ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಘವೇಂದ್ರ ಜೋಷಿ, ಅನು ಪಾವಂಜೆ ಹಾಗೂ ಹರಿಹರನ್

ರಾಘವೇಂದ್ರ ಜೋಷಿ

ರಾವಣ,ಕೀಚಕ,ವಾಲಿ-ಇವರೆಲ್ಲರೂ ಹೆಣ್ಣಿನ ಹಿಂದೆ ಬಿದ್ದವರೇ.ಕೃಷ್ಣ ಕೂಡ.ಆದರೆ ಅವರೆಲ್ಲ ಆಯಾ ಹೆಣ್ಣುಗಳಿಂದ ಏನೋ ಪಡೆಯಲೆತ್ನಿಸಿದವರು.ಕೃಷ್ಣ ಬರೀ ಕೊಡಲು ಯತ್ನಿಸಿದವ.Mostly,ಪಡೆಯುವದಕ್ಕಿಂತ ಕೊಡುವದು ಆತನಿಗೆ ಸುಲಭವಾಗಿ ಕಂಡಿರಬೇಕು.ಅಥವಾ ಹಾಗೆ ಕೊಡುವದರಿಂದ ಮಾತ್ರ ಪಡೆಯುವದು ಸಾಧ್ಯ ಅಂತ ಅನಿಸಿರಬೇಕು.ಒಮ್ಮೆ ಭಗವಂತನಿಗೆ ಆತನದೇ ಅಂತಃಶಕ್ತಿ ಕೇಳಿತಂತೆ:”ಏನೂ?ಬರೀ ನೀನೇ ಎಲ್ಲಾ ಕಡೆ show ಕೊಡುತ್ತ ನನ್ನನ್ನು ಮಾತ್ರ ಶೇಷನಾಗ,ಗರುಡ,ಲಕ್ಷ್ಮಣ ಮುಂತಾದ ಪಾತ್ರಗಳಿಗೆ ಸೀಮಿತನಾಗಿಸುತ್ತೀಯಲ್ಲ..?”

ಆಗ ಭಗವಂತ,”ಆಯ್ತು,ಒಮ್ಮೆ ನನ್ನ ಅಣ್ಣನಾಗು..” ಅಂತ ನಕ್ಕನಂತೆ.ಹಾಗೆ ಹುಟ್ಟಿದ್ದು ಬಲರಾಮ.ಹೀಗೆ ಕೃಷ್ಣ ತನ್ನ ನಂಬಿ ಬಂದವರಿಗೆಲ್ಲ ಜಾಗಬಿಟ್ಟು ಔದಾರ್ಯ ಮೆರೆಯಬಲ್ಲ.ತಮ್ಮನಾಗಿಯೂ ದೊಡ್ದವನಾಗಬಲ್ಲ.ಆತನಿಗೆ ಯಾರ ಕುಪ್ಪಸ ಕದಿಯಬೇಕೆಂಬ ಪ್ರಜ್ಞೆಯಿದೆ.ಯಾರಿಗೆ ಸೀರೆ ಕೊಡಬೇಕೆಂಬ ಅರಿವಿದೆ.ಹಾಗೆಯೇ ಯಾರಿಗೆ ವಿಶ್ವರೂಪ ತೋರಿಸಬೇಕೆಂಬ ಜವಾಬ್ದಾರಿಯಿದೆ.ಆತ ಪ್ರೀತಿಗಾಗಿ ತಂಗಿಯನ್ನು ಓಡಿಸಬಲ್ಲ;ಪ್ರೇಮಕ್ಕಾಗಿ ತಾನೇ ಓಡಬಲ್ಲ.ಪೂಜಿಸಲೆಂದು ಇಡೀ ಜಗತ್ತಿಗೆ ಮುಕ್ಕಾಲು ಕೋಟಿ ದೇವರುಗಳನ್ನು ಸೃಷ್ಟಿಸಿಕೊಟ್ಟು ತಾನು ಮಾತ್ರ ಕಳ್ಳ,ಸುಳ್ಳ,ಉಲಕೋಚಿ,ಕಪಟನಾಟಕ ಸೂತ್ರಧಾರಿಯೆಂದು ಬಿಂಬಿಸಿಕೊಳ್ಳುತ್ತ,ಯಾರ್ಯಾರದೋ ಕನಸಿಗೆ ಕಮಾನು ಕಟ್ಟುತ್ತಲೇ ಹಲವಾರು ಮನಸುಗಳನ್ನು ಸಂತೈಸುತ್ತ ಇದ್ದುಬಿಡಬಲ್ಲ.ಬಹುಶಃ ಅವನಿರುವದು ಪೂಜೆಗಲ್ಲ;ಆರಾಧನೆಗೆ!
ಹೀಗಿರುವಾಗ,ಹೆಣ್ಣೊಬ್ಬಳು ರಾಮನಂಥ ಗಂಡನಲ್ಲೂ ಇಂಥ ಕೃಷ್ಣನಿಗಾಗಿ ಆಗಾಗ ಹುಡುಕಾಡಿದರೆ,ಹಂಬಲಿಸಿದರೆ ಅದು ವ್ಯಾಸರ ತಪ್ಪೇ?

ಅಷ್ಟಮಿಯ ನೆನಪು…
ಅನು ಪಾವಂಜೆ
ಶುರುವಾಗಿದೆ ಸ೦ಭ್ರಮ…
ಉ೦ಡೆ ಚಕ್ಕುಲಿಗಳದ್ದೇ ಘಮ ಮನೆ ತು೦ಬಾ…
ಅಲ್ಲಿ ಹೋಗಬೇಡ…ಇಲ್ಲಿ ಬರಬೇಡ…
ಕ೦ಡಕ೦ಡಲ್ಲಿ ಮುಟ್ಟಿ ಮೈಲಿಗೆ ಮಾಡಬೇಡಾ
ಅ೦ತ ಮಣಮಣ ಮಾಡುವ ನನ್ನಜ್ಜಿ
ಅಡುಗೆ ಮನೆಯೊಳಗೆ ಕೂತು
ಮಡಿಯಲ್ಲಿ ಒದ್ದೆಪಟ್ಟೆ ಉಟ್ಟುಕೊ೦ಡು
ಕೋಡುಬಳೆ ಹೊಸೆಯುತ್ತಿದ್ದವಳು
ದೇವರ ಮನೆಗೆ ಬ೦ದು
ವೀಳಯದ ಎಲೆಯ ಮೇಲೆ
ಬೆಣ್ಣೆಯ ಮುದ್ದೆಯನಿರಿಸಿ
ಮೊಣಕಾಲೂರಿ…ಪುಟ್ಟ ಹೆಜ್ಜೆಯ
ಕೃಷ್ಣನ ಬರವಿಗಾಗಿ ಕಾಯುತ್ತಿದ್ದಾಳೆ…

 

‍ಲೇಖಕರು G

28 August, 2013

4 Comments

  1. jyothi girish

    Good reading

  2. Mukta

    ಬಾಲ್ಯದಲ್ಲಿ ಕೂಗಿ ಕರೆದೆ
    ಕಾಣದ ಅಣ್ಣನಾಗಿ ಕಣ್ಣಾದ
    ಹರೆಯದಲ್ಲಿ ಬಾಚಿ ತಬ್ಬಿಕೊಂಡೆ
    ಎದೆಯಲೆಂದೂ ಅಳಿಯದ ಕನಸಾದ
    ಮತ್ತೆ ಮುದದಿಂದ ಎತ್ತಿಕೊಂಡೆ
    ಮಡಿಲಲ್ಲೇ ಉಳಿವ ಮಗುವಾದ
    ಮತ್ತೀಗ ಮೌನವಾದರೆ
    ಅನಂತ ಘನ ನೀಲ ಮೆಘವಾದ
    ಆಕರ್ಷಣೆಯ ರೂಪವೇ ಕೃಷ್ಣ ..ಚೆನ್ನಾಗಿದೆ

  3. Anonymous

    Nice

  4. bharathi

    Eshtondu ishtavaythu …

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading