದಲೇ ಉಸಿರು ಹೊರಬರುತ್ತದೆ. ಸ್ನಾಯುಗಳು ಸೆಟೆದುಕೊಳ್ಳುತ್ತವೆ. ಇದು ದೈಹಿಕವಾಗಿ ಅಲ್ಪಕಾಲಿಕ ವ್ಯತ್ಯಯಗಳನ್ನು ಉಂಟುಮಾಡಬಹುದು.

ಶಂಖಾ ನಾದದ ದನಿಯಿಂದ ಮನಸ್ಸು ಶಾಂತಿಪಡೆಯಬಹುದು. ಆದರೆ ಮಾನಸಿಕ ರೋಗ ವಾಸಿಯಾಗುತ್ತದೆ ಎಂದರೆ ನಂಬುವುದು ಹೇಗೆ ? ನಿಮ್ಹಾನ್ಸ್- ವಾಕ್ ಶ್ರವಣ ಸಂಸ್ಥೆ ಮುಂತಾದ ಪ್ರತಿಷ್ಠಿತ ಸಂಸ್ಥೆಗಳನ್ನು ಮುಚ್ಚಿ ಅಲ್ಲಿನ ಅಧ್ಯಾಪಕರಿಗೆ, ವಿಜ್ಞಾನಿಗಳಿಗೆ, ವೈದ್ಯರಿಗೆ ಒಂದೊಂದು ಶಂಖ ನೀಡಿದರೆ ಸಾಕಲ್ಲವೇ ? ಮತ್ತೊಬ್ಬ ವಿಜ್ಞಾನಿ ಅಖಿಲೇಶ್ ಪಾಂಡೆ ಶಿವ ಶ್ರೇಷ್ಠ ಪರಿಸರವಾದಿ ಎಂಬ ಉಪನ್ಯಾಸ ಮಂಡಿಸಿದ್ದಾರೆ. ಹುಲಿಯ ಚರ್ಮದ ಮೇಲೆ ಕುಳಿತರೆ ಲೈಂಗಿಕ ತೃಷೆ ನಿಯಂತ್ರಿಸಿಕೊಳ್ಳಬಹುದು, ಮೈಗೆ ಬೂದಿ ಬಳಿದುಕೊಳ್ಳುವುದು ಮಣ್ಣಿಂದ ಮಣ್ಣಿಗೆ ಎಂಬ ತತ್ವವನ್ನು ಪ್ರತಿಪಾದಿಸುತ್ತದೆ ಎಂದು ಹೇಳಿದ್ದಾರೆ. ಈ ಪ್ರಬಂಧ ಮಂಡನೆಯಾಗಿಲ್ಲವಾದರೂ ಪ್ರಬಂಧದ ಒಳಸುಳಿ ಅಲ್ಲಿ ನೆರೆದಿದ್ದವರ ಮಂಡೆಯೊಳಗೆ ಪ್ರವೇಶಿಸಿರುವುದು ವಾಸ್ತವ.

ಇಷ್ಟು ಸಾಲದೆಂಬಂತೆ ವಿಜ್ಞಾನ ಸಮಾವೇಶದಲ್ಲಿ ಭಕ್ತಿ ವೇದಾಂತದ ಪುಸ್ತಕಗಳು ಮೇಳೈಸುತ್ತಿವೆ. ಭಕ್ತಿ ವೇದಾಂತ ಕೃತಿಗಳು ಅಪ್ರಸ್ತುತ ಎಂದು ಹೇಳುತ್ತಿಲ್ಲ. ಅದು ಅವರವರ ಭಾವಕ್ಕೆ ಅವರವರ ಭಕುತಿಗೆ ಬಿಟ್ಟ ವಿಚಾರ. ಆದರೆ ವಿಜ್ಞಾನ ಸಮಾವೇಶಕ್ಕೂ , ವಿಜ್ಞಾನವ ಸೋಂಕೇ ಇಲ್ಲದ, ಗಂಧವೇ ತಿಳಿಯದ ಭಕ್ತಿ ವೇದಾಂತಕ್ಕೂ ವಿಜ್ಞಾನ ಸಮಾವೇಶಕ್ಕೂ ಎತ್ತಣಿಂದೆತ್ತ ಸಂಬಂಧವಯ್ಯಾ ಎಂಬ ಪ್ರಶ್ನೆ ಮೂಡಿದಾಗ, ಮಾನಸ ಗಂಗೋತ್ರಿಯ ಆವರಣದಲ್ಲಿ ಶಂಖನಾದ ಏಕೆ ಮೊಳಗುತ್ತದೆ ಎಂದು ಅರಿವಾಗುತ್ತದೆ. ಸಮಕಾಲೀನ ಘಟ್ಟದಲ್ಲಿ ಭಾರತದಲ್ಲಿ ವಿಜ್ಞಾನ ಸಮಾವೇಶಗಳು ಅತ್ಯಗತ್ಯ . ವೈಜ್ಞಾನಿಕ ಪ್ರಪಂಚದ ಆಗುಹೋಗುಗಳನ್ನು, ಅವಿಷ್ಕಾರ, ಅನ್ವೇಷಣೆ, ಸಂಶೋಧನೆಗಳನ್ನು ಜನತೆಗೆ ಮುಟ್ಟಿಸುವುದು ಅಗತ್ಯ. ದೇಶದಲ್ಲಿ ಪ್ರಗತಿಯ ಪಥದಲ್ಲಿರುವ ವಿಜ್ಞಾನದ ಅರಿವು ಮೂಡಿಸುವುದು ಅತ್ಯವಶ್ಯ. ಆದರೆ ಇದಕ್ಕಿಂತಲೂ ಹೆಚ್ಚಾಗಿ ಇಂದು ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವ ಪ್ರಯತ್ನಗಳು ಅಗತ್ಯವಾಗಿವೆ. ಇದು ಯಾವುದೇ ಕ್ಷೇತ್ರದಲ್ಲೂ ನಡೆಯುತ್ತಿಲ್ಲ. ಯಾವ ಮಟ್ಟದಲ್ಲೂ ನಡೆಯುತ್ತಿಲ್ಲ. ವ್ಯತಿರಿಕ್ತವಾಗಿ ಮೂಢನಂಬಿಕೆಗಳನ್ನು, ಅವೈಜ್ಞಾನಿಕ ತತ್ವಗಳನ್ನು, ವೈಚಾರಿಕತೆಗೆ ವಿರುದ್ಧವಾದ ಸಂಗತಿಗಳನ್ನು ವ್ಯವಸ್ಥಿತವಾಗಿ ಬಿತ್ತಲಾಗುತ್ತಿದೆ.

ಇದೇ ಪರಿಸ್ಥಿತಿ ಮುಂದುವರೆದರೆ ಚಂದ್ರಲೋಕದಲ್ಲಿ ನೆಲೆ ಮಾಡುವ ಭವಿಷ್ಯದ ಭಾರತದ ಪೀಳಿಗೆ ವಾಸ್ತು ಪ್ರಕಾರ ಮನೆ ನಿಮರ್ಿಸಿ, ಹೋಮ ಹವನಗಳನ್ನು ನಡೆಸಿ, ಕುಂಡಲಿಗಳ ನಡುವೆ ಜೀವನ ಸವೆಸುವ ಸಾಧ್ಯತೆಗಳಿವೆ. ಇದು ಪ್ರಜ್ಞಾವಂತ, ವೈಚಾರಿಕ ಪ್ರಜೆಗಳ ಮುಂದಿರುವ ಸವಾಲೂ ಹೌದು, ಸಮಸ್ಯೆಯೂ ಹೌದು. ಪ್ರಗತಿಪರ ವೈಚಾರಿಕ ಮನಸ್ಸುಗಳು ಈಗ ವೈಚಾರಿಕತೆಯ ಶಂಖನಾದ ಮೊಳಗಿಸಬೇಕಿದೆ. ಆಗಲಾದರೂ ಮೂಢನಂಬಿಕೆ ಎಂಬ ಮನೋರೋಗ ನಿವಾರಣೆಯಾಗುತ್ತದೆ. ಮೆದುಳಿನಲ್ಲಿ ಅಡಕವಾಗಿರುವ ಮೌಢ್ಯದ ಕರಿ ಛಾಯೆ ಬಿಳುಪಾಗುತ್ತದೆ.

‍ಲೇಖಕರು Admin

11 January, 2016

2 Comments

  1. kvtirumalesh

    ಶ್ರೀ ದಿವಾಕರ್ ಅವರೇ
    ನಿಮ್ಮ ಅಭಿಪ್ರಾಯಗಳನ್ನು ನೂರಕ್ಕೆ ನೂರು ಒಪ್ಪುವವ ನಾನು. ಚೆನ್ನಾಗಿ ಬರೆದಿದ್ದೀರಿ.
    ಈ ಶಂಖ ವಾದ್ಯಗಳನ್ನು ಮನೆಗಳಲ್ಲಿ, ದೇವಾಲಯಗಳಲ್ಲಿ ಇರಿಸಿಕೊಂಡರೆ ಸರಿ–ವೈಜ್ಞಾನಿಕ ಕ್ಷೇತ್ರದಲ್ಲಲ್ಲ.
    ವಿದ್ಯಾವಂತರೇ ವಿಜ್ಞಾನದಲ್ಲಿ ಅಜ್ಞಾನ ಬೆರೆಸಿದರೆ ಏನು ಗತಿ?! ಚಿಂತೆ ಬೇಡ, ನಿಜವಾದ ವಿಜ್ಞಾನಿಗಳು ಇದು ಯಾವುದಕ್ಕೂ ಸೊಪ್ಪು ಹಾಕದೆ ತಮ್ಮ ಕೆಲಸ ಮುಂದುವರಿಸುತ್ತಲೇ ಇರುತ್ತಾರೆ. ಇದಕ್ಕಿಂತ ಘೋರವಾದ ತಡೆಗಳನ್ನು ವಿಜ್ಞಾನ ಎದುರಿಸಿದೆ.
    ಸದ್ಯ ಮಡೆಸ್ನಾನಿಗಳು ಪೇಪರ್ ಮಂಡಿಸಲಿಲ್ಲವಲ್ಲ!
    ಕೆ.ವಿ.ತಿರುಮಲೇಶ್

    • NA DIVAKAR

      Feel proud to get a few words of appreciation from you sir. thanks

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading