ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯುದ್ಧ ಕಾಲವಾದ್ದರಿಂದ ಈ ಪೋಸ್ಟ್…

ಇಸ್ರೇಲ್ ಗೆ ರಕ್ತ ದಾಹ. ಪ್ಯಾಲೆಸ್ತೀನ್ ಅನ್ನು ನಿರ್ನಾಮ ಮಾಡಲು ಸಜ್ಜಾಗಿದೆ.

ಈ ಯುದ್ಧ ಮಕ್ಕಳ ಮೇಲೆ ಉಂಟುಮಾಡುವ ಪರಿಣಾಮ ಅಗಾಧ.

netflix ನಲ್ಲಿರುವ ಸಿನೆಮಾದ ಬಗ್ಗೆ ಒಂದು ಲೇಖನ

ಪ್ರಸಾದ್‌ ನಾಯ್ಕ್

ಯುದ್ಧವು ಯಾವುದೇ ಬಗೆಯದ್ದಾಗಿರಲಿ. ಲಕ್ಷ-ಕೋಟಿಗಳ ಸಂಖ್ಯೆಯಲ್ಲಿ ರೆಫ್ಯೂಜಿಗಳು ಸೃಷ್ಟಿಯಾಗಲೇಬೇಕು. ಹೀಗೆ ಹಲವು ಕಡೆಯಿಂದ ರೆಫ್ಯೂಜಿಗಳಾಗಿ ಬರುವ ನೂರಾರು ಕುಟುಂಬಗಳು ಆಶ್ರಯಕ್ಕಾಗಿ ಸ್ವೀಡನ್ ಸೇರುತ್ತವೆ. ಅರಾಜಕತೆ, ಯುದ್ಧದ ತೀವ್ರತೆಗಳನ್ನು ಅರಿಯುವುದು ಇಂತಹ ಕುಟುಂಬದ ಪುಟ್ಟ ಮಕ್ಕಳಿಗೆ ಹೇಗಾದರೂ ಸಾಧ್ಯ? ಹೊಸ ಪರಿಸರ, ಹೊಸ ಭಾಷೆ, ಹೊಸ ಶಾಲೆ, ಹೊಸ ಸಂಸ್ಕೃತಿ… ಹೀಗೆ ಪ್ರತೀಹೆಜ್ಜೆಯಲ್ಲೂ ಸವಾಲು.

ಇನ್ನು ಈ ಮಕ್ಕಳ ಪೋಷಕರಾಗಿರುವ ವಯಸ್ಕ ಸದಸ್ಯರಿಗೂ ಕೂಡ ಮುಗಿಯದಂತೆ ಕಾಣುವ ಅಭದ್ರತೆಯ ಭಾವ. ಹೊಟ್ಟೆಪಾಡಿನ ಸವಾಲು, ಕುಟುಂಬದ ಸುರಕ್ಷತೆಯ ಬಗ್ಗೆ ಚಿಂತೆ, ಮಕ್ಕಳ ಭವಿಷ್ಯದ ಬಗ್ಗೆ ಆತಂಕ, ತಲೆಯ ಮೇಲಿನ ತೂಗುಗತ್ತಿಯಂತಿರುವ ಗಡೀಪಾರಿನ ಭಯ… ಒಂದೇ, ಎರಡೇ?

ಈ ಎಲ್ಲಾ ಬಗೆಯ ಅಂಶಗಳು ಕೊನೆಗೆ ಕಂಗಾಲಾಗಿಸುವುದು ಪುಟ್ಟ ಮಕ್ಕಳನ್ನು. ಮೊದಲು ಆಟೋಟಗಳು ಕಮ್ಮಿಯಾಗುತ್ತದೆ. ನಂತರ ಏಕಾಗ್ರತೆ, ಆಸಕ್ತಿ, ಜಲಸೇವನೆ, ಆಹಾರ ಸೇವನೆ ಇತ್ಯಾದಿಗಳು. ಕೊನೆಗೆ ಈ ಮಕ್ಕಳು ಕೋಮಾಗೆ ಹೋದವರಂತೆ ದೀರ್ಘವಾದ ನಿದ್ದೆಗೆ ಜಾರಿಬಿಡುತ್ತಾರೆ. ಕೆಲವೊಮ್ಮೆ ವಾರಗಳ ಕಾಲ, ತಿಂಗಳುಗಳ ಕಾಲ. ಒಂದು ಮಗುವಂತೂ ವರ್ಷ ಕಳೆದರೂ ತನ್ನ ನಿದ್ದೆಯಿಂದೆದ್ದು ಹೊರಬಂದಿಲ್ಲ. ಮಗು ಉಸಿರಾಡುತ್ತಿದೆ ಅನ್ನುವುದನ್ನು ಬಿಟ್ಟರೆ ಅದು ಜೀವಂತವಾಗಿದೆ ಎನ್ನುವುದಕ್ಕೆ ಬೇರ್ಯಾವ ಲಕ್ಷಣಗಳೂ ಕಾಣುತ್ತಿಲ್ಲ.

ಇದು ಸ್ವೀಡನ್ನಿನಲ್ಲಿ ಇತ್ತೀಚಿನ ಕೆಲ ವರ್ಷಗಳಲ್ಲಿ ಪತ್ತೆಹಚ್ಚಲಾದ ರೆಸಿಗ್ನೇಷನ್ ಸಿಂಡ್ರೋಮ್ ಎಂಬ ಹೊಸ ಖಾಯಿಲೆ. ಮನೆಯಲ್ಲಿ ಸದಾ ಗಲಗಲ ಎಂದು ಓಡಾಡಿಕೊಂಡಿರುವ ಮಗುವೊಂದು ಹೀಗೆ ಅಚಾನಕ್ಕಾಗಿ ತಿಂಗಳುಗಟ್ಟಲೆ, ಹೆಣದಂತೆ ಮಲಗಿಬಿಟ್ಟರೆ ಹೆತ್ತವರಿಗೆ ಅದಕ್ಕಿಂತ ದೊಡ್ಡ ನೋವು ಬೇರೇನಿದೆ?

ಇಷ್ಟಿದ್ದರೂ ಮನುಷ್ಯನಿಗೆ ಯುದ್ಧ ಬೇಕು. ಇಷ್ಟಾದರೂ ಮನುಷ್ಯ ಇತಿಹಾಸದಿಂದ ಏನನ್ನೂ ಕಲಿಯುವುದಿಲ್ಲ!

‍ಲೇಖಕರು Avadhi

15 May, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading