ಡಿ ರವಿವರ್ಮ ಹೊಸಪೇಟೆ
(ಈ ನಾಡು ತೆಲುಗು ಸಂಚಿಕೆಯಲ್ಲಿ ಪ್ರಕಟವಾದ ಶ್ರೀ ಜನಾರ್ಧನ ಕರಣಂ ಅವರ
ಲೇಖನದ ಒಂದು ಭಾಗದ ಅನುವಾದ)
‘ತಾತ, ಬಹಳಷ್ಟು ಸಂದರ್ಭಗಳಲ್ಲಿ ಒಳ್ಳೆಯವರು ಕೆಟ್ಟವರಾಗಿ ಕಾಣುತ್ತಾರೆ. ಕೆಟ್ಟವರು ಒಳ್ಳೆಯವರೆಂದು ಅನಿಸುತ್ತಾರೆ. ಯಾರು, ಏನು, ಎಂದು ತಿಳಿದುಕೊಳ್ಳುವುದು ಹೇಗೆ?’
ಒಬ್ಬ ಸಾಮಾನ್ಯನಂತೆ ವಿನಯದಿಂದ ಧರ್ಮರಾಜ ಕೇಳಿದ. ಸಮಾಧಾನವಾಗಿ ಒಂದು ಕಥೆ ಹೇಳಿದರು ಭಿಷ್ಮಾಚಾರ್ಯರು.
‘ಒಂದಾನೊಂದು ಕಾಲದಲ್ಲಿ ಒಂದು ನರಿ ಇತ್ತು. ಅದು ಉತ್ತಮವಾದ ನರಿ. ಶಾಖಾಹಾರವನ್ನು ಮಾತ್ರ ಸೇವಿಸುತಿತ್ತು, ಒಳ್ಳೆ ಮಾತನಾಡುತಿತ್ತು. ಒಳ್ಳೆ ವಿಚಾರಗಳನ್ನೇ ಅಲೋಚಿಸುತಿತ್ತು. ಎಲ್ಲರೊಂದಿಗೆ ಸ್ನೇಹದಿಂದಿತ್ತು. ಕಾಡಿನ ರಾಜ, ಹುಲಿರಾಜನಿಗೆ ಈ ವಿಷಯ ತಿಳಿದು ನರಿಯನ್ನು ನೋಡಲು ಬಂತು. ತನ್ನ ಸಭೆಯಲ್ಲಿ ಸಲಹೆಗಾರನಾಗಿ ಇರಲು ಆಹ್ವಾನಿಸಿತು. ಹುಲಿರಾಜ ಉತ್ತಮನೆನಿಸಿದ್ದರಿಂದ ನರಿ ಒಪ್ಪಿಕೊಂಡಿತು. ಹುಲಿರಾಜ ಮತ್ತು ನರಿ ಆತ್ಮೀಯ ಸ್ನೇಹಿತರಾದರು. ಹುಲಿರಾಜ ಮತ್ತು ನರಿಯ ಸ್ನೇಹ ಇನ್ನುಳಿದ ಪ್ರಾಣಿಗಳಲ್ಲಿ ಅಸೂಯೆ ಮೂಡಿಸಿತು. ಅವೆಲ್ಲ ಸೇರಿ ಒಂದು ದಿನ ನರಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ಒಂದು ಮಾಂಸದ ತುಂಡನ್ನು ತೆಗೆದುಕೊಂಡು ಹೋಗಿ ನರಿಯ ಮನೆಯಲ್ಲಿ ಅಡಗಿಸಿಟ್ಟವು. ನರಿ ಮೋಸಗಾರನೆಂದು, ಸಸ್ಯಹಾರಿ ಎಂದು ಸುಳ್ಳು ಹೇಳುತ್ತಿದೆ ಎಂದು ಹುಲಿರಾಜನ ಮುಂದೆ ಪಿತೂರಿ ಹೇಳಿದವು ಹುಲಿರಾಜ ನಂಬಿದ.
ನರಿಯನ್ನು ತಕ್ಷಣ ಕೊಂದು ಬಿಡಿ ಎಂದು ಆದೇಶಿಸಿದ. ಈ ವಿಷಯ ಹುಲಿರಾಜನ ತಾಯಿಗೆ ತಿಳಿಯಿತು. “ಮಗನೆ ಬಹಳಷ್ಟು ಸಂದರ್ಭಗಳಲ್ಲಿ ಧರ್ಮ ಅಧರ್ಮವಾಗಿ , ಅಧರ್ಮ ಧರ್ಮವಾಗಿ ಕಾಣುತ್ತದೆ. ಯಾವುದು ಸತ್ಯವೆಂದು ಬಯಲಾಗುವವರೆಗೂ ಎಚ್ಚರದಿಂದ ಕಾಯಬೇಕು. ವಿವೇಕದಿಂದ ನಿರ್ಣಯ ತೆಗೆದುಕೊಳ್ಳಬೇಕು” ಎಂದು ಉಪದೇಶ ನೀಡಿದಳು . ಈ ತಾಯಿಯ ಮಾತಿನಿಂದ ಹುಲಿರಾಜನಿಗೆ ಜ್ಞಾನೋದಯವಾಯಿತು. ಆದರೆ ಅಷ್ಟರಲ್ಲಿ ಅದು ವಿಳಂಬವಾಗಿತ್ತು. ಸ್ನೆಹಿತನ ಕೃತಜ್ಞಾಹೀನತೆಗೆ ಬೇಸತ್ತು ನರಿ ಅಡವಿ ಬಿಟ್ಟು ಹೊರಟು ಹೋಗಿತ್ತು. ಹೇಳಿಕೆಯ ಮಾತು ಕೇಳಿ ಜೊತೆಗಿರುವ ಗೆಳೆಯನನ್ನು ಸರಿಯಾಗಿ ಅರ್ಥಿಸಿಕೊಳ್ಳದಿದ್ದರಿಂದ ಹುಲಿರಾಜ ಒಬ್ಬ ಒಳ್ಳೆಯ ಹಾಗೂ ಬುದ್ದಿವಂತ ಗೆಳೆಯನನ್ನು ಕಳೆದುಕೊಂಡಿತು’. ಈ ಮನೋಜ್ಞ ಕಥೆ ಕೇಳಿ ಧರ್ಮರಾಜ ತಲೆದೂಗಿದ.







ಸರ್, ಕೊನೆಗೂ ರವಿವರ್ಮ ದೇವನೂರು ಮಹಾದೇವ ಸರ್ ಅಲ್ಲ ಅಂತಾ ಗೊತ್ತಾಯಿತು ನೋಡಿ. ಅಂದಹಾಗೆ ಕರೆಕ್ಟ್ ಉತ್ತರ ಕಳಿಸಿದ ನಮ್ಮ ಗುರುಶಾಂತ ಸರ್‌ಗೆ ಬಹುಮಾನ ತಲುಪಿಸಿದ್ದೀರಾ. ರವಿವರ್ಮರ ಲೇಖನ ತುಂಬಾ ಚೆನ್ನಾಗಿದೆ ಸರ್.
-ಪರಶುರಾಮ ಬೋನೇರ
—
ಒಳ್ಳೆಯ ಕತೆ ರವಿವರ್ಮ!
edu tumbaa haleya kathe