ದೇವರಿದ್ದಾನಾ..?

ಡಾ. ಅನಿಲ್ ಎಮ್‌ ಚಟ್ನಳ್ಳಿ

**

ದೇವರಿದ್ದಾನಾ?ಎಂದು ಕೇಳಿದ್ದಕ್ಕೆ

ನೀನು ನಕ್ಕು ಸುಮ್ಮನಾದೆ,

ಸುತ್ತಮುತ್ತಲಿನಿಂದ‌ ಹತ್ತು ಪ್ರಶ್ನೆಗಳು

ತೂರಿ ಬಂದಾಗಲೂ

ಉತ್ತರಿಸುವ ಗೋಜಿಗೆ ಹೋಗದೆ

ಸುಮ್ಮನಿರುವುದು ಹೇಗೆ? 

ಹೇಳಿಕೊಡು.

ನದಿಯ ನೀರಿನ‌ ಜಗಳ

ಕೂತು ಮನವೊಲಿಸಿ

ಬಗೆಹರಿಸಿದೆ,

ಸಂಘರ್ಷ‌ ತೊರೆದು ಹೀಗೆ

ಸಮನ್ವಯ‌ ಸಾಧಿಸುವುದು ಹೇಗೆ ?

ಹೇಳಿಕೊಡು.

ಕೊಲ್ಲಲು ಬಂದ

ಅಂಗುಲಿಮಾಲನ್ನನ್ನು ಸಲೀಸಾಗಿ ಸೋಲಿಸಿದೆ,

ಹಲ್ಲು ಕಟೆದು, ಕೆಂಗಣ್ಣು ಮಾಡಿ

ಅಬ್ಬರಿಸಿ ಬರುವವರನ್ನು

ಕಣ್ಣಲ್ಲೆ ಸೋಲಿಸುವುದು ಹೇಗೆ ? 

ಹೇಳಿಕೊಡು.

ಜೀವದಾನ ಕೇಳಿ‌‌ ಬಂದ

ಕಿಸಾಗೋತಮಿಗೆ ಸಾವಿರದ ಮನೆಯಿಂದ

ಸಾಸಿವೆ ತರಲು ಕಳಿಸಿದೆ,

ಏನನ್ನೂ ನುಡಿಯದೆ ಹೀಗೆ

ಮಹತ್ತರವಾದುದನ್ನು ತಿಳಿಸುವುದು ಹೇಗೆ ?

ಹೇಳಿಕೊಡು.

ರೋಗ, ಮುಪ್ಪು, ಸಾವನ್ನು ಕಂಡು

ಅಪ್ರತಿಭನಾದೆ,

ಟೊಳ್ಳು ಜೀವನದ ಸುಖದ 

ಲೋಲುಪತೆಯಲ್ಲಿ ಮೈ ಮರೆಯದೆ

ನಿತ್ಯ ಸತ್ಯಗಳನ್ನು ಮನಗಾಣುವುದು ಹೇಗೆ ?

ಹೇಳಿಕೊಡು‌.

‍ಲೇಖಕರು Admin MM

May 23, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Dr S B Ravikumar

    ಕವನ ಸರಳವಾದರೂ ಅರ್ಥಗರ್ಭಿತವಾಗಿದೆ, ಚನ್ನಾಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: