ರಾಮನಿಗೇನೋ ನ್ಯಾಯ ಸಿಕ್ಕಿತು..! ಆದರೆ..?

ಎನ್. ರವಿಕುಮಾರ್ ಟೆಲೆಕ್ಸ್

ಕಲಿಯುಗದ ಒಂದು ಮುಕ್ಕಾಲು ಶತಮಾನದ(1852) ವನವಾಸದಿಂದ ಶ್ರೀರಾಮನಿಗೆ ಸುಪ್ರೀಂ ಕೋರ್ಟ್ ಮುಕ್ತಿ ನೀಡಿದೆ. ಶ್ರೀರಾಮನಿಗೆ ಯಾನೆ ರಾಮಲಲ್ಲಾ ನಿಗೆ ತನ್ನ ಜನ್ಮಭೂಮಿಯ ಹಕ್ಕನ್ನು ಕೊಡಿಸಲು ನಡೆದ ಏನೆಲ್ಲಾ ಘಟನಾವಳಿಗಳು ಈಗ ರಾಮಾಯಣದಷ್ಟೆ ಒಂದು ಬೃಹತ್ ಚರಿತ್ರೆಯಾಗಿ ನಮ್ಮ ಮುಂದೆ ಇದೆ. ಇನ್ನೂ ವನವಾಸ ಮುಗಿಸಿದ ಶ್ರೀರಾಮನಿಗೆ ವೈಭವೋಪೇತ ಮಂದಿರ ಕಟ್ಟುವುದು ಸುಲಭ ಸಾಧ್ಯ. ಅದಕ್ಕಾಗಿ ಭಾರತ ಭಕ್ತಿ-ಭಾವದಿಂದ ಕಾಯುತ್ತಿದೆ.

ರಾಮನಿಗಾಗಿ ಈ ದೇಶದಲ್ಲಿ ಈ ಒಂದು ಮುಕ್ಕಾಲು ಶತಮಾನ ಏನೆಲ್ಲಾ ನಡೆಯಿತು. ಅದರಲ್ಲೂ 1990- 1992 ಮತ್ತದರ ನಂತರದಲ್ಲಿ ಭಾರತ ಕಂಡ ಘನಘೋರ ದಿನಗಳನ್ನು ಮರೆಯಲಾದೀತೆ? ಧರ್ಮ ಮತ್ತು ರಾಜಕಾರಣ ದ ನಡುವೆ ಅಂತರದ ತೆಳುಪದರವೇ ಇಲ್ಲದಷ್ಟು ಒಂದರೊಳಗೊಂದು ಮಿಳಿತಗೊಂಡು ಮಲೆತು ಹೋಗಿವೆ.

ಕಳೆದ 30 ವರ್ಷಗಳ ಭಾರತೀಯ ರಾಜಕಾರಣವನ್ನು ಮತ್ತು ಧರ್ಮವನ್ನು ಪ್ರತ್ಯೇಕಿಸಿ ಅಧ್ಯಯನ ಮಾಡಲು ಸಾಧ್ಯವಾಗದಷ್ಟರ ಮಟ್ಟಿಗೆ ಒಂದರೊಳಗೊಂದು ಕರಗಿ ಹೋಗಿವೆ. ಅದುವೇ ಧರ್ಮೋರಾಜಕಾರಣ. ಈಗ ಈ ಧರ್ಮೋರಾಜಕಾರಣದಿಂದಲೆ ಇವತ್ತು ಶ್ರೀರಾಮನಿಗೆ ನ್ಯಾಯ ಸಿಕ್ಕಿದೆ. ಅಸಂಖ್ಯಾತ ಆಸ್ತಿಕ ಜನಸಮುದಾಯದ ಭಕ್ತಿ.ಭಾವನೆಗಳು ಪರವಶಗೊಂಡಿವೆ . ದೇವರು ಮತ್ತು ಭಕ್ತನ ನಡುವೆ ಮುಕ್ತಿಮಾರ್ಗದ ಅನುಸಂಧಾನಗಳು ಇನ್ನಷ್ಟು ಸಲೀಸುಗೊಂಡಿರಬಹುದನೋ..?!

ಈ ದೇಶದ ಸೌಹಾರ್ದ ಪರಂಪರೆಯನ್ನು ಬಯಸುವ, ಸಮಾನತೆ, ಸಹಬಾಳ್ವೆಯ ಸಾಂವಿಧಾನಿಕ ಆಶಯಗಳನ್ನು ಒಪ್ಪುವ, ಅವುಗಳಿಗಾಗಿ ದುಡಿಯುವ , ಮಿಡಿಯುವ ಅಸಂಖ್ಯಾತ ಜನರನ್ನು ಎಲ್ಲಾ ಕಾಲಕ್ಕೂ ಬಾಧಿಸುತ್ತಿರುವುದೆಂದರೆ ಅದು ಬಾಬರಿ ಮಸೀದಿ ಧ್ವಂಸ. ರಾಮನನ್ನು ರಾಜಕಾರಣದ ನಡುಮನೆಗೆ ತಂದು ಅವನಿಗಾಗಿ ನ್ಯಾಯ ಕೇಳುವ ರಣೋತ್ಸಾಹದಲ್ಲಿ ನಡೆದ ಯಾತ್ರೆ-ಜಾತ್ರೆಗಳು, ಹಿಂಸೆ, ಹತ್ಯೆಗಳು ಯಾವ ಕಾಲಕ್ಕೂ ಕ್ಷಮೆಗೆ ಅರ್ಹವಲ್ಲ.

ಮತ್ತೆ, ಮತ್ತೆ ರಾಮ ಮಂದಿರದ ಹೆಸರಿನಲ್ಲಿ ನಡೆಯುತ್ತಲೆ ಬಂದ ಹಿಂಸಾರಾಜಕಾರಣ ವನ್ನು ಮರೆಯಲಾದೀತೆ?. ಈ ದೇಶದ ಸೌಹಾರ್ದತೆ ಪರಂಪರೆಯ ಹೂ ದೋಟವನ್ನು ಹೊಸಕಿ ಹಾಕಿದ ಕಾಲ ಘಟ್ಟವದು, ಯಾವ, ಯಾವ ಸಂದರ್ಭದಲ್ಲಿ ರಾಜಕೀಯಾಧಿಕಾರದ ಹುಚ್ಚು ಕುದುರೆ ಸೆಟೆದು ನಿಂತಾಗಲೆಲ್ಲಾ “ರಾಮ -ರಹೀಮ” ರನ್ನು ಗುರಾಣಿಗಳಂತೆ ಜನ ಸಮೂಹದ ಮೇಲೆ ತೂರುತ್ತಾ ಬರಲಾಗಿದೆ. ರಾಮನಿಗೆ ನ್ಯಾಯ ಸಿಕ್ಕ ಇವತ್ತಿನ ಸಂಭ್ರಮವನ್ನು ಬದಿಗಿಟ್ಟು ಒಮ್ಮೆ ಹಿಂತಿರುಗಿ ನೋಡಿದರೆ ಅಸಂಖ್ಯಾತ ಅಮಾಯಕರ ರಕ್ತ -ಕಣ್ಣೀರಿನಿಂದ ಶಾಂತಿ, ಸಹಬಾಳ್ವೆಯ ಬುದ್ಧಭೂಮಿ ನೆಂದು ನಲುಗಿ ನರಳುತ್ತಿರುವುದು ಕಾಣಿಸುತ್ತದೆ.

ಬಾಬರಿ ಮಸೀದಿಯ ಧ್ವಂಸದ ಮೊದಲ ಯತ್ನವನ್ನು ತಪ್ಪಿಸಿದ ಕೀರ್ತಿ ಅವತ್ತಿನ ಪ್ರಧಾನಿ ವಿ.ಪಿ ಸಿಂಗ್ ಅವರಿಗೆ ಸಲ್ಲಬೇಕು. ಪೊಲೀಸರ ಫೈರಿಂಗ್ ನಲ್ಲಿ ನೂರಾರು ಕರಸೇವಕರು ಹೆಣವಾದರು. ಸಾಮಾಜಿಕ ನ್ಯಾಯದ ಸೂತ್ರ ಪ್ರತಿಪಾದಿಸಿದ ಮಂಡಲ್ ವರದಿ ಜಾರಿ ಮತ್ತು ಈ ದೇಶದ ಸೌಹಾರ್ದತೆಗಾಗಿ ಬಾಬರಿ ಮಸೀದಿ ಧ್ವಂಸವನ್ನು ದಿಟ್ಟತನದಿಂದ ತಡೆದ ವಿ ಪಿ ಸಿಂಗ್ ಅಧಿಕಾರ ಕಳೆದುಕೊಳ್ಳುವಂತಾಯಿತು.

ಆದರೆ, ಕೇಂದ್ರದಲ್ಲಿ ಷೋ ಕಾಲ್ಡ್ ಸೆಕ್ಯೂಲರ್ ಕಾಂಗ್ರೆಸ್ ಸರ್ಕಾರವಿದ್ದಾಗಲೇ 1992 ಡಿ.6 ರಂದು ಬಾಬರಿ ಮಸೀದಿ ಧ್ವಂಸ ಆಗಿಯೇ ಹೋಯಿತು. ಆಗಲೆ ಸೆಕ್ಯೂಲರ್ ಸಿದ್ಧಾಂತವೆಂಬುದು ರಾಜಕೀಯ ಪಕ್ಷಗಳು ಜಗಿದು ಉಗಿಯುವ ಅಡಕೆಲೆಯೇ ಎಂಬುದು ಸಾಬೀತಾಯಿತು. ರಾಜಕೀಯ ಪೀಡಿತ ರಥಯಾತ್ರೆ ಹರಿದ ಹಾದಿಯುದ್ದಕ್ಕೂ ಮತ್ತು ಮಸೀದಿ ಧ್ವಂಸದ ನಂತರ ಇದರ ನಂತರ ನಡೆದದ್ದು ಅಕ್ಷರಶಃ ಮಾರಣ ಹೋಮ.

ಮನುಷ್ಯರಿಗೆ ಧರ್ಮದ ಅಫೀಮು ಕುಡಿಸಲಾಗಿತ್ತು. ಮೆದುಳಲ್ಲಿ ಜನಾಂಗೀಯ ದ್ವೇಷದ ಬೀಜ ಬಿತ್ತಲಾಗಿತ್ತು. ಸರಯೂ ನದಿಯಲ್ಲಿ ಹೆಣಗಳು ತೇಲುವುದು, ಉತ್ತರ ಪ್ರದೇಶ, ಮುಂಬೈ, ರಾಜಾಸ್ತಾನದ ಬೀದಿ, ಬೀದಿಗಳಲ್ಲಿ ಅನಾಥವಾಗಿ ಬಿದ್ದಿದ್ದ ಹೆಣಗಳು, ಹೊತ್ತಿ ಉರಿದ ಜೋಪಡಿಗಳು, ಆಕ್ರಂದನಗಳು ಅಧಿಕಾರ ರಾಜಕಾರಣದ ಫಸಲಿನಂತೆ ಕಾಣತೊಡಗಿದ್ದವು. ಇದರ ಫಲವೆಂಬಂತೆ ಇಂದಿಗೂ ಅದೇ ರಕ್ತಸಿಕ್ತ ಫಸಲು ರಾಜಕಾರಣ ಮುಂದುವರೆದಿದೆ.

ನ.9 ರಂದು ಸುಪ್ರೀಂಕೋರ್ಟ್ ರಾಮಮಂದಿರ -ಬಾಬರಿಮಸೀದಿ ಭೂ ವಿವಾದದ ಬಗ್ಗೆ ತೀರ್ಪು ಪ್ರಕಟಿಸಿದೆ. ಇದೊಂದು ಸಾಮರಸ್ಯದ ತೀರ್ಪು, ಶಾಂತಿ-ಸೌಹಾರ್ದತೆಯ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ತೀರ್ಪು ಅತ್ಯುತ್ತಮವಾಗಿದೆ ಎಂದೆಲ್ಲಾ ವಿಶ್ಲೇಷಣೆಗಳು ನಡೆಯುತ್ತಿವೆ.

2.77 ಎಕರೆ ಭೂಮಿಗೆ ರಾಮಲಲ್ಲಾ ನೆ ಅಸಲಿ ವಾರಸುದಾರರ(?!)ಮಸೀದಿಗಾಗಿ 5 ಎಕರೆ ಭೂಮಿ ಕೊಡುಗೆಯಂತಹ ಸಾಲುಗಳನ್ನು ಓದುವ ಆರಂಭದಲ್ಲೇ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಬಾಬರಿ ಮಸೀದಿಯನ್ನು ಧ್ವಂಸ ಗೊಳಿಸಿದ್ದು ಅಪರಾಧ ಎಂದು ಹೇಳಿದ ಮಾತು ಆ ಕ್ಷಣಕ್ಕೆ ಧೀರ್ಘ ನಿಟ್ಟುಸಿರು ಬಿಟ್ಟು ಸಮಾಧಾನ ಪಡುವಂತಾಯಿತು ( ಈ ಮಾತನ್ನು ಯಾವ ಸುದ್ದಿ ಮಾಧ್ಯಮಗಳು ಬ್ರೇಕಿಂಗ್ ನ್ಯೂಸ್ ಆಗಿಯೂ, ಮುಖ್ಯವಾಗಿಯೋ ತೋರಿಸುವ ಅಥವಾ ಮುದ್ರಣ ಮಾಧ್ಯಮಗಳು ಮುಖ್ಯಾಂಶ ಸುದ್ದಿಯಾಗಿಯೋ, ಗಮನಾರ್ಹ ಸ್ಥಳದಲ್ಲೋ ಪ್ರಕಟಿಸುವ ಗೋಜಿಗೆ ಹೋಗಿಲ್ಲ).

ಆದರೆ ಅಪರಾಧವೆಂದಾದ ಮೇಲೆ ಅಪರಾಧಿಗಳು ಇರಲೇಬೇಕು. ಅವರಿಗೆ ಶಿಕ್ಷೆ ಆಗಬೇಕು ಎಂಬುದರ ಬಗ್ಗೆ ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದ್ದು ಯಾರಿಗೂ ಕೇಳಿಸಲಿಲ್ಲ ಎಂದು ಭಾವಿಸುತ್ತೇನೆ.(?)

ಸದ್ಯ ಈ ತೀರ್ಪು ದೇಶದ ಸಾಮರಸ್ಯಕ್ಕೆ, ಸೌಹಾರ್ದತೆಗೆ ಯಾವ ಧಕ್ಕೆಯನ್ನು ತಂದಿಲ್ಲ ಎಂಬ ಕಾರಣಕ್ಕಾಗಿಯೇ ಇದೊಂದು ಐತಿಹಾಸಿಕ ತೀರ್ಪು. ತೀರ್ಪು ಪ್ರಕಟಗೊಳ್ಳುವ ಮುಂಚಿತವಾಗಿಯೇ ಅದನ್ನು ಶಾಂತಿ-ಸೌಹಾರ್ದತೆ ಯ ಕೃತಕ ಕಾಳಜಿಯ ಸಮೂಹ ಸನ್ನಿಯನ್ನು ಸೃಷ್ಟಿಸುವ ಮೂಲಕ ನ್ಯಾಯದ ಸಮಾಧಿಯ ಬಗ್ಗೆ ಯಾರೊಬ್ಬರೂ ಮಾತಾಡದಂತೆ ಮಾಡಲಾಗಿದೆ.

ವಿವಾದಿತ ಭೂಮಿ ರಾಮಜನ್ಮಭೂಮಿಯೇ ಆಗಿ ಅಖೈರು ಗೊಂಡಿದ್ದರಿಂದ ಆಸ್ತಿಕ ಹಿಂದೂಗಳಲ್ಲಿ ಸಹಜ ಸಂತಸ ವ್ಯಕ್ತವಾಗುತ್ತಿದೆ. ಆದರೆ ಭೂಮಿ ಹಕ್ಕಿಗಾಗಿ ಹೋರಾಡಿಕೊಂಡು ಬಂದಿದ್ದ ಮುಸ್ಲಿಂ ಸಂಘಟನೆಗಳು ತಮಗೂ ನ್ಯಾಯ ಸಿಕ್ಕಿತು ಎಂಬ ಭಾವನೆಯಲ್ಲಿ ಒಪ್ಪಿಕೊಂಡಿರುವುದು ಈ ಹೊತ್ತಿನ ಅನಿವಾರ‍್ಯವೇನೊ ಎಂಬಂತೆ ಅರ್ಥೈಸಬಹುದು, ಭೂಮಿ ಹಕ್ಕಿಗಿಂತ ಈ ದೇಶದ ಶಾಂತಿ-ಸೌಹಾರ್ದತೆ ಮುಖ್ಯ ಎಂಬ ಭಾವನೆಯನ್ನು ಎಲ್ಲೆಡೆ ವ್ಯಕ್ತವಾಗುತ್ತಿರುವ ಅಬ್ಬರದಲ್ಲಿ ನ್ಯಾಯದ ತಣ್ಣನೆಯ ಅಳಲು ಯಾರಿಗೂ ಕೇಳಿಸುತ್ತಿಲ್ಲ.

1990 ಸೆಪ್ಟಂಬರ್ ನಿಂದ ಮೂರು ತಿಂಗಳ ಅವಧಿಯಲ್ಲಿ ಭಾರತದಲ್ಲಿ ರಾಮನ ಹೆಸರಿನಲ್ಲೇ 166 ಕೋಮುಗಲಭೆಗಳು ನಡೆದಿವೆ. 564 ಜನರ ಬಲಿ ನಡೆದು ಹೋಗಿದೆ. ಕೇವಲ ಜೈಪುರ ಒಂದರಲ್ಲೇ 1990 ಅಕ್ಟೋಬರ್ ತಿಂಗಳೊಂದರಲ್ಲೆ 130 ಜನ ಅಮಾಯಕರು ಧರ್ಮದಾಹಕ್ಕೆ ಬಲಿಯಾಗಿ ಹೋದರು. (ಇದು ಸರ್ಕಾರಿ ಲೆಕ್ಕ. )

1992 ಡಿ.6 ರಂದು ಬಾಬರಿ ಮಸೀದಿ ಧ್ವಂಸಗೊಂಡ ಬೆನ್ನಲ್ಲಿ ದೇಶಾದಾದ್ಯಂತ ಭುಗಿಲೆದ್ದ ಗಲಭೆಯಲ್ಲಿ ಜಸ್ಟೀಸ್ ಮನಮೋಹನ್ ಸಿಂಗ್ ಲಿಬ್ರಹಾನ್ ವರದಿಯ ಮೂಲಗಳ ಪ್ರಕಾರವೇ 2000ಸಾವಿರಕ್ಕೂ ಹೆಚ್ಚು ಜನರ ಕಗ್ಗೊಲೆ ನಡೆದಿದೆ. ಅಲ್ಲಿಂದ 2002 ರ ಗೋದ್ರಾ ಹತ್ಯಾಕಾಂಡದ ವರೆಗೂ ನಡೆದ ನಿರ್ಮಾನುಷ ಹತ್ಯೆ, ಅತ್ಯಾಚಾರಗಳಿಗೆ ಸಾವಿರಾರು ಜನರು ತುತ್ತಾಗಿದ್ದಾರೆ.

ಅಯೋಧ್ಯೆಯ ವಿವಾದಿತ ಭೂಮಿ ರಾಮನಿಗೆ ಸೇರಿದ್ದು , ಮಸೀದಿಯಲ್ಲ ಎಂದು ತೀರ್ಪು ನೀಡಿದ ನ್ಯಾಯಪೀಠ ರಾಮನ ಭೂಮಿ ಮೇಲೆ ಕಟ್ಟಲ್ಪಟ್ಟ ಕಟ್ಟಡ(ಮಸೀದಿ)ಯನ್ನು ಒಡೆದು ಹಾಕಿದ್ದಕ್ಕೆ ಪರಿಹಾರವಾಗಿ ಅರ್ಜಿದಾರ ಸುನ್ನಿ ವಕ್ಫ್ ಸಮಿತಿಗೆ ಮಸೀದಿ ಕಟ್ಟಿಕೊಳ್ಳಲು 5 ಎಕರೆ ಭೂಮಿಯನ್ನು ದಯಪಾಲಿಸಿದೆ. ಆದರೆ ಮಸೀದಿ ಒಡೆದವರಿಗೆ ಯಾವ ಶಿಕ್ಷೆಯೂ ಘೋಷಣೆಯಾಗದಿರುವುದು ಈಗ ಮರೆಗೆ ಸರಿದು ಹೋಗಿದೆ.

ಬಾಬ್ರಿ ಮಸೀದಿ ದ್ವಂಸದಲ್ಲಿ ಲಾಲ್ ಕೃಷ್ಣ ಅಡ್ವಾನಿ, ವಾಜಪೇಯಿ, ಉಮಾಭಾರತಿ, ಮುರಳಿ ಮನೋಹರಜೋಷಿ ಸೇರಿದಂತೆ 68 ಜನ ಅಪರಾಧಿಗಳು ಎಂದು ಘೋಷಿತವಾಗಿತ್ತು. ಮಸೀದಿಯ ಧ್ವಂಸದ ನೀಲಿನಕ್ಷೆ ಸಂಘಪರಿವಾರದ್ದೇ ಅಗಿದ್ದು, ಇದನ್ನು ಅನುಷ್ಠಾನ ಗೊಳಿಸುವಲ್ಲಿ ಅಡ್ವಾಣಿ, ಮುರಳಿ ಮನೋಹರ ಜೋಷಿ ಅವರು “pseudo moderate” ಪಾತ್ರ ವಹಿಸಿದ್ದರು. ಅಸಲಿ ಸಂಚುದಾರರು ಅವರೇ ಆಗಿದ್ದರು.

ಉತ್ತರ ಪ್ರದೇಶದ ಕಲ್ಯಾಣ ಸಿಂಗ್ ಸರ್ಕಾರ ಆಡಳಿತ ಯಂತ್ರವನ್ನು ಬಳಸಿಕೊಂಡು ವ್ಯವಸ್ಥಿತವಾಗಿ ಮಸೀದಿ ಧ್ವಂಸಕ್ಕೆ ಸಹಕಾರ ನೀಡಿತ್ತು. ಇದೊಂದು ಈ ದೇಶದ ಜನರ ವಿಶ್ವಾಸ ಘಾತುಕ ಕೃತ್ಯ ಎಂದು ಲಿಬ್ರಾಹನ್ ಆಯೋಗದ ವರದಿ ಯಲ್ಲಿ ಅಂಗೈ ಹುಣ್ಣಿನಂತೆಯೇ ಇದೆ ಹೀಗಿರುವಾಗ ನ್ಯಾಯ ದಾನದಲ್ಲಿ ಇವು ಗೋಚರಿಸದೆ ಹೋದದ್ದು ಒಂದು ವಿಪರ್ಯಾಸ.

ರಾಮಲಲ್ಲಾ (ಶ್ರೀರಾಮ) ಗೆ ನ್ಯಾಯ ಸಿಕ್ಕಿತು ನಿಜ, ರಾಮನೂ ಸುಖವಾಗಿರಬಹುದು, ರಹೀಮನಿಗೂ ಪರಿಹಾರ ಸಿಕ್ಕಿದ ಸಮಾಧಾನ ವಿರಬಹುದು. ಆದರೆ ಘಾತುಕ ರಾಜಕಾರಣವನ್ನೆ ಹೊತ್ತ ರಾಮರಥ ಹಾದು ಹೋದ ಹಾದಿಗಳಲ್ಲಿ , ಅದು ಬೀಸಿದ ವಿಷಗಾಳಿ ಸೋಕಿದ ನೆಲಗಳಲ್ಲಿ ತಲವಾರು, ತ್ರಿಶೂಲಗಳಿಗೆ ಬಲಿಯಾದ, ಧರ್ಮಧುರಿಯಲ್ಲಿ ಬೆಂದು ಬೂದಿಯಾದವರ ಕುಟುಂಬಗಳಿಗೆ ನ್ಯಾಯ ಸಿಕ್ಕಿದೆಯಾ.?

ಅದೆಷ್ಟು ವಿಧವೆಯರು, ತಂದೆ-ತಾಯಿ ಕಳೆದುಕೊಂಡು ಅನಾಥರಾದ ಮಕ್ಕಳು, ಮಕ್ಕಳನ್ನು ಕಳೆದುಕೊಂಡು ನಿತ್ಯ ದುಃಖಳಿಸುವ ತಂದೆ-ತಾಯಿಗಳು, ಉಸಿರು ಬಿಗಿ ಹಿಡಿದುಕೊಂಡು ನರಳುತ್ತಿರುವ ಆ ನಷ್ಟ- ನೋವು, ಗೋಳು, ನಿಟ್ಟುಸಿರುಗಳಿಗೆ ನ್ಯಾಯ ಸಿಕ್ಕುವುದಾದರೂ ಎಂದು? ಮರ್ಯಾದಾಪುರುಷೋತ್ತಮ ರಾಮನ ನ್ಯಾಯ ಪ್ರತಿವ್ರತಾ ಶಿರೋಮಣಿ ಸೀತೆ, ಶೂರ್ಪನಖಿ, ರಾವಣ, ಶಂಭೂಕರ ಪಾಲಿಗೆ ಘನಘೋರ ಅನ್ಯಾಯ ಎಂಬುದನ್ನು ಜಗತ್ತು ಅರಿವುದಾದರೂ ಎಂದು?!.

‍ಲೇಖಕರು avadhi

November 13, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಗೀತಾ ಎನ್ ಸ್ವಾಮಿ. ಪ್ರಾಂಶುಪಾಲರು ತಿಪಟೂರು

    ರಾಮನಿಗೇನೋ ನ್ಯಾಯ ಸಿಕ್ಕಿತು ಆದರೆ? ರವಿಕುಮಾರ್ ಟೆಲೆಕ್ಸ್ ಅವರ ಲೇಖನ ಇವತ್ತಿಗೆ ಧರ್ಮ ಮತ್ತು ರಾಜಕಾರಣ ಹುಟ್ಟು ಹಾಕುತ್ತಿರುವ ಅನೇಕ ರೂಪದ ಮುಸುಕಿನ ವಿಕಾರಗಳನ್ನು ಕಾಣಿಸುವ ಮೂಲಕ ಬಹು ದೊಡ್ಡ ಮನುಷ್ಯರಾಗಬೇಕಾದ ಎಚ್ಚರಗಳನ್ನು ಕಾಣಿಸಿದೆ. ಒಟ್ಟು ಲೇಖನದ ಆಶಯವೇ ಬಹುತ್ವಭಾರತಕ್ಕೆ ಅಗತ್ಯವಿರುವ ಸಮಾನತೆ ಹುಡುಕಾಟಗಳ ಕಡೆಗಿದೆ. ಆದರೆ ಇಂಥಾ ಮಾನವ ಪ್ರೇಮಕ್ಕಾಗಿಯೇ ದಾರಿಗಳನ್ನು ಹುಡುಕುತ್ತಿರುವ ಅನೇಕ ಮನಸುಗಳಿಗೆ ಇವತ್ತಿನ ರಾಜಕೀಯ ವ್ಯವಸ್ಥೆಯಲ್ಲಿ ಸಮಾನತೆಗೆ ಅವಕಾಶಗಳಿಲ್ಲದ ವಿಕಾರಗಳ ಚಲನೆ ಕೂಡ ನಿತ್ಯದ ದುರಂತವೆಂಬುದು ಅರ್ಥವಾಗುತ್ತಿದೆ. ಹಾಗಂತ ಸೆಕ್ಯುಲರ್ ಜನ ಗುಂಪು ವಿಸ್ತರಿಸಿ ಚಳುವಳಿಗಿಳಿಯದೇ ಹೋದರೆ ಪುರಾಣ ಪ್ರಸಿದ್ಧ ವ್ಯಕ್ತಿಗಳ ಹೆಸರಿನಲ್ಲಿ ಕೊಲ್ಲುವ ಉದ್ಯೋಗಕ್ಕಾಗಿಯೇ ಅರ್ಜಿಗಳನ್ನು ಆಹ್ವಾನಿಸುವ ಕಾಲ ದೂರವಿಲ್ಲ. ಮನುಷ್ಯನಲ್ಲಿ ಭಾವಶುದ್ದಿಯ ಕಾತರಗಳು ಹುಟ್ಟದೇ ಹೋದ್ರೆ ಇನ್ನೂ ಈ ದೇಶದಲ್ಲಿ ಆಯುಧಗಳು ಬಹಿರಂಗವಾಗಿ ಜೀವಹತ್ಯೆಗೆ ಆಹ್ವಾನಿಸುವ ವಿಕೃತಿ ಮುಂದುವರಿತಾ ತನ್ನ ಬಲವನ್ನು ರಕ್ತಹರಿಸಲೆಂದೇ ಹೆಚ್ಚಿಸಿಕೊಳ್ಳೋದ್ರಲ್ಲಿ ಅಚ್ಚರಿ ಇಲ್ಲ. ನ್ಯಾಯಾಧೀಶರು ರಾಜಕಾರಣಿಗಳಿಗೆ ಸರಿಯಾದ ಕಡಿವಾಣ ಹಾಕದೇ ಹೋದ್ರೆ ಚುನಾವಣೆಗಳು ಸಾಮೂಹಿಕ ಜನಹತ್ಯೆಯ ವಿಕಾರಗಳೆ ಆಗಿಬಿಡ್ತವಲ್ಲ.
    ರಾಮನ ಹೆಸರಿನಲ್ಲಿ ನಡೆದ ನಡೆಯುತ್ತಿರುವ ನಡೆಯಲಿರುವ ಎಲ್ಲಕ್ಕೂ ಅಂತ್ಯ ಹಾಡಬೇಕಿದೆ. ಇದು ಆದರೆ ಬಹುತ್ವಭಾರತ ಸರ್ವಧರ್ಮ ಸಮನ್ವಯದ ಬೆಳಕನ್ನು ಕಾಯ್ದುಕೊಳ್ಳಬಲ್ಲದು. ರಾಮನ ಚರಿತ್ರೆ ಕೊಲ್ಲುವ ಚಟವಾಗಿ ಚಲಿಸದಿರಲಿ. ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆಗಳಾಗುವ ಕಾಲವೊಂದರ ನಿರೀಕ್ಷೆಯಲ್ಲಿ ಇರೋಣ ಹಾಗೆಯೇ ಅಂತದ್ದಕ್ಕಾಗಿ ಸದಾ ಒಂದಾಗೋಣ.

    ಪ್ರತಿಕ್ರಿಯೆ
  2. samir sardana

    Subject – How can a Mosque be renounced by virtue of perceptual faith to Idolators &a Heathen God

    Context

    This is proof that Hindoosthan has to be partitioned.dindooohindoo

    The Indian Judiciary,in another case, has hanged a community based on public perception. In other words,it has deprived a Title owner of its Title – on the grounds of perceptual faith,and denied the title holder the right to make a renunciation.

    History ?

    It is “neither History nor an Interpretation or Perception of History”.It is a Distortion of History.What is Public perception in a nation where idols drink milk & rum &500 million people are swayed by a Rs 15,00,00 promise.During the time of Babar,the population of Hindoosthan might have been 15 million &that of Ayodhya,around 350000.

    How can the “Muslims” of Hindooosthan – give a Mosque to the Hindoo Idolator ?

    ASI

    ASI Reports mean nothing as the temple underneath, may have a stupa underneath (as it was a controlled excavation) – &there was no monolithic Hindoo faith in that time – just menial,savage,heathen pagan &satan worshippers.The ASI report has no proof that there was a Rama temple or that it was the birthplace of Rama or that it was a temple of Vishnu.

    ASI has done limited excavations in Ayodhya &I can bet that if it is done – there will be several Ram Janamsthans – set up by Brahmins to milk hapless &heathen Hindoos – just like the Bible of Barnabus (appeared magically) &blew up the Jesus crucifixion &resurrection gospel.

    The 5 acre pitt(y)ance

    Will the Hindoos allow the Muslims to make a “Shaheed Babri Masjid” at the 5 acre spot ? Babar &the Mughals civilised the Hindoos ! Read this verse from the Ramayana – when Ravana describes Seeta !

    http://www.valmikiramayan.net/aranya/sarga46/aranya_46_frame.htm

    “Your hips are beamy, thighs burly akin to elephant’s trunks, &these two breasts of yours that are ornamented with best jewellery are rotund, rubbing &bumping each other, &they are swinging up &up, their nipples are brawny &jutting out, &they are smoothish like palm-fruits, thus they are covetable for they are beautiful.

    “Oh, allurer, your smile is alluring, teeth are alluring, &your eyes allure, oh, beauty, your waist is palmful, your hair velvety, your breasts are jostling, &you rob my soul as a spate robs riverbank. [3-46-21, 22a]

    It will be obvious to the AG of the Indian Government, that Seeta was topless &wearing a loincloth. THE MUGHALS TAUGHT THE HINDOOS TO WEAR CLOTHES &DO PROPER ABLUTIONS !

    Besides the above,how can a “Muslim” &even an “Indian Muslim” renounce a mosque to Rama ? Who is Mr Tulsidas ? Was the Quran revealed to the Prophet or to Ghazali ? Tulsidas was a hallucinated crank high on coke – in love with Rama who spent 12 years in a jungle with only apes &some humans

    As per the Valmiki Ramayana – Sita called Rama an impotent pansy &Rama is quoted in the Ramayana – as stating to Seeta – that she should prostitute herself to apes,demons &Rama’s own brother ! Can such a man be a Prophet or a God or Imam ?

    Seeta calls Rama an Impotent Pansy

    Book II : Ayodhya Kanda – Book Of Ayodhya Chapter[30

    “What my father, the king of Mithila belonging to the country of Videha, think of himself having got as so-in-law you, a woman having the form of a man?”

    Rama tells Seeta to prostitute herself

    Chapter [115

    “O Seetha! That is why, I am permitting you now. Go wherever you like. All these ten directions are open to you, my dear lady! There is no work to be done to me, by you.”

    “O gracious lady! Therefore, this has been spoken by me today, with a resolved mind. Set you mind on Lakshmana or Bharata, as per your ease.”

    “O Seetha! Otherwise, set your mind either on Shatrughna or on Sugreeva or on Vibhishana the demon; or according to your own comfort.”

    Can a Mosque be renounced in favour of such a person ?

    Partition = only solution the Rama Temple will never be completed

    ಪ್ರತಿಕ್ರಿಯೆ
  3. T S SHRAVANA KUMARI

    ಈ ಗೊಂದಲ ಸಾಕಾಗಿದೆ. ಇನ್ನಾದರೂ ತಣ್ಣಗಿರೋಣ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: