ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಂಗಶಂಕರದಲ್ಲಿ ‘#36 ಸತಿ ಸಾವಿತ್ರಿ ನಿವಾಸ’

36 ಸತಿ ಸಾವಿತ್ರಿ ನಿವಾಸ, ಈ ಹೊಸಾ ಕನ್ನಡ ನಾಟಕ, ಧೀಮಹಿ ತಂಟದವರ ಹೊಸ ಪ್ರಸ್ತುತಿ. ಈ ನಗೆಯ ಹೊನಲು, ಇದೇ ಶುಕ್ರವಾರ ಮೇ 26 ರಂದು 2023 , ರಂಗಶಂಕರ ದಲ್ಲಿ, ಪ್ರದರ್ಶನ ಸಂಜೆ 7:30pm ಕ್ಕೆ, ವೇದಿಕೆಯ ಮೇಲೆ ಪ್ರಸ್ತುತಗೊಳ್ಳಲಿದೆ! ಕಾರ್ತಿಕ್ ಹೆಬ್ಬಾರ್ ರಚಿಸಿ, ನಿರದೇಶಿಸಿರುವ ಈ ನಾಟಕ ಮಧ್ಯಮವರ್ಗದ ಮೂವರು ಮಹಿಳೆಯೆರ ಜೀವನ ಗಾಥೆಯಾಗಿದೆ. ಅವರು ಅನುಭವಿಸುವ ನೋವು, ದುಃಖ, ಒಂಟಿತನ ಮತ್ತು ಭಗಿನಿ ಬಂಧುತ್ವದ ಕುರಿತಾಗಿದೆ. ಈ ನಾಟಕದಲ್ಲಿ ಹಾಸ್ಯ, ಸಂಗೀತ ಮತ್ತು ನೃತ್ಯವೂ ಇದ್ದು ಇದರಲ್ಲಿ ಈ ಮಧ್ಯಮವರ್ಗದ ಹೆಣ್ಣು ಮಕ್ಕಳ ಜೀವನದ ಮುಖ್ಯಭಾಗವಾಗಿರುವ ಧಾರಾವಾಹಿ ಹಾಗೂ ಚಲನಚಿತ್ರಗಳಿಗೂ ಮುಖ್ಯ ಪಾತ್ರವಿದೆ. ಇಂಥಾ ಕಥೆಗಳು ಸ್ಟೀರಿಯೋಟೈಪ್ಗಳಿಗೆ ಇಳಿಸಬಹುದಾದಂಥಾ ಕಥಾ ಹಾಂದರವನ್ನು ಅದರಿಂದಾಚೆಗೊಯ್ಯುವ ಪ್ರಯತ್ನವಮನ್ನು ಈ ನಾಟಕ ಮಾಡುತ್ತದೆ. ಈ ಕಥೆಯಲ್ಲಿ ಯಾರೂ ಬಲಿಪಶುಗಳಿಲ್ಲಾ! ಎಲ್ಲಾ ಪತ್ರಗಳೂ ತಮ್ಮ ಕಥೆಯನ್ನು ತಮ್ಮ ಹಿಡಿತದಲ್ಲೇ ಇಟ್ಟುಕೊಳ್ಳುತ್ತವೆ.

ಖ್ಯಾತ ಅಭಿನೇತ್ರಿಗಳಾದ ಡಾ ಸೀತಾ ಕೋಟೆ, ದೀಪಿಕಾ ಆರಾಧ್ಯ, ಯೆಶಸ್ವಿನಿ, ದಿವ್ಯಶ್ರೀ ಗ್ರಾಮ, ರೋಹಿತ್ ಮುಂತಾದವರು ನಟಿಸಿರುವ ಈ ನಾಟಕದಲ್ಲಿ, ಖ್ಯಾತ ಹಿನ್ನಲೆ ಗಾಯಕರಾದ ಮಾಧುರಿ ಸೇಷಾದ್ರಿ, ದರ್ಶನ್ ನಾರಾಯಣ್, ಪ್ರತೀಕ್ಷಾ ಮುಂತಾದವರೂ ಸೇರಿದಂತೆ, ವಿಶಾಕ್, ಸೌಮ್ಯ, ಚೇತನಾ, ಅಜಯ್ ಕಿಣಿ ಮುಂತಾದವರೂ ಕಾಣಿಸಿಕೊಳ್ಳಲಿದ್ದಾರೆ. ಬೆಳಕಿನ ವಿನ್ಯಾಸ ಎಮ್ ಜಿ ನವಿನ್ ನರಸಿಂಹ ಇವರು ಮಾಡಿದ್ದು,
ಬೆಳಕಿನ ನಿರ್ವಹಣೆನ್ನು ಅರುಣ್ ಡಿ ಟಿ ಯವರು ಮಾಡಲಿದ್ದಾರೆ.

36 ಸತಿ ಸಾವಿತ್ರಿ ನಿವಾಸ, ಮೂವರು ಮಧ್ಯಮ ವರ್ಗದ ಮಹಿಳೆಯರ ಸಾಮಾನ್ಯ ಕಥೆ. ಈ ಮೂವರು ಮಹಿಳೆಯರ ಜೀವನದಲ್ಲಿ
ಪ್ರಶ್ನೆಯಾಗಿ ಬರುವಂತಹ ಒಂದು ವಿಶೇಷ ಸನ್ನಿವೇಶವನ್ನು ಅವರು ಎದುರಿಸುವ ಬಗೆ ಹಾಗೂ ತನ್ಮೂಲಕ ಕಂಡುಕೊಳ್ಳುವ ಹೊಸ
ಅರ್ಥಗಳ, ಸ್ನೇಹದ ಹಾಗೂ ಮೈತ್ರಿಯ ಕಥೆಯನ್ನು ಈ ನಾಟಕ ಹಿಡಿದಿಡುತ್ತದೆ. ಈ ನಾಟಕ ಮಹಿಳೆಯರ ಜೀವನೋತ್ಸಾಹ,
ಸಿಸ್ಟರ್ಹುಡ್ (ಭಗಿನಿ ಬಂಧುತ್ವ), ಮುಪ್ಪು, ಒಂಟಿತನ ಮುಂತಾದ ಎಲ್ಲಾ ಭಾವಗಳ ಒಂದು ಕಾಮನಬಿಲ್ಲಾಗಿ ನಿಲ್ಲುತ್ತದೆ. ಮಧ್ಯಮ
ವರ್ಗದ ಒಂದು ಕಟ್ಟಡದಲ್ಲಿ ವಾಸವಾಗಿರುವ ಮಹಿಳೆಯರ ಜೀವನಕ್ಕೆ ಇದ್ದಕ್ಕಿದ್ದಂತೆ ಪ್ರವೇಶ ಮಾಡುವ ಒಂದು ವಿಶೇಷ
ವ್ಯಕ್ತಿಯಿಂದಾಗಿ ಅವರ ಜೀವನದಲ್ಲಾಗುವ ಪರಿವರ್ತನೆ ಹಾಗೂ ಅವರು ಎದುರಿಸುವ ಪ್ರಶ್ನೆಗಳ ಕಥೆ ಇದಾಗಿರುತ್ತದೆ. ಈ ಮಹಿಳೆಯರ
ಜೀವನದ ಸುಖ, ದುಃಖ ಅಲ್ಲದೆ ಅತಿರೇಕಗಳಂತೆ ಅವರನ್ನು ಆವರಿಸಿರುವ ಧಾರವಾಹಿ ಹಾಗೂ ಸಿನಿಮಾಗಳನ್ನೂ ಕೂಡ ಈ ನಾಟಕ
ಚಿತ್ರಿಸುತ್ತದೆ. ಇಲ್ಲಿ ಸಂಗೀತವಿದೆ, ಸ್ವಲ್ಪ ನಾಟ್ಯವೂ ಇದೆ, ಪ್ರೇಮವೂ ಇದೆ, ಒಡನಾಟವೂ ಇದೆ! ಎಲ್ಲದಕ್ಕಿಂತ ಹೆಚ್ಚು ನಗು ಹಾಗು
ಹುಚ್ಚುತನವಿದೆ. ಪುರುಷಪ್ರಧಾನ ಸಮಾಜದಲ್ಲಿ ಹೋರಾಡಿ, ಸೋತು-ಗೆದ್ದು, ಸದಾ ಜೀವನೋತ್ಸಾಹ ಹಾಗೂ ಭರವಸೆಯ
ದೀಪವನ್ನು ಹಿಡಿದು ನಿಂತಿರುವ ಮಹಿಳೆಯರಿಗೆ ಈ ನಾಟಕವನ್ನು ನಾವು ಅರ್ಪಿಸುತ್ತೇವೆ.

‍ಲೇಖಕರು avadhi

23 May, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading