ವಿದ್ಯಾ ಅನುವಾದಿಸಿದ ಕೈಫಿ ಆಜ್ಮಿ ಕವಿತೆ

ಕಟ್ಟಿಹಾಕಿದ ಮುದುಕನ ಕಾಲು..

ವಿದ್ಯಾ

ನನ್ನ ಹೆಗಲ ಮೇಲೆ
ಯಾರೋ ಕೂತು
ಓದುತ್ತಲೇ ಇದ್ದಾನೆ ಬೈಬಲ್-ಕುರಾನ್-ವೇದಗಳನ್ನು
ಕಿವಿಯಲ್ಲಿ ನೊಣಗಳು ಗುಂಯ್ಗುಡುತ್ತವೆ
ಗಾಯಗೊಂಡಿವೆ ಕಿವಿಗಳು
ನನ್ನ ಧ್ವನಿ ಹೇಗೆ ಕೇಳಲಿ?

ಹಿಂದೂ ಆಗಿದ್ದ ರಾಣಾ,
ಅಕಬರ್ ಮುಸಲ್ಮಾನ,
ಸಂಜಯ ಕ್ರಿಸ್ತಪೂರ್ವದಲ್ಲೇ
ಟೆಲಿವಿಷನ್ ಮಾಡಿ, ಮನೆಯಲ್ಲಿ ಕೂತ
ಕುರುಡ ರಾಜನಿಗೆ ಯುದ್ಧದ ತಮಾಷೆ ತೋರಿಸಿದ..
 
ಮನುಷ್ಯ ಚಂದ್ರನ ಮೇಲೇನೋ ಇಳಿದ ಇಂದು
ಪ್ರಗತಿಯಲ್ಲ ಇದು..
 
ಹಿಂದೆ, ಬಹಳ ಹಿಂದೆ
ಅಣು ಇನ್ನೂ ಸ್ಫೋಟಗೊಂಡಿರಲಿಲ್ಲ
ಶಕ್ತಿಯ ಕನ್ನಡಕ ಒಡೆದಿರಲಿಲ್ಲ
ಭೂಮಿಯಿಂದ ಆಕಾಶದವರೆಗೆ
ಸಾಗಿ ಬಿಟ್ಟಿದ್ದಾರೆ ಯಾರೋ..
ಇತ್ಯಾದಿ ಅಜ್ಞಾನದ ಮಾತುಗಳಾಗುತ್ತವೆ
ನನ್ನ ಹೆಗಲ ಮೇಲೆ..
 
ಭುಜಗಳು ಬಾಗುತ್ತಿವೆ
ಹಗಲೂ ರಾತ್ರಿ ನನ್ನ ಆಕೃತಿ ಚಿಕ್ಕದಾಗುತ್ತಿದೆ
ತಲೆ ಕಾಲುಗಳಲ್ಲಿ ಸೇರಿ ಹೋಗುತ್ತೇನೋ..ಭಯ..
ಮೂಲ-ಕೈಫಿ ಆಜ್ಮಿ
ಅನುವಾದ-ವಿದ್ಯಾ
 

‍ಲೇಖಕರು G

May 4, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. bidaloti Ranganath

    ಧರ್ಮಗಳ ಕಲಹಗಳ ನಡುವೆ ಮನುಷ್ಯ ಧರ್ಮವು ಮರೆಯಾಗುತಿರುವ ಸಂದರ್ಭದಲ್ಲಿ
    ಉತ್ತಮ ಕವಿತೆ ಅನುವಾದಗೊಂಡಿದೆ

    ಪ್ರತಿಕ್ರಿಯೆ
  2. Vinod Kumar VK

    ಸೂಪರ್ ಮೇಡಂ.. ನಿಜಕ್ಕೂ ಪ್ರಸ್ತುತ ವಾಗಿದೆ..
    ತಲೆ ಕಾಲುಗಳಲ್ಲಿ ಸೇರಿ ಹೋಗುತ್ತೇನೋ..ಭಯ…. ಈ ಸಾಲು ಅತ್ಯಂತ ಮಾರ್ಮಿಕವಾಗಿ ಗೋಚರಿಸಿತು ನನಗೆ.. ಧನ್ಯವಾದ ಮೇಡಂ.. ಚೆಂದದ ಅನುವಾದ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: