ರಂಗ ಸಂಗೀತ ಎಂದರೆ ಸಾಕು ಒಂದು ಕೈ ಹೆಚ್ಚೇ ಎನ್ನುವಂತೆ ಜನ ಕಿಕ್ಕಿರಿದು ಸೇರುತ್ತಾರೆ. ಉಲ್ಲಾಸ, ಸಂಭ್ರಮ ಅಲ್ಲಿ ಮನೆ ಮಾಡುತ್ತದೆ. ಹಾಡುವವರು ಅದರ ಜೊತೆ ಸಭಾಂಗಣದಲ್ಲಿರುವವರೂ ಕುಣಿದು ಕುಪ್ಪಳಿಸುತ್ತಾರೆ ಆದರೆ ಆ ದಿನ ಮಾತ್ರ ಆ ರಂಗಗೀತೆಗಳು ನೋವು ಹೊದ್ದು ಮಲಗಿದ್ದವು. ಅಲ್ಲಿ ಸಂಭ್ರಮ ಇಣುಕುವ ಸಾಧ್ಯತೆಯೇ ಇರಲಿಲ್ಲ
ಕನ್ನಡ ಹವ್ಯಾಸಿ ರಂಗಭೂಮಿಯ ದಿಗ್ಗಜರು, ದಿಗ್ಗಜ ರಂಗ ತಂಡಗಳು ಅಂದು ತಮ್ಮೆಲ್ಲರ ಗೆಳೆಯ ಅ ನ ರಮೇಶ್ ಅವರಿಗೆ ಕಂಬನಿ ಮಿಡಿಯುತ್ತಿದ್ದವು, ಮೇಲು ಮಾತಿನ, ಸದಾ ಮುಗುಳ್ನಗೆಯೊಂದನ್ನು ತೀಡಿಕೊಂಡೇ ಇರುತ್ತಿದ್ದ ಬೆಳಕು ತಜ್ಞ, ಅನೇಕ ರಂಗ ತಂಡಗಳ ಒಡನಾಡಿ ಅ ನ ರಮೇಶ್ ಇಲ್ಲವಾಗಿದ್ದರು.
ರಸ್ತೆಯಲ್ಲಿ ಟ್ಯಾಕ್ಸಿ ಚಾಲಕನೊಬ್ಬ ಅ ನ ರಮೇಶ್ ಅವರ ಮೇಲೆ ಹಲ್ಲೆ ಮಾಡಿದ್ದೆ ಕಾರಣವಾಗಿ ರಮೇಶ್ ಅನೇಕ ತಿಂಗಳುಗಳ ಕಾಲ ಸಾವು ಬದುಕಿನ ನಡುವೆ ತುಯ್ದಾಡಿ ಇಲ್ಲವಾದರು. ಅವರ ನೆನಪು ಕಂಬನಿ ಉಕ್ಕಿಸಿತ್ತು. ಆ ಕಂಬನಿ ರಂಗ ಗೀತೆಗಳ ಕಾರ್ಯಕ್ರಮದಲ್ಲೂ ಇಣುಕಿತ್ತು.
ಚಿತ್ರ ಕೃಪೆ : ಕೆ ಎಸ್ ಡಿ ಎಲ್ ಚಂದ್ರು
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ
ಅಲ್ಲಿ ನೋವಿತ್ತು…
ನಿಮಗೆ ಇವೂ ಇಷ್ಟವಾಗಬಹುದು…






ಅ ನ ರಮೇಶ್ ಸೌಮ್ಯ ಸ್ವಭಾವದ, ರಂಗಭೂಮಿಯ ಸಮರ್ಥ ಬೆಳಕ ವಿನ್ಯಾಸಕರಾಗಿದ್ದರು. ವಿಧಿ ಅವರೊಡನೆ ಆಡಿದ ಕ್ರೌರ್ಯಾಟ ಬಲು ಹೀನ… ರಮೇಶ್ ಅವರ ಆತ್ಮಕ್ಕೆ ಶಾಂತಿ ಸಿಗಲಿ.