ಡಾ ಸಿ ಪಿ ರವಿಕುಮಾರ್
ನನ್ನ ಹೊಸ ಬ್ಲಾಗ್ “ಸಿ. ಪಿ. ಸಂಪದ” ನೋಡಿದ್ದೀರಾ? ಸುಮಾರು ಇಪ್ಪತ್ತೈದು ವರ್ಷಗಳಿಗೂ ಹಿಂದೆ ನಾನು ಕಂಪ್ಯೂಟರ್ ಕುರಿತು ಬರೆದ ಕೆಲವು ಲೇಖನಗಳು ಕನ್ನಡಪ್ರಭ ಪತ್ರಿಕೆಯ ರವಿವಾರದ ಪುರವಣಿಯಲ್ಲಿ ಪ್ರಕಟವಾದವು. ಇವುಗಳನ್ನು ಒಟ್ಟುಗೂಡಿಸಿ “ಕಂಪ್ಯೂಟರ್ ಗೊಂದು ಕನ್ನಡಿ” ಎಂಬ ಹೆಸರಿನಲ್ಲಿ ಅಭಿನವ ಪ್ರಕಾಶನ ಪ್ರಕಟಿಸಿತು. ಈ ಲೇಖನಗಳನ್ನು “ಜನಪ್ರಿಯ ವಿಜ್ಞಾನ” ಮಾದರಿಯಲ್ಲಿ ಬರೆದಿದ್ದೆ. ಈ ಪುಸ್ತಕದ ಪ್ರತಿಗಳು ಬಹಳ ಬೇಗ ಮುಗಿದು ಹೋದವು.
ಅನೇಕ ವರ್ಷಗಳ ನಂತರ ಮತ್ತೊಮ್ಮೆ ಈ ಕೆಲಸಕ್ಕೆ ಹಿಂದಿರುಗಲು ಮನಸ್ಸಾಯಿತು. “ಸಿ.ಪಿ. ಸಂಪದ” ಬ್ಲಾಗ್ ಬರಹಗಳಲ್ಲಿ ಕಂಪ್ಯೂಟರ್ ಕುರಿತಾದ ವಿಷಯಗಳನ್ನು ಆದಷ್ಟೂ ಸರಳವಾಗಿ ಬರೆಯಲು ಪ್ರಯತ್ನಿಸುತ್ತಿದ್ದೇನೆ. ಕನ್ನಡದಲ್ಲಿ ಓದಿದ ಮಕ್ಕಳಿಗೆ ಇವು ಉಪಯುಕ್ತವಾಗಬಹುದು ಎಂಬುದು ನನ್ನ ಆಸೆ. “ಕನ್ನಡವನ್ನು ಕಲಿಯುವುದರಲ್ಲಿ ಅರ್ಥವೇ ಇಲ್ಲ” ಎಂಬ ನಿರ್ಣಾಯಕ ಮಾತುಗಳನ್ನು ಆಗಾಗ ಕೇಳಿದಾಗ ಆಘಾತವಾಗುತ್ತದೆ; ಈಗ ಬಂದಿರುವ ಸುಪ್ರೀಂ ಕೋರ್ಟ್ ತೀರ್ಮಾನವು ಕನ್ನಡ ಶಾಲೆಗಳಿಗೆ ಈಗಾಗಲೇ ಬಂದಿರುವ ದುರ್ಗತಿಯನ್ನು ಇನ್ನಷ್ಟು ತೀವ್ರಗೊಳಿಸಬಹುದು ಎಂಬ ಅಳುಕು ಕಾಡುತ್ತದೆ. ಕನ್ನಡದಲ್ಲಿ ಪ್ರೊಫೆಶನಲ್ ಎಜುಕೇಷನ್ ಸಾಧ್ಯವಾಗಿದ್ದಿದ್ದರೆ ಹೀಗೆ ನಮ್ಮ ಭಾಷೆಯನ್ನು ಕುರಿತು ನಿರ್ಲಕ್ಷ್ಯ ಇರುತ್ತಿರಲಿಲ್ಲ. ಈ ದಿಕ್ಕಿನಲ್ಲಿ ನಾವು ಗಮನ ಹರಿಸಿ ಪರಿಹಾರವನ್ನು ಹುಡುಕಬೇಕಾಗಿದೆ. ಆಗಬೇಕಾದ ಕೆಲಸ ತುಂಬಾ ಇದೆ.
ಕನ್ನಡಭಾಷೆಯಲ್ಲಿ ವೈಜ್ಞಾನಿಕ ಬರಹಗಳು ಬಹಳ ಕಡಿಮೆ ಎಂದು ಕೇಳುತ್ತಲೇ ಇರುತ್ತೇವೆ. ಇರುವ ಮತ್ತು ಬರುವ ವೈಜ್ಞಾನಿಕ ಬರಹಗಳನ್ನು ಜನರಿಗೆ ತಲುಪಿಸುವ ಕೆಲಸವೂ ಬಹಳ ಮುಖ್ಯ. ನಾನು ಯಾರನ್ನು ಗುರಿಯಲ್ಲಿ ಇಟ್ಟುಕೊಂಡು ಈ ಬ್ಲಾಗ್ ಬರಹಗಳನ್ನು ಬರೆದೆನೋ ಆ ಮಕ್ಕಳು ಅಥವಾ ಯುವಜನರಿಗೆ ಈ ಬರಹಗಳು ಲಭ್ಯವೇ ಎಂಬ ಸಂದೇಹ ನನ್ನನ್ನು ಕಾಡುತ್ತದೆ. ಸಾಧ್ಯವಾದಷ್ಟೂ ನಾವು ಉಪಯುಕ್ತ ಕನ್ನಡ ಬರಹಗಳನ್ನು ಮಿತ್ರರೊಂದಿಗೆ ಹಂಚಿಕೊಳ್ಳುವುದರಿದ ಈ ಕಾರ್ಯ ಸುಲಭವಾದೀತು. ನಿಮ್ಮ ಪ್ರತಿಕ್ರಿಯೆಗಳಿದ್ದರೆ ಖಂಡಿತ ತಿಳಿಸಿ!
ಸಿ.ಪಿ. ಸಂಪದ ಓದಲು ಇಲ್ಲಿ ಕ್ಲಿಕ್ ಮಾಡಿ!






Every bit helps, as long as we are working in any corner of the world for our heritage/language it will thrive, but the biggest tragedy that has struck Kannada is our own people want to discard it, that is the biggest danger for any culture. When kids reject parents what shall parents do?
Cp, wonderful. Swamy
ನಾನೂ ಆಗಾಗ್ಗೆ ವಿಜ್ಞಾನದ ಬಗ್ಗೆ ಕನ್ನಡದಲ್ಲಿ ಬರೆಯುತ್ತಿರುತ್ತೇನೆ. ಆದರೆ ಇ೦ತಹ ಪ್ರಯತ್ನಗಳಿಗೆ ಅಷ್ಟು ಪ್ರೋತ್ಸಾಹವಿಲ್ಲ (ಒ೦ದೆರಡು ಪತ್ರಿಕೆಗಳನ್ನು ಬಿಟ್ಟು) ಎ೦ದೇ ಹೇಳಬೇಕು. ಮಾಧ್ಯಮಗಳಿ೦ದ ನಮ್ಗೆ ಉತ್ತೇಜನ್ ಇನ್ನೂ ಹೆಚ್ಚು ಬೇಕು. ಜ್ಯೋತಿಷ್ಯಕ್ಕೆ ಒ೦ದ್ಯಉ ಪುಟ ಕೊಡುವವರು ವಿಜ್ಞಾನಕ್ಕೆ ಒ೦ದು ಕಾಲಮ್ ಕೊಡಲು ಹಿ೦ದೇಟು ಹಾಕುತ್ತಾರೆ. ಬ್ಲಾಗ್ ಸೈಟೂಗಳು ವಾಸಿ. ಆದರೆ ನಮ್ಮ ದೇಶದ ಅನೇಕ ಜನ ಇನ್ನೂ ಪತ್ರಿಕೆಗಳನ್ನೇ ನೆಚ್ಚು ಕೊ೦ಡಿದ್ದಾರೆ.
ಅರೆ, ನಂ ರವಿಕುಮಾರ್ ಸರ್ !!