ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವರದೇಶ ಹಿರೇಗಂಗೆ ಕವಿತೆ – ರೊಟ್ಟಿ, ರಟ್ಟೆ ಮತ್ತು brand…

ವರದೇಶ ಹಿರೇಗಂಗೆ

ಇಲ್ಲಿ ಬೀಳುವ ಮಳೆ
ಇವರದೇ ಬೆವರ ಹನಿ
ಹನಿ ಹನಿಯಿಂದ(ಲೇ)
ಇಲ್ಲಿಯ ಮಣ್ಣು ಒದ್ದೆಯಾಗಿದ್ದು
ಇಲ್ಲಿ ಹಸಿರು ಚಿಗುರಿದ್ದು
ಇಲ್ಲೊಂದು ಕೊಳವಾಗಿ, ಕೊಳ್ಳವಾಗಿ, ವ್ಯಾಲಿಯಾಗಿ
ಗಿಡವಾಗಿ, ಮರವಾಗಿ, ಹೂವಾಗಿ, ಕಾಯಾಗಿ, ಹಣ್ಣಾಗಿದ್ದು

ಎಲ್ಲಿಯೋ ತಟ್ಟಿದ ರೊಟ್ಟಿ
ಇವರ ಹೊಟ್ಟೆಗಾಗಿ, ರಟ್ಟೆಯಾಗಿ
ಗಟ್ಟಿ ಕಟ್ಟಡ ಕಟ್ಟಿ, ಇವರೆಲ್ಲ
ದೂರದ ಜೋಪಡಿಗಳಲ್ಲಿ
ಮಿಣುಕು ಹುಳುಗಳಾಗಿ
ಸಾಯುತ್ತಲೇ ಬದುಕಿದ್ದು
ಬದುಕುತ್ತ ಸತ್ತಿದ್ದು


ಕಲ್ಲುಗಾರೆಯ ಜೊತೆಗೆ ಕೆಂಪು ಬೆವರು,
ಬೆಳೆಸಿ ಕಟ್ಟಿರುವ ಕೆಂಪುಕೋಟೆ
ಅಲ್ಲಲ್ಲಿ ಕೊಳಗೇರಿ
ಕೃಷ್ಣನಿಗೆ ದೇವಳ ಕಟ್ಟೆ
ಕನಕನಂತೆ ಆರ್ತಿಸಿ
ಹೊರಗಡೆಯ ಬಸವಳಿದು
ಅಸ್ಪೃಶ್ಯರ ಪಂಕ್ತಿಯಲ್ಲಿ
ಊಟಕ್ಕೆ ಒದ್ದಾಡಿದ್ದು

ಈ ಊರಿಗೊಂದು brand ತಂದು
ಇಲ್ಲಿನ ಮಕ್ಕಳ branded perfume ಗಳಿಂದ
ಉಸಿರು ಕಟ್ಟಿದ ಮಣ್ಣಿನ ಮಕ್ಕಳು
ತಮ್ಮದೇ ಬೆವರಿನ ವಾಸನೆಗೆ ಬೆದರಿ ನಿಂತಿದ್ದು,

ವೈಶಾಖದ ಶಾಖಕ್ಕೂ ಮೈಯ್ಯೊಡ್ಡಿ
softwareಗಳ Ac ಕ್ಯಾಬಿನ್‌ ಕಟ್ಟುತ್ತ
ತಾವು hardwareಗಳಾಗಿದ್ದು
ಬೊಜ್ಜು ಕರಗಿಸುವವರಿಗೆ, walking track ಮಾಡಿಕೊಟ್ಟು
ತಾವೇ ರಸ್ತೆಯ ಜೆಲ್ಲಿ ಡಾಂಬರಾಗಿ ಸುಟ್ಟು ಕರಿದಾಗಿ
ಬಿಸಿಲು ಮಳೆಯೆನ್ನದೇ ಕರಗಿ ಹೋಗಿದ್ದು
ಈ ಮಣ್ಣಿನ ಮಕ್ಕಳು ಮಣ್ಣ ಪಾಲಾಗಿದ್ದು…
ಈ ಮಣ್ಣಿನ ಪಾಲಕರು ಮಣ್ಣ ಪಾಲಾಗಿದ್ದು…

‍ಲೇಖಕರು Admin

15 December, 2021

1 Comment

  1. ನೂತನ ದೋಶೆಟ್ಟಿ

    ವರದೇಶ್, ಕವಿತೆ ಲಾಗಾಯ್ತಿನಿಂದ ಇಲ್ಲಿಯವರೆಗಿನ ಕ್ಯಾನ್ವಾಸ್ ನಂತಿದೆ. ಇಷ್ಟವಾಯಿತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading