ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಾಸುದೇವನ್ ನಾಯರ್ ಬಗ್ಗೆ ನಾ ದಾ

ಎಂ.ಟಿ ವಾಸುದೇವನ್ ನಾಯರ್ ಅವರ ‘ಮಲಯಾಳಂ ಕತೆಗಳು’

ನಾ.ದಾಮೋದರ ಶೆಟ್ಟಿ

ಬೆಂಗಳೂರಿನ ಹೆಸರಾಂತ ಅಂಕಿತ ಪ್ರಕಾಶನವು ಇತ್ತೀಚೆಗೆ ಕೆ.ಕೆ. ಗಂಗಾಧರನ್ ಅನುವಾದಿಸಿದ ಎಂ.ಟಿ. ವಾಸುದೇವನ್ ನಾಯರ್  ಎಂಟು ಕತೆಗಳನ್ನು ‘ಮಲಯಾಳಂ ಕತೆಗಳು’ ಎಂಬ ಹೆಸರಿನಲ್ಲಿ ಪ್ರಕಟಿಸಿತು.
ಆರು ದಶಕಗಳ ಸುದೀರ್ಘ ಹಾಗೂ ಅಜೇಯ ಸಾಹಿತ್ಯ ಕೈಂಕರ್ಯದಲ್ಲಿ ಕಾದಂಬರಿ ಹಾಗೂ ಸಣ್ಣ ಕಥೆಗಳ ವತರ್ುಲವನ್ನು ಅಗಾಧಗೊಳಿಸಿ, ಮಲಯಾಳ ಸಾಹಿತ್ಯಕ್ಕೆ ಅಪರಿಮಿತ ಪ್ರಸಿದ್ಧಿಯನ್ನು ತಂದುಕೊಟ್ಟವರು ಪದ್ಮಭೂಷಣ ಎಂ.ಟಿ.ವಾಸುದೇವನ್ ನಾಯರ್. ಮನೆಯ ಮಂಡಲದಿಂದ ಹಿಡಿದು ಭೂಮಂಡಲವನ್ನು ವ್ಯಾಪಿಸುವ ವಸ್ತುವಿಸ್ತಾರವನ್ನು ಅವರ ಕಥೆ-ಕಾದಂಬರಿಗಳು ಒಳಗೊಂಡಿವೆ. ಆಧುನಿಕ ಮಲಯಾಳ ಸಾಹಿತ್ಯದ ಸಣ್ಣಕತೆ, ನೀಳ್ಗತೆ ಹಾಗೂ ಕಾದಂಬರಿ ಪ್ರಕಾರಗಳಿಗೆ ರಾಷ್ಟ್ರಮಟ್ಟದಲ್ಲಿ ಗೌರವ ಸಲ್ಲುತ್ತಿದೆ. ಅಂಥ ಮಟ್ಟಕ್ಕೆ ಏರುವುದು ಸಾಧ್ಯವಾದುದು ಬಹುಮುಖ್ಯವಾಗಿ ಎಂ.ಟಿ.ಯವರ ಕಥನ ಕೌಶಲ್ಯದಿಂದಲೆ.

ಒಂದು ಕಾಲವಿತ್ತು; ಪ್ರವರ್ಧಮಾನಕ್ಕೆ ಬರುತ್ತಿದ್ದ ಸಾಹಿತಿಗಳಾದ ಒ.ಎನ್. ವಿ. ಕುರುಪ್ ಹಾಗೂ ಎಂ.ಟಿ.ವಾಸುದೇವನ್ ನಾಯರ್ ಮಲಯಾಳ ಚಲನಚಿತ್ರ ರಂಗದ ರೂಪವನ್ನೇ ಬದಲಾಯಿಸಿದ ಕಾಲವದು. ಎಂ.ಟಿ.ವಿ., ಕಥೆ, ಚಿತ್ರಕಥೆ, ಸಂಭಾಷಣೆಗಳ ಮೂಲಕ ಹಾಗೂ ಒ.ಎನ್.ವಿ., ಸಾಹಿತ್ಯಾತ್ಮಕ ಗೀತೆಗಳ ಮೂಲಕ. ಇಂದಿಗೂ ಮಲಯಾಳ ಚಿತ್ರರಂಗದಲ್ಲಿ ಕಲಾತ್ಮಕತೆ ಹಾಗೂ ವೃತ್ತಿಪರತೆ ಸಮಾನವಾಗಿ ಬೆರೆತಿದ್ದರೆ ಅದಕ್ಕೆ ಅಂದು ಅವರಿಬ್ಬರು ಹಾಕಿಕೊಟ್ಟ ಅಡಿಪಾಯವೇ ಕಾರಣ. ಆ ಇಬ್ಬರೂ ಇಂದಿನ ಜ್ಞಾನಪೀಠಿಗಳು ಎಂಬುದನ್ನು ಮರೆಯುವಂತಿಲ್ಲ!
ಪ್ರಸ್ತುತ, ‘ಮಲಯಾಳಂ ಕತೆಗಳ’ಲ್ಲಿ ಎಂಟು ಕತೆಗಳಿವೆ. ಅವುಗಳಲ್ಲಿರುವ ಎರಡು ನೀಳ್ಗತೆಗಳಲ್ಲ್ಲಿ ಒಂದು ‘ವಾನಪ್ರಸ್ತ’. ಇದನ್ನೊಂದು ಮಾದರಿ ಎಂಬಂತೆ ಇಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಇಲ್ಲಿನ ಮುಖ್ಯಪಾತ್ರಗಳು ಎರಡು. ನಿವೃತ್ತ ಜೀವನ ನಡೆಸುವ ಮಾಸ್ತರ್ ಮತ್ತು ಅವರ ಒಂದು ಕಾಲದ ಶಿಷ್ಯೆ ವಿನೋದಿನಿ. ಅವರು ಒಂದಾಗುವ ಸಾಧ್ಯತೆ ಕಾರಣಾಂತರಗಳಿಂದ ಮುರುಟಿಹೋಗಿತ್ತು. ಪರಿಣಾಮವಾಗಿಯೋ ಎಂಬಂತೆ ಆಕೆ ಅವಿವಾಹಿತೆಯಾಗಿಯೇ ಉಳಿಯುತ್ತಾಳೆ. ಮಾಸ್ತರ್ ಸಂಸಾರಿ. ಅವರಿಗೊಮ್ಮೆ ಎದೆನೋವು ಬಂತೆಂಬ ಕಾರಣಕ್ಕೆ ಅವರ ಮೇಲೆ ಬಿಗಿ ಬಂದೋಬಸ್ತು ಏರ್ಪಡಿಸಲಾಗುತ್ತದೆ. ಬೇಕಾದ್ದು ತಿನ್ನುವ ಹಾಗಿಲ್ಲ; ಬೇಕಾದ ಕಡೆ ಹೋಗುವ ಹಾಗಿಲ್ಲ.. ಇತ್ಯಾದಿ.
ಪ್ರತಿ ಬಾರಿಯೂ ವಿಶೇಷ ಸಂದರ್ಭಗಳಲ್ಲಿ ವಿನೋದಿನಿ ಮಾಸ್ತರಿಗೆ ಸಂದೇಶ ಕಳುಹಿಸುವ ಪರಿಪಾಠ ಇಟ್ಟುಕೊಂಡಿದ್ದಳು. ಒಮ್ಮೆ ತಾನು ಕೊಲ್ಲೂರಿಗೆ ಹೋಗುವ ಕುರಿತು ಪತ್ರದಲ್ಲಿ ತಿಳಿಸಿದ್ದಳು. ಅದನ್ನು ಮನಸ್ಸಲ್ಲಿ ಬಚ್ಚಿಟ್ಟು ತಾನೂ ಕೊಲ್ಲೂರಿಗೆ ಹೋಗಬೇಕೆಂದು ಹೊರಟರೆ ಮನೆಯವರು ಜೊತೆಗೊಬ್ಬ ಬಂಟನನ್ನು ನೇಮಿಸಿ ಕೊನೆಗೂ ಕಳುಹಿಸಿಕೊಟ್ಟರು.
ಮಾಸ್ತರು ಆ ಬಂಟನನ್ನು ಕೊಲ್ಲೂರಿನ ತನ್ನ ಕೊಠಡಿಯಲ್ಲೇ ಬಿಟ್ಟು ವಿನೋದಿನಿಯೊಂದಿಗೆ ಕೊಡಚಾದ್ರಿಗೆ ಹೋಗುತ್ತಾರೆ. ಅಲ್ಲಿಯ ಪೂಜಾರಿಗಳು ಅವರಿಬ್ಬರನ್ನು ಪತಿಪತ್ನಿಯರೆಂದೇ ಭಾವಿಸುತ್ತಾರೆ. ಅದನ್ನು ಅವರೂ ಅಲ್ಲಗಳೆಯುವುದಿಲ್ಲ. ನರೆತ ಕೂದಲಿನ ಇಬ್ಬರೂ ಕೋಲೂರಿಕೊಂಡು ಕೊಲ್ಲೂರಿನ ಕೊಡಚಾದ್ರಿಯ ಸುತ್ತಮುತ್ತ ನಡೆದು ನಿಜವಾದ ವಾನಪ್ರಸ್ತವನ್ನು ಅನುಭವಿಸುತ್ತಾರೆ. ತಾವು ಬೇರ್ಪಟ್ಟಲ್ಲಿಂದ ಮೊದಲ್ಗೊಂಡು ಬಾಕಿಯಿದ್ದ ಎಲ್ಲ ಮಾತುಗಳನ್ನು ಮೆಲುಕು ಹಾಕುತ್ತಾರೆ. ಪೂಜಾರಿಗಳು ಅಕ್ಕಪಕ್ಕದಲ್ಲಿ ಹಾಸಿಕೊಟ್ಟ ಹಾಸಿಗೆಯಲ್ಲಿ ಮಲಗಿ, ಕೈಕೈ ಹಿಡಿದು ಬಿಕ್ಕುತ್ತ ತಾವು ಕಳೆದುಕೊಂಡ ಭವಿತವ್ಯವನ್ನು ನೆನೆದು ಹಪಹಪಿಸುತ್ತಾರೆ. ಆಕೆಯ ಬದುಕು ಆಥರ್ಿಕ ಸಂಕಷ್ಟದಲ್ಲಿರುವುದನ್ನು ಅಥರ್ೈಸಿಕೊಂಡ ಮಾಸ್ತರ್ ಸಹಾಯ ಹಸ್ತ ಚಾಚುತ್ತಾರೆ.
ಈ ಕತೆಯ ಹಂದರದೊಳಗೆ ಎಂ.ಟಿ.ವಿ.ಯವರು ತುಂಬಿಕೊಡುವ ಮಾಂಸಮಜ್ಜೆಗಳೇ ಕತೆಗಾರರ ನಿಜವಾದ ಶಕ್ತಿ. ಕತೆಯ ಮೊದಲ ಸಾಲು ಹೀಗಿದೆ; ‘ಬಹುಶಃ ಅವಳು ಬಂದಿರಲಾರಳು.’ ಕೊಲ್ಲೂರಿಗೆ ತಲುಪಿದ ಮಾಸ್ತರ್ -ಹಿಂದೊಮ್ಮೆ ತನ್ನ ಮನೆಗೆ ಮನೆಪಾಠ ಹೇಳಿಸಿಕೊಳ್ಳುವುದಕ್ಕೆ ಬರುವೆನೆಂದು, ಬಾರದಿದ್ದ- ವಿನೋದಿನಿ ಈ ಬಾರಿಯೂ ಹಾಗೆಯೇ ಮಾಡಿರಬೇಕು ಎಂದುಕೊಳ್ಳುವ ಸಂದರ್ಭದ ಮಾತಿದು. ಅಷ್ಟಕ್ಕೇ ಇದರರ್ಥ ನಿಲ್ಲವುದಿಲ್ಲ; ಜಗತ್ತಿನ ಅತ್ಯಂತ ಶ್ರೇಷ್ಠ ಸಣ್ಣಕತೆ ಎಂಬುದಾಗಿಯೂ ಈ ಸಾಲನ್ನು ಪರಿಗಣಿಸಬಹುದು.
ಸಣ್ಣ ಸಣ್ಣ ಸಾಲುಗಳು, ಅವು ತುಂಬಿಕೊಡುವ ಅಪಾರ ಅರ್ಥ, ಆ ಮೂಲಕ ಬದುಕಿನ ಯಾವುದೋ ಘಟ್ಟದಲ್ಲಿ ಮನಸಾರೆ ಪ್ರೀತಿಸಿದ ಮನದನ್ನೆಯನ್ನು ಕಾಣುವ ಸಂದರ್ಭದ ವಿವರಣೆ -ನೈಜವಾಗಿ, ಮಾಮರ್ಿಕವಾಗಿ ಎಂ.ಟಿ ವಾಸುದೇವನ್ ಅವರ ‘ವಾನಪ್ರಸ್ಥ’ದಲ್ಲಿ ಮೂಡಿಬಂದಿದೆ.
ಈ ಸಂಕಲನದಲ್ಲಿ ಅಳವಡಿಸಲಾಗಿರುವ ‘ಸಾಕುಪ್ರಾಣಿಗಳು’ ಸರ್ಕಸ್ ಕಂಪೆನಿಯ ಕಲಾವಿದರ ಪ್ರಾಣಿಗಳಿಗೆ ಸಮಾನವಾದ ಬದುಕನ್ನು ಕುರಿತು ಹೇಳುತ್ತದೆ. ‘ಷಲರ್ಾಕ್’ ಅಮೇರಿಕಾದ ಬುದ್ಧಿವಂತ ಬೆಕ್ಕಿನ ಕತೆ. ಬೆಕ್ಕಿನ ಹೆಸರಿನಲ್ಲಿ ಇಡಿಯ ಅಮೇರಿಕನ್ನರ ಬದುಕಿನ ಮೇಲೆ ಕ್ಷ-ಕಿರಣ ಬೀರುವ ಶಕ್ತಿಯುಳ್ಳ ಕತೆಯಿದು. ‘ನೀಲಿ ಕಾಗದ’ ಮಕ್ಕಳ ಬದುಕಿನಲ್ಲಿ ಸಂಭವಿಸುವ ಎಡವಟ್ಟುಗಳ ಕುರಿತು ಹೇಳಿದರೆ, ‘ನೆರೆಮನೆ’ ನಮ್ಮದೇ ಹಳ್ಳಿಗೆ ನಾವು ಬಹುಕಾಲದ ಬಳಿಕ ಭೇಟಿಕೊಟ್ಟ ನೆನಪನ್ನು ತರುತ್ತದೆ. ಹೀಗೆ ಪ್ರತಿಯೊಂದು ಕತೆಯೂ ಬೇರೆ ಬೇರೆ ಕಾರಣಕ್ಕೆ ನಮ್ಮನ್ನು ಆಕಷರ್ಿಸಬಲ್ಲ ಶಕ್ತಿಯಿಂದ ಕೂಡಿದೆ. ಶಿಲಾಲಿಖಿತ, ಕಡುಗಣ್ಣಾವ-ಒಂದುಪ್ರವಾಸ ಟಿಪ್ಪಣಿ ಹಾಗೂ ಕಲ್ಪಾಂತ ಸಂಕಲನದಲ್ಲಿರುವ ಇತರ ಕತೆಗಳು.
ಕತೆಗಾರರು ಕೆಲವೊಮ್ಮೆ ತಾವೇ ಪಾತ್ರವಾಗಿ ನಮಗೆ ಆಪ್ತರಾದರೆ ಇನ್ನು ಕೆಲವೊಮ್ಮೆ ನಿರೂಪಕರಂತೆ ದೂರನಿಂತು ಕತೆ ಹೇಳುತ್ತಾರೆ. ಆಯಾ ಸಂದರ್ಭಕ್ಕೆ ಹೊಂದಿಕೊಳ್ಳುವ ಭಾಷೆಯ ಬಳಕೆ ಮಾಡಿ ಓದುಗರನ್ನು ತೆಕ್ಕೆಗೆ ತೆಗೆದುಕೊಳ್ಳು ಅಪಾರ ಸಾಮಥ್ರ್ಯ ಅವರ ಕತೆಗಳಿಗಿವೆ.
ಮಲಯಾಳದ ಕಸುವನ್ನು ಅದರ ಆಳದಿಂದ ಅರಿಯಬಲ್ಲ ಕೆ.ಕೆ.ಗಂಗಾಧರನ್, ಎಂ.ಟಿ. ವಾಸುದೇವನ್ ನಾಯರ್ ಅವರ ಕೆಲವು ಸಣ್ಣಕತೆ ಹಾಗೂ ನೀಳ್ಗತೆಗಳನ್ನು ಕನ್ನಡಕ್ಕೆ ತಂದುಕೊಟ್ಟು ಎರಡೂ ಭಾಷೆಗಳಿಗೆ ಗೌರವ ಸಲ್ಲಿಸಿದ್ದಾರೆ.

‍ಲೇಖಕರು G

14 October, 2013

2 Comments

  1. l c sumithra.

    ಧನ್ಯವಾದಗಳು ನಾ ದಾ ಅವರಿಗೆ. ಈ ಕಥೆಗಳಲ್ಲಿ ಕೆಲವನ್ನು ಓದಿಲ್ಲ .ಪುಸ್ತಕ ತೆಗೆದುಕೊಳ್ಳಬೇಕು. ನೀವು ಪ್ರಸ್ತಾಪಿಸಿರುವ ವಾನಪ್ರಸ್ತಂ ಕಥೆ ಮಲಯಾಳಂ ನಲ್ಲಿ” ತೀರ್ಥಾಟನಮ್’ ಹೆಸರಿನಲ್ಲಿ ಸಿನೆಮಾ ಆಗಿದೆ. ಜಯರಾಂ ಮತ್ತು ಸುಹಾಸಿನಿ ಅಭಿನಯಿಸಿದ್ದಾರೆ. ಹೆಚ್ಚು ಭಾಗ ಕೊಡಚಾದ್ರಿ ಮತ್ತು ಕೊಲ್ಲೂರಿನಲ್ಲೇ ಚಿತ್ರೀಕರಿಸಿದ್ದಾರೆ. ನನಗೂ ಎಂ ಟಿ ಯವರ ಕಥೆಗಳು ಇಷ್ಟ.

  2. na.. damora shetty

    dhanyavaadagalu sumitra madam. aa chitra naanuu nodidde.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading