ಫಿಡೆಲ್ ಕ್ಯಾಸ್ಟ್ರೋ ಇಂದು ಕ್ಯೂಬಾ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ್ದಾರೆ. ಅಂಗೈ ಅಗಲ ಇರುವ ಒಂದು ದೇಶ ಅಷ್ಟು ದೊಡ್ಡ ಅಮೆರಿಕಾದ ಅಹಂಕಾರವನ್ನು ಮೆಟ್ಟಿ ನಿಂತದ್ದು ಇತಿಹಾಸ. ಈ ಇತಿಹಾಸಕ್ಕೆ ಮುಂದಡಿ ಇಟ್ಟದ್ದು ಫಿಡೆಲ್, ಚೆಗೆವಾರ ಹಾಗೂ ರೌಲ್ ಕ್ಯಾಸ್ಟ್ರೋ. ಪುಟ್ಟ ನೌಕೆ ‘ಗ್ರಾನ್ಮಾ’ ಹತ್ತಿ ಹೊರಟ ಈ ದಂಡು ನಿರ್ಮಿಸಿದ ಇತಿಹಾಸ ಒಂದು ಗಾಢ ಕತ್ತಲೆಯ ನಡುವಿನ ಪುಟ್ಟ ದೀಪದಷ್ಟೇ ದೊಡ್ಡದು.
ನಮ್ಮ ಗುಜ್ಜಾರ್ ಗೆ ಫಿಡೆಲ್ ಕಂಡರೆ ಇನ್ನಿಲ್ಲದ ಹೆಮ್ಮೆ. ಅವರು ಈ ಹಿಂದೆ ರಚಿಸಿದ ಫಿಡೆಲ್ ಕುರಿತ ರೇಖಾಚಿತ್ರ ಇಲ್ಲಿದೆ. ಕ್ಯೂಬಾ ಬಗ್ಗೆ ಹೆಚ್ಚಿನ ವಿವರಕ್ಕೆ ನಮ್ಮ ಬ್ಲಾಗ್ ನ ಲಿಂಕ್ ವಿಭಾಗ ನೋಡಿರಿ. ಅಲ್ಲಿ ಜಿ ಎನ್ ಮೋಹನ್ ಬರೆದ ‘ನನ್ನೊಳಗಿನ ಹಾಡು ಕ್ಯೂಬಾ’ ಪುಸ್ತಕವಿದೆ.







0 Comments