ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಯಾರಿಗೂ ಹೇಳ್ಬೇಡಿ!!' – ಶಾ೦ತಲಾ ಭ೦ಡಿ ಗುಟ್ಟು!!!

– ಶಾ೦ತಲಾ ಭ೦ಡಿ

‘ಯಾರಿಗೂ ಹೇಳ್ಬೇಡಿ!!’

ಯಾವತ್ತೋ ಬರೆದಿದ್ದ ಒಂದುಸಾಲು ಇವತ್ತು ಮತ್ತೆ ನೆನಪಾದ್ದಕ್ಕೆ. ಗುಟ್ಟು:- ಯಾವ ಪುಸ್ತಕ ಓದಿ ಮುಗಿಸಿ ಈ ಸಾಲುಗಳನ್ನ ನಾ ಬರೆದದಿದ್ದಿರಬಹುದು ಅಂತ ಯಾರಿಗಾದ್ರೂ ಗೊತ್ತಾದ್ರೆ ಯಾರಿಗೂ ಹೇಳ್ಬೇಡಿ 🙂 ಓದಿ ಮುಗಿದ ಮೇಲೆ ಏನನ್ನಿಸಿತು ಅಂತ ಹೇಳು ಅಂದಿದ್ದೆಯಲ್ಲ, ಹೇಳಲೇಬೇಕು ಅನ್ನುವಂಥದ್ದೇನೂ ಅನ್ನಿಸಲಿಲ್ಲ. ನನ್ನೊಳಗೇ ಇಟ್ಟುಕೊಳ್ಳುವಂಥದ್ದಾಗಿ ಒಂದಿಷ್ಟು ಅನ್ನಿಸಿತು. ಏನು ಗೊತ್ತಾ? ಮುಕುಂದ ಬಿಟ್ಟುಹೋಗಿ ಬದುಕು ಖಾಲಿಯಾದರೂ ಸರಿಯೇ ಶಿವರಾಮ ನೀನೇ ಆಗಿದ್ದ ಪಕ್ಷ ಶರ್ವಾಣಿ ನಾನೇ ಆಗಬೇಕು ಅನ್ನಿಸಿತು. ಹೆಂಡತಿ ಬಾವಿಗೆ ಬೀಳುವುದನ್ನು ಕಂಡೂ ಸುಮ್ಮನಿದ್ದ ಶಿವರಾಮ ನೀನೇ ಆಗಿದ್ದಲ್ಲಿ ತಾಯಿಯನ್ನು ಕಳಕೊಂಡರೂ ಸರಿ ಶರ್ವಾಣಿ ನಾನೇ ಆಗಬೇಕು ಅನ್ನಿಸಿತು. ಒಟ್ಟಿನಲ್ಲಿ ನನಗೆ ಅನ್ನಿಸುವುದೆಂದರೆ ನಿನ್ನ ಮಗಳ ಸ್ಥಾನದಲ್ಲಿ ಯಾರೇ ಇದ್ದಿರಲಿ, ಅದು ಸದಾ ನಾನೇ ಆಗಬೇಕು ಅನ್ನಿಸಿತು.]]>

‍ಲೇಖಕರು G

4 February, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading