ವೀಣಾ ಭಟ್ ಬರೆದ ಬೇಸಿಗೆಗೆ ಬ೦ಗಾರದ ಮಳೆ!!

ಬಂಗಾರದ ಮಳೆ …ನೋಡಾ ಬನ್ನಿ….

ವೀಣಾ ಭಟ್

ಡೆಡ್ ಲೈನ್ಸ್ …ಫೋನ್ ಕಾಲ್ಸ್ …ಲೇಟ್ ನೈಟ್ಸ್ …… ಅನ್ ಎಂಡಿಂಗ್ ಕಾಫೀ …ಟೀ…. ನೋ ಬ್ರೇಕ್ ಫಾಸ್ಟ್ ….ಬ್ರಂಚು …ಡಿನ್ನರ್ …. ಲೈಫು ಇಷ್ಟೇನೆ ….ಅಂತ ಅನ್ಕೊಂಡು ಹೀಗೆ ಇರಬೇಡಿ ….. ಸ್ವಲ್ಪ ಆ ಕಡೆ ..ಈ ಕಡೆ ನೋಡಿ…..

 

  ಪ್ರಕೃತಿ ನಿಮಗೆ ಸರ್ ಪ್ರೈಸ್ ಕೊಡ್ತಾನೇ ಇರ್ತಾಳೆ … . ಫೆಬ್ರುವರಿ ಮುಗೀತು..ಮಾರ್ಚ್ ಬಂತು ಅಂತ ನೆನಪಿಸ್ತಾಳೆ ಈಕೆ. ಹೌದು ಇವಳೇ ಬಂಗಾರದ ರಾಣಿ…ಚಿನ್ನದ ರಾಣಿ…..ಬೆಡಗಿನ ರಾಣಿ…. ಇವಳೇನು ಸಿನಿಮಾ ನಾಯಕಿ ಅಂದ್ಕೋಬೇಡಿ ಮತ್ತೆ. ಆದರೆ ಇವಳಷ್ಟು ಸುಂದರಿ ಬೇರೆ ಯಾರಿಲ್ಲ. ಅವಳೇ ಈ ಹೂ ..ರಾಣಿ.   ಬರೀ ಇಷ್ಟೇ ಸಾಕೆ..? ಇವಳ ಹೆಸರು ತಿಳಿ ಬೇಡ್ವೇ ..? ಇವಳಿಗೆ ಹೆಸರು ಒಂದೆರಡಲ್ಲ….ಎಲ್ಲೋ ತಬುಬುಯ …,ಟ್ರೀ ಆಫ್ ಗೋಲ್ಡ್ .., ಕ್ಯಾರಿಬೀನ್ ಟ್ರಂಪೆಟ್ ಟ್ರೀ ಅಂತೆಲ್ಲ ಹೆಸರುಗಳಿವೆ .ಹೂಗಳು ಗಂಟೆಯಾಕಾರದಲ್ಲಿ ಇವೆಯಲ್ಲ ಅದಕ್ಕೆ ಟ್ರಂಪೆಟ್ ಟ್ರೀ ಅಂತಾರೆ . . ಸಸ್ಯ ಶಾಸ್ತ್ರದ ಬಿಗ್ನೋನಿಯಾಸಿ ಕುಟುಂಬ ಈಕೆಯದು . ದಕ್ಷಿಣ ಅಮೆರಿಕಾದಿಂದ ಬಂದು ಇಲ್ಲಿ ಚೆನ್ನಾಗಿ ತಳವೂರಿದ್ದಾಳೆ ನೋಡಿ..

  ಫೆಬ್ರುವರಿ ಮಾರ್ಚ್ ನಲ್ಲಿ ಮರ ತುಂಬಾ ಬರೀ ಹೂಗಳೇ … ಎಲೇನೂ ಇಲ್ಲ …ಕಾಂಡನೂ ಕಾಣಲ್ಲ…. ಹೂಗಳ ಮಳೆ ಸುರಿಸಿಬಿಡ್ತಾಳೆ….ನೋಡೋದಕ್ಕೆ ನೂರು ಕಣ್ಣುಗಳು ಬೇಕು ಅನ್ಸುತ್ತೆ . ಮರದ ಕೆಳಗೆ ಮೆತ್ತಗೆ ನಡೀರಿ ..ಚಪ್ಪಲಿ ತೆಗೆದರೆ ಒಳ್ಳೇದು …. ಯಾಕಂದ್ರೆ ಅಲ್ಲೆಲ್ಲ ಹೂ ಹಾಸಿ ಬಿಡ್ತಾಳೆ ಇವಳು… ಹಾಗೆ ಸುಮ್ಮನೆ ಹೂ ಅರಿಸ್ಕೊಂದು ಸ್ವಲ್ಪ ಹೊತ್ತು ಕಳೀರಿ…. ಹಾಗಂತ ಹೂ ಬಿದ್ದ ಮೇಲೆ ಮರ ಬೋಳು ಅಂತ ಸುಮ್ಮನಾಗಬೇಡಿ . ಎಲೆಗಳೆಲ್ಲ ಚೂಪು..ಚೂಪು..ಫಳ..ಫಳ..ಹೊಳೀತಾವೆ.. ಇವಳ ಸೌಂದರ್ಯಕ್ಕೆ ಮರುಳಾಗಿ ಹೂತೋಟದಲ್ಲಿ ಬೆಳೆಸುವವ್ರು ಒಂದಷ್ಟು ಜನ.. ಬೆಂಗಳೂರಲ್ಲಿ ನಗರ ಅರಣ್ಯ ಯೋಜನೆಯಡಿಯಲ್ಲಿ ಬಹುಸಂಖ್ಯೆಯಲ್ಲಿ ಈ ಮರಗಳನ್ನ ನೆಟ್ಟು ಬಿಟ್ಟಿದ್ದಾರೆ ..ಈ ಮರಗಳನ್ನು ನೆಡಿಸಿದ ಆ ಮಹಾನ್ ವ್ಯಕ್ತಿ ಯಾರೋ ..? ಅವರಿಗೊಂದು ದೊಡ್ಡ ಥ್ಯಾಂಕ್ಸ್…..ಪ್ರೀತಿಯ ನಮನಗಳು … ಹೊರಗೆ ಹೋದಾಗ ನೋಡ್ತೀರಾ ತಾನೆ…? ಮರೀಬೇಡಿ ಮತ್ತೆ…? ಮರದ ಕೆಳಗೆ ಸ್ವಲ್ಪ ಹೊತ್ತು ನಿಂತು ನೋಡಿ…ಯಾರಿಗ್ಗೊತ್ತು …. ನಿಮ್ಮ ಮೇಲೆ ಹೂವಿನ ಮಳೆ ಸುರಿದಾಳು….!]]>

‍ಲೇಖಕರು G

March 15, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: