ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರವೀಂದ್ರ ಮಾವಖಂಡ ಮೆಚ್ಚಿದ ‘ಬೆಟ್ಟದ ಜೀವ’

ಬೆಟ್ಟವೇರಿ ಬಂದ ಬಳಿಕ…

ಖ್ಯಾತ ನಿರ್ದೇಶಕ ಪಿ.ಶೇಷಾದ್ರಿ ನಿರ್ದೇಶಿಸಿರುವ, ಶಿವರಾಮ ಕಾರಂತರ ಕಾದಂಬರಿ ಆಧರಿಸಿದ, ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ‘ಬೆಟ್ಟದ ಜೀವ’ವನ್ನು ಇವತ್ತಷ್ಟೇ ನೋಡಿದೆ. ಬಹಳ ಅದ್ಭುತವಾಗಿದೆ. ಇದರ ಮುಖ್ಯ ಪಾತ್ರಗಳಲ್ಲಿ ದತ್ತಣ್ಣ (ಇವರೂ ರಾಷ್ಟ್ರಪ್ರಶಸ್ತಿ ವಿಜೇತ ಕಲಾವಿದ), ರಾಮೇಶ್ವರಿ ವರ್ಮಾ (ರಂಗಭೂಮಿ ಹಿನ್ನೆಲೆಯ, ನಿವೃತ್ತ ಪ್ರಾಧ್ಯಾಪಕರಾದ ಇವರು ಆಗೀಗ ಒಳ್ಳೆಯ ಸಿನಿಮಾಗಳಲ್ಲಿ, ಒಳ್ಳೊಳ್ಳೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುವವರು ), ನಿರ್ದೇಶಕ, ನಟ ಕೆ.ಸುಚೇಂದ್ರಪ್ರಸಾದ್ (ಇವರಂತೂ ನನ್ನ ನೆಚ್ಚಿನ ನಟ. ಇವರಿಗೆ ಎಂಥ ಪಾತ್ರ ಕೊಟ್ಟರೂ ಸಮರ್ಥವಾಗಿ, ಅಷ್ಟೇ ಮನೋಜ್ಞವಾಗಿ ಅಭಿನಯಿಸಬಲ್ಲವರು), ಲಕ್ಷ್ಮಿ ಹೆಗಡೆ (ಒಳ್ಳೆಯ ಕಲಾವಿದೆ) ಅಭಿನಯಿಸಿದ್ದಾರೆ. ಸಂಗೀತ ವಿ.ಮನೋಹರ್.

ಈ ಚಿತ್ರ ಪ್ರದರ್ಶನಕ್ಕೆ ಎಸ್.ಎಲ್.ಭೈರಪ್ಪ, ಗಿರೀಶ್ ಕಾಸರವಳ್ಳಿ, ಗೋಪಾಲಕೃಷ್ಣ ಪೈ, ಮನು ಚಕ್ರವರ್ತಿ, ಎಸ್.ಆರ್.ವಿಜಯಶಂಕರ, ಎ.ಎನ್.ಮುಕುಂದ್, ಪಿ.ರಾಮದಾಸ್ ನಾಯ್ಡು ಸೇರಿದಂತೆ ಹಲವಾರು ಗಣ್ಯಾತಿಗಣ್ಯರೆಲ್ಲ ಬಂದಿದ್ದರು. ಇದು ಚಿತ್ರದ ಬಗ್ಗೆ ನನ್ನ ಕಿರುಟಿಪ್ಪಣಿ. ಇದರ ವಿವರಗಳನ್ನು ಮತ್ತೊಮ್ಮೆ ಬರೆಯುವೆ (ಸಾಧ್ಯವಾದರೆ !).

ಎಲ್ಲರೂ ನೋಡಬಹುದಾದಂಥ, ನೋಡಲೇಬೇಕಾದಂಥ ಈ ಸಿನಿಮಾ ಜೂನ್ ಎರಡನೇ ವಾರ ಬಿಡುಗಡೆಯಾಗಲಿದೆ. ಇದರ ಕೆಲವು ಚಿತ್ರಗಳು ನಿಮಗಾಗಿ.

ಚಿತ್ರ: ಆರ್.ಮನೋಹರ್

 

‍ಲೇಖಕರು G

29 May, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading