ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಜಯಲಕ್ಷ್ಮಿ ಸತ್ಯಮೂರ್ತಿ ಕಾದಂಬರಿ ʼವ್ಯೂಹʼದ ಸುತ್ತ…

ವಿಜಯಲಕ್ಷ್ಮಿ ಸತ್ಯಮೂರ್ತಿ ಅವರ ಕಾದಂಬರಿ ‘ವ್ಯೂಹʼ ಈ ವಾರ ಬಿಡುಗಡೆಯಾಗುತ್ತಿದೆ.

ಕೊರೋನಾ ಕಾಲದ ತಲ್ಲಣಗಳ ಮಧ್ಯೆ ಉಸಿರುಗಟ್ಟಿದಂತಾದ ಸ್ಥಿತಿಯಲ್ಲಿ ಬರೆದ ಕೃತಿ ಇದು.

ಈ ಕೃತಿಗೆ ಲೇಖಕಿ ಬರೆದ ಮಾತುಗಳು ಇಲ್ಲಿವೆ-

ವಿಜಯಲಕ್ಷ್ಮಿ ಸತ್ಯಮೂರ್ತಿ

ಅದು 2020ರ ಆಗಸ್ಟ್ ತಿಂಗಳು ಅದೇಕೋ ಇದ್ದಕ್ಕಿದ್ದಂತೆ ಅನಾರೋಗ್ಯ ಕಾಡಿತ್ತು ವಿಪರೀತವಾಗಿ 20 ದಿನಗಳು ಹೆಚ್ಚುಕಡಿಮೆ ಏನಾಗಿದೆ ಅನ್ನುವುದೇ ತಿಳಿಯಲಿಲ್ಲ ಮಲಗೋದು ಅಷ್ಟೇ ಆಗಿಹೋಯಿತು. ಏನೋ ಬರೆಯುವ ಹಂಬಲ ಆದರೆ ಆಗಲಿಲ್ಲ ಸಾಮಾನ್ಯವಾಗಿ ಬರಹಗಾರರಿಗೆ ಏನಾದರೊಂದು ವಿಷಯ ತಲೆಗೆ ಹೊಕ್ಕರೆ ಮುಗಿಯಿತು ಅದನ್ನು ಅಕ್ಷರ ರೂಪಕ್ಕಿಳಿಸುವ ತನಕ ಸಮಾಧಾನ ಇರುವುದಿಲ್ಲ

ಭಯಂಕರ ಮೈಕೈ ನೋವು ಸುಸ್ತು ಇದ್ದರೂ ಪೆನ್ನು ಪೇಪರ್ ಹಿಡಿದೆ ಉಹು ಆಗಲಿಲ್ಲ. ಭಯ ಕಾಡಿತು ಯಾಕೆ ಹೀಗೆಲ್ಲಾ ಆಗ್ತಿದೆ ಅಂತ. ಬರೆಯುವ ಯೋಚನೆ ಬಿಟ್ಟು ಡಾಕ್ಟರಿಗೆ ಫೋನ್ ಮಾಡಿದೆ ಕರೋನಾ ಹಾವಳಿ ಹೆಚ್ಚಾಗಿ ಇದ್ದಿದ್ದರಿಂದ ಸೀದಾ ಹೇಳದೆ ಕೇಳದೆ ಹೋದರೆ ನೋಡ್ತಾರೋ ಇಲ್ಲವೋ ಅನ್ನುವ ಅನುಮಾನದಿಂದ.

ಆದರೆ ಆ ಡಾಕ್ಟರ್ ನೀವು ಬರೋದು ಬೇಡ ಮಾತ್ರೆ ತೆಗೆದುಕೊಳ್ಳಿ ಸಾಕು ಅಂದು ಬಿಡುವುದೇ? ಯಾವ ನೋವು ನಿವಾರಕ ಮಾತ್ರೆಗೂ ಜಗ್ಗದ ನೋವುಗಳು ನನ್ನನ್ನು ಮಾನಸಿಕವಾಗಿ ಕುಗ್ಗಿಸಿದ್ದು ನಿಜ.

ಒಮ್ಮೆ ಫೇಸ್‌ಬುಕ್‌ ನಲ್ಲಿ ಪರಿಚಯವಾದ ಒಬ್ಬರು ಡಾಕ್ಟರ್ ಅಚಾನಕ್ಕಾಗಿ ಹೇಗಿದ್ದೀರಿ ಮೇಡಂ ಎಂದು ಮೆಸೇಜ್ ಮಾಡಿದರು. ಬಹುಶಃ ದೇವರು ಡಾಕ್ಟರ್ ರೂಪದಲ್ಲಿ ಬಂದಿರಬಹುದೇನೋ ಅಂದು ನನ್ನ ಪಾಲಿಗೆ. ತೊಂದರೆಗಳನ್ನು ಹೇಳಿಕೊಂಡೆ ಅವರಲ್ಲಿ ಒಂದಷ್ಟು ಮಾತ್ರೆಗಳನ್ನು ಮೆಸೇಜ್ ನಲ್ಲಿ ಮೆಸೇಜಿನಲ್ಲಿ ತಿಳಿಸಿ ತಪ್ಪದೇ ತೆಗೆದುಕೊಳ್ಳಿ ಏನು ಆಗಲ್ಲ ಚಿಂತೆ ಬೇಡ ಎಂದು ಧೈರ್ಯ ತುಂಬಿದರು.

ಮೆಡಿಸನ್ ತೆಗೆದುಕೊಂಡ ನಂತರ ಎರಡು ದಿನಗಳಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಿತ್ತು ಮತ್ತೆ ಬರೆಯಲು ನನ್ನಲ್ಲಿ ನಲ್ಲಿ ಆತ್ಮವಿಶ್ವಾಸವನ್ನು ತುಂಬಿದ ಆ ಹೃದಯವಂತ ಡಾಕ್ಟರ್ ಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿದೆ.

ಬರೆಯಲಾಗಲಿಲ್ಲವಲ್ಲ ಅನ್ನುವ ಕೊರಗಿನಿಂದ ಹೊರಬಂದು ಈ ಅನುಭವವನ್ನು ಯಾಕೆ ಕಥೆಯನ್ನಾಗಿ ಬರೆಯಬಾರದು ಅನಿಸಿ ಬರೆಯಲು ಶುರುಮಾಡಿದ್ದೆ. ಮನದ ತಲ್ಲಣಗಳನ್ನು ಓದುಗರ ಕೈಗೆ ಇಡುವ ಪ್ರಯತ್ನಕ್ಕೆ ಮುಂದಾದೆ. ಇದೇ ಸಮಯದಲ್ಲಿ ಆತ್ಮೀಯರು ಉತ್ಸಾಹಿ ಯುವಕರು ಜೊತೆಗೆ ಫಿಲ್ಮಹಾಲಿಕ್ ಫೌಂಡೇಶನ್ ಸಂಸ್ಥಾಪಕರಾದ ಶ್ರೀ ಆದಿತ್ಯ ಅವರು ನನ್ನ ಆರೋಗ್ಯ ವಿಚಾರಿಸುವ ಸಲುವಾಗಿ ಮನೆಗೆ ಬಂದಿದ್ದರು. ಅವರು ಸಹ ನನ್ನ ಅಭಿಮಾನಿ ಬಳಗದಲ್ಲಿ ಒಬ್ಬರು ಎಂದು ಬೇರೆ ಹೇಳಬೇಕಾಗಿಲ್ಲ.

ನನ್ನ ಬರವಣಿಗೆಯ ಬಗ್ಗೆ ಮಾತು ಬಂದಾಗ ಕರೋನಾ ಕಥೆಯನ್ನು ಬರೆಯಬೇಕು ಎಂದಿರುವೆ ಎಂದು ನಕ್ಕೆ. ನಿಜ ಮೇಡಂ ಖಂಡಿತ ಬರೆಯಿರಿ ಬರಹಗಾರರ ಮನದ ತಲ್ಲಣಗಳನ್ನು ಬಿಚ್ಚಿಡುವ ಯತ್ನ ಮಾಡುತ್ತಿದ್ದೀರಿ ತುಂಬಾ ಸಂತೋಷ. ಬರೆಯಿರಿ ನಿಮಗೆ ಒಳ್ಳೆಯದಾಗಲಿ ಎಂದು ಮತ್ತಷ್ಟು ವಿಷಯಗಳನ್ನು ಪ್ರಸ್ತಾಪಿಸಿ ನನ್ನ ಕಥಾವಸ್ತುವಿಗೆ ಪೂರಕವಾದ ಒಂದೆರಡು ಅಂಶಗಳನ್ನು ಹೇಳಿ.. ನೋಡಿ ಮೇಡಂ ಸಾಧ್ಯವಾದರೆ ಇದನ್ನೂ ಸೇರಿಸಿ ಬರೆಯಿರಿ ಒಂದೊಳ್ಳೆಯ ಕಾದಂಬರಿ ಆಗಬಹುದೇನೋ ಎಂದು ಹಾರೈಸಿ ಬೀಳ್ಕೊಂಡರು.

ಅನೇಕ ಹಾದಿಗಳನ್ನು ಸಾಗಿಬಂದ ಕಥೆಯೇ ವ್ಯೂಹದ ಹುಟ್ಟನ್ನು ಪಡೆದುಕೊಂಡಿತು.

ಹುಟ್ಟಿಗೆ ಕಾರಣಕರ್ತರಾದ ಶ್ರೀ ಆದಿತ್ಯ ಅವರಿಗೆ ನನ್ನ ಮನದಾಳದ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ ಇದರೊಂದಿಗೆ ವ್ಯೂಹ ಕಾದಂಬರಿಯು ಫಿಲ್ಮಹಾಲಿಕ್ ಫೌಂಡೇಶನ್ ಸಂಸ್ಥೆಯಿಂದ ಪ್ರಕಟಗೊಂಡು ಕಾದಂಬರಿಯಾಧಾರಿತ ಸಿನಿಮಾ ಆಗುತ್ತಿರುವುದು ಅಚ್ಚರಿ ಹಾಗೂ ಸಂತೋಷದ ಸಂಗತಿ.

ಈ ಕೃತಿಗೆ ತಮ್ಮ ಅಭಿಮಾನದ ನುಡಿಗಳನ್ನು ಮುನ್ನುಡಿ ರೂಪದಲ್ಲಿ ಬರೆದುಕೊಟ್ಟ ಸಾಹಿತಿ ಹಾಗೂ ಪತ್ರಕರ್ತ ಮಿತ್ರರಾದ ಡಾ.ಬೆಮೆಲ್ ಸೆಲ್ವಕುಮಾರ್ ಅವರಿಗೆ ನನ್ನ ಗೌರವಪೂರ್ವಕ ಧನ್ಯವಾದಗಳು. ಸುಂದರವಾಗಿ ಹಾಗೂ ಅಚ್ಚುಕಟ್ಟಾಗಿ ಅಕ್ಷರಗಳನ್ನು ಜೋಡಿಸಿ ಮುಖಪುಟದ ಆಕರ್ಷಣೆಯನ್ನು ಹೆಚ್ಚಿಸಿದ ಶ್ರೀಮತಿ ರಶ್ಮಿ ಪ್ರಶಾಂತ್ ಅವರಿಗೆ ಪ್ರೀತಿ ಪೂರ್ವಕ ಧನ್ಯವಾದಗಳು.

ನನ್ನ ಸಾಹಿತ್ಯ ಕೃಷಿಯನ್ನು ಮೆಚ್ಚಿಕೊಂಡು ಸದಾ ಹಾರೈಕೆಗಳ ಮಳೆಯನ್ನೇ ಸುರಿಸುತ್ತಿರುವ, ನನ್ನ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರುವ ಪ್ರೀತಿಯ ಮನಸುಗಳಿಗೆ ಅಭಿಮಾನ ಪೂರ್ವಕ ಧನ್ಯವಾದಗಳು.ನನ್ನ ಅಭಿಮಾನಿ ಬಳಗಕ್ಕೂ ವಿಶೇಷವಾದ ಧನ್ಯವಾದಗಳು.

ನನ್ನ ಬರವಣಿಗೆಗೆ ಪ್ರೋತ್ಸಾಹ ನೀಡುತ್ತಿರುವ ಪ್ರೀತಿಯ ಪತಿ ಶ್ರೀ ಸತ್ಯಮೂರ್ತಿ ಅವರಿಗೂ ನನ್ನ ಕುಟುಂಬಕ್ಕೂ ನನ್ನ ಅಕ್ಕರೆಯ ಧನ್ಯವಾದಗಳು. ಎಂದಿನಂತೆ ಓದುಗರ ಹಾರೈಕೆಯೇ ನನಗೆ ಧೈರ್ಯ ನಂಬಿಕೆ ಎಲ್ಲಾ. ಹೀಗೇ ಹರಸಿ ಹಾರೈಸುತ್ತಿರಿ ಎಂಬುದೇ ಈ ಜೀವದ ಪ್ರೀತಿಯ ಕೋರಿಕೆ.

‍ಲೇಖಕರು Admin

20 December, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading