ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಜೇಂದ್ರ ಕಿಶೋರ್ ಪಂಡಾಗೆ ಕುವೆಂಪು ರಾಷ್ಟ್ರೀಯ ಪುರಸ್ಕಾರ

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕೊಡಮಾಡುವ  ೨೦೨೦ರ ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ ಒರಿಯಾ ಕವಿ ಡಾ. ರಾಜೇಂದ್ರ ಕಿಶೋರ್ ಪಂಡಾ ಅವರನ್ನು ಆಯ್ಕೆ ಮಾಡಲಾಗಿದೆ. ಪುರಸ್ಕೃತರಿಗೆ ಐದು ಲಕ್ಷ ರೂಪಾಯಿ ನಗದು ಮತ್ತು ಬೆಳ್ಳಿ ಪದಕವನ್ನು ನೀಡಿ ಗೌರವಿಸಲಾಗುವುದು.

ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ಹಂಪನಾ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.

ಆಯ್ಕೆ ಸಮಿತಿಯ ಸದಸ್ಯರಾಗಿ ಕವಿ ಹೆಚ್.ಎಸ್. ಶಿವಪ್ರಕಾಶ್, ಅಗ್ರಹಾರ ಕೃಷ್ಣಮೂರ್ತಿ ಮತ್ತು ಬೆಂಗಾಳಿ ಸಾಹಿತಿ ಶ್ಯಾಮಲ್ ಭಟ್ಟಾಚಾರ್ಯ ಹಾಗೂ ಸಮಿತಿಯ ಸಂಚಾಲಕರಾಗಿ ಶ್ರೀ ಕಡಿದಾಳ್ ಪ್ರಕಾಶ್ ಭಾಗವಹಿಸಿದ್ದರು.

ವೃತ್ತಿಯಿಂದ ಐ.ಎ.ಎಸ್. ಅಧಿಕಾರಿಯಾಗಿದ್ದ ಡಾ. ರಾಜೇಂದ್ರ ಕಿಶೊರ್ ಪಂಡಾ (ಜನನ: ೨೪-೦೬-೧೯೪೪), ೧೯೭೫ರಲ್ಲಿ ‘ಗೌಣ್ ದೇವತಾ’ ಎಂಬ ಕವನ ಸಂಕಲನ ಪ್ರಕಟಿಸುವುದರೊಂದಿಗೆ ಸಾಹಿತ್ಯ ಕ್ಷೇತ್ರಕ್ಕೆ ತೆರೆದುಕೊಂಡವರು. ಇದುವರೆಗೆ ೧೬ ಕವನ ಸಂಕಲನಗಳು ಮತ್ತು ಒಂದು ಕಾದಂಬರಿ ಪ್ರಕಟವಾಗಿದೆ.

ಶ್ರೀಯುತರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೫) ಮತ್ತು ಗಂಗಾಧರ್ ರಾಷ್ಟ್ರೀಯ ಪ್ರಶಸ್ತಿ (೨೦೧೦) ಪುರಸ್ಕೃತರಾಗಿದ್ದಾರೆ.

‍ಲೇಖಕರು Admin

30 June, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading