ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ವಾಚನಾಭಿರುಚಿ : ವಿಚಾರ ಸಾಹಿತ್ಯ’ – ಕುಂದಾಪುರದಲ್ಲಿ ಕಮ್ಮಟ

ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು


ಸಾಹಿತ್ಯ ಸಮುದಾಯ ಮತ್ತು ಸಮುದಾಯ ಸಾಂಸ್ಕೃತಿಕ ಸಂಘಟನೆ, ಕುಂದಾಪುರ ಇವರ ಸಹಕಾರದೊಂದಿಗೆ

ವಾಚನಾಭಿರುಚಿ : ವಿಚಾರ ಸಾಹಿತ್ಯ

ಎಂಬ ಕಮ್ಮಟವನ್ನು ದಿನಾಂಕ – ಫೆಬ್ರುವರಿ 28, 01 ಮಾರ್ಚ 2015 ದಂದು

ಅಡಿಯೋ ವಿಷುವಲ್ ಹಾಲ್, ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ ಇಲ್ಲಿ ಏರ್ಪಡಿಸಲಾಗಿದೆ

ವಿಚಾರವಾದದ ಸ್ವರೂಪ ಮತ್ತು ಅಭಿವ್ಯಕ್ತಿಯನ್ನು ಕನ್ನಡದ ವೈಚಾರಿಕ ಸಾಹಿತ್ಯಪಠ್ಯಗಳನ್ನು ಹಿನ್ನೆಲೆಯಾಗಿ ತೆಗೆದುಕೊಂಡು ಈ ಕಮ್ಮಟದಲ್ಲಿ ಚರ್ಚಿಸಲಾಗುವುದು.ಈ ಬೆಳಕಿನಲ್ಲಿ ಓದು ಸಂಸ್ಕೃತಿಯನ್ನು ಮರುರೂಪಿಸುವ ಮತ್ತು ವಾಚನಾಭಿರುಚಿಯನ್ನು ಉದ್ಧೀಪಿಸುವ ಉದ್ಧೇಶವನ್ನು ಕಮ್ಮಟ ಹೊಂದಿದೆ.ಒಟ್ಟಾರೆಯಾಗಿ, ಸಾಹಿತ್ಯ ಕೃತಿಯೊಂದರ ಓದಿಗೆ ಪೂರಕವಾದ ಮಾನಸಿಕ ಸಿದ್ಧತೆನ್ನು ರೂಪಿಸುವ ಮತ್ತು ಗ್ರಹಿಕೆಯ ಸಾಧ್ಯತೆಗಳನ್ನು ವಿಸ್ತರಿಸುವ ಉದ್ಧೇಶದಿಂದ ಕಮ್ಮಟವನ್ನು ಹಮ್ಮಿಕೊಳ್ಳಲಾಗಿದೆ.
ಕಮ್ಮಟವು ಈ ಕೆಳಗಿನ ಸಾಹಿತ್ಯ ಓದನ್ನು ಹೊಂದಿರುತ್ತದೆ.
1. ಗೌರೀಶ್ ಕಾಯ್ಕಿಣಿಯವರ ಓದು
2. ಶಿವರಾಮ ಕಾರಂತರ ಓದು
3. ಆರ.ವಿ ಭಂಡಾರಿಯವರ ಓದು
4. ಸಾ. ರಾ. ಅಬೂಬಕರ್‍ರವರ ಓದು
ಕಮ್ಮಟದಲ್ಲಿ ಭಾಗವಹಿಸಲಿಚ್ಛಿಸುವ ಭಾಷಾ ಶಿಕ್ಷಕರು, ಉಪನ್ಯಾಸಕರು, ಪದವಿ ಅಥವಾ ಅದಕ್ಕೂ ಮೇಲ್ಪಟ್ಟ ತರಗತಿಗಳಲ್ಲಿ ವ್ಯಾಸಂಗಮಾಡುತ್ತಿರುವ ವಿದ್ಯಾರ್ಥಿಗಳು, ಸಾಹಿತ್ಯಾಭಿರುಚಿಯುಳ್ಳ ಸಹೃದಯರು ಈ ನಂಬರನ್ನು ಸಂಪರ್ಕಿಸಬಹುದು-9481509699
ಸಂಖ್ಯೆಯ ಮಿತಿ ಇರುವುದರಿಂದ ದಯವಿಟ್ಟು ಸಾಕಷ್ಟು ಮುಂಚಿತವಾಗಿ ತಿಳಿಸಿ.
ಬಾಗವಹಿಸುವ ಎಲ್ಲರಿಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಪೂರಕ ಸಾಹಿತ್ಯ ಸಾಮಗ್ರಿಗಳ ಕಿಟ್ ಮತ್ತು ಪ್ರಮಾಣ ಪತ್ರವನ್ನು ನೀಡುತ್ತದೆ. ಊಟ, ವಸತಿ ಉಚಿತ.
ಕಮ್ಮಟದ ಉದ್ಘಾಟನಾ ಸಭೆಯು 28 ಫೆಬ್ರವರಿ 2015 (ರಾಷ್ಟ್ರೀಯ ವಿಜ್ಞಾನ ದಿನಾಚರಣೆ) ರಂದು ಪೂ 10.30 ಕ್ಕೆ ನಡೆಯಲಿದೆ. ಎಲ್ಲ ಸಾಹಿತ್ಯಾಸಕ್ತರಿಗೂ ಉದ್ಘಾಟನಾ ಕಾರ್ಯಕ್ರಮಕ್ಕೆ ಸ್ವಾಗತ.
 

‍ಲೇಖಕರು G

21 February, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading