ರಂಗಾಯಣ ನಿರ್ದೇಶಕರ ವಿರುದ್ಧ ಆಕ್ರೋಶ: ನಾಟಕೋತ್ಸವ ಬಹಿಷ್ಕಾರಕ್ಕೆ ಚಿಂತನೆ

ರಂಗಾಯಣ, ಮೈಸೂರಿನ ನಿರ್ದೇಶಕರಾದ ಅಡ್ಡಂಡ ಕಾರಿಯಪ್ಪ ಇತ್ತೀಚಿಗೆ ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಆಡಿದ ಮಾತು ರಂಗಕರ್ಮಿಗಳಲ್ಲಿ ತೀವ್ರ ಆಕ್ರೋಶ ಹುಟ್ಟುಹಾಕಿದೆ 

‘ಸಾಧ್ವಿ’ ಅಂತರ್ಜಾಲ ಪತ್ರಿಕೆಯ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು ಟಿಪ್ಪು ಹಾಗೂ ಪೌರತ್ವ ಕಾಯಿದೆ ವಿರೋಧಿಗಳನ್ನು ಟೀಕಿಸಿದ್ದರು.

ಈ ಹಿನ್ನೆಲೆಯಲ್ಲಿ ರಂಗಾಯಣ ಹಮ್ಮಿಕೊಂಡಿರುವ ‘ಬಹುರೂಪಿ ನಾಟಕೋತ್ಸವ’ಕ್ಕೆ ಬಹಿಷ್ಕಾರ ಹಾಕಲೂ ಸಹಾ ರಂಗಕರ್ಮಿಗಳು ಚಿಂತನೆ ನಡೆಸಿದ್ದಾರೆ.

Mr Kaariyappa, you are nurturing vengence even after 4 generations,
you can’t pass sweeping remarks on everybody that no body knows about CAA,NPR AND. NRC, we know what is constitution is. we welcome you to construct plays educating people about constitution, but not your interpretation of constitution.
No theatre person talks like this which divides the society, theatre is to educate, protest and to unite people, not to divide people. You are the director of RANGAYANA you should speak with responsibility….let God bless rangayana, but we have accepted you as theatre person not as Muslim or Hindu or kodava etc.
-J. Lokesh.

ಮಾನ್ಯ ಅಡ್ಡಂಡ ಕಾರಿಯಪ್ಪ ನವರು ತಮ್ಮ ಮನೆಯಲ್ಲಿಲ್ಲ. ಒಂದು ರೆಪರ್ಟರಿ ಯ ನಿರ್ದೇಶಕರು ಎನ್ನುವುದನ್ನು ನೆನಪಿಸಬೇಕಾಗಿದೆ.

ಇಷ್ಟು ವರ್ಷಗಳಲ್ಲಿ ತಮ್ಮ ವಯಕ್ತಿಕ ರಾಜಕೀಯ ಧೋರಣೆಗಳನ್ನು ಹೀಗೆ ಹೇಳಿದ ಮತ್ತು ಅದಕ್ಕಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ ನಿರ್ದೇಶಕರನ್ನು ನಾವು ನೋಡಿಲ್ಲ. ಯಾವ ನಿರ್ದೇಶಕರೂ ಪ್ರಸನ್ನ , ಚಿದಂಬರರಾವ್ ಜಂಬೆ, ಜನಾರ್ಧನ್ (ಜನ್ನಿ), ಬಾಗೀರಥಿಬಾಯಿ ಕದಂ….ಇವರ್ಯಾರು ವಯಕ್ತಿಕ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ಜನರ ಮೇಲೆ, ತಮ್ಮ ವಿದ್ಯಾರ್ಥಿಗಳ ಮೇಲೆ ಹೊರಿಸಲಿಲ್ಲ.

ಸಂವಿಧಾನ ಎಲ್ಲರಿಗೂ ಗೊತ್ತಿದೆ. ತಮಗೆ ಬೇಕಾದ ಹಾಗೆ Interpret ಮಾಡೊದಕ್ಕೆ ದುಡ್ಡು ಕೊಟ್ಟಿರಬಹುದು….

ನಾವು ಕಾರ್ನಾಡರ ‘ಟಿಪ್ಪು ಸುಲ್ತಾನ್ ಕಂಡ ಕನಸು’ ನಾಟಕವನ್ನು ಇದೇ ರಂಗಾಯಣದಲ್ಲಿ ನೋಡಿದ್ದು..ರಾಕ್ಷಸ ತಂಗಡಿ ಯನ್ನು ಬರೆದ ನಾಟಕಕಾರರ ಪರಂಪರೆಯಲ್ಲಿ ಬೆಳೆದು ಬಂದವರು ನಾವು. ಎರಡು ವರ್ಷಗಳ ಹಿಂದೆ ಬಹುರೂಪಿ ಉದ್ಘಾಟನೆಯನ್ನು‌ ಮಾಡಿದವರು ರಾಕ್ಷಸ ತಂಗಡಿ ಬರೆದ ಕಾರ್ನಾಡರೇ….

ಈಶ್ವರ್ ಅಲ್ಲಾ ತೇರೆ ನಾಮ್ ಸಬ್ಕೋ ಸನ್ಮತಿ ದೇ ಭಗವಾನ್ ಎಂದ ಗಾಂಧಿಯ ಹೆಸರಿನಲ್ಲಿ ನಡೆಯುತ್ತಿರುವ ಬಹುರೂಪಿಯನ್ನು ನಡೆಸಬೇಕಾದವರ ಹೇಳಿಕೆ ಇದು. ಎಂಥ ವಿರೋಧಾಭಾಸ.

-ಚಿತ್ರಾ ವೆಂಕಟರಾಜು 

ಮಧ್ಯಪ್ರದೇಶದ ಭಾರತ್ ಭವನ್ ಗೆ ಅಂದಿನ ಬಿಜೆಪಿ ಸರ್ಕಾರದಡಿ ಆದ ಅವಸ್ಥೆಯೇ ನಮ್ಮಲ್ಲಿನ ರಂಗಾಯಣಗಳಿಗೂ ಬಂದೊದಗೀತು ಎಂದು ಹಿಂದೊಮ್ಮೆ ನಾನು ಬರೆದಿದ್ದೆ. ಅಂತಹುದೇನೂ ಆಗಲಿಕ್ಕಿಲ್ಲ ಇಲ್ಲಿ ಎಂಬುದು ಅನೇಕರ ಭರವಸೆ. ನಮ್ಮದೇ ಸರಕಾರ.ನಮ್ಮದೇ ದುಡ್ಡು.

ಆ ಚೌಕಟ್ಟೊಳಗೆ ಸೇರಿಕೊಂಡು ನಮ್ಮಿಂದಾದ ಕೆಲಸ ಮಾಡುವ ಎಂಬುದು ಹಲವರ ಇರಾದೆ. ಅದು ಸಾಧ್ಯವೇ? ಸುತ್ತ ಕಸ ಕೊಳೆ ಇದ್ದರೂ ನಮಗೂ ಗೌರವ ಕೊಟ್ಟು ಕರೆದಿದ್ದಾರಲ್ಲ ಎಂಬ ಕಾರಣಕ್ಕೆ ಅಲ್ಲೇ ಸ್ವಲ್ಪ ಜಾಗ ಮಾಡಿಕೊಂಡು ನಮ್ಮ ಮಾತುಗಳನ್ನು ಹೇಳಿ ಬರುವುದನ್ನು ಇನ್ನೆಷ್ಟು ದಿನ ಅಂತ ಮಾಡಬಹುದು ನಾವು?

ಈ ಸಲ ರಂಗಾಯಣದಲ್ಲಿ ಗಾಂಧಿ ಕುರಿತು ವಿಚಾರ ಸಂಕಿರಣ ಏರ್ಪಡಿಸಿರುವುದರ ಬಗ್ಗೆ ಜಗದೀಶ್ ಕೊಪ್ಪ ಅವರು ಮೆಚ್ಚುಗೆ ಮಾತನಾಡಿದುದನ್ನು ನೋಡಿ ನನಗೂ ಸ್ವಲ್ಪ ಸಮಾಧಾನವಾಗಿತ್ತು. ಆದರೆ ‘ಪ್ರಜಾವಾಣಿ’ಯಲ್ಲಿ ಅಲ್ಲಿನ ನಿರ್ದೇಶಕ ಆಡಿರುವ ಮಾತುಗಳನ್ನು ನೋಡಿದ ನಂತರ, ನಾನು ಮೊದಲು ಅಂದುಕೊಂಡ ಹಾಗೇ ಆಗುತ್ತಿದೆ ಅನಿಸಿತು. ಸರಕಾರದ ಬಾಲಬಡುಕತನ ನಿರೀಕ್ಷಿತವೇ.ಆದರೆ ಇಷ್ಟು ಕೆಳಮಟ್ಟದ ಮಾತನಾಡುವುದೇ?

ಸೂಕ್ಷ್ಮತೆ ಇದ್ದವರು ಇಂಥ ಸಮಯದಲ್ಲಿ ಏನು ಮಾಡಬೇಕು? ತಮಗೆ ಹೊಂದುವವರನ್ನು ನೇಮಿಸಿಕೊಂಡು, ಒಟ್ಟು ಸಾಂಸ್ಕೃತಿಕ ವಾತಾವರಣವನ್ನು ನಾಶಮಾಡಲು ಹೊರಟಿರುವವರು ಈ ಬಿಜೆಪಿಗರು ಎನ್ನುವುದಕ್ಕೆ ಇದಕ್ಕಿಂತ ಬೇರೆ ಪುರಾವೆ ಬೇಕೆ? ಒಂದು ಸ್ವಾಯತ್ತ ಸಾಂಸ್ಕೃತಿಕ ಸಂಘಟನೆ ಸರಕಾರದ ನಿಲುವನ್ನು ಪ್ರಚಾರಮಾಡಲು ಕೇಂದ್ರ ಸರ್ಕಾರದ ಹಣ ಬಂದಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವುದು ಎಂದರೆ? ಗಾಂಧಿ, ಅಂಬೇಡ್ಕರ್ ಬಿಜೆಪಿಯ ಸೊತ್ತು ಕೂಡ ಹೌದು ಎಂದು ಬೇಕೆಂದೇ ದಾರಿ ತಪ್ಪಿಸುವ ರೀತಿಯಲ್ಲಿ ಮಾತನಾಡುವುದೆಂದರೆ?

ಇದನ್ನೆಲ್ಲಾ ಗಮನಿಸದೆ ಇನ್ನೆಷ್ಟು ಕಾಲ ಈ ಕುರೂಪದ ಭಾಗವಾಗಿರಬೇಕು ನಾವು? ಆ ಮೂಲಕ ದುಷ್ಟ ಮಾತುಗಳನ್ನು ಆಡುತ್ತಿರುವ ಇಂಥವರಿಗೆ ಇನ್ನೆಷ್ಟು ದಿನ ಕ್ರೆಡಿಬಿಲಿಟಿಯನ್ನು ತಂದುಕೊಡುವ ಕೆಲಸ ಮಾಡಬೇಕು? ಅದರಿಂದ ಏನಾದರೂ ಪ್ರಯೋಜನ ಇದೆಯೇ? ನೀಲಾ ಅವರ ಹಾಗೆ ಎಷ್ಟು ಮಂದಿ ಒಳಗೇ ಹೋಗಿ ಧ್ವನಿಯೆತ್ತುವ ಛಾತಿ ಹೊಂದಿದ್ದಾರೆ? ಮುಂದೆ ಅವರು ಎಲ್ಲಾ ಕಡೆಯೂ ತಮ್ಮ ನಿಲುವಿಗೆ ಹೊಂದಿಕೊಳ್ಳಬಹುದಾದ ವೆಂಕಟೇಶಮೂರ್ತಿ ಅವರಂಥವರನ್ನೆ ಗೌರವದ ಸ್ಥಾನಗಳಿಗೂ ಹುಡುಕುವುದು ಖಂಡಿತ. ಶೃಂಗೇರಿಯ ಕೆಟ್ಟ ಅನುಭವ ಎಲ್ಲೆಲ್ಲೂ ಪುನರಾವರ್ತನೆಗೊಂಡೀತು ಕೂಡ.

ಸಾಂಸ್ಕೃತಿಕ ಎಚ್ಚರವನ್ನು ಕಾಯ್ದುಕೊಳ್ಳಲು ನಾವು ಪರ್ಯಾಯ ಮಾರ್ಗಗಳನ್ನು ಹುಡುಕಿಕೊಳ್ಳಬೇಕಾದ ಸಮಯ ಇದು.

– ವಸಂತ ಬನ್ನಾಡಿ

 

‍ಲೇಖಕರು avadhi

February 10, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಚಂದ್ರಪ್ರಭ ಕಠಾರಿ

    ಅಡ್ಡಂಡ ಕಾರಿಯಪ್ಪ ಆಳುವ ಸರ್ಕಾರದ ವಕ್ತಾರರಂತೆ ಹೇಳಿಕೆ ಕೊಡುವ ಮೊದಲು ರಂಗ ಸಂಸ್ಕೃತಿಯನ್ನು, ತಾನು ಕುಳಿತಿರುವ ಕುರ್ಚಿಯಲ್ಲಿ ಮೊದಲು ಎಂಥವರು ಕುಳಿತ್ತಿದ್ದರು ಎಂಬುದರ ಅರಿವಿರಬೇಕಿತ್ತು. ಸರ್ಕಾರದ ಅಜೆಂಡಗಳ ಬಗ್ಗೆ ಒಂದು ಪಕ್ಷದ ಕಾರ್ಯಕರ್ತನಂತೆ ಅನುಮೋದಿಸಿರುವುದು ಖಂಡನೀಯ. ಈ ಮೊದಲು ಆಳುವ ಬಿಜೆಪಿ ಸರಕಾರದ ಸಚಿವ ಸಿ.ಟಿ.ರವಿಯವರು ಹಲವಾರು ಅಕಾದೆಮಿಗಳಿಗೆ ತಮಗೆ ಇಷ್ಟ ಬಂದವರನ್ನು ಯ್ಯೋಗತೆ ಇಲ್ಲದಿದ್ದರೂ ನೇಮಕ ಮಾಡುವಾಗ “ ಮನೆಹಾಳರನ್ನು ಹೊರಗೆ ಹಾಕಿದ್ದೇವೆ” ಎಂಬಂಥಹ ಧಾಷ್ಟ್ಯದ ಅವಿವೇಕಿಯ ಮಾತುಗಳನ್ನಾಡಿದ್ದರು. ಚಿಕಮಗಳೂರಿನಲ್ಲಿ ಆದದ್ದು ಪ್ರಜಾಪ್ರಭುತ್ವದ ವಿರೋಧಿ ನಡಿಗೆ. ಈಗ ರಂಗಾಯಣದ ಸರದಿ. ಇದು ನಿಜಕ್ಕು ಕೇಡುಗಾಲದ ಸೂಚನೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: