ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲಲಿತಾ ಸಿದ್ಧಬಸವಯ್ಯ ಹಾಗೂ ಸುರೇಶ್ ನಾಗಲಮಡಿಕೆ ಅವರಿಗೆ ಬಿಎಂಶ್ರೀ ಪ್ರತಿಷ್ಠಾನ ಪ್ರಶಸ್ತಿ

ಖ್ಯಾತ ಸಾಹಿತಿ ಲಲಿತಾ ಸಿದ್ಧಬಸವಯ್ಯ ಹಾಗೂ ಹೆಸರಾಂತ ವಿಮರ್ಶಕ ಸುರೇಶ ನಾಗಲಮಡಿಕೆ ಅವರಿಗೆ ಈ ಸಾಲಿನ ಬಿ ಎಂ ಶ್ರೀ ಪ್ರತಿಷ್ಠಾನದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರತಿಷ್ಠಾನ ಕೊಡಮಾಡುವ ‘ಡಾ ವಿಜಯಾ ಸುಬ್ಬರಾಜ್ ಗಣ್ಯ ಲೇಖಕಿ ಪ್ರಶಸ್ತಿ’ಗೆ ಲಲಿತಾ ಸಿದ್ಧಬಸವಯ್ಯ ಅವರನ್ನೂ ಹಾಗೂ ‘ಸೂ ವೆಂ ಆರಗ ವಿಮರ್ಶಾ ಪ್ರಶಸ್ತಿ’ಗೆ ಸುರೇಶ ನಾಗಲಮಡಿಕೆ ಅವರನ್ನೂ ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾದ  ಡಾ ಆರ್ ಲಕ್ಷ್ಮೀನಾರಾಯಾಣ ಅವರು ತಿಳಿಸಿದ್ದಾರೆ.

ಚಿಂತಾಮಣಿ ಕೊಡ್ಲೆಕೆರೆ ಹಾಗೂ ಡಾ ಎಚ್ ಎಲ್ ಪುಷ್ಪ ಅವರಿದ್ದ ಆಯ್ಕೆ ಸಮಿತಿಯು ಲಲಿತಾ ಸಿದ್ಧಬಸವಯ್ಯನವರ ಸಾಹಿತ್ಯ ಸಾಧನೆಯನ್ನು ಗಣನೆಗೆ ತೆಗೆದುಕೊಂಡು ಪ್ರಶಸ್ತಿಗೆ ಆಯ್ಕೆ ಮಾಡಿತು.

ಡಾ ಎಚ್ ಎಸ್ ಮಾಧವರಾವ್ ಹಾಗೂ ಡಾ ಕೆ ಪಿ ಭಟ್ ಅವರಿದ್ದ ಆಯ್ಕೆ ಸಮಿತಿಯು ಸುರೇಶ ನಾಗಲಮಡಿಕೆ ಅವರ ‘ಹಲವು ಬಣ್ಣದ ಹಗ್ಗ’ ವಿಮರ್ಶಾ ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿತು

ಏಪ್ರಿಲ್ ೧೧ರಂದು ಬಿ ಎಂ ಶ್ರೀ ಪ್ರತಿಷ್ಠಾನದಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಗುವುದು ಎಂದು ಲಕ್ಷ್ಮೀನಾರಾಯಣ ತಿಳಿಸಿದ್ದಾರೆ.

‍ಲೇಖಕರು avadhi

27 March, 2019

1 Comment

  1. prathibha nandakumar

    CONGRATULATIONS

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading