– ಲಿಂಗದೇವರು ಹಳೆಮನೆ
(ಪುನರವಲೋಕನ ಗ್ರಂಥದಿಂದ)
ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಲಭ್ಯವಾದರೆ ಸಿಗುವ ಲಾಭಗಳೇನು? ಇದು ಬಹಳಜನರ ಪ್ರಶ್ನೆ. ಮೊದಲಿಗೆ ಇದೊಂದು ಗೌರವದ ಸಂಗತಿ. ನಮ್ಮ ಪೂವರ್ಿಕರು ಹುಟ್ಟುಹಾಕಿದ ಈ ಕನ್ನಡ ಜಗತ್ತಿಗೆ ಸಂದ ಗೌರವ ಇದು ಎಂದು ತಿಳಿಯಬೇಕಾಗಿದೆ.
ಕೇಂದ್ರ ಸರ್ಕಾರ 2004ನೇ ಇಸವಿ ಅಕ್ಟೋಬರ್ 12ನೇ ತಾರೀಕು ತನ್ನ ಅಧಿಸೂಚನೆ ಸಂ.ಗಿ-14014/7/2004-ಓ- ಮೂಲಕ ತಮಿಳು ಭಾಷೆಯನು ಶಾಸ್ತ್ರೀಯ ಭಾಷೆ ಎಂದು ಘೋಷಿಸಿತು. ಅಲ್ಲಿಯವರೆಗೆ ನಮ್ಮಲ್ಲಿ ಶಾಸ್ತ್ರೀಯ ಭಾಷೆ ಎಂಬ ಭಾಷಾ ವರ್ಗೀಕರಣವೊಂದು ಇರಲಿಲ್ಲ. ಸಂವಿಧಾನದಲ್ಲಿ ಘೋಷಿತವಾಗಿದ್ದ ಭಾಷಾ ವರ್ಗಗಳು ಎರಡು ಮಾತ್ರ. ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೂಚಿತ ಭಾಷೆಗಳು ಮತ್ತು ಅನುಸೂಚಿತ ಭಾಷೆಗಳು ಎಂಬಎರಡು ವರ್ಗಗಳನ್ನು ಹೆಸರಿಸಲಾಗಿದೆ. ಸದ್ಯಕ್ಕೆ ಸೂಚಿತ ಭಾಷೆಗಳು ಇಪ್ಪತ್ತೆರಡು ಇವೆ. ಅನುಸೂಚಿತ ಭಾಷೆಗಳು ಅಸಂಖ್ಯಾತ. ಶಾಸ್ತ್ರೀಯ ಭಾಷೆ ಎಂಬುದು ಈಗ ಮೂರನೆಯ ವರ್ಗವಾಗಿ ಹೊರಹೊಮ್ಮಿದೆ.
ಶಾಸ್ತ್ರೀಯ ಭಾಷೆ’ ಎಂಬುದನ್ನು ಇಂಗ್ಲೀಷಿನ ಕ್ಲಾಸಿಕಲ್ ಲ್ಯಾಂಗ್ವೇಜ್ ಎಂಬುದಕ್ಕೆ ಇಂದು ಸಂವಾದಿಯಾಗಿ ಬಳಸಲಾಗುತ್ತಿದೆ. ಶಾಸ್ತ್ರೀಯ ಭಾಷೆ ಪದ ಎಷ್ಟರ ಮಟ್ಟಿಗೆ ಸರಿ ಎಂಬ ವಾಗ್ವಾದವು ಈಗಾಗಲೇ ನಡೆದುಹೋಗಿದೆ. ಅದರ ಬದಲು ‘ಅಭಿಜಾತ’, ‘ಪಾರಂಪರಿಕ’ ಎಂದು ಬಳಸಬಹುದೆಂದು ಕೆಲವು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಶಾಸ್ತ್ರೀಯ ಭಾಷೆಗಳು ಎಂಬ ಪದ ರೂಢಿಗೆ ಬಂದದ್ದು ಆಕಸ್ಮಿಕ. ಕೇಂದ್ರ ಸರ್ಕಾರ ತಮಿಳು ಭಾಷೆಗೆ ಈ ಸ್ಥಾನಮಾನ ನೀಡಿದ ಸಂದರ್ಭದಲ್ಲಿ ಹಿಂದಿಭಾಷೆಯ್ಲ ಅಧಿಸೂಚನೆ ಹೊರಡಿಸಿತು. ಆಅಧಿಸೂಚನೆಯಲ್ಲಿ ಭಾರತ ಸರ್ಕಾರ ‘ಶಾಸ್ತ್ರೀಯ ಭಂಷ ವರ್ಗ’ವೊಂದನ್ನು ಸೃಷ್ಟಿಸುತ್ತಿದೆ ಎಂದು ಪ್ರಕಟಿಸಿತು. ಮಾಧ್ಯಮಗಳು ಅದನ್ನು ಹಾಗೇ ಪ್ರಕಟಿಸಿದವು. ಅಂದಿನಿಂದ ಕ್ಲಾಸಿಕಲ್ ಎಂಬುದಕ್ಕೆ ‘ಶಾಸ್ತ್ರೀಯ’ ಎಂಬ ಪದವೇರೂಢನಾಮವಾಗಿ ಬಳಕೆಯಾಗುತ್ತಿದೆ. ತಮಿಳರು ಅದಕ್ಕೆಸಂವಾದಿಯಾಗಿ ‘ಚೆಮ್ಮೊಳಿ’ ಎಂದು ಕರೆದುಕೊಂಡಿದ್ದಾರೆ.’ಚೆಮ್ಮೈ’ ಎಂದರೆ ಶ್ರೇಷ್ಠ, ನಯವಾದ, ನೇರವಾದ, ಅದ್ಭುತಎಂದೆಲ್ಲಾ ಅರ್ಥಗಳಿವೆ. ಕ್ಲಾಸಿಕಲ್ ಎನ್ನುವುದಕ್ಕೂ ಇದೇ ಅರ್ಥಗಳಿದ್ದರೂ, ಪುರಾತನವಾದದ್ದು ಎಂಬ ಇನ್ನೊಂದು ಅರ್ಥ ಅದಕ್ಕೆ ಸೇರಲೇಬೇಕು. ಆದ್ದರಿಂದ ಕ್ಲಾಸಿಕಲ್ ಗುಣಮೂಲತಃ ಪುರಾತನ, ಶ್ರೇಷ್ಠ ಮತ್ತು ಉನ್ನತವಾದದ್ದು.ಸದ್ಯಕ್ಕಂತೂ ‘ಶಾಸ್ತ್ರೀಯ’ ಎಂಬ ಪದ ಬಳಕೆಯಾಗಿಬೇರೊಂದು ಪದವನ್ನು ಅದರ ಸ್ಥಾನದಲ್ಲಿ ಪ್ರತಿಷ್ಠಿಸಲಾಗದಷ್ಟು ಅದು ಜನಪ್ರಿಯವಾಗಿದೆ.
ಒಂದು ಭಾಷೆಯನ್ನು ಶಾಸ್ತ್ರೀಯ ಭಾಷೆ ಎಂದು ಗುರುತಿಸಲು ಕೇಂದ್ರ ಸರ್ಕಾರ ನಾಲ್ಕು ಲಕ್ಷಣಗಳನ್ನುರೂಪಿಸಿದೆ, ಆ ಲಕ್ಷಣಗಳು ಹೀಗಿವೆ.
1. ಒಂದು ಭಾಷೆಯ ಪಠ್ಯಗಳು/ದಾಖಲಾದ ಇತಿಹಾಸಒಂದು ಸಾವಿರದ ಐನೂರರಿಂದ ಹಿಡಿದು ಎರಡುಸಾವಿರ ವಂಷಂಜಗಂಳಿಗೂ ಪುರಾತನವಾಗಿರಬೇಕು.
2. ಪುರಾತನ ಸಾಹಿತ್ಯ/ಪಠ್ಯಗಳು ತಲೆತಲೆಮಾರುಗಳಜನರಿಂದ ಅತ್ಯಂತ ಮೌಲಿಕ ಪರಂಪರೆಯೆಂದುಪರಿಗಣಿತವಾಗಿರಬೇಕು.
3. ಸಾಹಿತ್ಯಿಕ ಪರಂಪರೆ ಸ್ವೋಪಜ್ಞವಾಗಿದ್ದು ಯಾವುದೇ ಬೇರೊಂದು ಭಾಷೆಗೆ/ಸಮುದಾಯದಿಂದ ಸ್ವೀಕಾರವಾಗಿರ ಬಾರದು.
4. ಶಾಸ್ತ್ರೀಯ ಭಾಷೆಗೆ ಮತ್ತು ಸಾಹಿತ್ಯ ಪ್ರಸ್ತುತ ಭಾಷೆಗೆಮತ್ತು ಸಾಹಿತ್ಯಕ್ಕಿಂತ ಭಿನ್ನವಾಗಿರಬೇಕು ಅಥವಾಇತ್ತೀಚಿನ ಸ್ವರೂಪಕ್ಕಿಂತ ಅಥವಾ ಅದರಿಂದ ಬೆಳವಣಿಗೆ ಹೊಂದಿದ ಭಾಷೆಗೆಗಂಳಿಗಿಂತ ಬೇರೆಯದೇ ಎನ್ನಿಸುವ ಹಾಗಿರಬೇಕು. ಉದಾಹರಣೆಗೆ,ಲ್ಯಾಟಿನ್ಗಿಂತ ರೋಮನ್, ಸಂಸ್ಕೃತ ಪಾಳಿಗಿಂತಪ್ರಾಕೃತ ಮತ್ತು ಆಧುನಿಕ ಇಂಡೋ ಆರ್ಯನ್ಭಂಷಇಗಂಳು ಭಿನ್ನವಿರುವ ಹಾಗೆ.ಈ ಲಕ್ಷಣಗಳನ್ನು ನಿಗದಿಪಡಿಸಿದ್ದು ಆಗ ಕೇಂದ್ರಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಶ್ರೀ ಗೋಪಿಚಂದ್ನಾರಂಗ್ ಅವರ ಅಧ್ಯಕ್ಷತೆಯಲ್ಲಿ ನೇಮಕವಾದ ಪರಿಣಿತರಒಂದು ಸಮಿತಿ. ಪ್ರಥಮ ಅಧಿಸೂಚನೆ ಹೊರಬಿದ್ದಾಗಅದರಲ್ಲಿ ಒಂದು ಸಾವಿರ ವಂಷಂಜಗಂಳ ಇತಿಹಾಸ ಇರಬೇಕುಎಂದು ಪ್ರಕಟವಾಗಿತ್ತು. ಅದೊಂದು ಅಚಾತುರ್ಯ ಎಂದುಈಗ ಅದನ್ನು ಬಣ್ಣಿಸಲಾಗಿದೆ.ಕನರ್ಾಟಕದ ಸಾಹಿತಿಗಳು, ಬುದ್ಧಿ ಜೀವಿಗಳು, ಭಂಷಂಹೋರಾಟಗಾರರು ತಮ್ಮ ಹಕ್ಕೊತ್ತಾಯವನ್ನು ತಾಕರ್ಿಕವಾಗಿಮಂಡಿಸತೊಡಗಿದರು. ಹಿರಿಯ ಸಾಹಿತಿ ನಾಡೋಜ ದೇ.ಜವರೇಗೌಡರು ಉಪವಾಸ ಕುಳಿತು ಕನ್ನಡಕ್ಕೆ ಶಾಸ್ತ್ರೀಯಭಾಷೆಯ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿದರು. ಕೆಲವು ಉಗ್ರ ಸ್ವರೂಪದ ಸಂಘಟನೆಗಳು ರೈಲು ತಡೆ, ಕೇಂದ್ರ ಸರ್ಕಾರದ ಕಚೇರಿಗಳಿಗೆ ಮುತ್ತಿಗೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡವು. ಇಇಔಲ್ಲಾ ಪ್ರತಿಭಟನೆಗಳ ನಡುವೆದೊಡ್ಡದಾಗಿ ಎದ್ದು ಕಾಣುತ್ತಿದ್ದುದು ರಾಜಕೀಯ ಇಚ್ಚಾಶಕ್ತಿಯಕೊರತೆ. ಆಗ ಕೇಂದ್ರ ಸರ್ಕಾರದಲ್ಲಿ ರಾಜ್ಯ ಸಚಿವರಾಗಿದ್ದಎಂ.ವಿ. ರಾಜಶೇಖರನ್ ಮಾತ್ರ ಆಗೀಗ ಈ ವಿಷಯವನ್ನು ಪ್ರಸ್ತಾಪಿಸುತ್ತಿದ್ದುದನ್ನು ಬಿಟ್ಟರೆ ಬೇರೆ ಸಂಸದರು ಇದರಬಗ್ಗೆ ಪ್ರಸ್ತಾಪಿಸಿದ ಮಾಹಿತಿಗಳಿಲ್ಲ.
ಸಾರ್ವಜನಿಕ ಒತ್ತಡ ತೀವ್ರವಾದಾಗ ರಾಜ್ಯ ಸರ್ಕಾರಕನ್ನಡ ಭಾಷೆಗೆ ಶಾಸ್ತ್ರೀಯ ಭಂಷಂ ಸ್ಥಾನಮಾನ ಪಡೆಯಲುಇರುವ ಅರ್ಹತೆಗಳೇನು ಎಂದು ಒಂದು ವರದಿ ತಯಾರಿಸಿಕೇಂದ್ರ ಸರ್ಕಾರಕ್ಕೆ ಕಳಿಸಲು ಒಂದು ಸಮಿತಿಯನ್ನು ನೇಮಕಮಾಡಿತು. ಆ ಸಮಿತಿಯ ಸದಸ್ಯರುಗಳೆಂದರೆ, ಡಾ.ಎಂ.ಚಿದಾನಂದಮೂತರ್ಿ, ಪ್ರೊ.ಎಲ್.ಎನ್.ಶಇಂಷಂಗಿರಿರಂವ್,ಡಾ. ಎನ್.ಎಸ್. ತಾರಾನಾಥ್ ಡಾ. ಬಿ.ಬಿ. ರಾಜಪುರೋಹಿತ. ಈ ಸಮಿತಿ ನಾಲ್ಕು ತಿಂಗಳ ಕಾಲ ಮಾಹಿತಿಸಂಗ್ರಹಿಸಿ, ಕನ್ನಡ ಶಾಸ್ತ್ರೀಯ ಭಾಷೆಗೆ ಸ್ಥಾನಮಾನ ಪಡೆಯಲುಇರುವ ಅರ್ಹತೆಗಳಿಗೆ ಪೂರಕವಾದ ದಾಖಲೆಗಳನ್ನು ತಮ್ಮವರದಿಯ ಜೊತೆಗೆ ಲಗತ್ತಿಸಿ ಕನರ್ಾಟಕ ಸರ್ಕಾರಕ್ಕೆ ಒಪ್ಪಿಸಿತು.ಕನರ್ಾಟಕ ಸರ್ಕಾರ ಆ ವರದಿಯನ್ನು ಕೇಂದ್ರ ಸರ್ಕಾರಕ್ಕೆಕಳಿಸಿ ಕನ್ನಡ ಭಾಷೆಗೆಗಇ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಬೇಕೆಂದು ಆಗ್ರಹಿಸತೊಡಗಿತು. ಸಮಿತಿ ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆಯುವುದಕ್ಕೆಇರುವ ಅರ್ಹತೆಗಳನ್ನು ಕೆಳಕಂಡಂತೆ ಪಟ್ಟಿಮಾಡಿದೆ.
ಮಾನದಂಡ 1: ಒಂದು ಭಾಷೆಯ / ದಾಖಲಾದ ಇತಿಹಾಸ ಒಂದುಸಾವಿರ ವಂಷಂಜಗಂಳಿಗೂ ಪುರಾತನವಾಗಿರಬೇಕು. (ಆಗ ಹೊರಡಿಸಿದ ಅಧಿಸೂಚನೆಯಲ್ಲಿ ಒಂದು ಸಾವಿರ ವಂಷಂಜಗಂಳು ಎಂದು ಇತ್ತು,)ಸಮರ್ಥನೆ: ಕನ್ನಡ ಭಾಷೆಯ ಅತ್ಯಂತ ಪ್ರಾಚೀನ ಲಿಖಿತ ದಾಖಲೆಡಿ.ಎಲ್. ನರಸಿಂಹಾಚಾರ್ ಗುರುತಿಸಿರುವಂತೆ ಕ್ರಿ. ಪೂ,252 ರ ಅಶೋಕನಬ್ರಹ್ಮಗಿರಿ ಶಾಸನದ ‘ಇಸಿಲ’ ಎಂಬ ಕನ್ನಡ ಸ್ಥಳನಾಮ. ‘ಕನರ್ಾಟಕ’ ಹೆಸರು ಅದಕ್ಕಿಂತ ಹಿಂದಿನ ಸಂಸ್ಕೃತ ಮಹಾಭಾರತದಲ್ಲಿಯೇ ದಾಖಲಾಗಿದೆ. (ಇದರಕಾಲ ಅನಿದಿಜಷಂಔ) ಕ್ರಿ. ಶ. 1-2ನೇ ಶತಮಾನಗಳಿಗೆ ಸೇರಿದ ಆಕ್ಸಿರಿಂಚಿಸ್ಪಪೈರಸ್ ಎಂದೇ ಹೆಸರಾದ ಗ್ರೀಕ್ ಪ್ರಹಸನ ನಾಟಕದಲ್ಲಿ ಕನ್ನಡ ಭಾಷೆಯ ಸಂಭಂಷಂಣಇಗಂಳು ದಾಖಲಾಗಿವೆ. ಈ ಬಗ್ಗೆ ಗೋವಿಂದ ಪೈ, ಸ್ಟಾನ್ಫಡರ್್ಬಿ.ಸ್ಟೀವರ್, ತೀ.ನಂ. ಶ್ರೀಕಂಠಯ್ಯನವರು ದಾಖಲಿಸಿರುವಂತೆ ಕನ್ನಡ ಭಾಷೆಯಪ್ರಾಚೀನತೆ ಕ್ರಿಸ್ತ ಪೂವಂಜದಂಷಂಂಔ ಹಿಂದಕ್ಕೆ ಹೋಗುತ್ತಿದೆಯೆಂಬುದು ವಿವಾದಾತೀತ.
ಕನ್ನಡದ ಮೊದಲನೆಯ ಪೂರ್ಣ ಪ್ರಮಾಣದ ದಾಖಲೆ ಸುಮಾರುಕ್ರಿ.ಶ 450ರ ಹಲ್ಮಿಡಿ ಶಾಸನ. ಎಂ.ಎಚ್,ಕಂಇಷಂಗರಂವರು ಆ ಶಾಸನವು ಕ್ರಿ. ಶ.ಐದನೆಯ ಶತಮಾನದ್ದು ಎಂದು ಹೇಳಿರುವುದನ್ನು ಒಟ್ಟಾರೆ ಎಲ್ಲಾ ಶಇಚಿಂಷಂ~ವಿದ್ವಾಂಸರು, ಭಂಷಂವಿಜ್ಞಾನಿಗಳು ಒಪ್ಪಿದ್ದಾರೆ. ಸುಮಾರು ಕ್ರಿ. ಶ. 500ರಬಿಣಮಣಿ ಅಂತು ಭೋಗಿ ಎಂದು ಬಾದಾಮಿ ಚಾಲುಕ್ಯರ (9ನೇ. ಶ)ಕಾಲದಲ್ಲಿ ಸಾಹಿತ್ಯದ ಅಥವಾ ಕಾವ್ಯಭಾಷೆಯಗಿ ವಿಕಾಸಹೊಂದಿತು.ಕನ್ನಡವು ತಮಿಳಿನಂಷಇಔಂ ಪ್ರಾಚೀನವಾದುದು ಎಂಬುದನ್ನು ಡಾ.ಪಿ.ಎಸ್.ಸುಬ್ರಮಣ್ಯಂ ಸಂಚಿಷಂಔ\ಡಿಸಿದ್ದಾರೆ. ಆ ಭಂಷಂ ವಿಜ್ಞಾನಿಯ ಪ್ರಕಾರ ಮೂಲದ್ರಾವಿಡದಿಂದ ಮೊದಲು ದಕ್ಷಿಣ ದ್ರಾವಿಡ ಭಾಷೆಯ ಕವಲೊಡೆದು ಆ ಮೂಲದಕ್ಷಿಣ ದ್ರಾವಿಡ ಭಾಷೆಗೆಯಿಂದ ಕನ್ನಡ ಮತ್ತು ತಮಿಳುಗಳು ಬೇರೆಯಾದವು.ಅವು ಕ್ರಮೇಣ ಸ್ವತಂತ್ರ ಭಾಷೆಗೆಗಂಳಾದವು. ಅವರ ಕೃತಿ ‘ದ್ರವಿಡಿಯನ್ ವಬರ್್ಮಾಫರ್ಾಲಜಿ’ ನೀಡಿರುವ ದ್ರಾವಿಡ ಭಂಷಂ ವಂಶವೃಕ್ಷವು ಸಂಚಿಷಂಔ ಚಿತ್ರವನ್ನುನೀಡುತ್ತದೆ. ಪ್ರಾಚೀನತೆಯಲ್ಲಿ ಎರಡೂ ಸಮಾನ ದಾಖಲಿತ ಭಾಷೆಯಗಿತಮಿಳು ಕನ್ನಡಕ್ಕಿಂತ ಸ್ವಲ್ಪ ಹಿಂದಿನದಾಗಿರಬಹುದು ಅಷಇಔಂ.
ಮಾನದಂಡ 2: ಪುರಾತನ ಸಾಹಿತ್ಯ/ಪಠ್ಯಗಳು ತಲೆತಲೆಮಾರುಗಳಜನರಿಂದ ಅತ್ಯಂತ ಮೌಲಿಕ ಪರಂಪರೆಯೆಂದು ಪರಿಗಣಿತವಾಗಿರಬೇಕು.ಸಮರ್ಥನೆ: ಕನ್ನಡದ ಮೊತ್ತ ಮೊದಲ ಲಭ್ಯ ಕೃತಿ ‘ಕವಿರಾಜಮಾರ್ಗ’ವು(ಕಾಲ ಸು.ಕ್ರಿ.ಶ.850) ಅಲಂಕಾರ ಶಾಸ್ತ್ರದ ಕೃತಿಯಾಗಿದ್ದು ಅದರಲ್ಲಿ ಶ್ರೀವಿಜಯ,ಕವೀಶ್ವರ, ಲೋಕಪಾಲ ಇವರೇ ಮೊದಲಾದ ಗದ್ಯಪದ್ಯ ಕವಿಗಳನ್ನು ಹೆಸರಿಸಲಾಗಿದೆ. ಅನುಮಾನವೇ ಇಲ್ಲ ಕನ್ನಡ ಸಾಹಿತ್ಯವು ಒಂಬತ್ತನೇಶತಮಾನಕ್ಕಿಂತಲೂ ಹಿಂದಿನದಾಗಿದೆ.
ಆರನೇ ಶತಮಾನದಲ್ಲಿದ್ದನೆಂದು ಗೋವಿಂದ ಪೈ ತಕರ್ಿಸಿರುವ ‘ಚೂಡಾಮಣಿ’ಎಂಬ ಕನ್ನಡ ಕೃತಿಯ ಕತರ್ೃ ಶ್ರೀವರ್ಧದೇವ. ಇಡೀಭಾರತದಲ್ಲಿ ಸಾಹಿತ್ಯದ ಪ್ರಾಚೀನತೆ ದೃಷ್ಟಿಯಿಂದ ಕನ್ನಡವುಮಾತ್ರ ಸಂಸ್ಕೃತ, ಪ್ರಾಕೃತಗಳಿಗಿಂತ ಈಚಿನದಾಗಿದ್ದು , ಉಳಿದಭಾರತೀಯ ಸಾಹಿತ್ಯಗಳಿಗಿಂತ ಹಿಂದಿನ ಹಳೆಯ ಸಾಹಿತ್ಯವನ್ನು ಹೊಂದಿದೆ. (ಬಹುಶಃ ತಮಿಳನ್ನು ಹೊರತುಪಡಿಸಿ).ಒಂಬತ್ತನೇ ಶತಮಾನದಿಂದ ಮುಂದೆ ಕನ್ನಡ ಸಾಹಿತ್ಯದಸುವರ್ಣ ಯುಗವೇ ಆರಂಭಗೊಂಡು ಪಂಪ, ರನ್ನ, ಪೊನ್ನ,ನಾಗವರ್ಮ, ದುರ್ಗಸಿಂಹ, ನಯಸೇನ ಇಂತಹ ಮಹಾಕವಿಗಳನ್ನು ಸೃಷ್ಟಿಸಿತು. ಪಂಪನು ತನ್ನ ಆದಿಪುರಾಣವನ್ನುಕ್ರಿ,ಶ,941-2 ರಲ್ಲಿ ರಚಿಸಿರುವುದಾಗಿ ಖಚಿತ ತೇದಿನೀಡಿದ್ದಾನೆ. ಕನ್ನಡದಲ್ಲಿ ಶಾಸ್ತ್ರ ಅಥವಾ ವಿಜ್ಞಾನ -ವಾಙ್ಮಯಕ್ಕೆಒಂಬತ್ತನೇ ಶತಮಾನದಿಂದ ಮುಂದೆ ದೊಡ್ಡ ಚರಿತ್ರೆಯೇಇದೆ. ಸು.ಕ್ರಿ.ಶ. 1500ರಲ್ಲಿ ರಚಿತವಾದ ನಿಜಗುಣಶಿವಯೋಗಿಗಳ ‘ವಿವೇಕ ಚಿಂತಾಮಣಿ’ಯು 592 ವಿಷಯಗಳನ್ನು ತಿಳಿಸುತ್ತಿದ್ದು ಕನ್ನಡದ ಪ್ರಪ್ರಥಮ ವಿಶ್ವಕೋಶವೆನಿಸುತ್ತದೆ.ಪಂಪ, ರನ್ನ, ರಾಘವಾಂಕ, ಕುಮಾರವ್ಯಾಸ, ಚಾಮರಸ,ಲಕ್ಷ್ಮೀಶ ಇವರೇ ಮೊದಲಾದ ನೂರಾರು ಕವಿಗಳ ಕಾವ್ಯಗಳುಜನರ ಮನಸ್ಸನ್ನು ಉದ್ದಕ್ಕೂ ಸೂರೆಗೊಂಡಿವೆ.
ಮಾನದಂಡ 3: ಸಾಹಿತ್ಯ ಪರಂಪರೆಸ್ವೋಪಜ್ಞವಾಗಿದ್ದು ಯಾವುದೇ ಬೇರೊಂದು ಭಾಷೆಗೆ/ಸಮುದಾಯದಿಂದ ಸ್ವೀಕಾರವಾಗಿರಬಾರದು.ಸಮರ್ಥನೆ: ಕನ್ನಡ ಸಾಹಿತ್ಯದ ಶಇಚಿಂಷಂ~ ಪರಂಪರೆಹತ್ತನೇ ಶತಮಾನದ ಪಂಪನಿಂದ ಆರಂಭವಾಗಿದ್ದುತನ್ನದೇ ವೈಶಿಷಂಔಠಚಿಗಂಳನ್ನು ಹೊಂದಿದೆ. ಹಿಂದೂ, ಜೈನಸಂಪ್ರದಾಯಗಳ ಕತೆಗಳನ್ನಿಟ್ಟುಕೊಂಡು ಎರಡೆರಡುಮಹಾಕಾವ್ಯ ಬರೆಯುವುದು (ಉದಾ: ಪಂಪ, ಪೊನ್ನ,ರನ್ನ). ಸಾಂಪ್ರದಾಯಿಕ ಮತ್ತು ದೇಸೀ ಶೈಲಿಗಳ ಸಮನ್ವಯ(ಇದು ವೀರಶೈವ, ಬ್ರಾಹ್ಮಣ ಕವಿಗಳಿಗೂ ಅನ್ವಯವಾಗುತ್ತದೆ). ಕಾವ್ಯಗಳಲ್ಲಿ ವೃತ್ತ, ಕಂದ, ರಗಳೆ ಮುಂತಾದಸಂಸ್ಕೃತ ,ಪ್ರಾಕೃತ ಮೂಲದ ಛಂದೋರೂಪಗಳಲ್ಲದೆತ್ರಿಪದಿ ಇತ್ಯಾದಿ ದೇಸಿ ಛಂದೋರೂಪಗಳ ಬಳಕೆ ಇವುಗಮನಾರ್ಹ ಅಂಶಗಳು. ಪೌರಾಣಿಕ, ಐತಿಹಾಸಿಕವ್ಯಕ್ತಿಗಳನ್ನು ಸಮೀಕರಿಸಿ ಕಾವ್ಯರಚನೆ ಆಗಿದೆ, (ಉದಾ:ಅಜರ್ುನ, ಅರಿಕೇಸರಿ). ಪಂಪ ಮಹಾಕವಿಯಂತೂ ತನ್ನಪಂಪ ಭಾರತದಲ್ಲಿ ವ್ಯಾಸ ಭಾರತದ ಕತೆಯ ನೆಪದಲ್ಲಿತನ್ನ ಕಾಲದ (10 ಶ. ದ) ಕನರ್ಾಟಕ ಯುಗಧರ್ಮವನ್ನುನಿರೂಪಿಸಿದ್ದಾನೆ. ಅವನ ಕೃತಿಯ ಮೂಲಕ ಕನರ್ಾಟಕದಅಂದಿನ ಯುಗಧರ್ಮ ಅಭಿವ್ಯಕ್ತಗೊಂಡಿದೆ. ಅವನ ಕಾಲದಬದುಕಿನ ಮೌಲ್ಯಗಳು ಅವನ ನೆಪ ಮಾತ್ರದ ಭಾರತಕಥಾವಸ್ತುವಿನ ಮೂಲಕ ಸಾಕಾರಗೊಂಡಿದೆ.ಹನ್ನೆರಡನೆಯ ಶತಮಾನದ ಉತ್ತರಾರ್ಧದ ಕವಿಹರಿಹರನು ನೂರಿಪ್ಪತ್ತು ಶಿವಶರಣರ ಕತೆಗಳನ್ನು ಸಮಕಾಲೀನ ಭಾಷೆಯ್ಲ ರಗಳೆ ಛಂದಸ್ಸಿನಲ್ಲಿ ನಿರೂಪಿಸಿದ್ದಾನೆ.ಅವನ ಕಥಾ ವಸ್ತುವೊಂದು ದಲಿತ ವರ್ಗದ ಅಸ್ಪೃಶ್ಯಮಾದಾರ ಚೆನ್ನಯ್ಯನಿಗೆ ಸಂಬಂಧಿಸಿದ್ದು. ಅವನ ಕಥಾಶೈಲಿ,ಛಂದೋಪ್ರಕಾರ, ನಿರೂಪಣೆ ಸಂಪೂರ್ಣ ಸ್ವತಂತ್ರವಾದದ್ದು.ಅದೇ ಶತಮಾನದ ಮಧ್ಯಭಾಗದಲ್ಲಿ ನಡೆದ ವಚನಚಳುವಳಿಯು ಇಡೀ ವಿಶ್ವ ಸಾಹಿತ್ಯಕ್ಕೆ ವಿನೂತನ ಎನ್ನಬಹುದಾದ ಸಾಹಿತ್ಯ ಪ್ರಕಾರವನ್ನು ಕನ್ನಡಕ್ಕೆ ತಂದುಕೊಟ್ಟಿದೆ.ಮೇಲ್ವರ್ಗದವರು, ಸ್ತ್ರೀಯರು, ದಲಿತ ಸ್ತ್ರೀಯರು, ಮಂತ್ರಿ,ಭಂಡಾರಿಗಳಲ್ಲದೆ ದನಕಾಯುವವರು, ಅಂಬಿಗರು,ನೇಕಾರರು, ಚಪ್ಪಲಿ ಹೊಲಿಯುವವರು, ವೇಶ್ಯೆಯರುಸಾಹಿತ್ಯ ಸೃಷ್ಟಿ ಮಾಡಿದರು, ‘ವಚನ’ ಎಂಬುದು ಗದ್ಯವೂಅಲ್ಲದ ಪದ್ಯವೂ ಅಲ್ಲದ ಒಂದು ವಿಶಿಷಂಔ ಸಾಹಿತ್ಯ ಪ್ರಕಾರ.ಇದು ಯಾವುದೇ ರೀತಿಯಲ್ಲಿ ಇತರ ಭಾಷೆಗೆಗಂಳಸಾಹಿತ್ಯದಿಂದ ಪ್ರಭಾವಿತಗೊಳ್ಳದೆ ಜನಸಾಮಾನ್ಯರಿಂದಅವರ ಭಾಷೆಯ್ಲ ಅವರು ಹುಟ್ಟಿ ಬೆಳೆದ ಮಣ್ಣಿನಿಂದಮೂಡಿಬಂದುದಾಗಿದೆ. ಆ ಚಳುವಳಿಯ ನೇತಾರಬಸವಣ್ಣನವರು ಭಾರತ ಕಂಡ ಅತ್ಯಂತ ಶಇಚಿಂಷಂ~ ಸಮಾಜಸುಧಾರಕರಲ್ಲಿ ಒಬ್ಬರು.ಆ ಚಳುವಳಿಯ ಬಳಿಕ ಬಂದ ಹರಿದಾಸ ಸಾಹಿತ್ಯಚಳವಳಿಯು ಭಗವದ್ ಭಕ್ತಿಯನ್ನು ಹಾಡುಗಳ ಮೂಲಕಮನೆ ಮನೆಗೆ ಮುಟ್ಟಿಸಿತು. ದಾಕ್ಷಿಣಾತ್ಯ ಶೈಲಿಗೆ ಇನ್ನೊಂದುಹೆಸರಾದ ಕನರ್ಾಟಕ ಸಂಗೀತಕ್ಕೆ ಅವರೇ ಮೂಲ. ಅದೇಚಳುವಳಿಯ ಕೆಳವರ್ಗಕ್ಕೆ ಸೇರಿದ ಕನಕದಾಸರ ‘ರಾಮಧಾನ್ಯಚರಿತೆ’ಯು ಬತ್ತ, ರಾಗಿಗಳ ಮಧ್ಯೆ ನಡೆದ ಸಂಂಘಂಷಂಜದಂಕತೆಯಾದರೂ ಅದು ಶ್ರೀಮಂತ ಬಡವರ ಮಧ್ಯದ ವರ್ಗಸಂಂಘಂಷಂಜದಂ ಸಾಂಕೇತಿಕ ಕಾವ್ಯವಾಗಿದ್ದು ಆಂತಿಮವಾಗಿಬೀಸು ನೋಟ35ಶೋಷಿತರ ಗೆಲುವೇ ವಾಸ್ತವವೆಂಬುದನ್ನು ಸಾಂಕೇತಿಕವಾಗಿ ನಿರೂಪಿಸುತ್ತದೆ.ವಸ್ತುವಿನ ದೃಷ್ಟಿಯಿಂದ ಇದು ಭಾರತೀಯ ಸಾಹಿತ್ಯಕ್ಕೆ ಕನ್ನಡವು ಕೊಟ್ಟಿರುವಕೊಡುಗೆಯೂ ಹೌದು.
ಮಾನದಂಡ 4: ಶಾಸ್ತ್ರೀಯ ಭಾಷೆಗೆ ಮತ್ತು ಸಾಹಿತ್ಯ ಪ್ರಸ್ತುತ ಭಾಷೆಗೆಮತ್ತು ಸಾಹಿತ್ಯಕ್ಕಿಂತ ಭಿನ್ನವಾಗಿರಬೇಕು ಅಥವಾ ಇತ್ತೀಚಿನ ಸ್ವರೂಪಕ್ಕಿಂತ ಅಥವಾಇದರಿಂದ ಬೆಳವಣಿಗೆ ಹೊಂದಿದ ಭಾಷೆಗೆಗಂಳಿಗಿಂತ ಬೇರೆಯದೇ ಎನ್ನಿಸುವಹಾಗಿರಬೇಕು. (ಉದಾಹರಣೆಗೆ ಲ್ಯಾಟಿನ್ಗಿಂತ ರೋಮ್: ಸಂಸ್ಕೃತ-ಪಾಳಿಗಿಂತಪ್ರಾಕೃತ ಮತ್ತು ಇಂಡೊ ಆರ್ಯನ್ ಭಾಷೆಗೆಗಂಳು ಭಿನ್ನವಿರುವ ಹಾಗೆ)ಸಮರ್ಥನೆ: ಕನ್ನಡ ಭಾಷೆಗೆಗಇ ಕನಿಷಂ~ ಎರಡು ಸಾವಿರದ ಮುನ್ನೂರುವಂಷಂಜಗಂಳ ನಿರಂತರ ಇತಿಹಾಸವಿದ್ದು, ಅದರ ಚರಿತ್ರೆಯಲ್ಲಿ ಪೂರ್ವದ ಹಳೆಗನ್ನಡ,ನಡುಗನ್ನಡ, ಆಧುನಿಕ ಕನ್ನಡ ಎಂಬ ಪ್ರಭೇದಗಳನ್ನು ಗುರುತಿಸಬಹುದಾದರೂ,ಅದರ ಬೆಳವಣಿಗೆ ನಿರಂತರವಾಗಿದೆ. ಪೂರ್ವದ ಹಳಗನ್ನಡಕ್ಕೂ ಹೊಸಗನ್ನಡಕ್ಕೂವ್ಯತ್ಯಾಸವಿದ್ದರೂ ಒಳಗೆ ಇರುವ ಸಾಮ್ಯ ದಟ್ಟವಾದುದು.ಇಪ್ಪತ್ತನೇ ಶತಮಾನದಲ್ಲಿ ಸಮೃದ್ಧವಾಗಿ ವಿಕಾಸಗೊಂಡಿರುವ ಆಧುನಿಕಕನ್ನಡ ಸಾಹಿತ್ಯಕ್ಕೆ ಏಳು ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ.ಸಮಿತಿ ನೀಡಿದ ಈ ವರದಿಯನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆಕಳಿಸಿಕೊಟ್ಟಿತು. ಕೇಂದ್ರ ಸರ್ಕಾರ ಈ ವರದಿಯನ್ನು ಆಧರಿಸಿ ಯಾವುದೇ ನಿಧರ್ಾರಕೈಗೊಳ್ಳಲಿಲ್ಲ. ತಮಿಳಿಗೆ ಶಾಸ್ತ್ರೀಯ ಭಂಷಂ ಸ್ಥಾನಮಾನ ಘೋಷಿಸಿದ ಒಂದುವಂಷಂಜದಂ ನಂತರ ಸಂಸ್ಕೃತ ಭಾಷೆಗೆಗಇ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಘೋಷಿಸಿತು.ಆಗಲೂ ಕನ್ನಡದ ಪ್ರಸ್ತಾಪ ಬರಲಿಲ್ಲ. ಇತ್ತ ರಾಜ್ಯದಲ್ಲಿ ಬಲವಾದ ಒತ್ತಡಗಳುಬರತೊಡಗಿದವು. ಹಂಪ ನಾಗರಾಜಯ್ಯ, ಆರ್ವಿಯಸ್ ಸುಂದರಂ, ವಿವೇಕ ರೈಮುಂತಾದವರು ಕನ್ನಡ ಭಾಷೆಯ ಬಗೆಗೆ ಸಮರ್ಥನೆ ನೀಡುವಂತಹ ಲೇಖನಗಳನ್ನುಬರೆದರು. ಮತ್ತೆ ಸರ್ಕಾರ ನೇಮಿಸಿದ ಸಮಿತಿ ಎರಡನೆಯ ವರದಿಯೊಂದನ್ನು ಸರ್ಕಾರಕ್ಕೆ ಸಲ್ಲಿಸಿತು. ಹಿಂದೆ ನೀಡಿದ ಸಮರ್ಥನೆಗಳ ಜೊತೆಗೆ ಇನಂಷಂಂಔ ಪುರಾವೆಗಳನ್ನುಅದು ಒದಗಿಸಿತು. ಆ ಪುರಾವೆಗಳು ಹೀಗಿವೆ.ತಮಿಳು ನಾಡಿನ ಖ್ಯಾತ ಶಾಸನತಜ್ಞರಾದ ಐರಾವತಂ ಮಹಾದೇವನ್ಕ್ರಿ.ಪೂ. 2-1ನೇ ಶತಮಾನಗಳಿಗೆ ಸೇರಿದ ಶಾಸನಗಳಲ್ಲಿ ತಮಿಳು ಭಾಷೆಯಂಕನ್ನಡದಿಂದ ಹಲವು ಕನ್ನಡ ಪದಗಳನ್ನು ಸ್ವೀಕರಿಸಿರುವುದನ್ನು ತೋರಿಸಿದ್ದಾರೆ.ಅವರು ಸ್ವೀಕೃತವಾಗಿರುವುವೆಂದು ಹೇಳುವ ಕೆಲವು ಪದಗಳು ಹೀಗಿವೆ. ಕನ್ನಡದ’ಎರುಮಿನಾಟು’ ತಮಿಳಿನ ‘ಎರುಮೈನಾಟು’ ಆಗಿದೆ. ‘ಕವುಟಿ’ ತಮಿಳು ಪದಕನ್ನಡದ ‘ಗವುಡಿ>ಗೌಡಿ’ ಗೆ ಸಮನಾದುದು. ತಮಿಳು ಶಾಸನದಲ್ಲಿ ಸಿಗುವ’ತಾಯಿಯರ್’ ಎಂಬ ಗೌರವ ಸೂಚಕ ಪದ ಕನ್ನಡದಿಂದ ಸ್ವೀಕರಿಸಿದ್ದಾಗಿದೆ.ಈ ಸ್ವೀಕರಣೆಗಳು ಕ್ರಿ.ಪೂರ್ವದಲ್ಲಿ ನಡೆದಿವೆ ಎಂಬುದು ಮುಖ್ಯ. ಕ್ರಿ.ಶ. 115ರಟಾಲೆಮಿಯು ತನ್ನ ಪ್ರಾಚೀನ ಭಾರತದ ಭೂಗೋಳದ ವರ್ಣನೆಯಲ್ಲಿಒಠಜಠರಣಟಟಚಿ (ಮುದ್ಗಲ್) ಏಚಿಟಟರಜಡಿ (ಕಲ್ಕೇರಿ) ಇತ್ಯಾದಿ ಕನ್ನಡ ಸ್ಥಳನಾಮಗಳನ್ನು ಹೆಸರಿಸಿದ್ದಾನೆ.
ಕ್ರಿ.ಶ 2ನೇ ಶತಮಾನದಪ್ರಾಕೃತ ಕವಿ ಹಾಲನ ‘ಗಾಥಾ ಸಪ್ತಶತಿ’ ಯಲ್ಲಿ ತುಪ್ಪ,ಪೊಟ್ಟೆ(ಹೊಟ್ಟೆ) ಮುಂತಾದ ಕನ್ನಡ ಪದಗಳಿವೆ. ಕ್ರಿ.ಶ. ಎರಡನೆಯಶತಮಾನದವಳೆಂದು ಹೇಳಲಾದ ತಮಿಳು ಕವಯಿತ್ರಿಅವ್ವೈಯಾರ್ ಕೃತಿಯಲ್ಲಿ ‘ಕರುನಾಟಕ’ (ಕನ್ನಡಿಗರು)ಪದವಿದೆ. ಮೂಲದ್ರಾವಿಡದ ಕಂಠ್ಯ ವ್ಯಂಜನ ಪದದಾದಿಯ’ಕ್-‘ ಎಂಬುದು ತಮಿಳಿನ ಪದಗಳಲ್ಲಿ ಕೆಲವು ಪರಿಸರಗಳಲ್ಲಿ ಮೂಲ ‘ಕ್-‘ ವ್ಯಂಜನವನ್ನೇ ಉಳಿಸಿಕೊಂಡಿದೆಯೆಂಬುದು ಗಮನಾರ್ಹ. ದ್ರಾವಿಡ ಭಾಷೆಗೆಗಂಳ ಕೆಲವುಮೂಲ ಲಕ್ಷಣಗಳನ್ನು ತಮಿಳು ಕಳೆದುಕೊಂಡಿದ್ದರೆ ಕನ್ನಡಉಳಿಸಿಕೊಂಡಿದೆ.ಕನರ್ಾಟಕ ಮತ್ತು ಆಂಧ್ರ ಪ್ರದೇಶಗಳಿಂದ ಶಾಸ್ತ್ರೀಯಸ್ಥಾನಮಾನಕ್ಕೆ ಒತ್ತಡ ಬರತೊಡಗಿದ್ದರಿಂದ ಕೇಂದ್ರ ಸರ್ಕಾರಆ ಮನವಿಯನ್ನು ಪರಿಶೀಲಿಸಲು ಒಂದು ಸಮಿತಿಯನ್ನು01-11-2004 ರಂದು ನೇಮಿಸಿತು. ಆ ಸಮಿತಿಯಲ್ಲಿಅನ್ವಿತಾ ಅಬ್ಬಿ. ಕೆ.ವಿ.ಸುಬ್ಬರಾವ್, ಉದಯನಾರಾಯಣಸಿಂಗ್, ಬಿ.ಎಸ್. ಪಟ್ನಾಯಕ್, ಭದ್ರಿರಾಜು ಕಂಇಷಂಗ ಮೂತರ್ಿಸದಸ್ಯರಾಗಿದ್ದರು. ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರುಸಮಿತಿಯ ಅಧ್ಯಕ್ಷರು. ಆಶ್ಚರ್ಯ ಎಂದರೆ 2004ರಲ್ಲಿನೇಮಕಗೊಂಡ ಈ ಸಮಿತಿಯ ಸಭೆಯನ್ನು ಸಚಿವಾಲಯ2008ರವರೆಗೆ ಕರೆಯಲೇ ಇಲ್ಲ. ಇದೊಂದು ರೀತಿಯವಿಳಂಬ ನೀತಿಯ ಧೋರಣೆಯಾಗಿತ್ತು. ಇತ್ತ ಕನರ್ಾಟಕದಲ್ಲಿ ಪ್ರತಿಭಟನೆಗಳು ನಡೆಯುತ್ತಲೇ ಇದ್ದವು. ದಿನದಿಂದದಿನಕ್ಕೆ ಒತ್ತಡ ಹೆಚ್ಚುತ್ತಲೇ ಇತ್ತು. ಕನರ್ಾಟಕದ ಮುಖ್ಯಮಂತ್ರಿಗಳು ಗಣ್ಯರ ಒಂದು ನಿಯೋಗವನ್ನೇ ದೆಹಲಿಗೆ ಕೊಂಡೊಯ್ದು ರಂಷಂಔ\ತಿಗಳಿಗೆ, ಪ್ರಧಾನಮಂತ್ರಿಗಳಿಗೆಪರಿಸ್ಥಿತಿಯ ಅರಿವು ಮಾಡಿಕೊಟ್ಟರು. ಆಗ ಕೇಂದ್ರ ಸರ್ಕಾರ ಸಮಿತಿಯ ಸಭೆ ಕರೆಯಲು ಮುಂದಾಯಿತು.ಆಶ್ವರ್ಯವೆಂದರೆ ಸಮಿತಿ ನೇಮಕವಾದಾಗ ಸಮಿತಿಯಲ್ಲಿ ಇಲ್ಲದ ತಮಿಳುನಾಡಿನ ಕುಳಂದೈಸಾಮಿ ಮತ್ತು ಕಣ್ಣನ್ಎಂಬ ಇಬ್ಬರು ಕಡೇಗಳಿಗೆಯಲ್ಲಿ ಸಮಿತಿಗೆ ಸೇರಿದರು.ಇವರಿಬ್ಬರನ್ನು ಸಮಿತಿಗೆ ಸೇರಿಸಿದ ಉದ್ದೇಶವೇ ಸಮಿತಿಯಸಭೆ ನಡೆಯದ ಹಾಗೆ ನೋಡಿಕೊಳ್ಳುವುದು ಅಥವಾ ಈ ಭಾಷೆಗೆಗಂಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡುವುದಕ್ಕೆತೊಡರುಗಾಲಾಗಿ ಇರುವುದು. ಸಮಿತಿಯ ಸದಸ್ಯರಾಗಿದ್ದ ಉದಯನಾರಾಯಣ ಸಿಂಗ್, ಭದ್ರಿರಾಜು ಕಂಇಷಂಗಮೂತರ್ಿ, ಕೆ.ವಿ.ಸುಬ್ಬರಾವ್ ಮುಂತಾದವರು ಸಮಿತಿಯ ಸಭೆಯಲ್ಲಿತಮ್ಮ ವಾದಗಳನ್ನು ಅತ್ಯಂತ ಸಮರ್ಥವಾಗಿ ಮಂಡಿಸಿದರು.ಅದೇ ಸಮಯಕ್ಕೆ ಕನ್ನಡದ ಖ್ಯಾತ ಇತಿಹಾಸ ತಜ್ಞರಾದ ಷಂಡಂಕಂಜರಂ ಶೆಟ್ಟರ್ ಅವರ ಮೌಲಿಕ ಸಂಶೋಧನಾ ಕೃತಿ ‘ಶಂಗಂತಮಿಳಗಂ;, ‘ಕನ್ನಡ ನಾಡು ನುಡಿ’ ಪ್ರಕಟವಾಗಿ ತನ್ನ ಹೊಸಸಂಶೋಧನಾ ವಿಷಯಗಂಳಿಂದಾಗಿ ವಿದ್ವತ್ವಲಯದಲ್ಲಿ ವ್ಯಾಪಕವಾಗಿ ಚಚರ್ೆಯಾಗುತ್ತಿತ್ತು. ಶೆಟ್ಟರ್ ಅವರು ಉದಾಹರಣಾ ಸಹಿತವಾಗಿ ಕನ್ನಡದ ಪ್ರಾಚೀನತೆಯನ್ನು ಸಮಥರ್ಿಸುವ ಹಾಗೂ ತಮಿಳಿನ ಕೆಲವು ಸಮರ್ಥನೆಗಳನ್ನು ಹುಸಿಯಾಗಿಸುವ ಮಹತ್ವದ ಕೆಲವು ಅಂಶಗಳನ್ನು ಈ ಕೃತಿಯಲ್ಲಿತೆರೆದಿಟ್ಟಿದ್ದರು. ತಮಿಳರು ಪ್ರಸ್ತಾಪಿಸುವ ಶಂಗಂ ಸಾಹಿತ್ಯವನ್ನುಸೃಷ್ಟಿಸಿದವರು ಬರೀ ತಮಿಳು ಭಂಷಂ ಪ್ರದೇಶಕ್ಕೆ ಸೇರಿದವರಾಗಿರಲಿಲ್ಲ. ಅವರಲ್ಲಿ ಕೆಲವರಾದರೂ ಕನ್ನಡಮಾತಾಡುತ್ತಿದ್ದ ಪ್ರದೇಶಗಳಿಂದ ಹೋಗಿದ್ದರೆಂದು ಅವರುಆಧಾರ ಸಹಿತ ನಿರೂಪಿಸಿದ್ದಾರೆ. ಅಲ್ಲದೆ ತಮಿಳಿಗೆ ಲಿಪಿಬಹಳ ನಿಧಾನವಾಗಿ ಪ್ರಾಪ್ತವಾಯಿತೆಂದೂ ಅಲ್ಲಿಯವರೆಗೆಅವರ ಸಂಗಂ ಸಾಹಿತ್ಯ ಬಾಯಿಮಾತಿನ ಸಾಹಿತ್ಯವಾಗಿತ್ತೆಂಬುದು ಇನ್ನೊಂದು ಅವರ ತೀಮರ್ಾನ.ಹೀಗೆ ನಿಧಾನವಾಗಿ ಹೊಸ ಹೊಸ ಸಂಶೋಧನಾ ಚಿಂತನೆಗಳು ನಿಧಾನವಾಗಿ ಹೊರಬರತೊಡಗಿದವು. ಕಡೆಗೂ ಸಮಿತಿ ಕನ್ನಡಮತ್ತು ತೆಲುಗು ಭಾಷೆಗೆಗಂಳಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನನೀಡಬಹುದು ಎಂದು ಶಿಫಾರಸು ಮಾಡಿತು. ಇದರಿಂದತಮಿಳು ಭಾಷೆಯ ಏಕಶಿಲಾಮೂತರ್ಿ ಭಂಜನೆಯಾದದ್ದಂತೂನಿಜ. ಆ ಸಮಿತಿಯಲ್ಲಿದ್ದ ಕುಳಂದೈಸಾಮಿ ಸಮಿತಿ ಕನ್ನಡತೆಲುಗಿಗೆ ಈ ಸ್ಥಾನಮಾನ ನೀಡದಂತೆ ತಡೆಯಲು ಹರಸಾಹಸಪಟ್ಟರೂ ತಡೆಯಲು ಸಾಧ್ಯವಾಗಲಿಲ್ಲ. ಕಡೆಗೆ ಅತ್ಯಂತನಿರಾಶೆಯಿಂದ ಕೊಡುವುದಂತೂ ಕೊಡುತ್ತೀರಿ. ಆ ಎರಡೂಭಾಷೆಗೆಗಂಳಿಗೆ ತಮಿಳಿಗಿಂತ ಕಡಿಮೆ ಸೌಲಭ್ಯ ನೀಡಿ ಎಂದರುಎಂದು ಸಮಿತಿಯ ಸದಸ್ಯರೊಬ್ಬರು ನನಗೆ ತಿಳಿಸಿದ್ದರು.ಅಂತೂ 2008ರ ಅಕ್ಟೋಬರ್ 31ರಂದು ಕೇಂದ್ರ ಸರ್ಕಾರವು ಒಲ್ಲದ ಮನಸ್ಸಿನಿಂದ ಕನ್ನಡವನ್ನು ‘ ಶಾಸ್ತ್ರೀಯಭಾಷೆಗೆ’ ಎಂದು ಘೋಷಿಸಿತು.
ಇದು ಕನ್ನಡ ರಾಜ್ಯೋತ್ಸವಕ್ಕೆಬಂಪರ್ ಕೊಡುಗೆ ನೀಡುವಂತೆ ತರಾತುರಿಯಲ್ಲಿಘಇಂಂಷಂಣಇಂಂಂಗಿತಂಂಗ. ಅಷಂಂಔ ಹೊತ್ತಿಗಾಗಲೇ ಆರ್.ಗಾಂಧಿಎಂಬ ತಮಿಳು ನಾಡಿನ ವಕೀಲರೊಬ್ಬರು ಮದ್ರಾಸ್ಹೈಕೋಟರ್ಿನಲ್ಲಿ ಮೊಕದ್ದಮೆ ಯೊಂದನ್ನು ಹಾಕಿದ್ದರು.ಬೀಸು ನೋಟ37ಅವರ ಪ್ರಕಾರ ಕೇಂದ್ರ ಸರ್ಕಾರ ಕನ್ನಡ ಮತ್ತು ತೆಲುಗಿಗೆ ಶಾಸ್ತ್ರೀಯ ಸ್ಥಾನಮಾನನೀಡುವುದರ ಬಗ್ಗೆ ಪರಿಶೀಲಿಸಿ ವರದಿ ನೀಡಲು ನೇಮಿಸಿರುವ ಸಮಿತಿಸಿಂಧುವಾದುದಲ್ಲ. ಅಲ್ಲಿಯ ಸದಸ್ಯರಿಗೆ ಅಷಇಂಔಂದಂಂ ಅರ್ಹತೆ ಇಲ್ಲ. ಸಮಿತಿಯಲ್ಲಿಇರುವವರಲ್ಲಿ ಇಬ್ಬರು ಕನರ್ಾಟಕದವರು, ಇಬ್ಬರು ಆಂಧ್ರದವರು. ಅವರುಗಳುಆಯಾ ರಾಜ್ಯಗಳ ಒತ್ತಡ ನಿವಾರಿಸಿಕೊಂಡು ನಿಷಂಚಿಕಂಜ\ಾತವಾದ ವರದಿ ನೀಡಲುಸಾಧ್ಯವಿಲ್ಲ. ತಮಿಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡುವಾಗ ತಮಿಳಿನ ಸದಸ್ಯರಾರೂಇರಲಿಲ್ಲ. ತಮಿಳಿಗೆ ಅದರ ನಿಜವಾದ ಅರ್ಹತೆಯಮೇಲೆ ಈ ಸ್ಥಾನ ದೊರಕಿದೆ.ಆದ್ದರಿಂದ ಈಗಿನ ಸಮಿತಿಯನ್ನು ತೆಗೆದುಹಾಕಿ ಹೈಕೋಟರ್ಿನ ನಿವೃತ್ತನ್ಯಾಯಾಧೀಶರು ಅಥವಾ ಸುಪ್ರೀಂ ಕೋಟರ್ಿನ ನಿವೃತ್ತ ನ್ಯಾಯಾಧೀಶರಅಧ್ಯಕ್ಷತೆಯಲ್ಲಿ ಸಮಿತಿ ರಚಿಸಬೇಕು. ಅಲ್ಲಿಯವರೆಗೆ ಈ ಭಾಷೆಗೆಗಂಳಿಗೆ ಶಾಸ್ತ್ರೀಯಸ್ಥಾನಮಾನ ನೀಡದಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಬೇಕು.ಗಾಂಧಿಯ ಈ ವಾದದಲ್ಲಿ ಹುರುಳಿಲ್ಲ. ಮೊದಲಿಗೆ ಆ ಸಮಿತಿಯಸದಸ್ಯರೆಲ್ಲರೂ ರಾಷ್ಟ್ರೀಯ, ಅಂತಾರಾಷ್ಟ್ರೀಯ ಖ್ಯಾತಿಯ ವಿದ್ವಾಂಸರು. ಅವರುಹೇಳುವ ಬಿ.ಎನ್. ಪಟ್ನಾಯಕ್, ಉದಯನಾರಾಯಣ ಸಿಂಗ್ ಕನರ್ಾಟಕದವರಲ್ಲ.ಭಧ್ರಿರಾಜು ಕಂಇಷಂಗ ಮೂತರ್ಿ ಮತ್ತು ಸುಬ್ಬಾರಾವ್ ಅಂತಾರಾಷ್ಟ್ರೀಯ ಖ್ಯಾತಿಯವಿದ್ವಾಂಸರು. ತಮಿಳಿಗೆ ಶಾಸ್ತ್ರೀಯ ಭಾಷೆಗೆ ನೀಡುವಾಗ ತಮಿಳಿನ ಸದಸ್ಯರಿರಲ್ಲಿಲ್ಲನಿಜ. ಆದರೆ ತಮಿಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡುವುದರ ಬಗ್ಗೆ ಪರಿಣಿತರಸಮಿತಿ ನೇಮಿಸುವ ಮೊದಲೇ ಯು.ಪಿ.ಎ. ರೂಪಿಸಿದ ರಾಷ್ಟ್ರೀಯ ಕನಿಷಂ~ಸಾಮಾನ್ಯ ಕಾರ್ಯಕ್ರಮದಲ್ಲಿ ತಮಿಳು ಭಾಷೆಯ’್ನು ಕ್ಲಾಸಿಕಲ್ ಭಾಷೆಯಗಿಘೋಷಿಸುವುದನ್ನು ಒಂದು ಕಾರ್ಯಕ್ರಮವೆಂದು ಸೇರಿಸಲಾಗಿತ್ತು. ಆ ನಂತರವೇಸಮಿತಿಯನ್ನು ರಚಿಸಲಾಯಿತು. ಮದ್ರಾಸ್ ಹೈಕೋಟರ್್ ಕನ್ನಡಕ್ಕೆ ಶಾಸ್ತ್ರೀಯ ಭಂಷಂ ಸ್ಥಾನ ನೀಡದಂತೆ ಕೇಂದ್ರ ಸರ್ಕಾರಕ್ಕೆ ಆದೇಶವನ್ನೇನೂ ನೀಡಿಲ್ಲ. ಆದರೆಮೊಕದ್ದಮೆಯನ್ನು ದಾಖಲು ಮಾಡಿಕೊಂಡಿದೆ.ಕೇಂದ್ರ ಸರ್ಕಾರ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಘೋಷಿಸುವ ಮುನ್ನಮೊಕದ್ದಮೆಯನ್ನು ತೆರವು ಮಾಡಿಸಬಹುದಿತ್ತು. ಆದರೆ ತಮಿಳು ನಾಡಿನ ಕೆಂಗಣ್ಣಿಗೆಬೀಳುವುದಕ್ಕೆ ಅದಕ್ಕೆ ಇಷಂಔ ಇಲ್ಲ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಘೋಷಿಸಿರುವುದುಹೇಗಿದೆಯೆಂದರೆ, ಬತ್ತಾಸು ಕೊಡುತ್ತೇವೆಂದು ಹೇಳಿ ಬರೀ ಕಡ್ಡಿ ಕೊಟ್ಟು ಸಕ್ಕರೆಅಚ್ಚನ್ನು ತಾವೇ ಇಟ್ಟುಕೊಂಡಂತೆ ಆಗಿದೆ. ಯಾಕೆಂದರೆ ಶಾಸ್ತ್ರೀಯ ಸ್ಥಾನಮಾನಘೋಷಿಸಿಯಾದ ಮೇಲೆ ಅದನ್ನು ಅನಂಂಷಂ~’ಗೊಳಿಸುವುದಕ್ಕೆ ಬೇಕಾದ ಯಾವಕ್ರಮವನ್ನೂ ಕೇಂದ್ರ ಸರ್ಕಾರ ಕೈಗೊಂಡಿಲ್ಲ. 2010ರ ಫೆಬ್ರವರಿ ತಿಂಗಳಿನಲ್ಲಿಕನ್ನಡ ಪ್ರಾಧಿಕಾರದ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರುರವರು ಸಾಹಿತಿಗಳ,ಕಲಾವಿದರ, ಕಾಮರ್ಿಕ ಮುಖಂಡರ, ಸಾಮಾಜಿಕ ಕಾರ್ಯಕರ್ತರ ಒಂದುನಿಯೋಗವನ್ನು ದೆಹಲಿಗೆ ಕರೆದೊಯ್ದರು. ಕನರ್ಾಟಕಕ್ಕೆ ಸಂಬಂಧಿಸಿದ ಅನೇಕವಿಷಯಗಂಳಿಗೆ ಸಂಬಂಧಿಸಿದಂತೆ ಕನರ್ಾಟಕದ ಸಂಸದರನ್ನು ಭೇಟಿ ಮಾಡಿಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದು ಈ ನಿಯೋಗದ ಉದ್ದೇಶವಾಗಿತ್ತು. ಸಮಸ್ಯೆಗಳಲ್ಲಿ ಶಾಸ್ತ್ರೀಯ ಭಾಷೆಯಂ ಅಡಕವಾಗಿತ್ತು, ಕಡೆಗೂ ಕೇಂದ್ರ ಕಾನೂನು ಸಚಿವಾಲಯ ಚೆನ್ನೈ ಹೈಕೋಟರ್್ನಲ್ಲಿ ಮೊಕದ್ದಮೆಇದ್ದರೂ ಕಾರ್ಯಕ್ರಮ ಅನಂಂಷಂ~’ಗೊಳಿಸಲುನಿರ್ಬಂಧವಿಲ್ಲ ಎಂದು ಹೇಳಿದ ಮೇಲೆ ಮಾನವಸಂಪನ್ಮೂಲ ಸಚಿವಾಲಯ ಮೈಸೂರಿನ ಭಾರತೀಯಭಂಷಂಸಂಸ್ಥಾನಕ್ಕೆ ಕಾರ್ಯಕ್ರಮ ಅನಂಂಷಂ~’ಗೊಳಿಸಲುಆದೇಶ ನೀಡಿದೆ. ಅದಕ್ಕೆ ಬೇಕಾದ ಹಣ ನೀಡದೇಇರುವುದರಿಂದ ಅಧಿಕೃತವಾಗಿ ಇನ್ನೂ ಕಾರ್ಯಕ್ರಮಪ್ರಾರಂಭವಾಗಿಲ್ಲ.
ಕನ್ನಡ ಭಾಷೆಗೆಗಇ ಶಾಸ್ತ್ರೀಯ ಸ್ಥಾನಮಾನ ಲಭ್ಯವಾದರೆಸಿಗುವ ಲಾಭಗಳೇನು? ಇದು ಬಹಳ ಜನರ ಪ್ರಶ್ನೆ.ಮೊದಲಿಗೆ ಇದೊಂದು ಗೌರವದ ಸಂಗತಿ. ನಮ್ಮಪೂವರ್ಿಕರು ಹುಟ್ಟುಹಾಕಿದ ಈ ಕನ್ನಡ ಜಗತ್ತಿಗೆ ಸಂದಗೌರವ ಇದು ಎಂದು ತಿಳಿಯಬೇಕಾಗಿದೆ. ನಮ್ಮ ಪ್ರಾಚೀನಜಗತ್ತು ಸೃಷ್ಟಿಸಿದ ಸಂಸ್ಕೃತಿ, ಸಾಹಿತ್ಯ, ಜ್ಞಾನ ಪರಂಪರೆಮತ್ತು ಮೌಲ್ಯಗಳು ಅತಂಂಚಿತಂಠಷಂಔವಾದವು ಎಂಬ ಅಧಿಕೃತಗೌರವ ಇದರಿಂದ ಲಭ್ಯವಾಗಿದೆ. ಜಗತ್ತಿನ ಕೆಲವೇಭಾಷೆಗೆಗಂಳು ಇಂಥ ಗೌರವಕ್ಕೆ ಪಾತ್ರವಾಗಿದೆ. ಅವುಗಳಲ್ಲಿಈಗ ಕನ್ನಡವೂ ಒಂದು. ಇದು ನಮಗೆಲ್ಲ ದೊರೆತಭಾವನಾತ್ಮಕ ಲಾಭ.ಆಥರ್ಿಕವಾಗಿಯೂ ಕೇಂದ್ರ ಸರ್ಕಾರದಿಂದ ಶಾಸ್ತ್ರೀಯಭಾಷೆಯ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಸಂಕಂಷಂಂಔ ಹಣಲಭ್ಯವಾಗಲಿದೆ. ಕೇಂದ್ರ ಸರ್ಕಾರ ಇಡೀ ಯೋಜನೆಯನ್ನು’ಕೇಂದ್ರ ಯೋಜನೆಯಡಿ’ ಅನಂಂಷಂ~’ಗೊಳಿಸಲಿದೆ. ಅಂದರೆಕೇಂದ್ರ ಸರ್ಕಾರವೇ ಸ್ಥಾಪಿಸಲಿರುವ ಒಂದು ಸ್ವಾಯತ್ತಸಂಸ್ಥೆ ಅಥವಾ ಕೇಂದ್ರ ಸರ್ಕಾರದ ಒಂದು ಭಾಗವಾಗಿರುವಭಂಷಂ ಕೇಂದ್ರದಡಿಯಲ್ಲಿ ಈ ಯೋಜನೆಯನ್ನುಪ್ರಾರಂಭಿಸಬಹುದು. ಅದಕ್ಕಾಗಿ ‘ಕನ್ನಡ ಶಾಸ್ತ್ರೀಯಭಾಷೆಯ ಉನ್ನತ ಅಧ್ಯಯನ ಕೇಂದ್ರ’ ವನ್ನು ಸ್ಥಾಪಿಸಲಿದೆ.ಈ ಉದ್ದೇಶಿತ ಸಂಸ್ಥೆಗೆ ಮಾರ್ಗದರ್ಶನ ನೀಡಲುಒಂದು ಶಾಸ್ತ್ರೀಯ ಭಂಷಂ ಅಭಿವೃದ್ಧಿ ಮಂಡಳಿಯನ್ನುಸ್ಥಾಪಿಸಲಿದೆ. ಅದಕ್ಕೆ ಕನ್ನಡದ ಪ್ರತಿಷ್ಠಿತ ವಿದ್ವಾಂಸರೊಬ್ಬರನ್ನು ಅಧ್ಯಕ್ಷರನ್ನಾಗಿ ಕೇಂದ್ರ ಸರ್ಕಾರವೇ ನಾಮನಿದರ್ೇಶನಮಾಡುತ್ತದೆ. ಕನ್ನಡದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯಕೆಲಸ ಮಾಡಿದ ಹತ್ತು ಜನ ವಿದ್ವಾಂಸರನ್ನು ಸದಸ್ಯರನ್ನಾಗಿನೇಮಿಸಲಾಗುತ್ತದೆ. ಕೇಂದ್ರ ಸರ್ಕಾರ ತಮಿಳಿಗೆ ಶಾಸ್ತ್ರೀಯಭಾಷೆಯ ಸ್ಥಾನಮಾನ ನೀಡಿ ದೊರಕಲಿರುವ ಕೆಲವುಲಾಭಗಳನ್ನು ಪಟ್ಟಿಮಾಡಿದೆ. ಅದನ್ನು ಕನ್ನಡಕ್ಕೆ ಅನ್ವಯಿಸಿಹೀಗೆ ಹೇಳಬಹುದು.
1. ಪ್ರತಿವಂಷಂಜ ಒಂದು ಅಂತಾರಾಷ್ಟ್ರೀಯ ಪ್ರಶಸ್ತಿ ನೀಡುವುದು. ಈ ಪ್ರಶಸ್ತಿಯನ್ನು ಕನ್ನಡ ಶಾಸ್ತ್ರೀಯ ಭಾಷೆಯಬಗ್ಗೆ ಗಣನೀಯ ಕೆಲಸ ಮಾಡಿರುವ ವಿದ್ವಾಂಸರಿಗೆನೀಡಲಾಗುತ್ತದೆ. ಮೊತ್ತ ಐದು ಲಕ್ಷ ರೂಪಾಯಿಗಳು.2. ಒಂದು ರಂಷಂಔಛಿಮಟ್ಟದ ಪ್ರಶಸಿ.್ತ ಮೊತ್ತ ಐದುಲಕ್ಷರೂಪಾಯಿಗಳು.3. ಐದು ಜನ ತರುಣ ವಿದ್ವಾಂಸರುಗಳಿಗೆ ( ನಲವತ್ತುವಂಷಂಜಕಿಂತಂ ಕಡಿಮೆ) ಪ್ರತಿ ವಂಷಂಜ ಪ್ರಶಸ್ತಿ. ಪ್ರತಿ ಪ್ರಶಸ್ತಿಯಮೊತ್ತ ಒಂದು ಲಕ್ಷರೂಪಾಯಿ.4. ಕನ್ನಡ ಶಾಸ್ತ್ರೀಯ ಭಾಷೆಯ ಅಧ್ಯಯನಕ್ಕೆ ಒಂದುಉನ್ನತ ಅಧ್ಯಯನ ಕೇಂದ್ರ ತೆರೆಯುವುದು.5. ಶಾಸ್ತ್ರೀಯ ಕನ್ನಡದ ಪಠ್ಯಗಳನ್ನು ಭಾರತೀಯ ಹಾಗೂಬೇರೆ ಬೇರೆ ದೇಶಗಳ ಭಾಷೆಗೆಗಂಳಿಗೆ ಅನುವಾದಿಸುವುದಕ್ಕೆಆಥರ್ಿಕ ಸೌಲಭ್ಯ.6. ಶಾಸ್ತ್ರೀಯ ಕನ್ನಡದ ವಿವಿಧ ವಿಷಯಗಂಳಿಗೆಸಂಬಂಧಿಸಿದಂತೆ ಸಂಶೋಧನೆ ನಡೆಸಲು ಆಥರ್ಿಕಸೌಲಭ್ಯ.7. ಆಯ್ದ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಕನ್ನಡಅಧ್ಯಯನ ಪೀಠ ತೆರೆಯಲು ಅವಕಾಶ.8. ಹಳೆಗನ್ನಡ ಪಠ್ಯಗಳನ್ನು ಸಂಪಾದಿಸಿ ಪ್ರಕಟಿಸುವಅವಕಾಶ.9. ಈ ಪಠ್ಯಗಳನ್ನು ಆಧುನಿಕ ತಂತ್ರಜ್ಞಾನಕ್ಕೆ ಅಳವಡಿಸುವುದು.10. ಕನ್ನಡದ ಜ್ಞಾತಿ ಭಾಷೆಗೆಗಂಳ ತೌಲನಿಕ ಅಧ್ಯಯನ.ಹೀಗೆ ಅವಕಾಶಗಳು ವಿಪುಲವಾಗಿವೆ. ಯೋಜನೆಯನ್ನು ತಯಾರಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ಆಥರ್ಿಕಅನುದಾನ ಪಡೆಯುವ ಜವಾಬ್ದಾರಿ ಉನ್ನತ ಅಧ್ಯಯನಕೇಂದ್ರದ್ದಾಗಿರುತ್ತದೆ. ಈಗಿರುವ ಪ್ರಶ್ನೆಯೆಂದರೆ ಈಯೋಜನೆ ಎಂದು ಕಾರ್ಯಗತವಾಗುತ್ತದೆ ಎಂಬುದು.ನಂ. 4432, 4 ನೇ ಜಿ ಅಡ್ಡರಸ್ತೆ, 11 ನೇ ಮುಖ್ಯರಸ್ತೆ, ಜೆ ಬ್ಲಾಕ್,ಕನಕದಾಸ ನಗರ, ಮೈಸೂರು – 560022






0 Comments