ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾಕೆ? ರಾಷ್ಟ್ರದ ಒಳಿತಿಗಾಗಿ..

ಸಿ ಎನ್ ರಾಮಚಂದ್ರನ್

ಸಾಯಿನಾಥ್ ಅವರ ಲೇಖನಕ್ಕೆ ಬಂದ ಪ್ರತಿಕ್ರಿಯೆಯನ್ನು ಓದುತ್ತಿದ್ದಾಗ ನಾನು ಹಿಂದೆ ಓದಿದ್ದ ಒಂದು ಕಥೆ ನೆನಪಿಗೆ ಬಂದಿತು.

ರಾಜನೊಬ್ಬ ತಾನು ಏಳುವಾಗ ಶುಭ ವಾರ್ತೆಯನ್ನು ಕೇಳಬೇಕೆಂದು ಆ ಕೆಲಸಕ್ಕಾಗಿಯೇ ಒಬ್ಬನನ್ನು ನೇಮಿಸಿಕೊಂಡಿದ್ದನಂತೆ. ಒಮ್ಮೆ, ರಾತ್ರಿ ಪ್ರಸವಸಮಯದಲ್ಲಿ ಏನೋ ಹೆಚ್ಚುಕಮ್ಮಿಯಾಗಿ ಮಗು ಸತ್ತಿತು. ಇದನ್ನು ಬೆಳಿಗ್ಗೆ ರಾಜನಿಗೆ ಹೇಗೆ ಹೇಳುವುದು? ಆ the_three_monkeysಕೆಲಸಗಾರನು ಬೆಳಿಗ್ಗೆ ’ರಾತ್ರಿ ಮಹಾರಾಣಿಯವರಿಗೆ ಶುಭ ಪ್ರಸವವಾಯಿತು; ಮಹಾರಾಣಿಯವರು ದೇವರ ಕೃಪೆಯಿಂದ ಕ್ಷೇಮವಾಗಿದ್ದಾರೆ.’ ತುಂಬಾ ಸಮಯದನಂತರ ರಾಜನಿಗೆ ಮಗು ಸತ್ತುದು ಗೊತ್ತಾಯಿತಂತೆ.

ಇಂದು ಗಾಂಧೀಜಿಯವರ ಮೂರು ಮಂಗಗಳ ರೂಪಕಕ್ಕೆ ಹೊಸ ಅರ್ಥ ಬಂದಿದೆ: ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ಆಡಬೇಡ.

ಯಾಕೆ? ರಾಷ್ಟ್ರದ ಒಳಿತಿಗಾಗಿ.

ಕೃಷಿಕರಿಗೆ ಕಡು ಕಷ್ಟವಲ್ಲಾ? ಅದಕ್ಕೇನು ಮಾಡುವುದು? ನೋಟುಗಳ ಅಪಮೌಲ್ಯವಾಗುವುದಕ್ಕೆ ಮೊದಲೂ ನೂರಾರು ರೈತರು ಎಲ್ಲೆಡೆ ಆತ್ಮಹತ್ಯೆ ಮಾಡಿಕೊಳ್ಳಲಿಲ್ಲವೆ? ಒಂದು ಸುಂದರ ಮಗು ಹುಟ್ಟಬೇಕಾದರೆ ತಾಯಿ ಒಂಬತ್ತು ತಿಂಗಳ ಕಾಲ ಕಷ್ಟಪಡಬೇಕಿಲ್ಲವೆ? ಸೈನಿಕರು ಸಾಯುತ್ತಿಲ್ಲವೆ? . . . . .

ಇಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕು? ದೇವರಿಗೆ ಮೊರೆ ಹೋಗುವುದು ಮಾತ್ರ ನಮಗೆ ಸಾಧ್ಯ. ಏಕೆಂದರೆ ದೇವರಿಗೆ ರಾಷ್ಟ್ರಗಳ, ಧರ್ಮಗಳ, ವರ್ಗಗಳ ಗಡಿಗಳಿಲ್ಲ.

‍ಲೇಖಕರು Admin

24 November, 2016

1 Comment

  1. Gayatri Badiger, Dharwad

    ದೇವರಿಗೆ ರಾಷ್ಟ್ರಗಳ, ಧರ್ಮಗಳ, ವರ್ಗಗಳ ಗಡಿಗಳಿಲ್ಲ ….. super sir.. thank you,…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading