
ರವಿ ಅರೇಹಳ್ಳಿ
ಬ್ಯಾಂಗಲೋರ್ ಸಾಹಿತ್ಯ ಉತ್ಸವಕ್ಕೆ ಆರಿಫ್ ರಾಜಾ, ದಯಾನಂದ ಟಿ ಕೆ ಇಬ್ಬರನ್ನೂ ಆಯ್ಕೆ ಮಾಡುವಾಗ ಸಮಿತಿಯವರು ಎಲೈಟ್ ವರ್ಗದ ಸಂಘಟಕರ ನಡುವೆ ಚಾಲ್ತಿಯಲ್ಲಿರುವ ದಲಿತ, ಅಲ್ಪಸಂಖ್ಯಾತ, ಪ್ರಗತಿಶೀಲರಲ್ಲಿ ಒಂದಷ್ಟು ಮಂದಿಗೆ ಅವಕಾಶ ಕೊಡುವ ‘ಎಲ್ಲರನ್ನೂ ಒಳಗೊಳ್ಳುವ’ ನಕಲಿ ನೀತಿಯನ್ನು ನೆಪ ಮಾತ್ರಕ್ಕೆ ಪಾಲಿಸುವ ತಂತ್ರಕ್ಕೆ ಶರಣಾಗಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ.
ಜೊತೆಗೆ-
ಸಮಾಜಮುಖಿಯಾದ ಒಂದು ಅಭಿಪ್ರಾಯದ ಲೇಖಕರನ್ನು ಖಳರಂತೆ ಬಿಂಬಿಸುವುದು.
ಕನ್ನಡಕ್ಕೆ ಪ್ರಾತಿನಿಧ್ಯ ಕೊಟ್ಟಂತೆ ಮಾಡಿ ಗೋಷ್ಠಿಗಳನ್ನು ಕಳಪೆಯಾಗಿ ನಿರ್ವಹಿಸಿ ಕನ್ನಡದ ಕಂಟೆಂಟ್ ಕಳಪೆ ಎಂದು ಸಾರುವುದು.
ಇದು ಸರ್ಕಾರಿ ಕಾರ್ಯಕ್ರಮವೂ ಅಲ್ಲದೆ ಇರುವುದರಿಂದ ಸಂಘಟಕರು ಕನ್ನಡದ ಯಾವುದೇ ಲೇಖಕರನ್ನು ಕರೆಯದಿದ್ದರೂ ಎಂತಹ ಆಕ್ಷೇಪಣೆಯೂ ಇರುತ್ತಿರುಲಿಲ್ಲ. ಕನ್ನಡದ ಸಾಹಿತ್ಯಾಸಕ್ತರು ಮೇಲ್ಕಂಡ ಉತ್ಸವಕ್ಕೆ ಕಳೆದ ವರ್ಷಗಳಲ್ಲಿ ತೋರಿಸಿದ ನೀರಸ ಪ್ರತಿಕ್ರಿಯೆ ಎಲ್ಲರಿಗೂ ಗೊತ್ತಿರುವಂತದ್ದೇ
ಒಂದು ವ್ಯವಸ್ಥೆ ದೊಡ್ಡ ಮಟ್ಟದಲ್ಲಿ ಅಂಗೈ ತೋರಿಸಿ ಅವಲಕ್ಷಣ ಅನ್ನಿಸಿಕೊಳ್ಳುತ್ತಿದೆ.
#Bangalore_Literature_Festival
#ಬೆಂಗಳೂರು_ಸಾಹಿತ್ಯ_ಉತ್ಸವ





0 Comments