ವಿ ಮಂಜುನಾಥ ಎನ್ ಪುತ್ತೂರು
ಯುದ್ಧದ ರಣ ಕಹಳೆ ಮೊಳಗಿತು ಯಾರೂ ಊಹಿಸಿರಲಿಲ್ಲ
ಆದರೂ ಎಲ್ಲರಲ್ಲೂ ಎಂತಹ ಉತ್ಸಾಹ!
ಸಂಬಂಧದ ಕೊಂಡಿ ಕಡಿದುಕೊಳ್ಳಲು ಹಾತೊರೆದವರೆಷ್ಟು?!
ಒಮ್ಮತದ ಮನಸ್ಸು ವಿಕಾರವಾಯಿತು
ಮುರಿದ ಮನಸ್ಸಿಗೆ ಬೇರೇನೂ ತೋಚದು
ತನ್ನದೇ ದಿಕ್ಕು, ತನ್ನದೇ ಅಂತಿಮ ತೀರ್ಮಾನ
ನಿಶಾಚರಿ, ತನಗೆ ಬೇಕಿರುವುದನ್ನು ಮಾತ್ರ ಬರೆದುಕೊಂಡು,ಮರು ಯೋಚಿಸದೆ ಬದಲಿಸಿಕೊಳ್ಳುತ್ತದೆ
ತಾಳ್ಮೆಯಿಂದ ವಿಚಾರ ಮಾಡುವ ಪದ್ಧತಿ ಎಲ್ಲಾ ಹಳೆಯದಾಗಿದೆ
ಹೊಡಿ – ಬಡಿ ಎಂಬುದನ್ನೇ ದೇಹದ ಕಣ ಕಣದಲ್ಲೂ ಬೆಳೆಸಿಕೊಂಡ ಪರಿಣಾಮವೇ?
ಪ್ರತಿಷ್ಠೆ ಎಂಬುದಕ್ಕೆ ತನ್ನನ್ನು ತಾನು ಮಾರಿಕೊಂಡು ಬಲಿಪಶುಗಳಾದ ರೀತಿಯಿದಿರಬಹುದೇ?
ವೀರತೆಯನ್ನು ತೋರುವ ಪ್ರತೀಕಾರವೇ?
ಪರರ ಮುಕ್ಕಿ ತಿಂದು,ತನ್ನ ಬೇಳೆ ಬೇಯಿಸಿಕೊಳ್ಳುವ ಹುನ್ನಾರವೇ?

ಬದುಕಿನ ಸಂಬಂಧಗಳು ಅದಾಗಲೇ ಸತ್ತು, ಪ್ರೇತಾತ್ಮಗಳಾಗಿ ಎರಡು ವಾರಗಳಾಗಿವೆ
ಅಂತಿಮ ಕ್ರಿಯೆಯಿಲ್ಲದೆ ಅಲೆಮಾರಿಗಳ ತೆರದಿ ಅಲೆದಾಟ
ಅಲೆಮಾರಿ ಜೀವನಕ್ಕೆ ಪೂರ್ಣ ವಿರಾಮವಿಡಲು ಯಾರೂ ಇಲ್ಲ
ಎಲ್ಲರೂ,ಎಲ್ಲವೂ ಬರೀ ಮೌನ
ಮೌನ ವ್ರತದಿಂದ ಪಡೆದದ್ದು ಮಾತ್ರ ಯಾರೂ ಮಾಡಿರದ ಘನಘೋರ ಪಾಪ
ಮುರಿದ ಮನಸ್ಸಿಗೆ ಯಾವ ಚಿಕಿತ್ಸೆ?
ಸಂಬಂಧ ಸರಿಯಾದೀತೇ?
ಸರಿಯಾದರೂ ಅದಿನ್ನು ಕೃತಕ ಬಂಧವಲ್ಲವೇ?
ಮಾನವ ಸಂಬಂಧಗಳಿಗೆ ಯುದ್ಧವೇ ಉತ್ತರವೇ?!
ಯಾವ ಪ್ರಶ್ನೆಗಳಿಗೂ ಯಾರಲ್ಲೂ ಉತ್ತರವಿಲ್ಲ
ಉತ್ತರವಿದ್ದರೂ ಮೂಕ ರೋದನೆ
ವೀರ ಪರಾಕ್ರಮದ ಕೊನೆಗೆ ಎಲ್ಲವೂ ಶೂನ್ಯ,ಜೀವನ ನಶ್ವರ






ಗದ್ಯದ ಸಾಲುಗಳಂತಿದೆ