ಯುದ್ಧಗಳೇಕೆ ಉಸಿರಾಡುತ್ತಿವೆ…?
-ವೆಂಕಟೇಶ್ ಚಾಗಿ
*
ಸೂರ್ಯ ಬೆಳಗುತ್ತಿರುವುದು
ಜಗತ್ತನ್ನು
ಯುದ್ಧಗಳನ್ನಲ್ಲ
ಬೆಳಕಿನ ಶಕ್ತಿಯ ಚೇತನವು
ಹಸಿರು ಉಸಿರನ್ನು ಹರಡುತ್ತಿದೆ
ಪ್ರಾಣಿ-ಪಕ್ಷಿಗಳು ಉಸಿರಾಡುತ್ತಿವೆ
ಆದರೆ
ಯುದ್ಧಗಳೇಕೆ ಉಸಿರಾಡುತ್ತಿವೆ..?
ಬದುಕು ಎಲ್ಲರಿಗೂ ಇದೆ
ಹುಟ್ಟು ಸಾವುಗಳ ಬಿಡದ ನಂಟು
ಹುಟ್ಟು ಎಂಬುದು ಹಬ್ಬ
ಬದುಕು ಅದೊಂದು ಉತ್ಸವ
ಕೊಡುವುದು ಪಡೆವುದು
ಎಲ್ಲವೂ ಜಗದ ನಿಯಮ
ಆದರೆ
ಯುದ್ಧಗಳೇಕೆ ಉಸಿರಾಡುತ್ತಿವೆ…?
ಯುದ್ಧದ ಭೂಮಿಯಲ್ಲಿ
ಬದುಕು ಎಂದಾದರೂ ಅರಳುವುದೇ
ಹೂಗಳ ಸುವಾಸನೆ ಸತ್ತು
ಮದ್ದಿನ ಮತ್ತೇ ಎಲ್ಲೆಡೆ ಈಗ
ಕಟ್ಟಿಟ್ಟ ಕನಸುಗಳೆಲ್ಲ ಸುಟ್ಟು ಕರಕಲಾಗುತ್ತಿವೆ
ಮುಂದೊಂದು ಕನಸಿದೆ ಅಲ್ಲವೇ
ಆದರೂ
ಯುದ್ಧಗಳು ಏಕೆ ಉಸಿರಾಡುತ್ತಿವೆ…?
ಪ್ರಶ್ನೆಗಳಿಗೆ ಈಗ
ಹಲವಾರು ಉತ್ತರಗಳಿವೆ
ಮಾತುಗಳ ನೀತಿಗಳ ಹಂದರವೇ
ಜಗತ್ತನ್ನು ಆವರಿಸಿದೆ
ಮಾನ ಸನ್ಮಾನಗಳು ಮಿಕ್ಕಿವೆ
ಆದರೂ
ಯುದ್ಧಗಳೇಕೆ ಉಸಿರಾಡುತ್ತಿವೆ ?






0 Comments