ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಧಾನ ಸೌಧ ಕಟ್ಟಿಸಿದ್ದು ಯಾರು?!

ಕಾಶಸ್ ಮೈಂಡ್

ಸುಘೋಷ್ ನಿಗಳೆ

ಕೆಲ ದಿನಗಳ ಹಿಂದೆ ಪ್ರತಿಷ್ಠಿತ ಮಾಧ್ಯಮ ಕಾಲೇಜೊಂದರಲ್ಲಿ ಪಾಠ ಮಾಡಲು ಹೋಗಿದ್ದೆ. ಸಾಕಷ್ಟು ಹೆಸರು ಮಾಡಿರುವ ಮಾಧ್ಯಮ ಕಾಲೇಜು ಅದು. ಪಾಠಕ್ಕಿಂತ ಮೊದಲು ವಿದ್ಯಾರ್ಥಿಗಳಿಗೆ ಕೆಲ ಪ್ರಶ್ನೆಗಳನ್ನು ಕೇಳಿದೆ. ಆಗ ನಡೆದ ಘಟನೆ ಇದು. ನಾನು – “ಇವತ್ತಿನ ನ್ಯೂಸ್ ಪೇಪರ್ ಹೆಡ್ ಲೈನ್ಸ್ ಏನೇನಿದೆ?” “…………………….(ಯಾರಿಗೂ ಗೊತ್ತಿಲ್ಲ)” “ಇವತ್ತಿನ ನ್ಯೂಸ್ ಪೇಪರ್ ಓದೀದ್ದೀರಾ?” “…………………….(ಯಾರಿಗೂ ಗೊತ್ತಿಲ್ಲ)” “ಸರಿ, ನೀವು ಕೊನೆಯ ಬಾರಿ ನ್ಯೂಸ್ ಪೇಪರ್ ಓದಿ ಎಷ್ಟು ದಿನವಾಗಿದೆ?” ಈ ಪ್ರಶ್ನೆಗೆ ಅಂತೂ ಇಂತೂ ಮೂರು ದಿನಗಳ ಹಿಂದಿನ ಹೆಡ್ ಲೈನ್ ಅನ್ನು ಹೇಳಿದರು. “ಆಸ್ಸಾಂ ನಲ್ಲಿ ಯಾಕೆ ಗಲಾಟೆ ನಡೆಯುತ್ತಿದೆ?” “…………………….(ಯಾರಿಗೂ ಗೊತ್ತಿಲ್ಲ)” “ಬೆಂಗಳೂರಿನಲ್ಲಿ ನಿನ್ನೆಯಷ್ಟೇ ಭಯೋತ್ಪಾದನೆಗೆ ಸಂಬಂಧಿಸಿದ ಬೆಳವಣಿಗೆ ನಡೆದಿದೆ. ಏನದು?” “…………………….(ಯಾರಿಗೂ ಗೊತ್ತಿಲ್ಲ)” “ವಿಧಾನ ಸೌಧದ ಕೋಣೆಯೊಂದರಲ್ಲಿ ನಡೆದ ಕಾಮಗಾರಿ ವಿವಾದಕ್ಕೆ ಕಾರಣವಾಗಿದೆ. ಯಾವ ಕಾಮಗಾರಿ?” “…………………….(ಯಾರಿಗೂ ಗೊತ್ತಿಲ್ಲ)” “ಆಸ್ಕರ್ ಪಿಸ್ಟೋರಿಯಸ್ ಯಾರು?” “…………………….(ಯಾರಿಗೂ ಗೊತ್ತಿಲ್ಲ)” “ಸರಿ ಹೋಗ್ಲಿ, ಬಿಡಿ, ವಿಧಾನ ಸೌಧ ಕಟ್ಟಿಸಿದ್ದು ಯಾರು ಅಂತ ಗೊತ್ತಾ?” ಈ ಪ್ರಶ್ನೆಗೆ ಅಂತೂ ಇಂತೂ ವಿದ್ಯಾರ್ಥಿನಿಯೊಬ್ಬಳು ಕೈ ಎತ್ತಿದಳು. ಇಷ್ಟಾದರೂ ಗೊತ್ತಲ್ಲ ಎಂದು ನನಗೆ ಖುಷಿಯಾಯಿತು. ಹೇಳಮ್ಮ ಅಂದೆ. “ಆಸ್ಕರ್ ಪಿಸ್ಟೋರಿಯಸ್” ನಾನು ಮೂರ್ಛೆ ತಪ್ಪಲಿಲ್ಲ. ಯಾಕೆಂದರೆ, ಇದಕ್ಕಿಂತ ಹೆಚ್ಚು ಪ್ರತಿಭಾನ್ವಿತವರು ಫೀಲ್ಡ್ ನಲ್ಲೇ ಇದ್ದಾರೆ.  ]]>

‍ಲೇಖಕರು G

21 September, 2012

5 Comments

  1. Hari

    ಶಂಭೋ ಶಿವ ಶಿವ ಶಂಭೋ!!!!!
    ಈ ಪುಣ್ಯಾತ್ಮ ಭಾ(ಬಾ)ವಿ ಪತ್ರಕರ್ತರೆಲ್ಲರೂ ಕನ್ನಡ ಪತ್ರಿಕೋದ್ಯಮಿಗಳಾಗಿರದಿದ್ದರೆ ಅಷ್ಟೆ ಸಾಕು.

  2. D.RAVI VARMA

    this is the tragedy of our present education system….. aa devare namma makkalannu kaapadabeku…..

  3. shobhavenkatesh

    madhyama collegenalli students helida uttara keli aschryavaguthide

  4. ಮಾಲಾ ಮಂಜುನಾಥ್

    ಮುಂದೊಂದು ದಿನ ಇಂತಹವರೇ ಎಲೆಕ್ಟಾನಿಕ್ ಮೀಡಿಯಾದಲ್ಲಿ ಕುಳಿತು ತರಲೆ ಪ್ರಶ್ನೆ ಕೇಳುವವರು:( ನಮ್ಮ ಕರ್ಮ ಇವರನ್ನೆಲ್ಲಾ ಸಹಿಸಿಕೊಳ್ಳಬೇಕು.
    Reply

  5. Shama Nandibetta

    “ಇದಕ್ಕಿಂತ ಹೆಚ್ಚು ಪ್ರತಿಭಾನ್ವಿತವರು ಫೀಲ್ಡ್ ನಲ್ಲೇ ಇದ್ದಾರೆ.” ಎಂಥ ಮಾತು ಸುಘೋಷ್.
    ಇವತ್ತಿನ ಮಾಧ್ಯಮ ಕಾಲೇಜುಗಳು ಯಾರನ್ನು ತಯಾರು ಮಾಡುತ್ತಿವೆ ? ಏನನ್ನು ತಯಾರು ಮಾಡುತ್ತಿವೆ ಎಂಬುದು ಚಿಂತನಾರ್ಹವೇ.
    ದಿನಾ ಬೆಳಗ್ಗೆ ಒಂದು ಪೇಪರಾದರೂ ಓದದೆ ಕ್ಲಾಸಿಗೆ ಕಾಲಿಡಲು ಭಯವಾಗುತ್ತಿತ್ತು ನಮಗೆ. ಪ್ರಶ್ನೆಗಳಿಗೆ ಉತ್ತರ ಗೊತ್ತಿಲ್ಲದೆ ಆಗುವ ಅವಮಾನದ ಆತಂಕ.
    ಪಠ್ಯ ಓದದೇ ಇದ್ರೂ ಪತ್ರಿಕೆ ಓದು ತಪ್ಪಿಸುತ್ತಿರಲಿಲ್ಲ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading