ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಮಯ್ಯ – ಪನ್ – ಫನ್

ಪನ್ – ಫನ್

 

ಬೈಲಾ-ಹೊಡೀಲಾ-ಬಡೀಲಾ!

 

ನರಸಿಂಹರಾಜು: ಸೌಹಾರ್ಧ(?)ಸಹಕಾರಿ ಸಂಘದ ಹತ್ತಿರ ಸದಸ್ಯರ ಎರಡು ಗುಂಪುಗಳು ಮಾರಾಮಾರಿಗಿಳಿದು ಹೊಡೀಲಾ ಬಡೀಲಾ ಅಂತ ಕೂಗಾಡ್ತಿದ್ದರಂತೆ, ಯಾಕೋ ತಿಳೀಲಿಲ್ಲಾ?

ಬಾಲಕೃಷ್ಣ : ಅದಾ, ಆ ಸೊಸೈಟಿ ಬೈಲಾ ತಿದ್ದುಪಡಿ ಮಾಡೋಕೆ ಜನರಲ್ ಬಾಡಿ ಕರೆದಿದ್ರಂತೆ. ಆ ವಿಷಯದಲ್ಲಿ ಒಮ್ಮತ ಮೂಡದೆ, ಜಗಳಾ ಹತ್ಕೊಂಡು, ಬೈಲಾ ವಿಷಯಾನೇ ಮರೆತು ಒಬ್ಬರಿಗೊಬ್ಬರು ಬಾಯಿಗೆ ಬಂದ ಹಾಗೆ ಬೈಲಾ, ಬಡೀಲಾ ಅಂತ ಎಗರಾಡ್ತಿದ್ದುವಂತೆ ತಿಳಿಗೇಡಿಗಳು!
ಸಮಸ್ಯೆಯೂ ‘ಸುಳಿ’ದಾಡುವ ಜನರೂ

ಸಮಸ್ಯೆಗಳ ‘ಎಬಿಸಿಡಿ’ ಗೊತ್ತಿರದಿದ್ರೂ ‘ಬಿಡಿಸಿಎ’ ಬಿಡುವೆನೆಂದು ಬರುವವರು ಬಹಳ ಮಂದಿ. ಹಾಗೆ ಸಾಲ್ವ್ ಮಾಡೋಕೆ ಬರುವವರಲ್ಲೂ ಹಲವು ಬಗೆ. ಅನಿರೀಕ್ಷಿತವಾಗಿ ಸಮಸ್ಯೆಗಳು ಎದುರಾದಾಗ ಧೈರ್ಯದಿಂದ ಮುನ್ನುಗ್ಗಿ, ಸಮಸ್ಯೆಯ-ಗರ್ಭ ಹೊಕ್ಕು ಪರಿಹಾರವನ್ನು- ಡೆಲಿವರ್ ಮಾಡುವಂತ ಮರ್ಯಾದಾ ಪುರುಷೋತ್ತಮರು,ಅರ್ಥಾತ್ ರಾಮನ ಕುಲದವರು. ಎರಡನೇ

ಬಗೆಯೆಂದರೆ, ಯಾರಿಗೂ ಗೊತ್ತಾಗದ ಹಾಗೆ ಸಮಸ್ಯೆಯನ್ನು ತಾವೇ ಹುಟ್ಟುಹಾಕಿ, ಅದೂ ಹೇಗೋ ಮಧ್ಯಸ್ತಿಕೆಯನ್ನು ತಾವೇ ವಹಿಸುವಂತಹಾ ಸನ್ನಿವೇಶವನ್ನು ಸೃಷ್ಟಿಸಿ, ಸಿದ್ದ ಪರಿಹಾರವನ್ನು ದೊರಕಿಸಿಕೊಟ್ಟು ಉಭಯತ್ರರಿಂದಲೂ ಕ್ರೆಡಿಟ್ ಗಿಟ್ಟಿಸುವ ಜನ. ಇವರ ಮನೆದೇವರೇ ನಾರದಮುನಿ. ಇನ್ನು ಮೂರನೇ ‘ವಿಧವೇ’ ಮುಂಡಾಮೊಚಿಕೊಳ್ಳುವವರ ಗುಂಪಿಗೆ ಸೇರಿದವರು. ಪ್ರಾಬ್ಲಮ್ ಸಾಲ್ವ್ ಮಾಡೋಕೆ ಹೋಗಿ ಸಮಸ್ಯೆಯಲ್ಲಿ ತಾವೇ ಸಿಲುಕಿಕೊಂಡು ನಾಶವಾಗುವುದು ಅಲ್ಲದೆ, ಸಂಬಂಧಿಸಿದ ಪಾರ್ಟಿಗಳಿಗೂ ಡ್ಯಾಮೇಜ್ ಮಾಡುವ ಮಾರೀಚನ ಬಂಧುಗಳು!
ಮಾವೋ ವಾದ?

ಪ್ರತಿಯೊಬ್ಬ ಫಾದರ್ ‘ಇನ್ ಲಾ’ ಕಣ್ಣಿಗೂ ಅಳಿಯಾ ಅನ್ನಿಸಿಕೊಂಡ ಪ್ರಾಣಿ ‘ಔಟ್ ಲಾ’ ಆಗೇ ಕಾಣ್ತಾನೆ- ಭಯೋತ್ಪಾದಕನಾಗೆ ತೋರ್ತಾನೆ! ನೇರವಾಗಿ ಹೇಳಬೇಕಂದ್ರೆ ಮಾವೋ ವಾದಿಯೇ.
ಜಾರ್ಖಂಡ್ರೆ ಮುಕ್ತಿ ಉಂಟೆ?

ಉತ್ತರ-ಮಾಯಾ ಜಾಲದಲ್ಲಿ ಆದಂತೆ ಇಲ್ಲೂ. ತಮ್ಮ ಪಕ್ಷದ ಅಧಿಕಾರವಿರುವವರೆಗೆ ‘ಘಟ್ ಬಂಧನ್ ‘- ವಚನ ಭದ್ರ. ಅಧಿಕಾರ ಹಸ್ತಾಂತರ ಅಂದರೋ – ಕಟ್ ಬಂಧನ್, ವಚನ ಛಿದ್ರ!
ಮುಕ್ತತೆ ಮುಕ್ತ ಸಮಾಜ.

ಪೂರ್ವಾಭಾದ್ರ: ಸಮಾಜದಲ್ಲಿ ಮುಕ್ತತೆ ಕಡಿಮೆ ಆಯ್ತು ಅಂತಾ ಹ್ಯಾಗೆ ಹೇಳ್ತೀಯಾ?

ಉತ್ತರಾಭಾದ್ರ: ಸೀತಾರಾಮು ಸೀರಿಯಲ್ನಿಂದ. ಈ ಹಿಂದಿನ ಧಾರಾವಾಹಿಯಲ್ಲಿ ‘ ಮುಕ್ತ ಮುಕ್ತ ಮುಕ್ತ ‘ ಅಂತ ಮೂರು ಸಲ ಹೇಳ್ತಿದ್ರು. ಈಗ ಬರ್ತಿರೋದ್ರಲ್ಲಿ ‘ಮುಕ್ತ ಮುಕ್ತ’ ಅಂತ ಎರಡೇ ಸಲ ಹೇಳೋದು.
ಡಾರ್ವಿನ್ನು ಮತ್ತು ಕೋಡ್ಗ ಳು

ಮನುಷ್ಯ  ತಾನು ಎಷ್ಟೇ ನಾಗರೀಕ ‘ಸಿವಿಲೈಸ್ದ್’ ಅಂದ್ರೂ, ಬಹಳಷ್ಟು ಸಂದರ್ಭಗಳಲ್ಲಿ ‘ಕೋಡಗಗಳಿಂದ ಮಾನವ’ ಅನ್ನೋ ಡಾರ್ವಿನ್ ಥಿಯರಿಯನ್ನು (ಇಮ್) ಪ್ರೂವ್ ಮಾಡಲೋ( ಮಾಡೆಲ್) ಎಂಬಂತೆ, ತಲೆ ಮಾರಿನಿಂದ ಜನ ಕಾಯ್ದುಕೊಂಡು ಬಂದ ‘ಚೇಸ್ಟಿಟಿ’ಗಳನ್ನು ಗಾಳಿಗೆ ತೂರಿ’ ಚೇಷ್ಟಿಟಿಗೆ (ಮಿಸ್ ಚೀಫ್ ) ಇಳಿಯುತ್ತಾರೆ. ಆ ಕಾರಣಕ್ಕೆ ಅವರನ್ನು ನಿಯಂತ್ರಿಸಲು ‘ ಸಿವಿಲ್ ಮತ್ತು ಕ್ರಿಮಿನಲ್ ಪ್ರೊಸೀಜರ್ ‘ ಕೋಡ್ಗ ಳ್ಗೆ ಮೊರೆ ಹೋಗಬೇಕಾದ್ದು ಅನಿವಾರ್ಯ. D-RAMA ರಾಜ್ಯದ ಸಂಸತ್ತಲ್ಲೇ ನೋಡಿದೆವಲ್ಲ, ಹ್ಯಾಗೆ ಅಪ್ರಭುದ್ದ ರಾಜನೀತಿಯ ಪ್ರಸಾದ ಫಲಗಳ ಎರಚಾಟ ಕಿರಚಾಟ- ಬಿಲ್ಲುಗಳ ಮುರಿದಾಟ ಹರಿದಾಟ ನಡೆಸಿತೊಂದು ಅನ್ನೋದನ್ನ!

end ಗುಟುಕು

ಬದುಕಲ್ಲಿ  ಇರಲಿ ತಮ್ಮ ಆಶೆ- ತಮಾಷೆ.

ಜೀವನ ಒಡ್ಡುವ ಕಠಿಣ ಪರೀಕ್ಷೆಗಳಿಂದ ಪಾರಾಗುವ ಸಾಧನ ಅಂದ್ರೆ ವಿನೋದಪ್ರಿಯತೆ. ಸಮಸ್ಯೆಗಳೆಂಬ ಘಾಟ್ನ ತಿರುವು ಕರ್ವುಗಳನ್ನು ನೆಗೋಷಿಯೇಟ್ ಮಾಡಲು ಬರುವುದೇ- ನಗೋ ಶಿಯಬಲ್ ಇನ್ಸ್ಟ್ರುಮೆಂಟ್, ಅದೇ ಹಾಸ್ಯಪ್ರಜ್ಞೆ.
ಸೂತ್ರಧಾರ ರಾಮಯ್ಯ

 

‍ಲೇಖಕರು G

31 December, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading