ಮಂಗಳೂರಿನ ವೆಲೆನ್ಸಿಯಾದಲ್ಲಿ ಒಂದು ಮನೆ. ಹೆಸರು ಫ್ರಾಂಕ್ ಸಲ್ಡಾನ್ಹ. ಸುಮಾರು ಐವತ್ತು ವರುಷ ಹಳೆಯದೆನ್ನಬಹುದಾದ ಆ ಮನೆಯಲ್ಲಿ ಹದಿನೈದು ಜನ ಹುಡುಗರು ಒಟ್ಟಿಗೆ ವಾಸಮಾಡುತ್ತಾರೆ. ಎಲ್ಲರೂ ಬೇರೆ ಊರಿನಿಂದ, ರಾಜ್ಯಗಳಿಂದ ಬಂದವರು. ಬೇರೆ ಬೇರೆ ವೃತ್ತಿಯಲ್ಲಿರುವವರು. ನಾನು ಮಂಗಳೂರು ಪ್ರವಾಸಕ್ಕೆ ಹೋದಾಗ ಅವರ ಜೊತೆ ಎರಡು ದಿನ ಕಳೆಯುವ ಅವಕಾಶ ಸಿಕ್ಕಿತು. ನಾನು ಸಿನಿಮಾದವನೆಂದು ಗೊತ್ತಾದ ಕೂಡಲೇ ಅಲ್ಲಿನ ಹಲವರು ತಮ್ಮ ಸಿನಿಮಾ ಪ್ರೀತಿಯನ್ನು ಹಂಚಿಕೊಂಡರು. ಕೆಲವರು ಹಾಡುಹಾಡಿದರು, ಇನ್ನೂ ಏನೇನೋ ಟ್ಯಾಲೆಂಟ್ಗಳನ್ನು ಪ್ರದಶರ್ಿಸಿದರು. ಅದರಲ್ಲಿ ಒಬ್ಬ ವ್ಯಕ್ತಿ ಸಿನಿಮಾ ಕುರಿತು ಹೇಳಿದ ಕಥೆ ನನ್ನಲ್ಲಿ ಉಳಿಯಿತು. ಅದು ಹೀಗಿದೆ;
ನನ್ನೂರು ಚಿಂತಾಮಣಿ. ತೆಲುಗು ಭಾಷಿಕರು ಹೆಚ್ಚು ಇರುವ ಸ್ಥಳ. ನಮ್ಮಲ್ಲಿ ಕನ್ನಡಿಗರೂ ಸಹ ತೆಲುಗಿನಲ್ಲೇ ಮಾತಾಡುತ್ತಾರೆ. ಕನ್ನಡ ಸಿನಿಮಾಗಳಿಗಿಂತಲೂ ತೆಲುಗು ಸಿನಿಮಾಗಳನ್ನು ನಮ್ಮ ಜನ ಹುಚ್ಚೆದ್ದು ನೋಡುತ್ತಾರೆ. ಒಮ್ಮೆ ಹೀಗಾಯಿತು. ನಮ್ಮೂರಿನ ಥಿಯೇಟರ್ ಒಂದರಲ್ಲಿ ಚಿರಂಜೀವಿ ಅಭಿನಯದ ಇಂದ್ರ ಸಿನಿಮಾ ನಡೆಯುತ್ತಿತ್ತು. ಚಿತ್ರ ರಿಲೀಸ್ ಆಗಿ ಮೂವತ್ತೈದು ದಿನಗಳಾಗಿತ್ತು. ಆ ಸಂದರ್ಭದಲ್ಲಿ ಮತ್ತೊಂದು ಥಿಯೇಟರಿನಲ್ಲಿ ಬಾಲಕೃಷ್ಣ ಅಭಿನಯದ ಚನ್ನಕೇಶವರೆಡ್ಡಿ ಚಿತ್ರ ರಿಲೀಸ್ ಆಗುವುವಾಗಿ ಅನೌನ್ಸ್ ಆಯಿತು. ಚಿಂತಾಮಣಿಯಲ್ಲಿ ಚಿರಂಜೀವಿಗೆ ಎಷ್ಟು ಅಭಿಮಾನಿಗಳಿದ್ದಾರೋ ಕೃಷ್ಣನಿಗೂ ಅಷ್ಟೇ ಅಭಿಮಾನಿಗಳಿದ್ದಾರೆ.
ಆ ಇಬ್ಬರು ನಟರ ನಡುವೆ ವೈಯಕ್ತಿಕ ಪೈಪೋಟಿ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ಇಬ್ಬರೂ ನಟರ ಅಭಿಮಾನಿಗಳಲ್ಲಂತೂ ಭಯಂಕರ ಪೈಪೋಟಿ ಇದೆ. ಇಂದ್ರ ಚಿತ್ರದ ಕಟೌಟ್ಗಳಿಗೆ ದೊಡ್ಡ ಹೂಹಾರಗಳನ್ನು ಹಾಕಿ, ಸಿಹಿ ಹಂಚಿ ಚಿತ್ರ ಯಶಸ್ವಿಯಾದದ್ದರ ನೆಪ ಹಿಡಕೊಂಡು ಖುಷಿಯಲ್ಲಿ ತೇಲಾಡುತ್ತಿದ್ದ ಚಿರಂಜೀವಿ ಅಭಿಮಾನಿಗಳ ಮುಂದೆ ಎದೆ ಎತ್ತಿಕೊಂಡು ಓಡಾಡುವ ತಹತಹದಲ್ಲಿದ್ದ ಕೃಷ್ಣನ ಅಭಿಮಾನಿಗಳಿಗೆ ಚನ್ನಕೇಶವರೆಡ್ಡಿಯ ಆಗಮನ ಸಂಭ್ರಮ, ಪ್ರತಿಷ್ಟೆಯ ವಿಷಯವಾಯಿತು. ಅಭಿಮಾನಿಗಳು ಅಲಟರ್್ ಆದರು ನೋಡಿ. ಸುತ್ತಲಿನ ಹದಿನಾಲ್ಕು ಹಳ್ಳಿಗಳಿಂದ ಹದಿನೇಳು ಟ್ರಾಕ್ಟರ್ಗಳಲ್ಲಿ ಅಭಿಮಾನಿಗಳು ಬಂದು ಥಿಯೇಟರ್ ಮುಂದೆ ನಿಂತರು. ಚನ್ನಕೇಶವರೆಡ್ಡಿ ಯಾವುದೋ ಬಸ್ಸಿನಲ್ಲಿ ಬಂದಿಳಿಯಿತು. ಈ ಅಭಿಮಾನಿಗಳು ಚಿತ್ರದ ಪ್ರಿಂಟ್ ನೋಡಿ ಹಾಕಿದ ಕೂಗು, ಕುಣಿತ, ಹೂವಿನ ಎರಚಾಟ, ಪೂಜೆಗಳನ್ನು ನೋಡಿದ್ದರೆ ಪ್ರಿಂಟ್ ಇರಲಿ ನಿಜವಾದ ಚನ್ನಕೇಶವ ರೆಡ್ಡಿಯೇ ಗಾಬರಿಯಾಗಿಬಿಡುತ್ತಿದ್ದ!
ಚಿತ್ರದ ಪ್ರಿಂಟ್ ಥಿಯೇಟರಿನ ಒಳಹೋಯಿತು. ಟ್ರಾಕ್ಟರ್ಗಳನ್ನು ಹತ್ತಿಕೊಂಡು ಬಂದವರು, ಸಿಟಿಯಲ್ಲಿದ್ದವರು ಎಲ್ಲರೂ ಕೃಷ್ಣನ ಕಟೌಟ್ ಬಳಿ ಬಂದರು. ನಾಯಕನ ಕಟೌಟಿಗೆ ಇನ್ನೂರ ಮೂವತ್ತು ಕುರಿಗಳನ್ನು ಬಲಿಕೊಟ್ಟು ಎಲ್ಲರಿಗೂ ಊಟ ಹಾಕಿದರು.!
ಮಾರನೆಯ ದಿನ ಚಿತ್ರ ರಿಲೀಸ್ ಆಯಿತು. ಚನ್ನಕೇಶವ ರೆಡ್ಡಿಯನ್ನು ನೋಡೋದಕ್ಕೆ ಅಭಿಮಾನಿಗಳು ಥಿಯೇಟರ್ ಮುಂದೆ ಸಾಲುಗಟ್ಟಿ ನಿಂತರು.
ಅತ್ತ ಚಿರಂಜೀವಿ ಅಭಿಮಾನಿಗಳಿಗೆ ಅಭಿಮಾನತ್ವ ಜಾಗೃತವಾಯಿತು. ಅದಾಗಲೇ ಇಂದ್ರ ರಿಲೀಸ್ ಆಗಿ ಮೂವತ್ತೈದು ದಿನ ಆಗಿತ್ತಲ್ಲ? ಥಿಯೇಟರ್ನಿಂದ ಸುಮಾರು ಇಪ್ಪತ್ತೈದು ಲಕ್ಷ ರೂಪಾಯಿ ಷೇರು ಸಹ ಹೋಗಿತ್ತು. ಅವರೆಲ್ಲರೂ ಚಿತ್ರಮಂದಿರದ ಬಳಿ ಬಂದರು. ಅಭಿಮಾನಿಗಳ ನಾಯಕರು ಚಿತ್ರ ವೀಕ್ಷಿಸಲು ಬರುವ ಎಲ್ಲರಿಗೂ ತಾವೇ ಟಿಕೆಟ್ಟು ಖರೀದಿಸಿದರು. ಅಲ್ಲದೆ ಪ್ರತಿಯೊಬ್ಬರಿಗೂ ಉಚಿತ ಬಿರಿಯಾನಿ ನೀಡತೊಡಗಿದರು. ಚನ್ನಕೇಶವರೆಡ್ಡಿ ಒಂದುವಾರ ಪೂರೈಸುವವೆರೆಗೂ ಪರಿಸ್ಥಿತಿ ಹಾಗೇ ಇತ್ತು.
ಆತ ಇಷ್ಟು ಕಥೆ ಹೇಳುವವೆರೆಗೂ ನಾನು ಯಾವುದೋ ಸಿನಿಮಾ ನೋಡುವವನಂತೆ ಆತನನ್ನೇ ನೋಡುತ್ತಾ ಕೂತೆ. ಮತ್ತೆ ಆತನನ್ನು ಮಾತಾಡಿಸುವ ಆಸೆಯಾಗಿ ಹಾಗಾದರೆ ನಾವು ಸಿನಿಮಾ ಮಾಡಿದಾಗಲೂ ಹೀಗೆ ಪ್ರತಿಕ್ರಿಯೆ ಬರುತ್ತದೆ ಅಲ್ಲವಾ? ಎಂದು ಅವನನ್ನು ಕೇಳಿದೆ. ಅದಕ್ಕವನು ನೀವು ಯಾವ ಭಾಷೆಯಲ್ಲಿ ಸಿನಿಮಾ ಮಾಡುತ್ತೀರಿ? ಎಂದ. ಎರಡನೇ ಯೋಚನೆಯಲ್ಲದೆ ನಾನು ಅಫ್ ಕೋಸರ್್, ಕನ್ನಡದಲ್ಲಿ ಅಂದೆ. ಅದಕ್ಕವನು ಹಾಗಾದರೆ ಆ ರೀತಿಯಲ್ಲಿ ನಿಮ್ಮ ಸಿನಿಮಾ ನೋಡೋದಿಲ್ಲ ಬಿಡಿ ಅಂದ. ತೆಲುಗು ಸೀಮೆಯಿಂದ ಎದ್ದುಬಂದವನೊಬ್ಬ ಹಾಗೆ ಹೇಳುವುದು ಸಹಜವೇ ಎಂದು ತಿಳಿದಿದ್ದ ನಾನು ಆಶ್ಚರ್ಯಚಕಿತನಾಗಲಿಲ್ಲ. ಅವನ ಜೊತೆ ಮಾತು ಮುಂದುವರಿಸಿದೆ. ಅವನು ಕನ್ನಡ ಸಿನಿಮಾಗಳ ಬಗ್ಗೆ ತನಗನಿಸಿದ್ದೆಲ್ಲವನ್ನೂ ಒದರುತ್ತಾ ಹೋದ.
ನೋಡಿ ಸರ್. ನನಗೆ ಕನ್ನಡ ಇಂಡಸ್ಟ್ರಿ ಇದೆ ಅನ್ನೊದೇ ಡೌಟು. ಯಾಕೆಂದ್ರೆ ಒಂದು ಸಿನಿಮಾವೂ ಹೊಸತನದಿಂದ ಕೂಡಿಲ್ಲ. ಯಾವ ನಿದರ್ೇಶಕ, ಸ್ಟಾರನ್ನು ನಂಬಿಯೂ ನಾವು ಸಿನಿಮಾ ನೋಡೋಕೆ ಹೋಗೋಕೆ ಸಾಧ್ಯ ಆಗ್ತಾ ಇಲ್ಲ. ಯೋಗರಾಜ್ ಭಟ್ಟರು ಮುಂಗಾರು ಮಳೆ ಮಾಡಿದಾಗ ಕನ್ನಡಕ್ಕೆ ಹೊಸತನ ಬಂತು ಅಂತ ಅಂದುಕೊಂಡೆವು. ಆದರೆ ಇವಾಗ ಭಟ್ರ ಯಾವ ಸಿನಿಮಾ ನೋಡಿದ್ರೂ ಮುಂಗಾರು ಮಳೆಯ ಇನ್ನೊಂದು ಭಾಗ ಅನಿಸೋಕೆ ಶುರುವಾಗಿದೆ. ಫ್ರೆಷ್ನೆಸ್ ಇಲ್ಲ. ಇನ್ನು ನಮ್ಮ ಭಾಗದಲ್ಲಿ ತೆಲುಗು ಸಿನಿಮಾಗಳ ಹವಾ ಹೆಚ್ಚು. ಹೊಸಪೇಟೆ, ಬಳ್ಳಾರಿ ಇಂತ ಇನ್ನೂ ಹಲವು ಸ್ಥಳಗಳಲ್ಲಿ ತೆಲುಗು ಮಾರುಕಟ್ಟೆ ಇದೆ. ಅಲ್ಲೆಲ್ಲಾ ಒಂದು ಒಳ್ಳೆಯ ತೆಲಗು ಸಿನಿಮಾ ಬಂದರೆ, ರಂಜನೀಯ ಕಥೆ ಹೊಂದಿರುವ ಸಿನಿಮಾ ಬಂದರೆ ಅದನ್ನು ಹತ್ತಾರು ಸಲ ನೋಡುತ್ತಾರೆ, ಕನ್ನಡದ ದುರಾದೃಷ್ಟ ಅಂದರೆ ಹತ್ತಿಪ್ಪತ್ತು ವರುಷಗಳ ಹಿಂದೆ ಬಂದ ಯಾವುದೋ ತೆಲುಗಿನ ಸಿನಿಮಾಗಳನ್ನು ರಿಮೇಕ್ ಮಾಡ್ತಾರೆ. ಅದಾಗಲೇ ತೆಲುಗು ಭಾಷೆಯಲ್ಲಿ ಆ ಸಿನಿಮಾ ನೋಡಿರುವ ಜನರು ಯಾಕೆ ಹೊಸ ಸಿನಿಮಾವನ್ನು ನೋಡಬೇಕು? ಹೇಳಿ.
ಮತ್ತೆ ಕನರ್ಾಟಕದ ಹಲವು ಭಾಗಗಳಲ್ಲಿ ತಮಿಳು ಪ್ರಭಾವ ಇದೆ. ಆ ಭಾಗಗಳಲ್ಲಿ ತಮಿಳು ಸಿನಿಮಾಗಳನ್ನು ನೋಡಿರುತ್ತಾರೆ, ಕನ್ನಡದಲ್ಲಿ ಅದೇ ಸಿನಿಮಾವನ್ನು ಮಾಡಿದರೆ ಅವರ್ಯಾರೂ ನೋಡುವುದಿಲ್ಲ. ಇನ್ನು ನಾವು ಹಿಂದಿ ಸಿನಿಮಾಗಳನ್ನು ತೆಗೆದುಕೊಂಡು ಬರುತ್ತೇವೆ. ಹಿಂದಿ ಚಿತ್ರಗಳು ರಾಷ್ಟ್ರದೆಲ್ಲೆಡೆ ಬಿಡುಗಡೆಯಾಗುತ್ತವೆ. ನಮ್ಮ ರಾಜ್ಯದ ಬಹುತೇಕ ವಿದ್ಯಾವಂತರು ಅವುಗಳನ್ನು ನೋಡುತ್ತಾರೆ. ಕರಾವಳಿ ಭಾಗದ ಜನರು ಅವುಗಳನ್ನು ಇಷ್ಟಪಡುತ್ತಾರೆ. ಕನ್ನಡದಲ್ಲಿ ಅವುಗಳನ್ನು ತಂದರೆ ಯಾರೂ ನೋಡುವುದಿಲ್ಲ. ಇಷ್ಟಕ್ಕೂ ಇಂತಹ ಚಿತ್ರಗಳನ್ನು ಜನ ಸ್ವೀಕರಿಸುವುದಿಲ್ಲ ಸರ್ . ಇವುಗಳನ್ನು ನೋಡಿ ನಗ್ತಾರೆ ಅಷ್ಟೆ. ಯಾಕೆಂದ್ರೆ ನಮ್ಮ ಸಂಸ್ಕೃತಿಗೆ ಅವ್ಯಾವೂ ಒಗ್ಗುವುದಿಲ್ಲ. ತೆಲುಗಿನ ಸಿನಿಮಾಗಳು ರೌದ್ರತೆಯನ್ನು ಹೊಂದಿರುತ್ತವೆ. ತಮಿಳು ಸಿನಿಮಾಗಳು ವಾಸ್ತವಕ್ಕೆ ತೀರಾ ಹತ್ತಿರಾದಂತೆ ಇರುತ್ತವೆ. ಹಿಂದಿಯಲ್ಲಿ ಗ್ಲಾಮರ್ ಹೆಚ್ಚಿದೆ. ಇವೆಲ್ಲವನ್ನೂ ದಾಟಿ ಅವುಗಳನ್ನಿಟ್ಟುಕೊಂಡು ನಾವು ನಮ್ಮದೇ ಸಿನಿಮಾಗಳನ್ನು ಮಾಡಬೇಕುಎಂದು ನನ್ನ ಕಡೆ ನೋಡಿದ. ನಾನು ಕೈಯಲ್ಲಿ ಲೆಮನ್ ಟೀ ಹಿಡಕೊಂಡು ಏನೂ ಮಾತಾಡದೇ ಹಾಗೇ ಕೂತಿದ್ದೆ. ಲೈಟಾಗಿ ಎಣ್ಣೆ ಹಾಕಿದ್ದ. ಅವನು ನಿಜ ಹೇಳುತ್ತಿದ್ದ. ಯಾಕೆಂದರೆ ಕುಡುಕರು ನಿಜ ಹೇಳ್ತಾರೆ ಅಂತಾರಲ್ಲ ! ನಾನು ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿರುವುದು ಅವನಿಗೆ ಗೊತ್ತಾಯಿತು. ಆತ ಮಾತು ಮುಂದುವರೆಸಿದ.
ಸಾಮಾನ್ಯವಾಗಿ ಈಗಿನ ನಿದರ್ೇಶಕರು ಬೇಗ ಹಣಗಳಿಸುವ ಸಲುವಾಗಿ ಮಂಡ್ಯ-ಮೈಸೂರು ಭಾಗದ ಜನರನ್ನು ಗುರಿಯಲ್ಲಿರಿಸಿಕೊಂಡೇ ಚಿತ್ರ ತಯಾರಿಸುತ್ತಾರೆ. ನೀವು ಹಾಗೆ ಸಿನಿಮಾ ಮಾಡಬೇಡಿ ಸರ್. ಒಂದು ಸಿನಿಮಾ ತಯಾರು ಮಾಡಿದರೆ ಅದು ಜಗತ್ತಿನ ಕಟ್ಟಕಡೆಯ ಕನ್ನಡಿಗನಿಗೂ ಮುಟ್ಟಬೇಕು. ಮುಂಗಾರು ಮಳೆ ಸಿನಿಮಾ ನೋಡಿ. ಕನ್ನಡ ಬರುವ ಬಹುತ್ತೇಕ ಎಲ್ಲರೂ ಆ ಸಿನಿಮಾ ನೋಡಿದ್ದಾರೆ. ಗಡಿಯಾಚೆಗಿನ ಕನ್ನಡಿಗರಿಗೂ ಆ ಚಿತ್ರ ಫೇವರೇಟ್. ಪ್ರೇಮಲೋಕವನ್ನು ಇವತ್ತು ಟಿ.ವಿ.ಯಲ್ಲಿ ಹಾಕಿದರೂ ಏನಿಲ್ಲವೆಂದರೂ ಎರಡು ಲಕ್ಷ ಜನ ನೋಡುತ್ತಾರೆ. ವಾರಾಂತ್ಯದಲ್ಲಿಯಾದರೆ ಕನಿಷ್ಟ ಐದುಲಕ್ಷ ಜನರಾದರೂ ನೋಡುತ್ತಾರೆ. ಅಂತಹವುಗಳನ್ನು ತಯಾರು ಮಾಡಿ. ಪ್ಲೀಸ್ ಅಂದ. ನನಗೆ ಹೌದು ಎಂದು ಹೇಳಬೇಕೆನಿಸಿತು ಹೇಳಲಿಲ್ಲ. ಕೇಳುವ ವ್ಯವಧಾನ ಅವನಿಗೂ ಇರಲಿಲ್ಲ.
ವಿನಯ್ ಕುಮಾರ್ ಕಾಲಂ: ಸಾಮಾನ್ಯನೊಬ್ಬನ ಇಂಟರ್ ವ್ಯೂ
ನಿಮಗೆ ಇವೂ ಇಷ್ಟವಾಗಬಹುದು…




0 Comments