ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ರಜಾ ಮಜಾ'ದಲ್ಲಿ ಸಿಂಪಲ್ಲಾಗ್ ಒಂದು ಝಲಕ್! – ಫೋಟೋ ಆಲ್ಬಂ

ಮಂಡ್ಯ ರಮೇಶ್ ರವರ  ಈ ಬಾರಿಯ ಮಕ್ಕಳ ಬೇಸಿಗೆ ಶಿಬಿರ ‘ರಜಾ ಮಜಾ’ ದಲ್ಲಿ 220 ಮಕ್ಕಳು ಭಾಗವಹಿಸಿದ್ದರು. ಅವರು  ಕಲಿತ ನಾಟಕಗಳು, ಕಂಸಾಳೆ, ಡೊಳ್ಳು ಕುಣಿತ, ಪೂಜಾ ಕುಣಿತ, ಕೋಲಾಟ, ಯಕ್ಷಗಾನ ಆಧಾರಿತ ‘ಭಾಸ’ನ ಮಧ್ಯಮ ವ್ಯಾಯೋಗ ನಾಟಕವನ್ನು ವೇದಿಕೆಗೆ ತಂದು ನಿಲ್ಲಿಸಿದ್ದರು.  ಗುಬ್ಬಿ ಕಂಪನಿ ಪ್ರಖ್ಯಾತಿಯ ‘ಶ್ರೀ ಕೃಷ್ಣಲೀಲೆ’,  ಕೆ.ಎಸ್.ನಿಸ್ಸಾರ್ ಅಹಮದ್ ರವರ ‘ಕುರಿಗಳು ಸಾರ್ ಕುರಿಗಳು’ ಸಮಕಾಲೀನ ಶೈಲಿಯ ನೃತ್ಯ ರೂಪಕ ನೆರೆದವರೆದೆಯಲ್ಲಿ ಜಾಗೃತಿಯ ಜ್ಯೋತಿ ಬೆಳಗಿಸಿತ್ತು.

ಎಷ್ಟೊಂದು  ಸಾಧಕರಿಗೆ ಸನ್ಮಾನ, ರಂಗಭೂಮಿ, ಕಿರುತೆರೆ, ಹಿರಿತೆರೆಯ ಸ್ಟಾರ್ ಶ್ವೇತಾ ಶ್ರೀವಾತ್ಸವ್ ನ ಸಿಂಪಲ್ಲಾಗ್ ಒಂದು ಝಲಕ್  ಕಂಡ ಕಂಗಳಿಗೆ ಸಂತಸದ ಜಾತ್ರೆ.  ರಂಗಗೀತೆಗಳು, ಜನಪದ ಗೀತೆಗಳು, ತತ್ವಪದಗಳು….. ಅಬ್ಬಬ್ಬಾ, ಸಾಂಸ್ಕೃತಿಕ ಪುಟ್ಟ ಭಾರತವೇ ಅಲ್ಲಿ ಅನಾವರಣಗೊಂಡಿತ್ತು. ಬಿಡುವಿಲ್ಲದ ಎರಡು ದಿನಗಳು ಸತತ ನಾಲ್ಕು ಗಂಟೆಗಳ ಮಕ್ಕಳ ದೇಸೀ ಶಕ್ತಿಯನ್ನು ಕಂಡು ಬೆಚ್ಚಿ ಬಿದ್ದ ಪೋಷಕ ವರ್ಗ, ಸಮಾರೋಪ ಸಮಾರಂಭಕ್ಕೆ ತೋರಿದ ಪ್ರೀತಿ ಅವಿಸ್ಮರಣೀಯ. ಮೇರೆ ಮೀರಿದ ಉತ್ಸಾಹ ಅದು…!

ಆ ಕಾರ್ಯಕ್ರಮದ ಮೆರುಗು ಕ್ಷಣಗಳ ಛಾಯಾಚಿತ್ರಗಳಿವೆ ಇಲ್ಲಿ ನಿಮಗಾಗಿ.

ಛಾಯಾಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ:

‍ಲೇಖಕರು avadhi

13 May, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading