ಹಿರಿಯ ಪತ್ರಕರ್ತ ತುರುವನೂರು ಮಂಜುನಾಥ್ ಅವರ ಅಂಕಣ ಬರಹಗಳ ಸಂಕಲನ ‘ಅಂತರ್ಮಿಡಿತ’
ಈ ಕೃತಿಯನ್ನು ‘ಜ್ಯೋತಿ ಪ್ರಕಾಶನ’ ಪ್ರಕಟಿಸಿದೆ.
ಈ ಕೃತಿಗೆ ಬರಗೂರು ರಾಮಚಂದ್ರಪ್ಪ ಅವರು ಬರೆದ ಮುನ್ನುಡಿ ಇಲ್ಲಿದೆ.
-ಡಾ ಬರಗೂರು ರಾಮಚಂದ್ರಪ್ಪ
ತುರುವನೂರು ಮಂಜುನಾಥ್ ಅವರು ತಮ್ಮ ‘ಕೆಂಧೂಳಿ’ ವಾರ ಪತ್ರಿಕೆಯಲ್ಲಿ ಬರೆದ ‘ಅಂತರ್ಮಿಡಿತ’ ಎಂಬ ಶೀರ್ಷಿಕೆಯ ಅಂಕಣ ಬರಹಗಳ ಈ ಸಂಕಲನಕ್ಕೆ ಮುನ್ನುಡಿ ರೂಪದ ಕೆಲವು ಅನಿಸಿಕೆಗಳನ್ನು ಹಂಚಿಕೊಳ್ಳುವುದು ನನಗೆ ಸಂತೋಷದ ಸಂಗತಿ. ಈ ಅಂಕಣ ಬರಹಗಳು ಸಮಕಾಲೀನವೂ ಸತ್ವಶಾಲಿಯೂ ಮತ್ತು ಸತ್ಯಶಾಲಿಯೂ ಆಗಿವೆ, ಇದೇ ನನ್ನ ಸಂತೋಷಕ್ಕೆ ಪ್ರಮುಖ ಪ್ರೇರಣೆ.
ಪ್ರತಿವಾರ ‘ಅಂಕಣ’ ಬರೆಯುವುದು ಸುಲಭ ಸಾದ್ಯವಲ್ಲ, ಆದರೂ ಗಂಭೀರ ಚಿಂತನೆಯ ಬರಹಗಳನ್ನು ವಾರಕ್ಕೊಂದರಂತೆ ಕಟ್ಟಿಕೊಡುವುದು ಕಷ್ಟದ ಕೆಲಸ, ಅಂಕಣ ಬರಹಗಳು ಕೆಲವೊಮ್ಮೆ ಆಯಾ ವಾರದ ವಿದ್ಯಮಾನಗಳಿಗೆ ತೋರಿಸಿದ ಪ್ರತಿಕ್ರಿಯೆ ಮಾತ್ರವಾಗುವುದುಂಟು, ಪ್ರತಿಕ್ರಿಯೆಯನ್ನೂ ಒಂದು ಮೌಲಿಕ ವಿಚಾರಧಾರೆಯ ಹಂತಕ್ಕೆ ಕೊಂಡೊಯ್ಯುವುದೂ ಸಾಧ್ಯ. ಈ ಸಾಧ್ಯತೆಯು ಅಂಕಣಕಾರರ ಅಧ್ಯಯನ, ಅನುಭವ ಮತ್ತು ಅಭಿವ್ಯಕ್ತಿ ವಿಧಾನಗಳನ್ನು ಅವಲಂಬಿಸಿರುತ್ತದೆ, ತುರುವನೂರು ಮಂಜುನಾಥ ಅವರು ಪ್ರಕ್ರಿಯೆಗಳಿಗೂ ಪ್ರಬುದ್ಧತೆ ತಂದುಕೊಡುವ ಅಂಕಣಕಾರರು; ಚಿಂತನಶೀಲ ಲೇಖಕರು, ಹೀಗಾಗಿಯೇ ‘ಅಂತರ್ಮಿಡಿತ’ದ ಅಂಕಣ ಬರಹಗಳಿಗೆ ವೈಚಾರಿಕ ಹಿಡಿತ ಸಾಧ್ಯವಾಗಿದೆ, ಮಂಜುನಾಥ ಅವರ ಅಂಕಣ ಬರಹಗಳೆಲ್ಲ ಸಮಕಾಲಿನ ಪ್ರತಿಕ್ರಿಯೇ ಮಾತ್ರವಾಗಿಲ್ಲ, ನಿರ್ದಿಷ್ಟ ಚಿಂತನೆಯ ಸರ್ವಕಾಲಿಕ ಮೌಲ್ಯದ ಪ್ರೇರಣೆ ಪಡೆದು ಕಟ್ಟಿದ ಬರಹಗಳೂ ಈ ಸಂಕಲನದಲ್ಲಿವೆ, ಸಮಕಾಲೀನತೆ ಮತ್ತು ಸಾರ್ವಕಾಲಿಕತೆಗಳನ್ನು ಒಗ್ಗೂಡಿಸುವ ಜರೂರನ್ನುಈ ಬರಹಗಳಲ್ಲಿ ಕಾಣಬಹುದು. ಪ್ರತಿವಾರವೂ ಬರೆಯುವ ಬರಹಗಳಲ್ಲಿ ಒಂದೇತೆರನಾದ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಕಷ್ಟ, ಇದು ಎಲ್ಲ ಅಂಕಣಕಾರರಿಗೆ ಎದುರಾಗುವ ಸವಾಲು, ಈ ಸವಾಲಿನ ನಡುವೆಯೂ ಬಹುಪಾಲು ಸತ್ವಶಾಲಿ ಬರಹಗಳನ್ನು ಕೊಟ್ಟಿದೆ ಅದು ಸಾಧನೆಯೇ ಸರಿ, ಈ ನಿಟ್ಟಿನಲ್ಲಿ ತುರುವನೂರು ಮಂಜುನಾಥ್ ಅವರು ವೈಚಾರಿಕ ಗುಣಶೀಲತೆಯನ್ನು ಕಾಯ್ದುಕೊಂಡಿರುವುದನ್ನು ಕಾಣಬಹುದು.
‘ಅಂತರ್ಮಿಡಿತ’ ದಲ್ಲಿ ಮೂರು ಭಾಗಗಳಿವೆ. ಲೇಖಕರು ವಿಚಾರ, ಧರ್ಮ, ರಾಜಕಾರಣ-ಎಂದು ಮೂರು ವಿಭಾಗಗಲ್ಲಿ ತಮ್ಮ ಬರಹಗಳನ್ನು ವಿಂಗಡಿಸಿದ್ದಾರೆ, ಆಯ್ದ ಬರಗಳಲ್ಲಿ ಪ್ರಧಾನವಾಗಿರುವ ವಸ್ತು ಕೇಂದ್ರಕ್ಕೆ ಅನುಗುಣವಾಗಿ ಈ ವಿಭಾಗೀಕರಣವನ್ನು ಮಾಡಿದ್ದಾರೆಂದು ಭಾವಿಸುತ್ತೇನೆ, ಆದರೆ ಈ ಮೂರು ವಿಭಾಗಗಳ ಬರಗಳ ಕೇಂದ್ರದಲ್ಲಿ ‘ವಿಚಾರ’ವೇ ಮುಖ್ಯವಾಗಿದೆ. ತಮ್ಮ ವೈಚಾರಿಕ ಪ್ರಜ್ಞೆಯಿಂದ ವಿವಿದ ವಸ್ತು ವಿಷಯಗಳನ್ನು ವಿಶ್ಲೇಷಿಸಿದ್ದಾರೆ, ಬಹುಪಾಲು ಬರಹಗಳು ವರದಿ ಮಾದರಿಯನ್ನು ಮೀರಿದ ವಿಶ್ಲೇಷಣೆಯಾಗಿರುವುದು ಮಂಜುನಾಥ್ ಅವರ ವೈಚಾರಿಕ ಅರಿವಿಗೆ ಸಾಕ್ಷಿ.

ತುರುವನೂರು ಮಂಜುನಾಥ್ ಅವರ ವೈಚಾರಿಕ ವಿಶ್ಲೇಷಣೆಯ ಸತ್ವಕ್ಕೆ ಸಾಂಕೇತಿಕ ಸಾಕ್ಷಿಯಾಗಿ ಗಾಂಧೀಜಿಯವರನ್ನು ಕುರಿತ ಎರಡು ಲೆಖನಗಳನ್ನು ಗಮನಸಿಬಹುದು, ಈ ಎರಡೂ ಲೇಖನಗಳು ‘ವಿಚಾರ’ ಎಂಬ ವಿಭಾಗದಲ್ಲಿವೆ. ಗಾಂಧೀಜಿಯವರ ‘ಅಹಿಂಸೆ’ಯ ತತ್ವವನ್ನು ವಿಶ್ಲೇಸುತ್ತಲೇ ನಮ್ಮ ನಡುವೆ ಎದ್ದು ನಿಲ್ಲುತ್ತಿರುವ ‘ಹಿಂಸೆ’ಯ ಹುನ್ನಾರಗಳನ್ನು ವಿಚಾರಶೀಲತೆಯಿಂದ ಮತ್ತು ವಿಷಾದದಿಂದ ನಿರೂಪಿಸುವ ಲೇಖಕರು, ಇನ್ನೊಂದು ಲೇಖನದಲ್ಲಿ ಗಾಂಧೀಜಿಯವರ ನಡೆ-ನಡಿಯಗಳನ್ನು ಇಂದಿನವ್ಯತಿರಿಕ್ತ ಸಿದ್ಧಾಂತಗಳ ‘ವೈರುದ್ಯ’ದ ನೆಲೆಯಲ್ಲಿ ಚರ್ಚಿಸುತ್ತಾರೆ, ಈ ಚರ್ಚೆಯು ಲೇಖನದ ಮೌಲ್ಯವನ್ನು ಹೆಚ್ಚಿಸಿದೆ, ಪತ್ರಕರ್ತರ ಜವಾಬ್ದಾರಿಯನ್ನು ಕುರಿತ ಒಂದು ಲೇಖನವು ಸಮಕಾಲೀನ ಸಂದರ್ಭದ ಕಟುಸತ್ಯಗಳನ್ನು ನುಡಿಯುತ್ತದೆ. ವಿಶಿಷ್ಟ ಮತ್ತು ವಿಷಯಗಳನ್ನೂ ಕುರಿತು ಮಂಜುನಾಥ್ ಅವರು ಚಿಂತನೆ ನಡೆಸುವುದನ್ನು ಅರಿಯಲು ಮನಸ್ಸು ಸ್ಥಿಮಿತದಲ್ಲಿದ್ದರೆ ಎಲ್ಲವೂ ಸುಸಂಬದ್ಧ’ ಎಂಬ ಲೇಖನವನ್ನು ಓದಬೇಕು. ‘ಧರ್ಮ’ ವನ್ನುಕುರಿತು ವಿಭಾಗದ ಲೇಖನಗಳು ಇಂದು ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಅನೇಕ ‘ಅಧರ್ಮ’ದ ಸಂಗತಿಗಳನ್ನು ಒರೆಗಲ್ಲಿಗೆ ಒಡ್ಡುತ್ತವೆ, ವಿಶೇಷವಾಗಿ ಬಹುತ್ವದ ಪ್ರತಿಪಾದನೆಯಿಂದ ಕೂಡಿದೆ. ಈ ವಿಭಾಗದಲ್ಲಿ ಪುರಾಣ ಮತ್ತು ಇತಿಹಾದ ಸಂಬಂಧಾ೦ತರಗಳನ್ನು ಕುರಿತ ಒಂದು ವೈಚಾರಿಕ ಪ್ರತಿಕ್ರಿಯಾತ್ಮಕ ಬರಹವಿದೆ, ಇದೊಂದು ಗಂಭೀರ ಚಿಂತನೆಯ ವಿಷಯವಾಗಿದ್ದು ನನ್ನದೊಂದು ಅಭಿಪ್ರಾಯವನ್ನು ತಿಳಿಸಬಯಸುತ್ತೇನೆ. ಈ ಅಭಿಪ್ರಾಯವು ಮಂಜುನಾಥ ಅವರ ಬರಹಕ್ಕೆ ಪ್ರತಿಕ್ರಿಯೆಯಲ್ಲ, ಆದರೆ ಆ ಬರಹ ವಸ್ತುವನ್ನು ಗಮನಿಸಿದ್ದಾಗ ಹೇಳಬೇಕೆಂಬ ಅನ್ನಿಸಿದ ಅಭಿಪ್ರಾಯ, ನಮ್ಮಲ್ಲಿ ಚರಿತ್ರೆಯನ್ನು ಪುರಾಣವಾಗಿಸುವ, ಪುರಾಣವನ್ನು ಚರಿತ್ರೆಯಾಗಿಸುವ ಮನಸ್ಥಿತಯರುವುದು ನಿಜ, ಅಸಾಧ್ಯವಾದ್ದನ್ನು ಸಾಧ್ಯವಾಗಿಸುವ ಸಾಧಕರ ಚಿತ್ರೆ ಮುಂದೊಮ್ಮೆ ಜನರ ಮೌಖಿಕ ಸಂಪ್ರದಾಯದಲ್ಲಿ ಪುರಾಣದ ಸ್ವರೂಪವನ್ನು ಪಡೆಯುವುದುಂಟು, ಮೌಖಿಕದಿಂದ ಲಿಖಿತಕ್ಕೂ ಬರುವುದುಂಟು, ಅಂತೆಯೇ ಪುರಾಣ ಕಥನಗಳನ್ನು ಚರಿತ್ರೆಯು ಎಂದು ಭಾವಿಸುದುಂಟು, ಒಂದು ಮಾತನ್ನು ಸ್ಪಷ್ಟಪಡಿಸುತ್ತೇನೆ; “ಪುರಾಣ ಕಾವ್ಯ-ಕಥನಗಳೂ ಪುರಾಣ ಶಾಸ್ತ್ರಗಳೂ ಒಂದೇ ಅಲ್ಲ, ಎರಡೂ ಬೇರೆ ಬೇರೆ, ಪುರಾಣ ಕಾವ್ಯ ಹಾಗೂ ಕಥನಗಳಲ್ಲಿ ಬರುವ ಪಾತ್ರಗಳು ಹಿಂದೆ ಇದ್ದಿರಬಹುದು, ಇಲ್ಲದಿರುಬಹುದು, ಆದರೆ ಆ ಪಾತ್ರಗಳಿಗೆ ಪ್ರತೀಕಾತ್ಮಕ ಸ್ವರೂಪ ಇರುತ್ತದೆ,ಪುರಾಣ ಕಾವ್ಯ ಹಾಗೂ ಕಥನಗಳಲ್ಲಿ ವ್ಯಕ್ತಿ ಚರಿತ್ರೆಯನ್ನು ಗುರುತಿಸಬಹುದು, ನಮ್ಮ ಪುರಾಣ ಮಹಾ ಕಾವ್ಯಗಳು ಸಾಮಾಜಿಕ-ಸಾಂಸ್ಕೃತಿಕ ಚರಿತ್ರೆಯ ಆಕರಗಳಾಗಿ ಮುಖ್ಯವಾಗುತ್ತವೆ. ಪವಾಡ ಸದೃಶ ಪಾತ್ರ ಹಾಗೂ ಘಟನೆಗಳನ್ನು ಒಪ್ಪಲಾಗದಿದ್ದರೂ ಸಾಮಾಜಿಕ-ಸಾಂಸ್ಕೃತಿಕ ಚರಿತ್ರೆಯ ಸಂಗತಿಗಳನ್ನು ಗಮನಿಸಬೇಕು, ಹಾಗೆಂದು ಪುರಾಣ ಕಾವ್ಯ ಕಥನಗಳು ಇಡಿಯಾಗಿ ಪೂರ್ಣ ಪ್ರಮಾಣದ ಚರಿತ್ರೆ ಯಾಗುವುದಿಲ್ಲ, ಆದರೆ ಪುರಾಣಕಾಯ-ಕಥನಗಳು ಸೃಜನಶೀಲ ಕೃತಿಗಳು, ಚರಿತ್ರೆಯು ಆಕರಗಳನ್ನು ಆಧರಿಸದ ನಿರೂಪಣೆ ಮತ್ತು ವಿವರಣೆಗಳನ್ನು ಒಳಗೊಂಡ ಎರಡನ್ನೂ ಪೂರ್ಣವಾಗಿ ಒಂದೇ ಎಂದು ಪ್ರಚುರ ಪಡಿಸುವುದು ಸೂಕ್ತವಲ್ಲ ಈ ತಿಳುವಳಿಕೆ ನಮಗೆ ಅಗತ್ಯ”.
ಈ ಕೃತಿಯ ಮೂರನೇ ವಿಭಾಗವನ್ನು ‘ರಾಜಕಾರಣ’ಎಂದು ಹೆಸರಿಡಲಾಗಿದೆ, ಈ ವಿಭಾಗದಲ್ಲಿ ಮಂಜುನಾಥ ಅವರು ಪ್ರಜಾಸತಾತ್ಮಕ-ಪ್ರಗತಿಪರ ದೃಷ್ಟಿಕೋನವು ಸ್ಪಷ್ಟವಾಗಿ ಗೋಚರಿಸುತ್ತದೆ, ಇದು ಇಂದಿನ ಅಗತ್ಯವೂ ಹೌದು, ಇಂದಿನ ರಾಜಕಾರಣ ಎಲ್ಲಿಯವರೆಗೆ ಬಂದು ನಿಂತಿದೆ ಎಂದರೆ ತಮಗೆ ಅನುಕೂಲಕವಾಗುವಂತೆ ಇತಿಹಾಸವನ್ನು ತಿದ್ದಿ ಬರೆಯುತ್ತಿರುವ ಉದಾಹರಣೆಗಳು ಹೆಚ್ಚುತ್ತಿವೆ’ ಎಂದು ಅರಿತಿರುವ ಲೇಖಕರು ತಮ್ಮಭಿಪ್ರಾಯಕ್ಕೆ ಪೂರಕವಾದ ಸಂಗತಿಗಳಿ೦ದ ಸಮಕಾಲೀನ ಸಂದರ್ಭದ ರಾಜಕೀಯ ಹುನ್ನಾರಗಳನ್ನು ಸ್ವಷ್ಟದನಿಯಲ್ಲಿ ಬೆತ್ತಲಾಗಿಸುತ್ತಾರೆ. ‘ಸೈದ್ಧಾಂತಿಕ ನಿಲುವುಗಳು ಎನ್ನುವ ಈ ಪದಕ್ಕೆ ರಾಜಕಾರಣದಲ್ಲಿ ಈಗ ಅರ್ಥವೇ ಇಲ್ಲದಂತಾಗಿದೆ’- ಎಂದು ವಿಷಾದಿಸುತ್ತಾರೆ, ಇದು ನಮ್ಮಂತೆ ಯೋಚಿಸುವ ಎಲ್ಲರ ವಿಷಾದವಾಗಿದೆ, ಪ್ರಜಾಪ್ರಭುತ್ವದಲ್ಲಿ ವ್ಯಕ್ತಿ ಪೂಜೆಯು ಹೇಗೆ ಸೂಕ್ತವಾಗುವುದಿಲ್ಲವೆಂಬುದನ್ನು ಒಂದು ಲೇಖನದಲ್ಲಿ ಪಕ್ಷ ಬೇಧವಿಲ್ಲದೆ ವಿವರಿಸಿದ್ದಾರೆ, ಪ್ರಗತಿಪರ ಚಳವಳಿಗಳ ಸ್ಥಿತಿಗತಿಗಳನ್ನು ನಿರೂಪಿಸುವ ಇನ್ನೊಂದು ಲೇಖನದಲ್ಲಿ ಮುಂದಿನ ಮಾರ್ಗಗಳನ್ನು ಕುರಿತು ಗಮನಾರ್ಹ ಸಲಹೆಗಳನ್ನು ನೀಡಿದ್ದಾರೆ. ‘ಅಂತರ್ಮಿಡಿತ’ ಕೃತಿಯಲ್ಲಿ ಮೂರು ವಿಭಾಗಗಳಿದ್ದರೂ ಎಲ್ಲಾ ವಿಭಾಗಗಳಲ್ಲಿ ಅಂತಃರ್ಗತವಾಗಿ ಹರಿಯುವ ಚಿಂತನಾ ಕ್ರಮ ಒಂದೇ ಆಗಿದೆ, ಪ್ರಜಾಸತ್ತಾತ್ಮಕ ಹಾಗೂ ಜನಪರ ಪ್ರಗತಿಶೀಲ ವಿಚಾರಧಾರೆಯ ಅಂತಃರ್ಜಲ ಇಲ್ಲಿನ ಬರಹಗಳ ಅಂತಃಶಕ್ತಿಯಾಗಿದೆ. ಈ ಅಂತಃಶಕ್ತಿಯು ಸದಾ ಜಾಗೃತವಾಗಿರಲಿ ಪ್ರಬುದ್ಧವಾಗುತ್ತಾ ಬೆಳೆಯಲಿ, ಸಮಾನತೆ ಮತ್ತು ಸೌಹಾರ್ದತೆಗಳು ಸಮಾಜ ಪರಿಸರಕ್ಕೆ ಸದಾ ಪ್ರೇರಣೆಯಾಗುತ್ತಿರಲಿ.






0 Comments