ಎಂ ಎಸ್ ಕೃಷ್ಣಮೂರ್ತಿ
ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೆ. ಹಿಂದಿನ ಸೀಟಿನಲ್ಲಿ ಕುಳಿತಿದ್ದ ಮಹಾನುಭಾವನೊಬ್ಬನು ಇದ್ದಕ್ಕಿದ್ದಂತೆ ಕೋಪಗೊಂಡ ಪೋನಿನಲ್ಲಿ ಮಾತಾಡುತ್ತಾ. “ಆ ಸೂ.. ಮಗ” , “ಅವನ ತಾಯಿನಾ…. “, “ಮಿಂಡ್ರು….. ಹುಟ್ಟಿದ ಸೂ… ಮಗ” . “ಅವನ ಅಮ್ಮನ್…. ” ಅನ್ನೊ ಪದ ಅಂತೂ ಪುಂಖಾನುಪುಂಖವಾಗಿ ಹೊರಡುತ್ತಿತ್ತು. ಸಾಮನ್ಯವಾಗಿ ಖಾಸಗಿ ಬಸ್ಸಿನಲ್ಲಿ ಪೋನುಗಳಲ್ಲಿ ಅಥವ ಇಬ್ಬರು ಗಂಡಸರ ನಡುವಿನ ಮಾತುಗಳು ಮಾಮೂಲು. ಈ ಬೈಗುಳು ನಿನ್ನೆ ಮೊನ್ನೆ ಹುಟ್ಟಿದವಲ್ಲ ಪರಂಪಾರಾನುಗತವಾಗಿ ಗಂಡಸಿನ ರಕ್ತದಲ್ಲಿ ಡಿ.ಎನ್.ಏ ರೀತಿಯಲ್ಲಿ ಹರಿದು ಬಂದಿದೆ.
ಈ ಬೈಗುಳದಲ್ಲಿ ಹೆಣ್ಣನ್ನು ಪರಮೋಚ್ಚ ಸ್ಥಿತಿಗೆ ಕೊಂಡೊಯ್ದು ಅಲ್ಲಿ ಆಕೆಯನ್ನು ಅತ್ಯಾಚಾರ ಮಾಡುವುದು. ಈ ಬೈಗುಳಗಳ ಉದ್ದೇಶ ಇಷ್ಟೆ ನಿನ್ನ ತಾಯಿ ಪವಿತ್ರಳು ನೀನು ನನಗೆ ಕೋಪ ತರಿಸಿದ್ದೀಯ ಆದ್ದರಿಂದ ಆಕೆಯ ಮೇಲೆ ಅತ್ಯಾಚಾರ ಮಾಡುತ್ತೇನೆ.. ಹೀಗೆ ಬೈಸಿಕೊಂಡವನಿಗೆ ತನ್ನ ತಾಯಿಯ ಪಾವಿತ್ರ್ಯತೆಯ ಮೇಲಾದ ಅತ್ಯಾಚಾರವನ್ನು ಸಹಿಸಿಯಾನೇ ಅವನೂ ಬೈದವನ ತಾಯಿಯ ಮೇಲೆ ಮಾತಿನ ಅತ್ಯಾಚಾರ ಮಾಡಿ ಸೇಡು ತೀರಿಸಿಕೊಳ್ಳುತ್ತಾನೆ. ಕೊನೆಗೆ ಅಕಸ್ಮಾತ್ ಇಬ್ಬರ ಜಗಳ ಕೊನೆಗೊಂಡು ಒಂದಾದರೂ ಇಬ್ಬರ ತಾಯಿಯರು ಮಾತ್ರ ಇವರ ನಾಲಿಗೆಯ ಮೇಲೆ ಅತ್ಯಾಚಾರ ಮಾಡಿಸಿಕೊಳ್ಳಲ್ಪಟ್ಟಿರುತ್ತಾಳೆ. ಈ ಬೈಗುಳು ಎಷ್ಟು ಸರಳವಾಗಿ ಸರಾಗವಾಗಿ ಬರುತ್ತದೆ ಎಂದರೆ ಎಷ್ಟೊ ಜನ ನಗು ನಗುತ್ತಲೇ ಆಡುತ್ತಿರುತ್ತಾರೆ. ಸುತ್ತ ಮುತ್ತಲು ಹೆಂಗಸರು ಇದ್ದರೊ ಈ ಮಾತುಗಳಿಗೆ ಅಡ್ಡಿ ಇಲ್ಲ ಎಷ್ಟೋ ಹೆಂಗಸರು ಇದನ್ನು ಅತ್ಯಂತ ಸಹಜವಾಗಿ ತೆಗೆದುಕೊಂಡಿರುತ್ತಾರೆ. ಇದು ಮೇಲ್ನೋಟಕ್ಕೆ ತೀರ ಸಹಜ ಮಾಮೂಲು ಎನಿಸಿದರೂ ಹೆಣ್ಣಿನ ಮೇಲಿನ ಗಂಡಿನ ದುರಹಂಕಾರದ ಅಮಲು ಮತ್ತು ಆಕೆಯನ್ನು ಗಂಡಸಿನ ಅಧಿಪತ್ಯದಲ್ಲಿ ಬಂದಿಸುವ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಸಹಜ ವಿಕೃತವಾಗಿದೆ.

ಸೂ.. ಮಗ ಎನ್ನುವುದಂತೂ ಎಷ್ಟು ಸಹಜವಾಗಿ ಬಳಸಲ್ಪಡುತ್ತದೆಂದರೆ ಹಾಸ್ಯೋತ್ಸವದಲ್ಲಿ ಇದರ ಬಗ್ಗೆ ಜೋಕ್ ಇಲ್ಲದೆ ನಗಲಾರೆವು. ಕೆಲವು ಬಾಗಗಳ ಸಂಸ್ಕ್ರತಿ ಈ ಮಾತು ಎಂದು ಬಿಂಬಿಸಲ್ಪಟ್ಟಿದೆ. ಈ ಜೋಕ್ ಗೆ ಪ್ರಸಿದ್ದರಾದವರ ಜನ್ಮದಿನದಂದು ಮುಖಪುಸ್ತಕದಲ್ಲಿ ಅವರ ಅಭಿಮಾನಿಯೊಬ್ಬರು ಹಾಕಿದ್ದರು ” ಸೂ… ಮಗ ಅವರಿಗೆ ಜನ್ಮದಿನದ ಶುಭಾಶಯಗಳು” ಸ್ವಲ್ಪ ಹೊತ್ತಿಗೆ ಅದು ಮಾಯವಾಯಿತು .ಗಂಡಸಿನ ವಿಕೃತ ಬೈಗುಳಲ್ಲಿ ಶೇಕಡ ನೂರಕ್ಕೆ ನೂರರಷ್ಟು ಹೆಣ್ಣಿನ ಅತ್ಯಾಚಾರ ಅಥವಾ ಆಕೆಯ ಅಂಗಾಂಗದ ಬೈಗುಳ ಮಾತುಗಳಿರುತ್ತವೆ.
ಅಮ್ಮನನ್ನು ಬಿಟ್ಟರೆ ಅಕ್ಕ ತಂಗಿಯಂರು ಹೆಂಡತಿ ಸಹ ದಾರಾಳವಾಗಿ ನಾಲಿಗೆಯ ಮೇಲೆ ಅತ್ಯಾಚಾರವೆಸಗಲ್ಪಡುತ್ತಾರೆ. ಅಜ್ಜಿಯನ್ನೂ ಸಹ ಬಿಡುವುದಿಲ್ಲ. ಬೈಗುಳಲ್ಲಿ ಕೇವಲ ಗಂಡಸರನ್ನೂ ಧೂಷಿಸುವ ಮಾತುಗಳನ್ನು ಇನ್ನೊ ಕಂಡುಹಿಡಿದಿಲ್ಲವೆನ್ನುಸುವಷ್ಟು ಮಟ್ಟಿಗೆ ನಮ್ಮ ಬೈಗುಳ ಪರಂಪರೆ ಇದೆ.
ಯಾಕೆ ಹೆಣ್ಣನ್ನು ಇಷ್ಟು ಅಗ್ಗವಾಗಿ ನಾಲಿಗೆಯಲ್ಲಿ ತಂದು ನಮ್ಮನ್ನು ವಿಕೃತರನ್ನಾಗಿಸಿಕೊಳ್ಳಬೇಕು…. ?






ಕನ್ನಡದಲ್ಲಿ ಬೈಗುಳನ್ನು ಒಮ್ಮೆ ಪರಿಶೀಲಿಸಿ. ಬಹುಪಾಲು ಎಲ್ಲ ಅಶ್ಲೀಲ ಬೈಗಳು ಮಹಿಳೆಯನ್ನು ಉದ್ದೇಶಿಸಿರುತ್ತದೆ. ಅಥವಾ ಕೆಳಜಾತಿಯವರ ಕಸುಬು ಅಥವಾ ಜಾತಿಸೂಚಕವಾಗಿರುತ್ತವೆ. ಇಲ್ಲವೇ ಅಲ್ಪಸಂಖ್ಯಾತರನ್ನು ಕುರಿತದ್ದಾಗಿರುತ್ತದೆ. ಇದು ಸಾಮಾಜಿಕ ವಿದ್ಯಮಾನ ಸಾಂಸ್ಕೃತಿಕ ವಿದ್ಯಮಾನ. ಪುರುಷರನ್ನು ನೆನಪಿಸುವ ಒಂದಾದರೂ ಬೈಗಳು ಇದೆಯೇ ನೋಡಿ. ಇಲ್ಲ ಅಲ್ಲವೇ. ಹಾಗಾಗಿ ಒಂದು ಪ್ರಜ್ಞಾವಂತ ಸಮಾಜ ಮಾಡಬೇಕಾದ ಕೆಲಸ ಎಂದರೆ ಬಾಲ್ಯದಿಂದಲೇ ನಮ್ಮ ಮುಂದಿನ ಪೀಳಿಗೆಗೆ ಇಂತಹ ಬೈಗಳನ್ನು ಉಪಯೋಗಿಸದಿರಲು ಭೋಧಿಸಬೇಕು. ಪ್ರತಿಯೊಬ್ಬ ಸುಶಿಕ್ಷಿತ ಪೋಷಕರೂ ಮಾಡಬೇಕಾದ ಕೆಲಸ ಇದು. ವ್ಯವಸ್ಥಿತವಾಗಿ ನಡೆದರೆ ಬಹುಶಃ ಮುಂದಿನ ಒಂದು ಪೀಳಿಗೆ ಈ ಕಿರಿಕಿರಿಯಿಂದ ಮುಕ್ತವಾಗಬಹುದು ಅಲ್ಲವೇ ?
ಸ್ವಾಮಿ , ನಮ್ಮ ಬೈಗುಳದ ಬಗ್ಗೆ ತಾವು ಬಹಳ ಸೊಗಸಾಗಿ ಬೈದಿದ್ದೀರಿ.ಅಭಿನಂದನೆಗಳು. ಮಾನವನ ಸಹಜ ಹುಟ್ಟುಗುಣವಾದ ಕೋಪವೇ ಈ ಬೈಗುಳಗಳನ್ನು ಹುಟ್ಟಹಾಕಿಸುವುದು. ಅಷ್ಟೇ ಅಲ್ಲದೆ , ಅನೇಕ ಸಾರಿ ಹೊಗಳಲಿಕ್ಕೂ , ತಮ್ಮ ಪ್ರೀತಿ ವಿಶ್ವಾಸಗಳನ್ನು ತೋರ್ಪಡಿಸಲಿಕ್ಕೂ , ಅವನ ತೇಜೋವದೆ ಮಾಡಲಿಕ್ಕೂ ಬಳಸುವುದುಂಟು. ಈ ಬೈಗುಳ ಎಂಬುದು ಮನುಷ್ಯನ ನಾಗರೀಕತೆಯನ್ನೇ ಹಾಳು ಮಾಡಿದೆ ಎಂದುಕೊಳ್ಳುತ್ತೇವಾದರೂ ಅನೇಕ ಸಾರಿ ಈ ನಾಗರೀಕತೆಯೇ ಇದರಿಂದ ಪ್ರೇರಣೆ ಪಡೆದಿದೆಯೇನೋ ಎಂದೆನ್ನಿಸಿಬಿಡುತ್ತದೆ.
ತಾವು ಕೇವಲ ಹೆಣ್ಣಿನ ಮೇಲೆ ಗಂಡು ಮಾಡುವ ಅತ್ಯಾಚಾರದ ಬೈಗುಳಗಳನ್ನು ಮಾತ್ರ ಹೇಳಿದ್ದೀರಿ ಆದರೆ ಗಂಡನ್ನು ಮೀರಿಸುವ ಬೈಗುಳಗಳು ಹೆಣ್ಣಿನ ಬಾಯಿಯಲ್ಲಿ ಪುಂಕಾನು ಪುಂಕವಾಗಿ ಹೊಮ್ಮುವುದನ್ನು ತಾವು ಹೇಳಿಯೇ ಇಲ್ಲ.
ಅವನ ಬಾಯಿಗೆ ಆಟುಯ್ಯ, ನಾಸಣವಾಗಿ ಹೋಗ, ಗಂಟಲಾಗ ನಂದು ತುರುಕ, ಬೇವಾರ್ಸಿ ನನ್ಮಗ, ಆ ಮಗ ಈ ಮಗ ಅಂತ ರಾಜಾರಷ್ಟಾಗಿ ಬೀದಿ ಬೀದಿಯಲ್ಲಿ ಬೈಕೊಳ್ಳವುದನ್ನು ಎಲ್ಲರೂ ನೋಡಿದ್ದೇವೆ. ಹೆಣ್ಣೇ ನಿಂತು ಅವಳಿಗರಿವಿಲ್ಲದಂತೇ ತನ್ನದೇ ಬೈಗುಳಲ್ಲಿ ತನ್ನನ್ನು ತಾನೇ ಅತ್ಯಾಚಾರ ಮಾಡಿಕೊಳ್ಳುವ ರೀತಿ ಆಡಿಕೊಳ್ಳುತ್ತಾ ಪರರ ಮೇಲಿನ ಸಿಟ್ಟು ತೀರಿಸಿಕೊಳ್ಳುವುದು ಸರ್ವೇಸಾಮಾನ್ಯ. ಕಾನೂನು ಜಾರಿಮಾಡಿ ವಾರಂಟು ಹೊರಡಿಸಿದರೂ ಇಂತಹ ಬೈಗುಳಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ಅಂತದ್ದರಲ್ಲಿ ತಾವು ಲೇಖನ ಬರೆದ ಮಟ್ಟಿಗೆ ಜನಕ್ಕೆ ತಿಳುವಳಿಕೆ ಬಂದು ಬದಲಾಗುತ್ತೆಂಬುದು ದೂರದ ಮಾತು.
ಓ.ಕೆ.ಲೇಖನ ತುಂಬಾ ಹಿಡಿಸಿತು. ಧನ್ಯವಾದಗಳು.
Rightly said. this should not be celebrated. Some loose talkers (so said Stand up comedians)spreading this in all over Karnataka. Still question, why SL Bairappa used all these slangs throughout this novel “Grihabanga”. Does any time questions arises for these scholars what to Record what not to.
Unfortunately other languages have similar usages. Hindi ones are well known. I am citing the english ones – Son of a bitch, Bastard etc
ಪೂಚಂತೇಯವರ ‘ಕಿರಗೂರಿನ ಗಯ್ಯಾಳಿಗಳು’ ಮತ್ತು ಅದರಲ್ಲಿ ಬರುವ ದಾನಮ್ಮ ಮತ್ತು ಸಂಗಡಿಗರ ವಾಗ್ಝರಿ – ಇವಕ್ಕೆ ಒಳ್ಳೆಯ ಆಕರ ಗ್ರಂಥವಾಗಬಹುದು…
Well said! Thumbs Up!
ಬಯ್ಗುಳ ಎಂದು ಕೂಡಲೇ ” ಅದು ಕೆಟ್ಟದ್ದು ” ಎಂದು ಎಲ್ಲರೂ ಹೇಳುತ್ತಾರೆ . ಆದರೆ ಜೀವಮಾನದಲ್ಲಿ ಒಮ್ಮೆಯಾದರೂ ಒಂದಲ್ಲ ಒಂದು ಬಗೆಯ ಬಯ್ಗುಳದ ನುಡಿಯನ್ನು ಆಡದ ಸಾಮಾಜಿಕ ವ್ಯಕ್ತಿಯೇ ಇಲ್ಲ . ಸಾಮಾಜಿಕ ವ್ಯವಹಾರದ ಮಾತಿನ ಸನ್ನಿವೇಶಗಳಲ್ಲಿ ಬಯ್ಗುಳ ಬಳಕೆ ಸಾಕಷ್ಟು ಪ್ರಮಾಣದಲ್ಲಿ ಕೇಳಿಬರುತ್ತದೆ . ಇದಕ್ಕೆ ಕಾರಣಗಳೇನು ಎಂಬುದನ್ನು ತಿಳಿಯುವ ಅಗತ್ಯವಿದೆ .