ಜೀ ಕನ್ನಡ ಚಾನಲ್ ನ ಮುಖ್ಯಸ್ಥರಾದ ಗೌತಮ್ ಮಾಚಯ್ಯ ಈ ಸಾಲಿನ ಚಿತ್ರ ಪ್ರಶಸ್ತಿಯ ಬಗ್ಗೆ ಬರೆದಿದ್ದಾರೆ.
ಫೇಸ್ ಬುಕ್ ನಲ್ಲಿ ಪ್ರಕಟವಾಗಿರುವ ಈ ಟಿಪ್ಪಣಿ ಈ ಸಾಲಿನ ರಾಜ್ಯ ಪ್ರಶಸ್ತಿಯ ಕೋಡಂಗಿತನವನ್ನು ಎತ್ತಿ ತೋರಿಸುತ್ತಿದೆ
ಸ್ವಲ್ಪ ಸಮಯದ ಹಿಂದೆ ಒಬ್ಬ ಹಿರಿಯ ಸಚಿವರೊಬ್ಬರು ನನಗೆ ಫೋನ್ ಮಾಡಿ ಕನ್ನಡ ಚಲನಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನು ಖರೀದಿಸುವಂತೆ ಕೋರಿದ್ದರು. ಈ ಚಿತ್ರ ಥಿಯೇಟರ್ ಗಳಲ್ಲಿ ವಿಫಲವಾಗಿದ್ದರೂ ಆ ಸಚಿವರು ನನ್ನ ಬಹುದಿನದ ಪರಿಚಿತರಾದ ಕಾರಣ ನಾನು ಖುದ್ದಾಗಿ ಈ ಚಿತ್ರ ನೋಡಿದೆ. ಈ ಸಿನೆಮಾ ತೀರಾ ಕರುಣಾಜನಕವಾಗಿತ್ತು. ಈ ಚಿತ್ರ ನೋಡಿದ ನನ್ನ ಸಹೋದ್ಯೋಗಿಗಳೂ ಇದು ನೋಡಲು ಸಾಧ್ಯವೇ ಆಗದ ಸಿನೆಮಾ ಎಂದು ಒಮ್ಮತದಿಂದ ಘೋಷಿಸಿದರು.
ಆದರೆ ಸರ್ಕಾರ ಸಿನೆಮಾ ಪ್ರಶಸ್ತಿಗಳನ್ನು ಮೊನ್ನೆ ಘೋಷಿಸಿದಾಗ ಈ ಸಿನೆಮಾ ರಾಜ್ಯದ ಅತ್ಯುತ್ತಮ ಚಿತ್ರ ಎಂದು ಪ್ರಶಸ್ತಿಗೆ ಪಾತ್ರವಾಗಿದೆ ಎಂದು ಕೇಳಿ ಸುಸ್ತಾಗಿ ಹೋದೆ. ಚಿತ್ರದ ನಿರ್ಮಾಪಕ ತನ್ನ ಗೆಳೆಯರಾದ ಸಚಿವರ ಸ್ನೇಹ ಬಳಸಿ ತೆರೆಮರೆಯಲ್ಲಿ ಆಟ ಆಡದಿರುವುದು ಇದರಿಂದ ಸ್ಪಷ್ಟ. ಈ ಪ್ರಶಸ್ತಿಗಳ ಮೌಲ್ಯದ ಬಗ್ಗೆ ಇದು ಬೊಟ್ಟು ಮಾಡಿ ತೋರಿಸುತ್ತದೆ ಅಲ್ಲದೆ ಅರ್ಹ ಚಿತ್ರಗಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆಯೂ ಇದು ಬೆರಳು ತೋರಿಸುತ್ತಿದೆ.







The Title of that great film is – sarasammana samaadhi.
Uffffff ….
It is really painfull. Dhuddidhone Dhoddappa….?