ವಾಘಾದಲ್ಲಿ ಟೋಬಾ ಟೇಕಸಿಂಗನನ್ನು ಭೇಟಿಯಾಗಬೇಕಿದೆ…

ಟೋಬಾ ಟೇಕಸಿಂಗ್

ಲಕ್ಷ್ಮಿಕಾಂತ ಇಟ್ನಾಳ್

(ಸಾದತ್ ಹಸನ್ ಮಂಟೊ ರ ಜನಪ್ರಿಯ ‘ಟೋಬಾ ಟೇಕಸಿಂಗ್’ ಕಥೆಯಾಧಾರಿತ)

ಮೂಲ : ಗುಲ್ಜಾರ ಸಾಹಬ್

ನನಗೆ ವಾಘಾದಲ್ಲಿ ಟೋಬಾ ಟೇಕಸಿಂಗನೆನ್ನೊ ‘ಬಿಶನ್’ಗೆ ಭೇಟಿಯಾಗಬೇಕಿದೆ
ಅವನಿನ್ನೂ ‘ಮಂಟೋ’ ಬಿಟ್ಟುಹೋದ ಜಾಗದಲ್ಲೇ ,
ಬಾವುಗಾಲುಗಳಲ್ಲೇ ನಿಂತಿರುವನೆಂದು ಪ್ರತೀತಿಯಿದೆ
‘ಹೊದಿಕೆ, ಬೆಲ್ಲ, ಹೆಸರು ತೊಗರಿ ಎಲ್ಲಾ, ಲಾಲಟೇನ್ ಕೊಟ್ಟಾಯ್ತಲ್ಲಾ….’
ಎಂದು ನಿತ್ಯವೂ ಬಡಬಡಿಸುತ್ತಾನೆಂದು ಕೇಳಿರುವೆ
 
ತಾನೇ ‘ಖುದಾ’ ಎಂದು ತಿಳಿದಿದ್ದ, ಹುಚ್ಚನೊಬ್ಬನಿದ್ದ,
‘ದೇವ ನೀನು, ನೀನೇ ನಿರ್ಧರಿಸಬೇಕಿದೆ
ಯಾವ ಊರು ಯಾರ ಪಾಲೆಂದು’
ಎತ್ತರದ ಮರವೇರಿ ಅವನಿಗೆ ಹೇಳುತ್ತಿದ್ದನಲ್ಲವೇ ಈ ಹುಚ್ ಬಿಶನ್,
ಇವನ ಕುರಿತೇ ತಿಳಿದುಕೊಳ್ಳಬೇಕಿದೆ ಒಂದಿಷ್ಟು,
ಇವನು ಆ ಮರದಿಂದ ಇಳಿದ ಕೂಡಲೇ ಹೇಳಬೇಕಿದೆ
‘ಆ ವಿಭಜನೆಯೇನೋ ಆಯಿತು, ಎರಡೂ ಕಡೆ
ಇನ್ನೂ ಕೆಲ ಹೃದಯಗಳು ಬಾಕಿಯಿವೆಯಲ್ಲಾ ಇನ್ನೂ’
ಅವನ್ನು ಹಂಚುವ ಹಾಗೂ ಹೋಳಾಗಿಸುವ ಕಾರಬಾರು ನಿಂತಿಲ್ಲ ಇನ್ನೂ
ಆ ವಿಭಜನೆ ಏನಿತ್ತಲ್ಲಾ, ಅದು ಮೊದಲಿಂದು
ಎರಡೂ ಕಡೆಯಲ್ಲ್ಲಿರುವ ಹುಚ್ಚರ ‘ಬಟವಾರಾ’ ಬಾಕಿ ಇದೆ ಇನ್ನೂ
 
ನನಗೆ ವಾಘಾದಲ್ಲಿ ಟೋಬಾ ಟೇಕ್ಸಿಂಗ್ನೆನ್ನೋ ‘ಬಿಶನ್’ಗೆ ಭೇಟಿಯಾಗಬೇಕಿದೆ
‘ಆ ಲಹನಾಸಿಂಗ್, ವಾಘವಾ ಸಿಂಗ್ ಮತ್ತೆ ಆ ಮುದ್ದು ಬೆಹನ್ ಅಮೃತಾ
ಅವರೆಲ್ಲರೂ ಕೊಚ್ಚಲ್ಪಟ್ಟೇ ಇತ್ತ ಬಂದಿದ್ದರು
ರುಂಡಗಳೆಲ್ಲವೂ ಅಲ್ಲಿಯೇ ಅವರ ಸಾಮಾನಿನೊಂದಿಗೆ ಲೂಟಿಯಾಗಿದ್ದವು ‘
ಈ ಸುದ್ದಿ ಅವನ ಗೆಳೆಯ ‘ಅಫಜಲ್’ ನಿಗೆ ಮುಟ್ಟಿಸಬೇಕಿದೆ
 
ಮಹಜರು ಮಾಡಿದರೆ ಈಗ ಅವುಗಳನ್ನು ಪಡೆಯಲು ಯಾರೂ ಬರುವುದಿಲ್ಲ ಬಿಡಿ
ಆ ಹುಡುಗಿ ಪ್ರತಿ ಹನ್ನೆರಡು ಮಾಸಗಳಲ್ಲಿ ಒಂದು ಹೆಬ್ಬೆರಳಷ್ಟು ಎತ್ತರವಾಗುತ್ತಿದ್ದಳಲ್ಲ
ಅವಳೀಗ ಪ್ರತಿ ವರುಷವೂ ಕಿರುಬೆರಳಷ್ಟು ಕುಗ್ಗುತ್ತಿದ್ದಾಳೆ
 
ಎರಡೂ ಕಡೆ ಹುಚ್ಚರು, ತಲೆಕೆಟ್ಟವರು ತಮ್ಮ ತಮ್ಮ ಜಾಗಗಳಿಗೆ ಇನ್ನೂ ಮರಳಿಲ್ಲವೆಂದು ತಿಳಿಸಬೇಕಿದೆ
ಒಂದಿಷ್ಟು ಮಂದಿ ಇತ್ತ ಕಡೆಗೂ ಇದ್ದಾರೆ, ಇನ್ನಷ್ಟು ಅತ್ತ ಕಡೆಗೂ……
ನನ್ನೊಡನೆ ವಾಘಾದಲ್ಲಿ ಟೋಬಾ ಟೇಕ್ಸಿಂಗ್ ನೆನ್ನೋ ಬಿಶನ್ ಇದನ್ನೇ ಹೇಳುತ್ತಾನೆ,
‘ಹೊದಿಕೆ, ಬೆಲ್ಲ, ಹೆಸರು ತೊಗರಿ ಎಲ್ಲಾ, ಲಾಲಟೇನ್ ಕೊಟ್ಟಾಯ್ತಲ್ಲಾ…’
ಹಿಂದುಸ್ಥಾನದಿಂದ ಪಾಕಿಸ್ತಾನ ಕೊಟ್ಟಾಯ್ತಲ್ಲಾ ,…. ನಡೀ ಇನ್ ಅತ್ಲಾಗ್!
 

‍ಲೇಖಕರು G

June 28, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Jayashree

    ಓ ಪಡದೀ ಗುಡಗುಡದೀ…ಭೆದ್ಯಾನಾದೀ ಎಂದ ಟೋಬಾಟೇಕ್ ಸಿಂಗನ ಹಾಡು ಅರೆಬರೆ ನೆನಪಾಯಿತು, ಬಹಳ ಹಿಂದೆ ಓದಿದ್ದೆ..ಹೃದಯ ಸ್ಪಶಿ೯ ಕವನ!

    ಪ್ರತಿಕ್ರಿಯೆ
  2. Bandenawaz Myageri

    ಟೋಬಾ ಟೇಕಸಿಂಗ್ ಬರಹ ಚೆನ್ನಾಗಿದೆ ಸರ್

    ಪ್ರತಿಕ್ರಿಯೆ
  3. ಲಕ್ಷ್ಮೀಕಾಂತ ಇಟ್ನಾಳ

    ಜಯಶ್ರೀ ಮೇಡಂ ಜಿ, ಬಂದೇನವಾಜ್ ಮ್ಯಾಗೇರಿ ಜಿ, ತಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ವಂದನೆಗಳು. ಎಷ್ಟೊಂದು ಅರ್ಥಪೂರ್ಣವಾಗಿ ಗುಲ್ಜಾರರು ಈ ಹಾಡು ಬರೆದಿದ್ದು, ಅನುವಾದ ನನ್ನ ಪ್ರಯತ್ನವಷ್ಟೆ. ಈ ಕವನ ಅರ್ಥವಾಗಲು ‘ಮಂಟೋ’ ರ ‘ಟೋಬಾ ಟೇಕಸಿಂಗ್’ ಕಥೆ ಓದಿದರೆ ಇದರ ಆತ್ಮದೊಳಗೆ ಪ್ರವೇಶಿಸಬಹುದೆನ್ನಿಸುತ್ತದೆ. ಪಾರ್ಟಿಶನ್ ಸಂದರ್ಭದಲ್ಲಿ ಜೈಲಿನಲ್ಲಿರುವ ಹುಚ್ಚರು ಯಾವ ಕಡೆಗೆ ಹೋಗಬೇಕು? ಅವರು ಪಾಕಿಸ್ತಾನದಲ್ಲಿದ್ದುಕೊಂಡು ‘ಹಿಂದುಸ್ತಾನ ಜಿಂದಾಬಾದ್’ ಎನ್ನುವ, ಹಿಂದುಸ್ತಾನದಲ್ಲಿದ್ದರೆ ‘ಪಾಕಿಸ್ತಾನ ಜಿಂದಾಬಾದ್’ ಎನ್ನುವ ಅವರನ್ನು ಎಲ್ಲಿಗೆ ಕಳುಹಬೇಕು? ಮುಸಲ್್ಮಾನ್ ಇದ್ದರೆ ಪಾಕಿಸ್ಥಾನಕ್ಕೆ, ಹಿಂದು, ಸಿಖ್ ಇದ್ದಲ್ಲಿ ಹಿಂದುಸ್ತಾನಕ್ಕೆ ಕಳುಹಬೇಕೇ? ಮುಸಲ್ಮಾನನೂ ಕೂಡ, ‘ಹಿಂದುಸ್ಥಾನ ಜಿಂದಾಬಾದ’ ಎಂದರೆ ಎಲ್ಲಿಗೆ ಕಳುಹಬೇಕು? ನಿಮಯಗಳಂತೆ ಪಾಕಿಸ್ಥಾನ, ಆದರೆ ಅದಕ್ಕೆ ಅವರ ಒಪ್ಪಿಗೆ ಇದೆಯೇ? ಅದೇ ರೀತಿ ಪಾಕಿಸ್ತಾನದ ಹಿಂದುವಿನ ಅಂತರಾಳ ಯಾರಿಗೆ ಅರ್ಥವಾಗಬೇಕು? ಅವರ ಜಮೀನು ಜಾಯದಾದೆಲ್ಲಾ ಹೇಗೇ? ””’ ಪಾಕಿಸ್ತಾನದ ಜೈಲಿನಿಂದ ಬಿಶನ್ ಕೇಳುತ್ತಿದ್ದ ಒಂದೇ ಪ್ರಶ್ನೆ, ‘ಟೋಬಾ ಟೇಕಸಿಂಗ್ ನೆನ್ನೋ ಜಮೀಂದಾರ ಎಲ್ಲಿ ಹೋದ?’ಎಂಬ ಜಿಜ್ಞಾಸೆ ಕೊನೆಗೆ ಹನ್ನೆರಡು ದೀರ್ಘವರ್ಷಗಳಷ್ಟು ಪ್ರತಿಕ್ಷಣಗಳನ್ನು ನಿಂತೇ, ಗೋಡೆಗೆ ಆತುಕೊಂಡೇ(ಟೇಕೇಹುಯೇ)ನಿಂತ ಆ ಹುಚ್ಚು ಬಿಶನ್ ಸಿಂಗ್ ನೇ ಆ ಟೋಬಾಟೇಕ್ ಸಿಂಗ್ ಎಂಬ ಸಂಗತಿ ನಿಚ್ಚಳವಾಗುತ್ತ ಹೋಗುವುದು,ಕೊನೆಗೂ ಯಾರಿಗೂ ಸೇರದ ಕೇವಲ ಟೋಬಾಟೇಕ ಸಿಂಗನದೇ ಆದ, ಅದು ಅವನದು ಎಂದು ಹೇಳುಕೊಳ್ಳಬಹುದಾದ, ಯಾರದೂ ಅಲ್ಲವೆಂದ ಮೇಲೆ ಅದು ಅವನದೇ ಅಲ್ಲವೇ? ಇತ್ತ ಹಿಂದುಸ್ತಾನ ಅಲ್ಲದ ಅತ್ತ ಪಾಕಿಸ್ತಾನ ಅಲ್ಲದ ನೆಲದಲ್ಲಿ ಬಾವುಗಾಲುಗಳಲ್ಲಿ ನಿಂತು ಜೀವಬಿಡುವ ಆ ಟೋಬಾಟೇಕಸಿಂಗ್ ನೆಂಬ ಜೀವಕ್ಕೆ, ಅಂತಹ ಹಲವಾರು ನೋವುಂಡ ಆತ್ಮಗಳಿಗೆ ಈ ರೀತಿಯೊಂದು ಸಲಾಮ್ ಹೇಳಿರುವುದು ಕಣ್ಣು ತೆರೆಸುತ್ತದೆ, ತೇವಗೊಳಿಸುತ್ತದೆ….ನಮಸ್ಕಾರ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: