ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಸುಂಧರಾ ಕದಲೂರು ಹೊಸ ಕವಿತೆ- ಜಯಂತಿ- ಸ್ಮರಣಿಕೆ

ವಸುಂಧರಾ ಕದಲೂರು

ಕಣ್ಣುಗಳಲಿ ಕಾರುಣ್ಯದ ಝರಿ!
ಕರುಣಾ ಮೂರ್ತಿಯೇ ಅದನ್ನು
ಒಮ್ಮೆ ಬಡಪಾಯಿಯತ್ತ
ಹರಿಸಬೇಕಿತ್ತು…

ಬಡಪಾಯಿ ಎಂದೆನೇ…!
ಸತ್ಯವಾಗಿಯೂ ಅದು ನಾನಲ್ಲ.

ಕಿವಿಗಪ್ಪಳಿಸುವ ಮೂದಲಿಕೆ, ಕೊಂಕು
ತಿವಿತಗಳು ಘಾಸಿಗೊಳಿಸಿ ಕಾಲ
ಕೆಳಗಿನ ಮರಳಿನಾಧಾರ ಜರಿಯುತ್ತಾ
ಕುಸಿಯುವಾಗ ಮಾತ್ರ ಬಡಪಾಯಿ
… ತಟ್ಟನೆದ್ದು ಗಟ್ಟಿ ನಿಲ್ಲುತ್ತಾ..

ಒಂದೇ ಒಂದು ಎಳೆಬಳ್ಳಿಯ
ಆಸರೆ! ಅಪ್ಪಿ ಪರಸ್ಪರರ
ಸಂತೈಸಿಕೊಂಡು..

ನಿನ್ನಂತಹ ಅರಸು ಕುವರನಿಗೆ
ಆದರಿಸುವುದು ತಿಳಿದಿರಲಿಲ್ಲ..
ಹತಭಾಗ್ಯೆಯ ಕುವರ ಆತ
ಅರಸುವುದು ಬೇಕಿರಲಿಲ್ಲ…

ಆದರೂ
ನಿನ್ನ ಅನುಸರಿಸಿತು ಆ
ಪರಂಪರೆಯ ಪಳೆಯುಳಿಕೆ..

ನಿನ್ನ ಬದಲು ನಾನು ಹೊರಟಿದ್ದರೆ…?!

ಶತಮಾನಗಳ ಜಯಂತಿಗಳಿರಲಿ,
ಬರಿಯ ಸ್ಮರಣಿಕೆಯಾಗಾದರೂ
ಉಳಿಯುತ್ತಿದ್ದೆನೇ

‍ಲೇಖಕರು Avadhi

26 May, 2021

1 Comment

  1. Smitha Amrithraj.

    ಇಷ್ಟ ಆಯಿತು ಕವಿತೆ ವಸುಂಧರಾ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading