‘ವೈಪಿಎಸ್’ ವಿಶ್ವ ಛಾಯಾಗ್ರಹಣ ದಿನಾಚರಣೆ

”ವರ್ಲ್ಡ್ ಫೋಟೋಗ್ರಫಿ ಡೇ”ಯನ್ನು ಅಗಸ್ಟ್ 19 ರಂದು ಎಲ್ಲೆಡೆ ಆಚರಿಸುತ್ತಾ ಬಂದಿರುವುದು 1991ರಿಂದೀಚೆಗೆ ಇದು ವಿಶ್ವ ಮಾನ್ಯತೆ ಪಡೆದದ್ದು 2003ರಿಂದ, ಅದೂ, ಭಾರತೀಯ ಹಿರಿಯ ಛಾಯಾಚಿತ್ರಕಾರ ದೆಹಲಿಯ ಓ.ಪಿ. ಶರ್ಮ ಅವರ ವಿಶ್ವ ಮಟ್ಟದ ಪ್ರಯತ್ನದಿಂದ.

ಅವರು ಗುರುತಿಸಿದ  ಧಾಖಲೆಎಂದರೆ, 1839 ಅಗಸ್ಟ್  19 ರಂದು ಫ್ರಾನ್ಸ್ ನ ವಿಜ್ಞಾನಿ ಲೂಯಿಸ್ ಡ್ಯಾಗ್ಯುರೇ ಎಂಬಾತ ಫ್ರೆಂಚ್ ಸರಕಾರದ ಮೂಲಕ  ಫೋಟೋಗ್ರಫಿಯ ಬಹು ಮುಖ್ಯ ಡೆವೆಲೊಪಿಂಗ್  ಮತ್ತು ಫಿಕ್ಸಿಂಗ್ ತಂತ್ರಜ್ನಾನವನ್ನು “ಡ್ಯಾಗ್ಯುರೇ ಪ್ರೋಸೆಸ್” ಎಂದು ಹೆಸರಿಸಿ ಪೇಟೆಂಟ್ ಇಲ್ಲದೇ ವಿಶ್ವಕ್ಕೇ ಬಿಡುಗಡೆ ಮಾಡಿದ್ದು. ಈ ದಿನದ ವಾರ್ಷಿಕ ಆಚರಣೆಗಾಗಿ ಈ ಬಾರಿ “ಯೂತ್ ಫೋಟೋಗ್ರಫಿಕ್ ಸೊಸೈಟಿಯು ಎರಡು ಪ್ರಾಮುಖ್ಯವಾದ ಕಾರ್ಯಕ್ರಮಗಳನ್ನು ಚಿತ್ರಕಲಾ ಪರಿಷತ್ ನಲ್ಲಿ ಹಮ್ಮಿಕೊಂಡಿದೆ:

 

1. “ವೈ.ಪಿ.ಎಸ್. ಫ್ರೇಂಸ್ ಪ್ರದರ್ಶನ

17 ಮತ್ತು 18  ಬೆಳಿಗ್ಗೆಯಿಂದ ಸಂಜೆ ವರೆಗೆ ಪ್ರದರ್ಶನ  ನಡೆಯುತ್ತದೆ. ಇದರಲ್ಲಿ ಒಟ್ಟು 750  ವೈ.ಪಿ.ಎಸ್ ಸದಸ್ಯರ ಪೈಕಿ  86 ಛಾಯಾಗ್ರಾಹಕರ  ಹೊರಕಟ್ಟು ( ಫ್ರೇಂ) ಹಾಕಿದ ಬಹು ದೊಡ್ಡಳತೆಯ  ಕಲಾತ್ಮಕ  ಛಾಯಾಚಿತ್ರಗಳು ಪ್ರದರ್ಶನಗೊಳ್ಳುತ್ತವೆ. ಎಲ್ಲ ವಯೋಮಾನದ ಸದಸ್ಯರು ಭಾಗವಹಿಸುವ  ಈ ಉತ್ಸವದಲ್ಲಿ ಕಿರಿಯ ಅಸೋಸಿಯೇಟ್ ಸದಸ್ಯೆ 13ವರ್ಷದ ಅನಘಾ ಮೋಹನಳಿಂದ ಹಿಡಿದು 71 ವರ್ಷದ ಹಿರಿಯ ಎಲ್. ದಿವಾಕರ ಕೊಟ್ಟೂರ”  ಅವರ ಛಾಯಾಚಿತ್ರಗಳೂ ಇರುತ್ತವೆಯೆಂಬುದೇ ವಿಶೇಷ !

ಫ್ರೇಂಸ್”  ಬಗ್ಗೆ  ಅಪೂರ್ವವಾದ  ಅಂಶವನ್ನು ವೈ.ಪಿ.ಎಸ್. ಗಮನಿಸಿದಂತೆ, “ಕಲಾಕೃತಿಗೆ ಹಲವೊಮ್ಮೆ ಸೂಕ್ತವಾದ ಹೊರಕಟ್ಟು ( ಫ್ರೇಂ) ಇದ್ದರೆ ಮಾತ್ರ ಅದು ಪರಿಪೂರ್ಣವೆನಿಸುವ ಸಾದ್ಯತೆ ಇರುತ್ತದೆ, ನೋಡುಗನ  ಕಣ್ಣು- ಮನಸ್ಸು ಚಿತ್ರದೆಡೆಗೇ  ಬಹಳ ಹೊತ್ತು ಕೇಂದ್ರೀಕರಿಸುವಂತಾಗಿ  ಹೊರ ಜಗತ್ತಿನಿಂದ ಕೊಂಚ ಸಮಯ ಬೇರ್ಪಡಿಸಿ ಅನನ್ಯವಾದ ಅನುಭವ ನೀಡುವಲ್ಲಿ ಸಹಕಾರಿ ;    ಅಂತೆಯೇ ಈ ವರ್ಷದ ವಿಶ್ವ ಛಾಯಾಗ್ರಹಣ ದಿನದಕಾಣಿಕೆ ಈ ಪ್ರದರ್ಶನವಾಗಲಿದೆ ಎಂಬುದು ಸದಸ್ಯರೆಲ್ಲರ ಆಶಯ.

2. “ ರಿವರ್ಸ್ ಐ “ ಮತ್ತು “ಪ್ರಕೃತಿ- ವನ್ಯಜೀವಿ”   ಛಾಯಾಗ್ರಹಣ

ಭಾನುವಾರ,  ಅಗಸ್ಟ್ 18 ರಂದು ಮದ್ಯಾನ್ಹ 12 ರಿಂದ 2 ರವರೆಗೆ  ವೃತ್ತಿಪರತೆಯೊಡನೆ ಕಲಾತ್ಮಕ ಛಾಯಾಗ್ರಹಣದಲ್ಲೂ ಖ್ಯಾತರಾಗಿರುವ ಎ.ಕೆ. ರಾಜು ಅವರಿಂದ ರಿವರ್ಸ್ ಐಶೀರ್ಷಿಕೆಯಡಿಯಲ್ಲಿ ಒಂದು ವೈಶಿಷ್ಟ್ಯಪೂರ್ಣ ಛಾಯಾಚಿತ್ರ ಪ್ರದರ್ಶನವನ್ನೂ ಇಲ್ಲಿ ಆಯೋಜಿಸಲಾಗಿದೆ .

ರಾಷ್ಟ್ರಮಟ್ಟದಲ್ಲಿ ಹೆಸರಾಂತ ಪತ್ರಿಕೆ ಬೆಟರ್ ಫೋಟೋಗ್ರಫಿ ಯುಟಾಟಾ ಮರ್ಸೆಡಿಸ್ ಬೆಂಜ಼್ ಸಹಯೋಗದಲ್ಲಿ 2017 ರಲ್ಲಿ ಆಯೋಜಿಸಿದ್ದ  ಬೆಂಜ಼್ ಕಾರುಗಳ ವೈವಿಧ್ಯಮಯ ಛಾಯಾಗ್ರಹಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 300 ನುರಿತ ಛಾಯಾಗ್ರಾಹಕರಲ್ಲಿ ಇವರೂ ಒಬ್ಬರಾಗಿ ಅಂತಿಮವಾಗಿ ದ್ವಿತೀಯ ಬಹುಮಾನ ( Award) ಪಡಿದಿರುತ್ತಾರೆ. ಇದೊಂದು ರಾಷ್ಟೀಯ ಧಾಖಲೆಯಾಗಿದ್ದು. ಪ್ರಥಮ ಮತ್ತು ತೃತೀಯ ಬಹುಮಾನಗಳನ್ನು ಮುಂಬೈ ಮೂಲದ ಇನ್ನಿಬ್ಬರುಗಳಿಸಿರುತ್ತಾರೆ.

ಚಿಕ್ಕಮಗಳೂರು, ಜೈಪುರ, ಹಾಗೂ ಹಿಮಾಲಯದ ನಲ್ದೇರ ಪ್ರದೇಶಗಳ ಹೊರಾಂಗಣ ಮುತ್ತು ಕೆಲವು ಒಳಾಂಗಣದ ಸೆಟ್ ಅಪ್ ಗಳಲ್ಲಿ  ಶೂಟಿಂಗ್ ಮಾಡಿದ್ದು ಒಂದು ಅಪೂರ್ವವಾದ ಅವಕಾಶ; ಅಂಥಹ ಬಲು ಕ್ಲಿಷ್ಟಕರವಾದ ಸ್ಪರ್ಧೆಯಲ್ಲಿ ಜಯಗಳಿಸಿರುವ ಸಾಧನೆಗೆ, ಈ ಹಿಂದೆಯೇ  ಅನೇಕ ಕಾರುಗಳ ಜಾಹೀರಾತು ಪೋರ್ಟ್ ಫೋಲಿಯೋಗಾಗಿ ವಿವಿಧ  ಆಯಾಮಗಳಲ್ಲಿ ತಾವು ಶೂಟ್ ಮಾಡಿದ್ದ ಅನುಭವ ಸಹಕಾರಿಯಾಯಿತು ಎನ್ನುತ್ತಾರೆ  ರಾಜು.

ಛಾಯಾಗ್ರಹಣದ ಮೂಲ ಅವಶ್ಯಕತೆ  “ ಬೆಳಕು”.  ಮೋಟಾರು ವಾಹನಗಳ,  ಕಾರುಗಳ ಸಂದರ್ಭದಲ್ಲಿ  ಬೆಳಕನ್ನು ನೇರವಾಗಿ ಅವುಗಳ ಮೇಲ್ಮೆಯ ಪ್ರಖರತೆಗೆ ಬಳಸದೇ, ರಿವರ್ಸ್ಸಾಗಿ  ಬಹು ದೊಡ್ಡ “ಪ್ರತಿಬಿಂಬಕಗಳನ್ನು”  {ರಿಫ್ಲೆಕ್ಟರ್} ಬಳಸಿ ಶೂಟ್ ಮಾಡುವುದು ಸ್ಟುಡಿಯೋ  ಸೆಟ್ ಅಪ್ ನಲ್ಲಿ  ಸಾಧ್ಯವಾದಂತೆಯೇ  ಹೊರಾಂಗಣದಲ್ಲೂ ಛಾಯಾಗ್ರಹಣ ಮಾಡುವಲ್ಲಿನ ಸವಾಲು ಅನೇಕ, ಅನ್ನುತ್ತಾರೆ ಅವರು. ಆ ಎಲ್ಲಾ ಸಧನೆಯ ಛಾಯಾಚಿತ್ರಗಳ ಈ ಪ್ರದರ್ಶನ ಹೊಸಬರಿಗೆ ಮಾರ್ಗದರ್ಶನವೂ ಹೌದು.

ಚೀಫ್ ನ್ಯಾಚುರಲಿಸ್ಟ್  “ ಕೂಡಾ ಆಗಿರುವ ಅವರುಪ್ರಕೃತಿ ಹಾಗೂ ವನ್ಯಜೀವಿ ( ಫ್ಲೋರಾ ಫೌನಾ) ಯ ಸಂರಕ್ಷಣೆ, ಮಾಹಿತಿ ಮತ್ತು ಮಾರ್ಗದರ್ಷಿಯೂ ಆಗಿ ತಮ್ಮದೇ ತಂಡಕಟ್ಟಿಕೊಂಡು, ನೀಲಗಿರೀಸ್, ಕಾರವಾರ, ಅನ್ನಾಮಲೈ ಟೈಗರ್ ರಿಸೆರ್ವ್ ( Valparai)  ಗಳಲ್ಲಿ   ಆಸಕ್ತರಿಗೆ, ಪ್ರವಾಸಿಗಳಿಗೆ ಮತ್ತು ಅಧ್ಯಯನಶೀಲರಿಗೆ ಛಾಯಾಗ್ರಹಣ ಮತ್ತು ಧಾಖಲೆಯ ಅವಶ್ಯಕತೆಗಳಿಗೆ ಶ್ರಮಿಸುತ್ತಾರೆ ಕೂಡಾ. ಈ ವಿಭಾಗಗಳ ಛಾಯಾಚಿತ್ರ ಪ್ರದರ್ಶನವನ್ನೂ ಇಲ್ಲಿ  ರಾಜು ನಡೆಸಿಕೊಡುವವರಿದ್ದಾರೆ. ಕಾರ್ಯಕ್ರಮದಲ್ಲಿ  ಸಂವಾದವೂ ಇರುತ್ತದೆ.

ಪ್ರವೇಶ ಉಚಿತ.

ಅವರ ಸಂಪರ್ಕ: Raju A K
+91 98450 42647
www.rajuak.net

Issued on behalf of YPS..  

K.S. Rajaram, YPS Press Bureau Mbl 9845931306

For any further  info., pl contact 

H.Satish,     President YPS Mbl  9448687595

Hardik Shah, Director YPS  Mbl 9036786971

‍ಲೇಖಕರು AdminS

August 16, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: