ಮನೆಯಲ್ಲೇ ಬುದ್ಧ
ರವಿವರ್ಮ ಹೊಸಪೇಟೆ
ಒಂದು ದಿನ ಯಂಗ್ಫೂ ಎನ್ನುವ ಯುವಕ ಮನೆಯಿಂದ ಹೊರಬಂದು ಜೆನ್ ಕುರಿತು ತಿಳಿದುಕೊಳ್ಳಲು ತನ್ನ ಗುರುವಿನ ಮನೆಗೆ ಹೊರಟಿದ್ದ .
ದಾರಿಯಲ್ಲಿ ಆತನಿಗೆ ಆಕಸ್ಮಾತ್ ಇನ್ನೊಬ್ಬ ಜೆನ್ ಗುರು ಬೆಟ್ಟಿ ಯಾದರು.
ಜೆನ್ ಗುರು ಆ ಯುವಕನನ್ನು ’ಎಲ್ಲಿಗೆ ಹೊರಟಿದ್ದಿಯಾ?’ ಎಂದು ಕೇಳಿದರು.
ಆ ಯುವಕ ಜೆನ್ ಬಗ್ಗೆ ತಿಳಿದುಕೊಳ್ಳಲು ಜೆನ್ ಗುರುಗಳ ಮನೆಗೆ ಹೊರಟಿದ್ದೇನೆ ಎಂದು ತಿಳಿಸಿದ.
ಜೆನ್ ಹುಡುಕಿದರೆ ಸಿಗಲಾರದು . ನೀನು ಇರುವ ಸ್ಥಳದಲ್ಲೇ ಅದು ಇದೆ ಎಂದು ಹೇಳಿದರು.
ಯುವಕ ಆಶ್ಚರ್ಯ ಚಕಿತನಾಗಿ ನಿಜವೇ ಎಂದು ಪ್ರಶ್ನಿಸಿದ ..
ನೀನು ಮನೆಗೆ ಹಿಂದುರಿಗಿ ಹೋಗು, ಅಲ್ಲಿ ಕಂಬಳಿ ಹೊದ್ದ, ತನ್ನ ಚಪ್ಪಲಿಯನ್ನು ತಪ್ಪಾಗಿ ಧರಿಸಿರುವ ವ್ಯಕ್ತಿ ಕಾಣುತ್ತಾರೆ,
ಅವರೇ ಬುದ್ಧ ಎಂದು ತಿಳಿಸಿದರು.
ಆ ವ್ಯಕ್ತಿ ತಕ್ಷಣವೇ ಹಿಂದಿರುಗಿ ಹೋಗಿ ಮನೆ ಬಾಗಿಲು ತಟ್ಟಿದ ..
ಆ ಯುವಕನ ತಾಯಿ ಕಂಬಳಿ ಹೊದ್ದು, ಅವಸರದಲ್ಲಿ ಚಪ್ಪಲಿ ತಪ್ಪಾಗಿ ಹಾಕಿಕೊಂಡು ಬಾಗಿಲು ತೆಗೆದಳು.
ಆ ದೃಶ್ಯ ನೋಡಿ ಯುವಕನಿಗೆ ಜ್ಞಾನೋದಯವಾಯಿತು.
ಜೆನ್ ಕಥೆಗಳು ಮೂಲ ತೆಲುಗು : ಸೌಜನ್ಯ ಹೈದರಾಬಾದ್
ಅನುವಾದ : ರವಿವರ್ಮ ಹೊಸ ಪೇಟೆ






0 Comments