ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾತ್ರಿ ಮಲಗುವಾಗ ಹಲ್ಲಿನ ಸೆಟ್ಟನ್ನು ತೆಗೆದು ಗೂಡಿನಲ್ಲಿ ಇಟ್ಟಿದ್ದೆ!

ಡಾ ಕೃಷ್ಣಮೂರ್ತಿ


ಮೊನ್ನೆ ಸಂಜೆ ವಯೋವೃದ್ಧರೊಬ್ಬರು ಆಸ್ಪತ್ರೆಗೆ ಬಂದರು.
ರೋಗಿ ;  “ಸಾರ್, ಮೂರು ದಿನದಿಂದ ರಾತ್ರಿಯಾದರೆ ವಿಪರೀತ ಜ್ವರ,ಮೈಕೈ ನೋವು ”
ನಾನು ; ಛಳಿ ಆಗಿ ಮೈ ನಡುಕ(shivering)ಬರುತ್ತಾ ?
ರೋಗಿ : (ಸರಿಯಾಗಿ ಕೇಳಿಸದೇ) …..ಆಂ ಏನಂದ್ರೀ ?
ನಾನು : ( ಇನ್ನೂ ಜೋರಾಗಿ) ಛಳಿಯಾಗಿ ಮೈ ಕೈ ನಡುಗುತ್ತಾ ?
ರೋಗಿ ; (ಕಿವಿಯ ಹತ್ತಿರ ಕೈ ಇಟ್ಟುಕೊಂಡು ಮತ್ತೊಮ್ಮೆ)..ಆಂ …ಏನಂದ್ರೀ…?
ನಾನು ( ಮತ್ತಷ್ಟು ಜೋರಾಗಿ ಕೂಗುತ್ತಾ ) ಹಲ್ಲು ಕಟ ಕಟಾ ಅಂತ ಶಬ್ದ ಮಾಡುತ್ತಾ ?
ರೋಗಿ :(ತಣ್ಣಗಿನ ದನಿಯಲ್ಲಿ ) ಅಯ್ಯೋ ಗಮನಿಸಲಿಲ್ಲಾ ಡಾಕ್ಟ್ರೆ . ರಾತ್ರಿ ಮಲಗುವಾಗ ಹಲ್ಲಿನ ಸೆಟ್ಟನ್ನು ತೆಗೆದು ಗೂಡಿನಲ್ಲಿ ಇಟ್ಟಿದ್ದೆ !!!!!
ನಾನು ಸುಸ್ತು. ಇವರ ಹತ್ತಿರ ಕೂಗಿ,ಕೂಗಿ,ನನಗೇ ಯಾಕೋ ಜ್ವರ ಬಂದ ಹಾಗಿತ್ತು
 

‍ಲೇಖಕರು G

29 September, 2014

4 Comments

  1. Chinmay

    ha ha,

  2. ಅಕ್ಕಿಮಂಗಲ ಮಂಜುನಾಥ

    ಹ್ಹ….ಹ್ಹ….ಹ್ಹ…………..

  3. kvtirumalesh

    ದೇವರೇ! ಇದೆಂಥಾ ಜೋಕು! ಮೂರು ದಿನಗಳಿಂದ ಜ್ವರದಿಂದ ಬಳಲಿದ ವಯೋವೃದ್ಧರೊಬ್ಬರು ಡಾಕ್ಟರರೆದುರು ತಬ್ಬಿಬ್ಬಾಗಿದ್ದಾರೆ. ಪಾಪ ಅವರಿಗೆ ನಿಮ್ಮಷ್ಟು ವಿದ್ಯೆಯಾಗಲಿ ಬುದ್ಧಿಯಾಗಲಿ ಇರಲಾರದು. ಕಿವಿ ಕೇಳಿಸದ ವೃದ್ಧ ರೋಗಿಯನ್ನು ಮಾತಾಡಿಸಿ ನಿಮಗೆ ಸುಸ್ತಾಯಿತು ಅಲ್ಲವೇ? ಸರಿ, ನೀವು ಬಯಸುವುದು ಎಂಥಾ ರೋಗಿಗಳನ್ನು ಡಾಕ್ಟರೇ?
    ವೃದ್ಧರನ್ನು ಗೌರವಿಸುವಲ್ಲಿ ನೀವೇ ಯಾಕೆ ಮುಂದಾಗಬಾರದು? ಪ್ರಯತ್ನಿಸಿ ನೋಡಿ, ಬದಲಾಗಿ.
    ಕೆ.ವಿ.ತಿರುಮಲೇಶ್

  4. lalithasiddabasavaiah

    a joke of bad taste

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading