
ರಾಜಕುಮಾರ ಮಡಿವಾಳರ
ಯಾರದಾದ್ರೂ ಫೋನ್ ಬಂದ್ರೆ ಸಾಕು, ಇರಿ ಬಂದೆ ಅಂತಾ ಉಟ್ಟಬಟ್ಟೆಲೆ ಹೋಗಿ ಬಿಡ್ತಿನಿ! ನಡು ದಾರಿಲಿದ್ದಾಗ ಫೋನು ಪರ್ಸ್ ಬಿಟ್ಟು ಹೋಗಿರಿ…..
ಧಾರವಾಡ ನಾನು ದುಡ್ಡು ಇಟ್ಟುಕೊಂಡೆ ಹೊರಬೀಳಬೇಕನ್ನುವ ಹಾಗಿಲ್ಲ, ನ್ಯೂಸ್ ಪೇಪರಿನಿಂದ ಹಿಡಿದು ಧಾರವಾಡದ ಸುಪ್ರಸಿದ್ಧ ಠಾಕೂರ್ ಪೇಢಾವರೆಗೂ ತಕ್ಷಣಕ್ಕೆ ನಯಾಪೈಸೆ ಕೊಡದೆ ಮಣಗಟ್ಟಲೇ ತರಬಲ್ಲೆ,
ಧಾರವಾಡ ನನ್ನ ಶಕ್ತಿ, ನನ್ನ ಅಕ್ಷರಶಃ ಸ್ವಂತ ಮಗನಂತೆ ಬೆಳೆಸಿದೆ, ಬರಿಗೈಯ್ಯವನಿಗೆ ತುಂಬು ಜೀವ ನೀಡಿದ ತಾಯಿ, ತಂದೆ, ಗುರು, ದೈವ ನನ್ನ ಧಾರವಾಡ.
ನಿನ್ನೆ ನಾನು ಇಷ್ಟ ಪಡುವ ಮತ್ತೊಂದು ಊರು ಇಂತಹದೆ ಕಾನ್ಫಿಡನ್ಸ್ ಕೊಟ್ಟಿತು, ಚಹಾ, ಅನ್ನ ಯಾವುದಕ್ಕೂ ನಾನು ದುಡ್ಡು ಕೊಡಲಿಲ್ಲ, ಕೊಟ್ಟು ಉಣಿಸಿದರು.
ರೊಕ್ಕೇನ್ ಬಾಳೀತಲೆ ಮಗನ!
ಮಂದಿ, ಮನಸು ಬಾಳಿಗೊಡತಾವ..
ರಾತ್ರಿ ಇಡಿ ಅಪ್ಪ-ಅಪ್ಪನ ಮಾತು, ಅವನೇ ಆ ದಿನಗಳಲ್ಲಿಯ ಹಾಗೆ ಖುದ್ದು ಎದುರಿಗೆ ನಿಂತು ನನ್ನ ಮುಂಗೈ ಹಿಡಿದು ಹೇಳಿದಂತೆನಿಸಿತು.





0 Comments