ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಸುಂಧರಾ ಕದಲೂರು ಹೊಸ ಕವಿತೆ – ಯಾರ ಮಕ್ಕಳು ?!

ವಸುಂಧರಾ ಕದಲೂರು

ಆ ಮಗು ಇಲ್ಲಿ ಕಣ್ಬಿಟ್ಟು
ಕಲಿಯುವಾಗ ಹೇಳಿದೆವು
ಇದು ನಮ್ಮ ನೆಲ, ನಮ್ಮ ಗಾಳಿ
ಈ ನದಿಗಳು ನಮ್ಮವೆಂದು

ಈ ಮಗುವೂ ಹುಟ್ಟಿ ಬೆಳೆವಾಗ
ಹೇಳಿಕೊಟ್ಟೆವು ನೋಡಿದು
ನಮ್ಮದು; ಈ ನೆಲ ಗಾಳಿ
ನದಿ ನೀರು ನಮ್ಮದೆಂದು.

ಬೆಳೆದ ಮಕ್ಕಳು ಪ್ರತಿಪಾದಿಸ
ಹೊರಟರು ನನ್ನದಿದು ನನ್ನದಿದು
ನನ್ನದಿದೆಂದು; ನಮ್ಮದೆನ್ನುವ ಭಾವ
ಮರೆಯಾಗಿ ಎಂದೋ..

ಕೊನೆಗೆ ಬಡಿದಾಡುತಲೇ ನೆಲಕೆ
ಒಡಲು, ಗಾಳಿಗೆ ಉಸಿರುಗೊಟ್ಟು;
ನದಿ ನೀರ ಕೆಂಪಗಾಗಿಸಿ ಹೊರಟು
ಹೋದ ಅವರು, ಅದಾರ ಮಕ್ಕಳು !?

‍ಲೇಖಕರು Admin

6 April, 2022

2 Comments

  1. ಜಯಶ್ರೀನಿವಾಸ ರಾವ್

    ಇಷ್ಟವಾಯಿತು ಈ ಕವನ … ಎಷ್ಟು ಪ್ರಸ್ತುತ ಈ ಕವನ …

  2. Smitha Amrithraj.

    ಚೆನ್ನಾಗಿದೆ ಕವಿತೆ.ವಸುಂಧರ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading