ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರವಿವರ್ಮ ಹೊಸಪೇಟೆ ಹೇಳಿದ ಓಶೋ ಕಥೆ

ರವಿವರ್ಮ ಹೊಸಪೇಟೆ

ಇದು ಕೋತಿಗಳಿಗೆ ತರಬೇತಿ ಕೊಡುವವನ ಬಗ್ಗೆ …
ಆತ ತನ್ನ ಕೋತಿಗಳ ಬಳಿ ಹೋಗಿ ಹೇಳಿದ, ನಿಮ್ಮ ಆಹಾರಕ್ಕೆ ಸಂಬಂದಿಸಿದಂತೆ, ಮೂರು ಪಾವು ಕಡ್ಲೇಕಾಯಿ ಬೆಳಿಗ್ಗೆ ಕೊಡಲಾಗುವುದು, ಮಧ್ಯಾಹ್ನ ನಾಕು ಪಾವು ಕಡ್ಲೇಕಾಯಿ ಕೊಡಲಾಗುವುದು.
ಇದನ್ನೆಲ್ಲಾ ಕೇಳಿದೊಡನೆ ಕೊತಿಗಳೆಲ್ಲವೂ ಸಿಟ್ಟಾದವು, ಆಗ ಕೋತಿಗಳ ತರಬೇತುದಾರ ಹೇಳಿದ, ಹಾಗಾದರೆ ಸರಿ, ನಾನದನ್ನು ಬದಲಾಯಿಸುತ್ತೇನೆ, ನಾಕುಪಾವು ಬೆಳಿಗ್ಗೆ, ಮಧ್ಯಾಹ್ನ ಮೂರೂ ಪಾವು ಕೊಡುತ್ತೇನೆ.
ಈ ವ್ಯವಸ್ಥೆ ಕೋತಿಗಳಿಗೆ ತೃಪ್ತಿ ನೀಡಿತು. ಕಡಲೇಕಾಯಿ ಅಳತೆಯಲ್ಲಿ ಏನು ಬದಲಾವಣೆ ಆಗಲಿಲ್ಲ.
ಆದರೆ ಒಂದು ವ್ಯವಸ್ಥೆಯಲ್ಲಿ ಕೋತಿಗಳಿಗೆ ಅತೃಪ್ತಿಯಾಗಿತ್ತು, ಮತ್ತೊಂದು ವ್ಯವಸ್ಥೆಯಲ್ಲಿ ಕೋತಿಗಳಿಗೆ ತೃಪ್ತಿಯಾಯಿತು.
ಈ ತರಬೇತುದಾರ ತನ್ನ ವೈಯುಕ್ತಿಕ ವ್ಯವಸ್ಥೆಯನ್ನು ಬದಲಾವಣೆ ಮಾಡಲು ತಯಾರಾಗಿದ್ದ, ವಸ್ತು -ವಿಷಯದ ಸ್ತಿತಿಯ ಕ್ರಮವನ್ನು ನೆರವೆರಿಸಲಿಕ್ಕಾಗಿ, ಇದರಿಂದ ಆತ ಏನನ್ನು ಕಳೆದುಕೊಂಡಿಲ್ಲ…
ಈತ ವಾಸ್ತವಿಕ ವಿವೇಕಿ …

ಎರಡು ಕಡೆಯ ಪ್ರಶ್ನೆ ಯನ್ನು ನಿಸ್ಪಕ್ಷ ಪಾಠವಾಗಿ ಪರಿಭಾವಿಸಿ, ತಾವೋ ದೃಷ್ಟಿ ಕೋನದಲ್ಲಿ ನೋಡುತ್ತಾನೆ.
ಇದನ್ನೇ ಹೇಳುವುದು,  ಒಂದೇ ಬಾರಿಗೆ ಎರಡು ಕ್ರಮ ಅನುಕ್ರಮ ಗಳನ್ನೂ ಪಾಲಿಸುವುದು ಎಂದು …
“ಶೂನ್ಯ ನಾವೆ”
ಓಶೋ ಪುಸ್ತಿಕೆಯಿಂದ
 

‍ಲೇಖಕರು G

2 July, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading