ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಯಚೂರಿಗೆ ಬೇಕು ಐಐಟಿ

ಐಐಟಿ: ರಾಯಚೂರಿನ ಹಕ್ಕು

– ಬಂಡಾರ ಪ್ರಕಾಶನ, ಮಸ್ಕಿ

(ಅಯ್ಯಪ್ಪ ಕೋಡಗುಂಟಿ, ಶಾಂತಮ್ಮ ಕೋಡಗುಂಟಿ,

ಬಸವರಾಜ ಕೋಡಗುಂಟಿ, ರೇಣುಕಾ ಕೋಡಗುಂಟಿ,

ಪರಶುರಾಮ ಕೋಡಗುಂಟಿ, ಕಾವ್ಯ ಕೋಡಗುಂಟಿ, ಮಂಜುಳಾ ಕೋಡಗುಂಟಿ)

2

ಕರ್ನಾಟಕ ಸರಕಾರ ಮತ್ತೊಮ್ಮೆ ಹೈದರಾಬಾದ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ. ಡಾ. ನಂಜುಂಡಪ್ಪ ವರದಿಯಲ್ಲಿ ಉಲ್ಲೇಖಿಸಿದಂತೆ ಕಲಬುರಗಿಗೆ ಕೇಂದ್ರೀಯ ವಿಶ್ವವಿದ್ಯಾಲಯವನ್ನು ಶುರುಮಾಡುವುದಕ್ಕೆ ಅನುವು ಮಾಡಿಕೊಟ್ಟ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹೈದರಾಬಾದ ಕರ್ನಾಟಕದ ಬೆಳವಣಿಗೆಯ ಪರವಾಗಿ ಇದ್ದೇವೆ ಎಂಬ ತೋರಿಕೆಯನ್ನು ಮುಂದಿಟ್ಟು ಐಐಟಿಯನ್ನು ರಾಯಚೂರಿಗೆ ಕೊಡಬೇಕು ಎಂಬ ವಿಚಾರವನ್ನು ಮರೆತುಬಿಟ್ಟಿದ್ದಾರೆ. ಈಗ ಸರಕಾರಗಳು ಮಾಡಿದ್ದು ಮೂಗಿಗೆ ತುಪ್ಪ ಸವರುವ ಕೆಲಸ ಎಂಬುದು ಸ್ಪಶ್ಟವಾಯಿತು.
ರಾಜ್ಯವೊಂದರ ಸಮಾನ ಬೆಳವಣಿಗೆ ಪ್ರತಿಯೊಂದು ಸರಕಾರದ ಆದ್ಯತೆ ಆಗಿರಬೇಕು. ಅದಕ್ಕಾಗಿಯೆ ಅಲ್ಲವೆ ನಂಜುಡಪ್ಪ ನೇತೃತ್ವದಲ್ಲಿ ಸಮಿತಿಯನ್ನು ನೇಮಿಸಿ ಕರ್ನಾಟಕದ ಸಮಾನ ಬೆಳವಣಿಗೆಗೆ ಮಾಡಬೇಕಾದ ಕೆಲಸಗಳನ್ನು ಸಲಹೆ ಮಾಡಲು ಕೋರಿತ್ತು. ನಂಜುಡಪ್ಪ ವರದಿಯನ್ನು ಬಹುಮಹತ್ವದ್ದಾಗಿ ಪರಿಗಣಿಸಿ ವಾಸ್ತವವಾಗಿ ಹಿಂದುಳಿದ ವಿವಿದ ಪ್ರದೇಶಗಳ ಬೆಳವಣಿಗೆಗೆ ಸೂಕ್ತವಾದ ಹೆಜ್ಜೆಗಳನ್ನು ಇಡಬೇಕಾಗಿರುವುದು ರಾಜ್ಯ ಸರಕಾರದ ಜವಾಬ್ದಾರಿ. ಬದಲಿಗೆ ಅಭಿವೃದ್ದಿಯ ವಿಚಾರದಲ್ಲಿ ರಾಜಕೀಯ ಮಾಡುವುದೇತಕ್ಕೊ. ರಾಯಚೂರು ಬಹುಮಹತ್ವದ ಐತಿಹಾಸಿಕ, ಅದೇ ವೇಳೆಗೆ ಕೈಗಾರಿಕಾ ಪ್ರದೇಶವೂ ಹೌದು. ಇಲ್ಲಿ ಬಂಗಾರದ, ಅಕ್ಕಿಯ, ಹತ್ತಿಯ, ವಿದ್ಯುತ್ತಿನ ಹೀಗೆ ಹಲವು ಕೈಗಾರಿಕೆಗಳು ಇಲ್ಲಿವೆ. ಈ ಎಲ್ಲವುಗಳನ್ನು ಐಐಟಿ ಕೊಡಬೇಕಾದಾಗ ಪರಿಗಣಿಸಬೇಕಲ್ಲವೆ. ಧಾರವಾಡಕ್ಕೆ ಏನೆಲ್ಲ ಅನುಕೂಲಗಳು ಇವೆ ಎಂಬುದನ್ನು ಯೋಚಿಸಬೇಡವೆ?
ರಾಜ್ಯಕ್ಕೆ ಬರುವ ಎಲ್ಲ ಉನ್ನತ ಶಿಕ್ಷಣ ಕೇಂದ್ರಗಳನ್ನು ಬೆಂಗಳೂರು, ಮೈಸೂರು ಧಾರವಾಡ ಹೀಗೆ ಎರಡೊ-ಮೂರೊ ಊರುಗಳಲ್ಲಿಯೇ ಕೇಂದ್ರೀಕರಿಸುವಂತೆ ಮಾಡಿದರೆ ರಾಜ್ಯದ ಸಮಗ್ರ ಮತ್ತು ಸಮಾನ ಬೆಳವಣಿಗೆ ಒಂದು ಕನಸು ಮಾತ್ರ ಆಗದೆ? ಎಂದು ಈಡೇರದ ಕನಸು ಆಗುತ್ತದೆ. ಇಂತಹಾ ಮರಿಚಿಕೆಗಳೆ ಅಲ್ಲವೆ ರಾಜ್ಯದ ವಿವಿದ ಬಾಗಗಳಲ್ಲಿ ಇರುವ ಜನರಲ್ಲಿ ಪರಕೀಯತೆಯ ಅನುಭವ ಬೆಳೆಯುವುದಕ್ಕೆ ಕಾರಣವಾಗುವುದು. ಇದೆ ಅಲ್ಲವೆ ಮುಂದೆ ಹೋರಾಟ, ರಾಜ್ಯದ ವಿವಿದ ಪ್ರದೇಶಗಳ ನಡುವೆ ಅಸಮಾಧಾನ, ಹೀಗೆ ಹಲವು ಬಗೆಯ ಬೇಡಿಕೆಗಳವರೆಗೆ ಆಲೋಚನೆ ಬೆಳೆಯುವುದಕ್ಕೆ ಕಾರಣವಾಗುವುದು. ಒಂದು ಪ್ರದೇಶದ ಬೆಳವಣಿಗೆಯನ್ನು ಹೆಚ್ಚು ಕಾಳಜಿಯಿಂದ ನೋಡಿಕೊಂಡು ಇನ್ನೊಂದು ಪ್ರದೇಶದ ಬೆಳವಣಿಗೆಯ ಕಡೆಗೆ ಹೆಚ್ಚು ಗಮನ ಕೊಡದಿರುವುದು ರಾಜ್ಯ ಸರಕಾರದ ಪಕ್ಷಪಾತತನದ ಧೋರಣೆ ಅಲ್ಲದೆ ಇನ್ನೇನು? ವಾಸ್ತವವಾಗಿ ಹಿಂದುಳಿದ ಎಂಬ ಪಟ್ಟ ಕಟ್ಟಿರುವ ಪ್ರದೇಶದ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ಕೊಡಬೇಕಲ್ಲವೆ? ಈ ಭಾಗದ ಶೈಕ್ಷಣಿಕ ಬೆಳವಣಿಗೆಗೆ, ಮೂಲಸೌಕರ್ಯಗಳ ಬೆಳವಣಿಗೆಗೆ ಐಐಟಿಯಂತಾ ಉನ್ನತ ಶಿಕ್ಷಣ ಸಂಸ್ಥೆಗಳು ಹೆಚ್ಚು ಪೂರಕವಾಗುವುದಿಲ್ಲವೆ? ಹಾಗಾದರೆ, ರಾಯಚೂರಿನಂತಾ ಪ್ರದೇಶದಲ್ಲಿ ಇನ್ನೆಂದು ಇಂತಾ ಉನ್ನತ ಶಿಕ್ಷಣ ಸಂಸ್ಥೆಗಳು ಬರುವುದಕ್ಕೆ ಸಾಧ್ಯ. ಇನ್ನೂ ಎಷ್ಟು ವರುಷಗಳವರೆಗೆ ಕಾಯಬೇಕು?
ದಯಮಾಡಿ ಸರಕಾರ ಈ ಪ್ರದೇಶದ ಸಾಮಾನ್ಯರ ಎದೆ ಒಳಗೆ ಕುದಿಗೊಳ್ಳುತ್ತಿರುವ, ಸಣ್ಣ ದನಿಯಾಗಿ ಕೇಳುತ್ತಿರುವ ಬೇರೆ ರಾಜ್ಯದ ಮಾತನ್ನೂ ಆಲಿಸಬೇಕು. ತೆಲಂಗಾಣ ಇಂತದೆ ರಾಜ್ಯದ ಒಳಗಿನ ಅಸಮಾನ ಬೆಳವಣಿಗೆಯನ್ನು ವಿರೋಧಿಸಿ, ಬಹು ದೊಡ್ಡ ಪ್ರಮಾಣದ ಹೋರಾಟಗಳನ್ನು ಮಾಡಿ, ಇಂದು ಬೇರೆ ರಾಜ್ಯವಾಗಿರುವುದು ವಾಸ್ತವ ಅಲ್ಲವೆ? ತೆಲಂಗಾಣಕ್ಕೆ ಹೊಂದಿಕೊಂಡಿರುವ ಹೈದರಾಬಾದ ಕನರ್ಾಟಕದ ಮಂದಿಗೆ ಈ ವಾಸ್ತವ ಬೆಳವಣಿಗೆಯ ಪರಿಚಯ ಇರದಿರಬಹುದೆ? ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಬಗೆಯ ಮಾತುಗಳನ್ನು ನೋಡಿ ತಿಳಿದುಕೊಳ್ಳಬೇಕು. ಈ ಎಲ್ಲ ಬೆಳವಣಿಗೆಗಳು ಇದೊಂದು ಮುಂದಿನ ಯಾವುದೊ ಅಪಾಯದ ಕರೆಯಂತೆ ಕಾಣುತ್ತದೆಯೆ ಎಂಬ ಭಯವನ್ನು ತರುವಂತಿದೆ. ಕೇಂದ್ರ ಸರಕಾರ ಐಐಟಿಯನ್ನು ಧಾರವಾಡಕ್ಕೆ ಕೊಟ್ಟ ಸುದ್ದಿ ಪ್ರಕಟವಾದ ಕ್ಷಣದಿಂದ ಇಡಿಯ ರಾಯಚೂರು ಜಿಲ್ಲೆ ಆಕ್ರೋಶದಿಂದ ಕುದಿಯುತ್ತಿದೆ. ಸಾಮಾನ್ಯ ಜನರು ಈ ಹೋರಾಟದಲ್ಲಿ ತೊಡಗಿಕೊಂಡಿರುವುದು ಮುಖ್ಯ.
ಬರಿಯ ರಾಜಕಾರಣಿಗಳು ಇದರಲ್ಲಿ ಇಲ್ಲವೆನ್ನುವುದನ್ನೂ ಗಮನಿಸಬೇಕು. ಜಿಲ್ಲೆಯ ಪ್ರತಿಯೊಬ್ಬ ಸಾಮಾನ್ಯರಿಗೂ ಐಐಟಿ ಒಂದು ಕನಸಾಗಿತ್ತು. ಮುಂದಿನ ತಲೆಮಾರಿನ ಮಕ್ಕಳಿಗೆ ಒಲ್ಳೆಯ ಶಿಕ್ಷಣ ಸಂಸ್ಥೆ ಬಂದಿತು ಎಂಬ ತಿಳುವಳಿಕೆಯಲ್ಲಿ ಇದ್ದರು. ಒಂದು ಉನ್ನತ ಶಿಕ್ಷಣ ಸಂಸ್ಥೆಯನ್ನು ಪಡೆದುಕೊಳ್ಳುವುದರ ಮೂಲಕ ರಾಜ್ಯದ, ದೇಶದ ಅದರಂತೆ ಅಂತಾರಾಷ್ಟ್ರೀಯ ಶಿಕ್ಷಣ ರಂಗದಲ್ಲಿ ಒಂದೆ ಕೇಂದ್ರವಾಗಿ ಬೆಳೆಯುತ್ತದೆ ಎಂಬ ಕನಸನ್ನು ಕಂಡಿದ್ದರು. ಇದುವರೆಗಿನ ಎಲ್ಲ ರಾಜ್ಯ ಸರಕಾರಗಳು ಬಹುದಶಕಗಳಿಂದ ಶಿಕ್ಷಣದ ಕನಸನ್ನು ಈ ಭಾಗದ ಮಂದಿಗೆ ಕನಸಾಗಿಯೆ ಉಳಿಸಿಕೊಂಡು ಬಂದಿವೆ. ಈ ಕನಸು ನನಸಾಗುವ ಕಾಲವಿನ್ನು ಶುರುವಾಯಿತು, ಐಐಟಿ ಇದಕ್ಕೆ ಮುನ್ನುಡಿಯನ್ನು ಬರೆಯುತ್ತಿದೆ ಎಂಬ ಕನಸಿನಲ್ಲಿ ಇದ್ದ ಈ ಭಾಗದ ಮಂದಿಗೆ ನಿಜವಾಗಿಯೂ ಒಂಡು ಸಿಡಿಲು ಬಡಿದಂತೆ ಆಗಿದೆ. ಸುಡುವ ಬಿಸಿಲಿನ ಭರಕ್ಕಿಂತ ಹೆಚ್ಚು ರಾಯಚೂರು ನಗರದ ತುಂಬ ಬೀದಿಬೀದಿ ತುಂಬಿಕೊಂಡಿದ್ದ ಈ ಭಾಗದ ಮಂದಿಯ ಆಕ್ರೋಶ ದೊಡ್ಡದಾಗಿ ಕಾಣುತ್ತಿತ್ತು.
ಹೈದರಾಬಾದ ಕರ್ನಾಟಕ ಬಹುಮುಖ್ಯವಾಗಿ ಶೈಕ್ಷಣಿಕವಾಗಿ ಬಹುಹಿಂದೆ ಉಳಿದಿರುವ ಪ್ರದೇಶ ಎಂಬುದು ಒಂದು ವಾಸ್ತವ. ಅದನ್ನು ನೀಗಿಸುವುದಕ್ಕೆ ಐಐಟಿ ಹೆಚ್ಚು ಪೂರಕವಾಗುತ್ತಿತ್ತು. ಆದರೆ, ಸರಕಾರ ಇಚ್ಚಾಶಕ್ತಿಯ ಕೊರತೆಯಿಂದ ರಾಯಚೂರಿಗೆ ಮೀಸಲಾಗಿದ್ದ ಐಐಟಿಯನ್ನು ಧಾರವಾಡಕ್ಕೆ ಕಾಣಿಕೆಯಾಗಿ ಕೊಟ್ಟು ಈ ಭಾಗದ ಜನರಿಗೆ ಅನ್ಯಾಯ ಮಾಡಿದೆ. ಸರಕಾರ ಇದರ ಕಡೆಗೆ ಗಮನ ಹರಿಸಲಿ. ಧಾರವಾಡದಲ್ಲಿ ಐಐಟಿ ಶುರು ಮಾಡುವುದು ಬೇಡ. ರಾಜ್ಯದ ಸಮಾನ ಬೆಳವಣಿಗೆಗೆ ತನ್ನ ಬದ್ದತೆಯನ್ನು ಸರಕಾರ ತೋರಿಸಬೇಕಿದೆ. ಅದಕ್ಕಾಗಿ ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಪತ್ರ ಬರೆದು ವಿನಂತಿಸಿಕೊಳ್ಳಲಿ. ಈ ಭಾಗದ ಧ್ವನಿಯನ್ನು ಕೇಂದ್ರಕ್ಕೆ ತೆಗೆದುಕೊಂಡು ಹೋಗುವ ಜವಾಬ್ದಾರಿಯನ್ನು ರಾಜ್ಯ ಸರಕಾರವೇ ಹೊತ್ತುಕೊಳ್ಳಬೇಕು. ಐಯಟಿಯನ್ನು ರಾಯಚೂರಿನಲ್ಲಿಯೆ ಸ್ಥಾಪಿಸಲು ಕೇಂದ್ರ ಸರಾಕರಕ್ಕೆ ವಿನಂತಿಸಿಕೊಳ್ಳಲಿ ಮತ್ತು ಒತ್ತಾಯವನ್ನೂ ಹೇರಲಿ. ರಾಯಚೂರಿಗೆ ಐಐಟಿ ಬರುವುದರ ಮೂಲಕ ಹೈದರಾಬಾದ ಕರ್ನಾಟಕ ಭಾಗಕ್ಕೆ ರಾಜ್ಯದಲ್ಲಿ ಇತಿಹಾಸದ ಉದ್ದಕ್ಕೂ ಆಗಿರುವ ಅನ್ಯಾಯವನ್ನು ತಪ್ಪಿಸುವ ಒಂದು ನಿಟ್ಟಿನಲ್ಲು ಒಂದು ಪ್ರಯತ್ನವನ್ನು ಮಾಡಬಹುದು.
ರಾಜ್ಯ ಸರಕಾರ ಬಹು ಸೂಕ್ಷ್ಮವಾಗಿ ಇದನ್ನು ವಿಚಾರಿಸಬೇಕು. ಅದರಂತೆ ಬಹು ಗಟ್ಟಿಯಾಗಿ ಹೆಜ್ಜೆಯನ್ನು ಇಡಬೇಕು. ಇದು ಈ ಭಾಗದ ಪ್ರತಿಯೊಬ್ಬ ಸಾಮಾನ್ಯ ಪ್ರಜೆಯ ಬೇಡಿಕೆ. ಇದು ಹೋರಾಟದ ಮೂಲಕ ಪಡೆದುಕೊಳ್ಳುವ ಪರಿಸ್ಥಿತಿಯನ್ನು ತರುವುದು ಬೇಡ. ಐಐಟಿ ಹೈದರಾಬಾದ ಕರ್ನಾಟಕದ, ರಾಯಚೂರಿನ ಮಂದಿಯ ಹಕ್ಕು. ನಮ್ಮ ಹಕ್ಕನ್ನು ನಮಗೆ ಕೊಡಿ.
 

‍ಲೇಖಕರು G

11 September, 2015

5 Comments

  1. gundurao desai

    ಸರ್, ರಾಯಚೂರು ಜನತೆಯ ಮನ ತಲ್ಲಣಗಳನ್ನು ಬಿಚ್ಚಿಟ್ಟಿದ್ದಿರಿ. ಅವಧಿಯ ಪ್ರಜ್ಞಾವಂತ ಓದುಗರು ಈ ಬಗ್ಗೆ ಪ್ರತಿಕ್ರಿಯಿಸಬೇಕು.ರಾಜ್ಯದ ಸಮಗ್ರ ಮತ್ತು ಸಮಾನ ಬೆಳವಣಿಗೆ ಬಗೆಗೆ ಎಲ್ಲರೂ ಚಿಂತಿಸಬೇಕಿದೆ, ಹ್ನಿೈ ಹೈ.ಕ ಬಗ್ಗೆ ನಿರ್ಲಕ್ಷ್ಯ ಧುೂ. ಧೊೋರಣೆ ಮುಂದುವರೆದರೆ ಅಸಹನೆಯ ಕಟ್ಟ ೊಒಡೆಯುವುದರಲ್ಲಿ ಎರಡು ಮಾತಿಲ್ಲ.

  2. Harsha

    Superb..

  3. HEMCHANDRA KOULOORKAR

    YOU HAVE RIGHTLY COMMENTED ABOUT THE IMPORTANCE OF ESTABLISHING AN IIT AT RAICHUR. IT IS THE POLITICAL GAME ,WON OVER THE NEEDS OF RAICHUR. THANK YOU FOR THE CONCERN.

  4. Raj

    There are many points one should ponder:
    1. IITs have lost their status in the modern world and losing their sheen & quality big time
    2. Even if Rayachuru were to get an IIT it will absolutely make no ground difference to the local education as it will be entirely filled with outsiders, staff, students etc. At the most some support business like hotels, taxis, house market can benefit. But that will happen in case of any big industry in any area
    3. Just because there is no IIT in Rayachuru the students from that region don’t have to forget studying in IITs, they can get into any of the existing 20+ IITs in other parts of the country and be happy! Of course when it comes to higher education people should be willing to relocate to different places and don’t expect to complete your whole education in your backyard!
    This attitude of our people for fighting for everything in the name of region, caste, festival etc is reaching alarming proportions and how do they show their displeasure? by burning some buses, buildings and tires, how ridiculous!!!!

    • Basavaraja Kodagunti

      Dear Raj, i am sorry if you cont differentiate caste and region. it is not that Rayahuru people will join IIT if we have an IIT in Rayachuru. IIT is center for higher education center, which can contribute to the education field as well in many other fields to develop in direct or indirect way. i wonder, if you want all students to look forward for 20 existing IIts, do you know what is the % students applying for IIT in these days? and do you think this % will/should remain same in coming days also? we need more n more higher education centers in our country, i accept one thing that yes we need to work for good quality of education. If IIts have lost their status, than suggest alternative, that is a different issue to the issue dealt with in this article.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading