'ವಿಳಾಸವಿಲ್ಲದ ಲಕೋಟೆ…' – ರಾಘವೇಂದ್ರ ಜೋಶಿ ಕವಿತೆ

ರಾಘವೇಂದ್ರ ಜೋಶಿ

ನೆನಪಿನಲ್ಲಿ ಕಂಡ ಮುಖ
ಕನವರಿಕೆಯಲ್ಲಿ ಬಂದಾಗ
ಬಾಗಿಲು ತಟ್ಟಿದ ಶಬ್ದ.
ಬೆರಳ ಶಬ್ದವೇ?
ರೋಮಾಂಚಿತಗೊಂಡು
ಬಾಗಿಲು ತೆರೆದರೆ-
ತೆರೆದಷ್ಟೇ ವೇಗವಾಗಿ
ಮುಚ್ಚಿದ ಸದ್ದು.
ಹೊಸ್ತಿಲಲ್ಲಿ ಜೋರು ಮಳೆ!
 
ನಗುವೇ ಎಲ್ಲದಕ್ಕೂ
ಅಂತಿಮವಲ್ಲ.
ಬೆಟ್ಟದ ತುದಿಯಲ್ಲಿ
ಧ್ವಜವೊಂದನ್ನು ನೆಟ್ಟ ಮೇಲೆ
ಉದ್ವೇಗಕ್ಕೋ ಒಂಟಿಯಾಗಿದ್ದಕ್ಕೋ
ಅಳಲಾಗದಿದ್ದರೆ
ನಿನ್ನ ವಿಜಯಕ್ಕೊಂದು ಧಿಕ್ಕಾರ.
ನೀರಿಲ್ಲದ ಈ ಗರಿಕೆ ಹೇಗೆ
ಒಣಗಿ ಬಾಡುತ್ತಿದೆ ನೋಡು.

ಶಿಖರದಿಂದ ಕೆಳಗಿಳಿದ
ಮೇಲೆ ಗೊತ್ತಾಯಿತು:
ಅಲ್ಲೊಂದು
ಖಾಲಿ ಗೋಡೆಯಿತ್ತು,
ಗೋಡೆಯ ಮೇಲೆ
ನೂರು ಚಿತ್ರಕಾರರ
ಸಪಾಟು ಚಿತ್ರಕಲೆ.
ಕಲೆ ಗೊತ್ತಿರದ
ಮೊಂಡು ಪ್ರೇಮಿ
ಕೇವಲ ಅವಳನ್ನಷ್ಟೇ
ಉಬ್ಬಕ್ಷರಗಳಲ್ಲಿ
ಕೆತ್ತಿ ಹೋಗಿರುವನು.
 
ಮಳೆ ಬಂದಾಗ
ತೇಲಿ ಬಿಡು
ಅಂತ ಪತ್ರ
ಕೈಯಲ್ಲಿಟ್ಟು ಹೋದಳು.
ತೇಲುವ ಸುಖ ಗೊತ್ತಿರುವ
ಈಜಿನ ಕಲೆ ಗೊತ್ತಿರದ
ವಿಳಾಸವಿಲ್ಲದ
ಈ ಲಕೋಟೆಗೆ
ಸ್ಟಾಂಪು ಕೊಡುತ್ತಿರುವದು
ಭಯವಾ?
ಅಭಯವಾ?
 

‍ಲೇಖಕರು G

December 25, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. Ahalya Ballal

    “…..although we seek security, it is overrated. Insecurity is much more likely to bring about the creative dimension within us. Becoming comfortable with insecurity is one of the most important things we can do to live in a state of presence.” Eckhart Tolle

    ಪ್ರತಿಕ್ರಿಯೆ
  2. Ahalya Ballal

    ಎಷ್ಟೆಲ್ಲ ಅರ್ಥ ಕೊಡುತ್ತೆ ಮತ್ತು ಕೊಡೋಲ್ಲ! ಇಷ್ಟವಾಯ್ತು, ರಾ ಜೋ.

    ಪ್ರತಿಕ್ರಿಯೆ
  3. ವಿದ್ಯಾಶಂಕರ ಹರಪನಹಳ್ಳಿ

    ಓದಿದಂತೆಲ್ಲಾ ಹೊಸ ಅರ್ಥ ಹುಟ್ಟುವ ಕವಿತೆ. ಕವಿಗಳಿಗೊಂದು ನಮಸ್ಕಾರ !

    ಪ್ರತಿಕ್ರಿಯೆ
  4. ಅಕ್ಕಿಮಂಗಲ ಮಂಜುನಾಥ

    ತುಂಬಾ ಚೆನ್ನಾಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: