ಅನ್ನದ-ಋಣ-ಅಭಿಯಾನ-ಸೇರಿರಿ

ರೈತರ ಆತ್ಮಹತ್ಯೆ ನಿಲ್ಲಬೇಕು, ಕೃಷಿ ಬಿಕ್ಕಟ್ಟಿನಿಂದ ಈ ದೇಶ ಪಾರಾಗಬೇಕು ಎಂದು ನೀವು ಬಯಸುತ್ತೀರಾ? ಅದಕ್ಕಾಗಿ ನೀವೇನಾದರೂ ಮಾಡಲು ಸಿದ್ಧರಿದ್ದೀರಾ? ಮುಂದಿನ ಒಂದು ತಿಂಗಳಲ್ಲಿ ಕನಿಷ್ಠ ಕೆಲವು ಗಂಟೆಗಳು ಅದಕ್ಕೆ ನೀಡಲು ಸಿದ್ಧರಿದ್ದೀರಾ? ಹಾಗಾದರೆ,
ಅನ್ನದ ಋಣ ಅಭಿಯಾನ ಸೇರಿರಿ.
‘ಅನ್ನದ ಋಣ ಅಭಿಯಾನ’
ಸ್ವಯಂ ಪ್ರೇರಿತ ಕಾರ್ಯಕರ್ತರ ನೊಂದಾವಣೆ
ಈ ನಾಡಿನ ರೈತ ಬಾಂಧವರ ಋಣ ನಮ್ಮ ಮೇಲಿದೆ. ಅವರುಗಳು ಸಂಕಷ್ಟದಲ್ಲಿದ್ದಾಗ, ಜೊತೆಗೂಡುವುದು ನಮ್ಮ ಕರ್ತವ್ಯ ಅಲ್ಲವೇ? ಹೌದು ಎನ್ನುವುದಾದಲ್ಲಿ ನೀವು ಯಾವ ರೀತಿ ಜೊತೆಗೂಡಬಹುದೆಂಬುದು ಯೋಚಿಸಿ. ಅದಕ್ಕಾಗಿ 2 ನಿಮಿಷ ಸಮಯ ಕೊಟ್ಟು ಈ ಪತ್ರವನ್ನು ಓದಿ, ನಿಮ್ಮ ವಿವರ ಕೊಡಿ.
ಕರ್ನಾಟಕ ಜನಶಕ್ತಿಯು ಇತರ ಸಂಘಟನೆಗಳು ಹಾಗೂ ಸಮಾನ ಮನಸ್ಕರೊಡಗೂಡಿ ಜಿಲ್ಲೆಯ 750 ಹಳ್ಳಿಗಳಲ್ಲಿ ‘ರೈತ ಸಂಘರ್ಷ ಜಾಥಾ’ವನ್ನು ಕೈಗೊಂಡಿದೆ. ರಾಜ್ಯದೆಲ್ಲೆಡೆ ಮತ್ತೊಂದು ಸರಣಿ ರೈತ ಆತ್ಮಹತ್ಯೆಗಳು ನಡೆಯುತ್ತಿವೆ. ಅದರಲ್ಲೂ ಮಂಡ್ಯ ಜಿಲ್ಲೆಯ ಕಬ್ಬು ಬೆಳೆಗಾರರು ಹೆಚ್ಚಿನ ಪ್ರಮಾಣದಲ್ಲಿ ತಮ್ಮ ಜೀವನವನ್ನು ಕೊನೆಗಾಣಿಸಿಕೊಳ್ಳುತ್ತಿದ್ದಾರೆ. ಈ ರೀತಿಯ ವಿದ್ಯಮಾನವನ್ನು”ತುರ್ತುಸ್ಥಿತಿ” ಎಂಬಂತೆ ಪರಿಗಣಿಸಿ ತೀವ್ರ ರೂಪದ ಕ್ರಮಗಳಿಗೆ ಮುಂದಾಗಬೇಕಾದ ರಾಜ್ಯ ಸರ್ಕಾರ ಕಾಟಾಚಾರದ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೆ, ಕೇಂದ್ರ ಸರ್ಕಾರ ಏನೂ ಮಾಡುತ್ತಿಲ್ಲ.
ಈ ಹಿನ್ನೆಲೆಯಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಆಗ್ರಹಿಸಿ ಆಗಸ್ಟ್ 3ರಂದು ಮಂಡ್ಯ ಜಿಲ್ಲಾಧಿಕಾರಿ ಕಚೇರಿ ದಿಗ್ಬಂಧನ ಚಳವಳಿ ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ಈ ನಾಡಿನ ಹಲವು ಗಣ್ಯ ವ್ಯಕ್ತಿಗಳು, ಪ್ರಜ್ನಾವಂತರು, ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಅದಕ್ಕೆ ಪೂರ್ವಭಾವಿಯಾಗಿ ಜಿಲ್ಲೆಯ 750 ಹಳ್ಳಿಗಳಲ್ಲಿ ಜಾಥಾ ನಡೆಯಲಿದೆ. ಜುಲೈ 20ರಂದು ಕಾರ್ಯಕರ್ತರಿಗೆ ಅಧ್ಯಯನ/ತರಬೇತಿ ಶಿಬಿರವಿರುತ್ತದೆ. ಜುಲೈ 21 ರಿಂದ ಆಗಸ್ಟ್ 2ರ ವರೆಗೆ ಹಳ್ಳಿ ಜಾಥಾ ಇರುತ್ತದೆ. ಈ ಆಂದೋಲನದೊಂದಿಗೆ ಕೈಜೋಡಿಸಲು ಕರ್ನಾಟಕ ಜನಶಕ್ತಿಯು ಮನವಿ ಮಾಡುತ್ತದೆ.
ಇದು ಒಂದು ಸಂಘಟನೆಯ ಕಾರ್ಯಕ್ರಮವಲ್ಲ. ಯಾವುದೇ ರಾಜಕೀಯ ಪಕ್ಷದ, ನಿರ್ದಿಷ್ಟ ಜಾತಿಗೆ, ವರ್ಗಕ್ಕೆ ಸೀಮಿತವಾದ ಚಳುವಳಿ ಅಲ್ಲ. ಕೃಷಿಕರ ಆತ್ಮಹತ್ಯೆಗಳನ್ನು ತಡೆಗಟ್ಟಲು, ಸ್ಥೈರ್ಯವನ್ನು ಹೆಚ್ಚಿಸಲು ಸರ್ಕಾರದ ನೀತಿಗೆಟ್ಟ ಕಾನೂನುಗಳನ್ನು ಸರಿಪಡಿಸಲು ನಾಡಿನ ಎಲ್ಲಾ ನಾಗರೀಕರು ಈ ಅಭಿಯಾನದಲ್ಲಿ ಜೊತೆಗೂಡಬೇಕೆಂದು ಮತ್ತೊಮ್ಮೆ ಮನವಿ ಮಾಡುತ್ತದೆ.
ಈ ಅಭಿಯಾನಕ್ಕೆ 200 ಜನ ಕಾರ್ಯಕರ್ತರ 15 ದಿನಗಳ ಸಮಯ ಬೇಕಿದೆ (ಸುಮಾರು 3,000 ಮಾನವ ಗಂಟೆಗಳು). ನಿಮ್ಮ ಸಮಯ, ಕೌಶಲ್ಯ ಅಥವಾ ಇನ್ನಿತರ ರೀತಿಯ ಸಂಪನ್ಮೂಲಗಳನ್ನು ಇದಕ್ಕೆ ಕೊಡಬಹುದು. ನಿಮಗೆ ಎಷ್ಟು ಸಾಧ್ಯವೋ ಅಷ್ಟು. ಯಾವ ರೀತಿಯಲ್ಲಿ ತೊಡಗಿಕೊಳ್ಳಬಹುದು ಇಲ್ಲಿ ತಿಳಿಸಿ.
ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇನೆ
ಪ್ರತಿನಿತ್ಯ ಕೆಲವು ಘಂಟೆಗಳ ಕಾಲ
ಶನಿವಾರ/ಭಾನುವಾರ ಮಾತ್ರ
. ದಿನದ ಸಾಯಂಕಾಲ ಮಾತ್ರ
ನಾನು ಹಳ್ಳಿ ಜಾಥಾಕ್ಕೆ ಬರುತ್ತೇನೆ.
ನಾನು ಇದ್ದ ಕಡೆಯಿಂದಲೇ ಸ್ವಲ್ಪ ಸಮಯ ಕೊಟ್ಟು ಕೆಲಸ ಮಾಡುತ್ತೇನೆ.
ನಾನು ಮಂಡ್ಯ ಅಥವಾ ಇನ್ನಿತರ ತಾಲೂಕು ಕೇಂದ್ರಗಳಿಂದ ಕೆಲಸ ಮಾಡುತ್ತೇನೆ.
ನಾನು ಈ ನಿರ್ದಿಷ್ಟ ದಿನಗಳಂದು ಬಂದು ಪಾಲ್ಗೊಳ್ಳಬಲ್ಲೆ (ಯಾವ್ಯಾವ ದಿನಾಂಕಗಳು ಎಂದು ನಮೂದಿಸಿ)
ಹೆಸರು :
ಮೊಬೈಲ್ : 1. 2.
ವಯಸ್ಸು:
ಇಮೇಲ್:
ವಿಳಾಸ :
ಜಿಲ್ಲೆ : ತಾಲೂಕು: ಹಳ್ಳಿ
ವಿದ್ಯಾಭ್ಯಾಸ : ಉದ್ಯೋಗ:
ನಾನು ಕೆಳಗಿನ ಕೆಲಸಗಳನ್ನು ಮಾಡಬಲ್ಲೆ
1. ಹಳ್ಳಿಯಲ್ಲಿ ರೈತರೊಂದಿಗೆ ಮಾತನಾಡುವುದು
2. ಬೀದಿ ನಾಟಕ
3. ಫೋನ್ ಕರೆಗಳು
4. ಗ್ರಾಫಿಕ್ ಡಿಸೈನ್
5. ವಂತಿಗೆ ನೀಡಬಹುದು
6. ಲೇಖನ, ಇತ್ಯಾದಿ ಬರೆಯಬಲ್ಲೆ.
7 ದಾನಿಗಳ ಸಂಪರ್ಕ
8 ಸಭೆ ಸಮಾರಂಭ ನಿರ್ವಹಣೆ
9 ಕಾಲೇಜುಗಳಲ್ಲಿ ಪ್ರಚಾರ
10. ಹಾಡು
11 ಕಚೇರಿ ಕಾಗದಪತ್ರ ನಿರ್ವಹಣೆ
12 ಜಾಥಾಕ್ಕೆ ನನ್ನ ವಾಹನವನ್ನು ನೀಡಬಲ್ಲೆ
13 ಚಿತ್ರೀಕರಣ
14.ಅಧ್ಯಯನ/ ಸಂಶೋಧನೆ
15 ಪತ್ರ/ಈಮೇಲ್ ಉತ್ತರಿಸುವುದು
16. ಫೇಸ್ ಬುಕ್ ವಾಟ್ಸ್ಅಪ್ ಬ್ಲಾಗ್ ನಿರ್ವಹಣೆ
17. ಗೋಡೆ ಬರಹ
18. ಅಂತರ್ಜಾಲ ಎಸ್ಎಂಎಸ್
19. ಕಾರ್ಟೂನ್/ಚಿತ್ರ ಬರೆಯಬಲ್ಲೆ
20. ಕೌನ್ಸೆಲಿಂಗ್
ಅನ್ನದ ಋಣ ಅಭಿಯಾನ ಸೇರಲು ಸಂಪರ್ಕಿಸಿ.
ರವಿಕುಮಾರ್ – 7353770205
ಚೈತ್ರ – 8884512891





Namaskara.Naanu ee abhiyanadalli bhagavahisalu bayasiddene.naanu eega iruvallindale enu madabahudu tilisi.
ಹೆಸರು :Jayaram
ಮೊಬೈಲ್ : 9480146451
ವಯಸ್ಸು:32
ಇಮೇಲ್:jayaramnavada@gmail.com
ವಿಳಾಸ :nitilapura,kalladka post, 574222
ಜಿಲ್ಲೆ :Dakshina Kannada ತಾಲೂಕು:Bantwal
ವಿದ್ಯಾಭ್ಯಾಸ :BA ಉದ್ಯೋಗ:Animation, graphic designer.
ನಾನು ಕೆಳಗಿನ ಕೆಲಸಗಳನ್ನು ಮಾಡಬಲ್ಲೆ:
ಗ್ರಾಫಿಕ್ ಡಿಸೈನ್
ಕಾರ್ಟೂನ್/ಚಿತ್ರ ಬರೆಯಬಲ್ಲೆ