ಕರ್ನಾಟಕ ಲೇಖಕಿಯರ ಸಂಘದ ಕಾರ್ಯಕ್ರಮದಲ್ಲಿ ಇಂದು ಸಂಭ್ರಮವೋ ಸಂಭ್ರಮ. ಕಮಲಾ ಹಂಪನಾ ಅವರ ದತ್ತಿ ಪ್ರಶಸ್ತಿ ವಿತರಣೆ ಒಂದೆಡೆಯಾದರೆ ಲೇಖಕಿಯರ ಸಂಘಕ್ಕೆ ಇದು ಮೊದಲ ಸಮಾರಂಭ. ಹೀಗಾಗಿ ಬೆಂಗಳೂರಿನ ಬಿ ಎಂ ಶ್ರೀ ಪ್ರತಿಷ್ಠಾನದ ಎಂ ವೀ ಸೀ ಸಭಾಂಗಣದಲ್ಲಿ ಕಿಕ್ಕಿರಿದ ಜನಸಂದಣಿ.
ಹಂಪನಾ ದಂಪತಿಗಳು ಕಾರ್ಯಕ್ರಮ ಸ್ಥಳಕ್ಕೆ ತಲುಪಿದಾಗ ಸಂಭ್ರಮದ ಹರ್ಷೋದ್ಘಾರ. ಅಲ್ಲಿಂದ ಆರಂಭವಾದ ಸಡಗರ ನಿರಂತರವಾಗಿತ್ತು. ಕಮಲಾ ಹಂಪನಾ ಕಾರ್ಯಕ್ರಮಕ್ಕೆ ಚಾಲನೆ ಸಿಗುವ ವೇಳೆಗೆ ಹಂಪನಾ ಅವರು ತಾವೇ ಮುಂದಾಗಿ ಕಮಲಾ ಅವರ ಕೈಗೆ ಕೆಂಪು ಗುಲಾಬಿ ಇಟ್ಟದ್ದು ಇಡೀ ಸಭಾಂಗಣ ಜೋರು ಚಪ್ಪಾಳೆ ತಟ್ಟಲು ಕಾರಣವಾಯಿತು.
ಆ ಅನಂತರ ‘ವಿದ್ಯಾರ್ಥಿಗಳ ಆಪ್ತ ಮಿತ್ರ’ ಎಂದೇ ಹೆಸರಾಗಿರುವ ಬಿ ಎಂ ಶ್ರೀ ಪ್ರತಿಷ್ಠಾನದ ಬೈರಮಂಗಲ ರಾಮೇಗೌಡರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಲೇಖಕಿಯರ ಸಂಘದ ರಾಜ್ಯ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಡಾ ಎಚ್ ಎಲ್ ಪುಷ್ಪ ಅವರು ಅಚ್ಚುಕಟ್ಟಾಗಿ ಏಕೆ ಕಮಲಾ ಹಂಪಾನಾ ಎಲ್ಲರಿಗೂ ಮಾದರಿ ಎನ್ನುವುದನ್ನು ಅವರ ಬರಹಗಳ ಮೂಲಕ ಕಟ್ಟಿಕೊಟ್ಟರು. ಲೇಖಕರ ಇಂದಿನ ಭಿಕ್ಕಟ್ಟುಗಳ ಬಗ್ಗೆ ಸೂಚ್ಯವಾಗಿ ಮಾತನಾಡಿ ಸನ್ಮಾನಕ್ಕೆ ದಾರಿ ಮಾಡಿಕೊಟ್ಟರು.
ಕನ್ನಡ ಕ್ಷೇತ್ರದಲ್ಲಿ ತಮ್ಮದೇ ಆದ ರೀತಿಯಲ್ಲಿ ಸಂಶೋಧನೆಗೆ ಮಾದರಿ ಹಾಕಿಕೊಟ್ಟ ಎಸ್ ಪಿ ಪದ್ಮಪ್ರಸಾದ್ ಹಾಗೂ ಹನುಮಾಕ್ಷಿ ಗೋಗಿ ಅವರನ್ನು ಪ್ರೀತಿಯಿಂದ ಸನ್ಮಾನಿಸಲಾಯಿತು. ಜೊತೆಗೆ ಹಂಪನಾ ದಂಪತಿಗೂ ಸನ್ಮಾನದ ಹರ್ಷ.
ಬಿ ಯು ಸುಮಾ ದತ್ತಿ ಉಪನ್ಯಾಸ ನೀಡಿದರು.
ಭಾರತಿ ಹೆಗಡೆ, ಜಯಲಕ್ಷ್ಮಿ ಪಾಟೀಲ್, ಗುಣಸಾಗರಿ ನಾಗರಾಜ್, ಮಂಜುಳಾ ಶಿವಾನಂದ, ಮಂಜುಳಾ ಬಿ ವಿ, ಸರ್ವಮಂಗಳ, ಸಂಧ್ಯಾರಾಣಿ ಕಾರ್ಯಕ್ರಮದಲ್ಲಿದ್ದರು.
ಕಾರ್ಯಕ್ರಮದ ಫೋಟೋ ಆಲ್ಬಮ್ ಇಲ್ಲಿದೆ.













0 Comments