ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯುಗಾದಿಯ ಅವಳು..

-ಪ್ರಕಾಶ್‍ ಕೊಡಗನೂರ್

ಪ್ರೀತಿ ಪಲ್ಲವಿಸಿದೊಡೆ

ಪ್ರೀತಿ
ಪಲ್ಲವಿಸಿದೊಡೆ
ಮೈಮನದೊಳಗೆ
ತಂಗಾಳಿಯು ಬೀಸಿದಂತೆ

ಪ್ರೀತಿ
ಪಲ್ಲವಿಸಿದೊಡೆ
ಮೈಮನದೊಳಗೆ
ಮಿಂಚುಗೊಂಚಲು ಸುಳಿದಂತೆ

ಪ್ರೀತಿ
ಪಲ್ಲವಿಸಿದೊಡೆ
ಮೈಮನದೊಳಗೆ
ಸೋನೆಮಳೆ ಜಿನುಗಿದಂತೆ

ಪ್ರೀತಿ
ಪಲ್ಲವಿಸಿದೊಡೆ
ಮೈಮನದೊಳಗೆ
ಹೂಬನವು ನಲಿದಂತೆ

ಪ್ರೀತಿ
ಪಲ್ಲವಿಸಿದೊಡೆ
ಮೈಮನದೊಳಗೆ
ಮಳೆಬಿಲ್ಲು ಇಳಿದಂತೆ

ಪ್ರೀತಿ
ಪಲ್ಲವಿಸಿದೊಡೆ
ಮೈಮನದೊಳಗೆ
ಕೋಗಿಲೆಯು ಉಲಿದಂತೆ

ಪ್ರೀತಿ
ಪಲ್ಲವಿಸಿದೊಡೆ
ಮೈಮನದೊಳಗೆ
ನವಿಲು ಕುಣಿದಂತೆ

ಪ್ರೀತಿ
ಪಲ್ಲವಿಸಿದೊಡೆ
ಮೈಮನದೊಳಗೆ
ಜೇನ್ಗಡಲು ಹರಿದಂತೆ

ಪ್ರೀತಿ
ಪಲ್ಲವಿಸಿದೊಡೆ
ಮೈಮನದೊಳಗೆ
ಬೆಳದಿಂಗಳು ಚೆಲ್ಲಿದಂತೆ

ಪ್ರೀತಿ
ಪಲ್ಲವಿಸಿದೊಡೆ
ಮೈಮನದೊಳಗೆ
ಕವಿತೆಯು ಜೀಕಿದಂತೆ

ಯುಗಾದಿಯ ಅವಳು

ಯುಗಾದಿಯ
ತಳಿರು ಅವಳು!

ಯುಗಾದಿಯ
ತೋರಣ ಅವಳು!

ಯುಗಾದಿಯ
ಪುಷ್ಪ ಅವಳು!

ಯುಗಾದಿಯ
ಫಲ ಅವಳು !

ಯುಗಾದಿಯ
ಉತ್ಸಾಹ ಅವಳು!

ಯುಗಾದಿಯ
ತಂಗಾಳಿ ಅವಳು!

ಯುಗಾದಿಯ
ಇಂಚರ ಅವಳು!

ಯುಗಾದಿಯ
ಸೊಗಸು ಅವಳು!

ಯುಗಾದಿಯ
ಸಂಭ್ರಮ ಅವಳು!

ಯುಗಾದಿಯ
ಚಂದ್ರ ಅವಳು!

ಯುಗಾದಿಯ
ಔತಣ ಅವಳು!

ಯುಗಾದಿಯ
ಹೊಸತು ಅವಳು!

ಅವಳೇ
ಇಲ್ಲದೆ ಉರುಳಿದ
ಯುಗಾದಿಗಳೆಷ್ಟೋ?

ಅವಳೊಂದಿಗೆ
ಕಳೆದ
ಯುಗಾದಿಯ
ನೆನಪುಗಳು ಮಾತ್ರ
ಬೆಚ್ಚಗೆ ಉಳಿದಿವೆ
ತೀರದಷ್ಟು!!

‍ಲೇಖಕರು Admin

13 April, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading